Latest Updates
-
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ
ಹುಟ್ಟಿದ ದಿನಾಂಕ ಹೇಳಿ-ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯಿರಿ!
ಪ್ರತಿಯೊಬ್ಬರಿಗೂ ತಮ್ಮ ಹುಟ್ಟಿದ ದಿನಾಂಕವು ತಿಳಿದೇ ಇರುವುದು. ಆದರೆ ಇದರಿಂದ ನಿಮ್ಮ ವ್ಯಕ್ತಿತ್ವ ತಿಳಿಯಲು ಸಾಧ್ಯವಿದೆ ಎಂದು ನಿಮಗೇನಾದರೂ ತಿಳಿದಿದೆಯಾ? ಇಲ್ಲ ತಾನೇ? ಹಾಗಾದರೆ ನೀವು ಈ ಲೇಖನವನ್ನು ಓದಲೇಬೇಕು. ಅಂಕಿಶಾಸ್ತ್ರದ ಪ್ರಕಾರ ಅಂಕೆಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ವ್ಯಕ್ತಿತ್ವ ನಿರ್ಮಾಣದಲ್ಲಿ ಮುಖ್ಯವಾಗಿರುವುದು ಎಂದು ಅಂಕಿಶಾಸ್ತ್ರಜ್ಞರು ಹೇಳುತ್ತಾರೆ.

ಈ ಅಂಕೆಗಳನ್ನು ಅಂಕಿಶಾಸ್ತ್ರಜ್ಞರು ಹೇಳಿರುವರು.ನಿಮ್ಮ ಹುಟ್ಟಿದ ದಿನಾಂಕವು ಎರಡಂಕೆಯಾಗಿದ್ದರೆ ಆಗ ನೀವು ಇದನ್ನು ಒಂದಂಕೆ ಮಾಡಬೇಕು. ಉದಾಹರಣೆಗೆ ನೀವು ಯಾವುದೇ ತಿಂಗಳಿನ 16ನೇ ತಾರೀಕಿಗೆ ಹುಟ್ಟಿದ್ದೀರಿ ಎಂದಿಟ್ಟುಕೊಳ್ಳಿ. ಆಗ ನೀವು 1+6=7 ಎಂದು ತಿಳಿಯಬೇಕು. ಯಾವುದೇ ತಿಂಗಳಿನ 16ನೇ ತಾರೀಕಿಗೆ ಹುಟ್ಟಿದವರ ಸಂಖ್ಯೆಯು ಇದಾಗಿರುವುದು. ಈ ಲೇಖನದಲ್ಲಿ ಇದೇ ರೀತಿ ಹುಟ್ಟಿದ ದಿನಾಂಕದ ಮೂಲ ನಿಮ್ಮ ವ್ಯಕ್ತಿತ್ವ ತಿಳಿಯುವ.

1 ಅಂಕೆ
ಹುಟ್ಟಿದ ಸಂಖ್ಯೆಯು 1, 10, 19, 28 ಆಗಿದ್ದರೆ ಆಗ ಹುಟ್ಟಿದ ಅಂಕೆಯು ಒಂದು ಆಗುವುದು. ಈ ದಿನಾಂಕದಂದು ಹುಟ್ಟಿದವರು ಶ್ರೇಷ್ಠ ನಾಯಕರು ಮತ್ತು ಇವರಲ್ಲಿ ಪ್ರತಿಭೆಯು ನೈಸರ್ಗಿಕವಾಗಿರುವುದು ಮತ್ತು ಯಾವಾಗಲೂ ಉನ್ನತ ಸ್ಥಾನದಲ್ಲಿರುವರು. ಇವರು ಕಠಿಣ ಪರಿಶ್ರಮಿಗಳು, ವಿಶ್ವಾಸಾರ್ಹ, ಪ್ರಾಮಾಣಿಕ ವ್ಯಕ್ತಿಗಳು. ಇವರು ಸುಲಭವಾಗಿ ಸ್ನೇಹಿತರನ್ನು ಸಂಪಾದಿಸುವರು ಮತ್ತು ಸಾಮಾಜಿಕವಾಗಿ ಇವರು ತುಂಬಾ ಜನಪ್ರಿಯರಾಗಿರುವರು.

2 ಅಂಕೆ
2, 11, 20, 29 ದಿನಾಂಕದಂದು ಹುಟ್ಟಿರುವವರು 2 ಅಂಕೆಯವರಾಗಿರುವರು. ಈ ದಿನಾಂಕದಂದು ಹುಟ್ಟಿರುವ ವ್ಯಕ್ತಿಗಳು ತುಂಬಾ ಅರ್ಥಗರ್ಭಿತರು. ಇವರು ಬೇರೆಯವರನ್ನು ಬೇಗನೆ ಅರ್ಥಮಾಡಿಕೊಳ್ಳುವರು. ಇವರ ಊಹೆಯು ಅದ್ಭುತ ಮಟ್ಟದ್ದಾಗಿರುವ ಕಾರಣದಿಂದ ತುಂಬಾ ಅದೃಷ್ಟಶಾಲಿ ವ್ಯಕ್ತಿಗಳು. ಇವರು ಜನರೊಂದಿಗೆ ಒಳ್ಳೆಯ ಸಂಬಂಧ ಹಾಗೂ ಸ್ನೇಹ ಸಂಪಾದಿಸುವರು. ಇನ್ನೊಂದು ಕಡೆ ಇವರು ತಾಳ್ಮೆ, ಶಾಂತಿ ಮತ್ತು ಏಕತೆಯಲ್ಲಿ ನಂಬಿಕೆಯುಳ್ಳವರು. ಇನ್ನು ಒಂದು ರೀತಿಯ ನಿಗೂಢ ಸ್ವಭಾವದವರಾಗಿದ್ದು ನಾಚಿಕೆಯನ್ನು ಹೊಂದಿದವರಾಗಿದ್ದಾರೆ. ಅವರು ಪ್ರಣಯದಲ್ಲಿ ಒಲವನ್ನು ಇರಿಸಿಕೊಂಡಿದ್ದರೂ ತಮ್ಮ ಪ್ರಣಯ ಪ್ರವೃತ್ತಿಯನ್ನು ಅವರು ಮುಚ್ಚಿಡುತ್ತಾರೆ.

3 ಅಂಕೆ
3, 12, 21, 30ರಲ್ಲಿ ಹುಟ್ಟಿರುವಂತಹವರ ಅಂಕೆಯು 3 ಆಗಿರುವುದು. ಇವರು ತುಂಬಾ ಮಹಾತ್ವಾಕಾಂಕ್ಷಿಗಳು, ಅತಿ ಬುದ್ಧಿವಂತರು. ಜೀವನದ ಬಗ್ಗೆ ಉದಾರದೃಷ್ಟಿಕೋನ ಉಳ್ಳವರು. ಇವರು ಕುಪಿತರಾದಾಗ ಅದನ್ನು ತೋರಿಸಿಕೊಡಲ್ಲ. ಆದರೆ ಅವರು ವಿಚೇಚನೆ ಕಾಪಾಡಿಕೊಳ್ಳಲು ಪ್ರಯತ್ನಿಸುವರು. ಜೀವನದ ಬಗ್ಗೆ ಕಲಿಯುವುದನ್ನು ಪ್ರೀತಿಸುವರು ಮತ್ತು ಇತರರ ಅನುಭವ ಬಯಸುವರು. ಇವರ ಸುತ್ತಲು ಸ್ನೇಹಿತರು ತುಂಬಿರುವರು.

4 ಅಂಕೆ
4 ಅಂಕೆ ಹೊಂದಿರುವವರ ಹುಟ್ಟಿದ ದಿನಾಂಕವು 4, 13, 22, 31 ಆಗಿರುವುದು. ಈ ದಿನಾಂಕದಂದು ಹುಟ್ಟಿರುವಂತಹ ಜನರು ಯಾವಾಗಲೂ ತುಂಬಾ ವ್ಯಸ್ತರಾಗಿರುವವರು. ಇವರು ಯಾವುದೇ ಕೆಲಸ ಮಾಡುವ ತನಕ ಇವರಿಗೆ ಸಂತೋಷ ಮತ್ತು ತೃಪ್ತಿ ಇರಲ್ಲ. ಯಾವುದೇ ಪರಿಸ್ಥಿತಿ ಬಗ್ಗೆ ಕುಳಿತುಕೊಂಡು ಚಿಂತಿಸಿ, ಸಮಯ ವ್ಯರ್ಥ ಮಾಡುವ ಬದಲು ಕ್ರಮಕ್ಕೆ ಮುಂದಾಗಬೇಕೆಂದು ಯೋಚಿಸುವ ಮನೋಭಾವ ಉಳ್ಳವರು. ಇವರ ಇನ್ನೊಂದು ಮುಖವೆಂದರೆ ಯಾರಾದರೂ ಇವರ ನಿರೀಕ್ಷೆ ಪೂರೈಸಲು ವಿಫಲರಾದರೆ ತುಂಬಾ ಕ್ರೂರಿಯಾಗುವರು.

5 ಅಂಕೆ
5, 14, 23 ಹುಟ್ಟಿದ ದಿನಾಂಕ ಆಗಿರುವಂತಹ ವ್ಯಕ್ತಿಗಳ ಸಂಖ್ಯೆಯು 5 ಆಗಿರುವುದು. ಈ ದಿನಾಂಕದಂದು ಹುಟ್ಟಿರುವ ಜನರು ತುಂಬಾ ಕ್ರಿಯಾತ್ಮಕವಾಗಿರುವರು. ಏನಾದರೂ ಹೊಸತನ್ನು ಮಾಡಬೇಕೆಂದು ಬಯಸುತ್ತಾ ಇರುವರು. ಇವರಲ್ಲಿ ನವೀನ ವಿಚಾರಗಳು ಮತ್ತು ಆಲೋಚನೆಗಳು ಇರುವುದು. ಈ ವ್ಯಕ್ತಿಗಳು ಚಿಂತಕರು ಮತ್ತು ಯೋಜಕರು. ಇವರ ಬುದ್ದಿಯು ಯಾವಾಗಲೂ ಸಮಯಮೀರಿ ಕೆಲಸ ಮಾಡುತ್ತಲಿರುತ್ತದೆ.

6 ಅಂಕೆ
ಆರು ಅಂಕೆ ಹೊಂದಿರುವ ವ್ಯಕ್ತಿಗಳು 6, 15, 24 ದಿನಾಂಕದಂದು ಹುಟ್ಟಿರುವರು. ಈ ದಿನಾಂಕದಂದು ಹುಟ್ಟಿರುವಂತಹ ವ್ಯಕ್ತಿಗಳು ಹೋದ ಕಡೆಯೆಲ್ಲಾ ಸಮತೋಲ ಮತ್ತು ಸೌಹಾರ್ದತೆ ಬಯಸುವಂತವರು. ಇವರು ತಮ್ಮ ಸುತ್ತಲಿನ ಜಗತ್ತಿನ ಬಗ್ಗೆ ಕಾಳಜಿ ವಹಿಸುವರು ಮತ್ತು ಇತರರಿಗೆ ನೆರವಾಗಲು ಪ್ರಯತ್ನಿಸುವರು. ಸ್ನೇಹಿತರಾಗಿ ಇವರು ತುಂಬಾ ಪ್ರಾಮಾಣಿಕ ಹಾಗೂ ಕಾಳಜಿ ಇರುವವರು.

7 ಅಂಕೆ
7, 16, 25 ದಿನಾಂಕದಂದು ಹುಟ್ಟಿರುವವರ ಅಂಕೆಯು 7 ಆಗಿರುವುದು. ಈ ದಿನಾಂಕದಂದು ಹುಟ್ಟಿರುವ ವ್ಯಕ್ತಿಗಳು ಸಹಾನುಭೂತಿ, ಸಹಿಷ್ಣು ಮತ್ತು ಸಹಕಾರಿಯಾಗಿರುವರು. ಇವರು ತುಂಬಾ ಶಾಂತ ಮತ್ತು ಕಲ್ಪನಾತ್ಮಕವಾಗಿರುವರು. ಇನ್ನೊಂದೆಡೆ ಇವರು ನೇರನುಡಿಯವರು ಮತ್ತು ಸರಳವಾಗಿರುವರು. ಇವರು ಸಾಹಸಪ್ರವೃತ್ತಿಯಾಗಿರುವರು. ಇನ್ನು ಇವರು ಸೂಕ್ತ ಮತ್ತು ಸಮಯಕ್ಕೆ ಸರಿಯಾಗಿ ವರ್ತಿಸುವ ಸ್ವಭಾವವನ್ನು ಹೊಂದಿದವರಾಗಿದ್ದಾರೆ. ಅಲ್ಲದೆ ಶಕ್ತಿಯುತ ಜನರಿಗೆ ಇವರು ಬೇಗನೇ ಆಕರ್ಷಿತರಾಗುತ್ತಾರೆ ಮತ್ತು ಅದರಿಂದ ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತಾರೆ. ಇನ್ನು ಇವರು ಕೆಲವು ವಿಚಾರಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲಾರರು. ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲಾರರು. ಇವರು ಎಲ್ಲವನ್ನೂ ಪ್ರಶ್ನಿಸುವ ಸ್ವಭಾವದವರಾದರೂ, ಬೇರೆಯವರು ಇವರನ್ನು ಪ್ರಶ್ನಿಸುವುದನ್ನು ಇಷ್ಟಪಡದವರು. ಜ್ಞಾನಿಗಳಾದ ಇವರು ತತ್ವಜ್ಞಾನಿಗಳಂತೆ ವರ್ತಿಸುತ್ತಾರೆ.

8. ಅಂಕೆ
ಎಂಟು ಅಂಕೆ ಹೊಂದಿರುವವರು 8, 17, 26 ದಿನಾಂಕದಂದು ಹುಟ್ಟಿರುವರು. ಇವರು ತುಂಬಾ ಆತ್ಮವಿಶ್ವಾಸಿಗಳಾಗಿರುವರು. ಸಾಮಾನ್ಯವಾಗಿ ಈ ವ್ಯಕ್ತಿಗಳು ತುಂಬಾ ಸಂಕೀರ್ಣ ಸ್ವಭಾವದವರು. ಇವರ ವ್ಯಕ್ತಿತ್ವ ತಿಳಿಯುವುದು ತುಂಬಾ ಕಷ್ಟ. ಇವರೊಂದಿಗೆ ಸಂಪರ್ಕ ಸಾಧಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇವರಲ್ಲಿ ತುಂಬಾ ಕ್ರಿಯಾತ್ಮಕವಾದ ಆಲೋಚನೆಗಳಿವೆ ಮತ್ತು ತಮ್ಮ ಕೆಲಸದಿಂದ ಬೇರಯವರಿಗೆ ಅಚ್ಚರಿ ಮೂಡಿಸಬಲ್ಲರು. ಇದೇ ವೇಳೆ ಇವರು ತುಂಬಾ ಸೂಕ್ಷ್ಮ ಮತ್ತು ಅಂತಮುರ್ಖಿಯಾಗಿರುವರು.

9. ಅಂಕೆ
9, 18, 27 ದಿನಾಂಕದಂದು ಹುಟ್ಟಿದವರ ಅಂಕೆಯು 9 ಆಗಿರುವುದು. ಈ ವ್ಯಕ್ತಿಗಳು ಪ್ರತಿಯೊಂದರಲ್ಲೂ ತುಂಬಾ ವಿಭಿನ್ನವಾಗಿರುವರು. ಇವರು ಅದ್ಭುತವ ವ್ಯಕ್ತಿತ್ವ ಹೊಂದಿರುವರು. ಜೀವನದಲ್ಲಿ ಏನು ಸಾಧಿಸಬೇಕು ಮತ್ತು ತಮ್ಮ ಕನಸುಗಳ ಬಗ್ಗೆ ಇವರು ತುಂಬಾ ಕ್ರಿಯಾತ್ಮಕ ಹಾಗೂ ತೀವ್ರತೆ ಹೊಂದಿರುವರು. ಇವರು ನಿರ್ಭೀತರು ಮತ್ತು ಸಾಹಸಗಳಿಗೆ ಹೆದರುವವರಲ್ಲ. ಇನ್ನೊಂದೆಡೆ ಇವರು ಪ್ರೀತಿಪಾತ್ರ ವ್ಯಕ್ತಿಗಳು. ಇನ್ನು ಇವರು ಉತ್ತಮ ಪ್ರದರ್ಶನಾಕಾರರು. ನೈಸರ್ಗಿಕವಾಗಿಯೇ ಮನರಂಜನೆ ನೀಡಬಲ್ಲರು. ಉದಾರ ಸ್ವಭಾವದರಾದ ಇವರು ಇತರರ ಬಗ್ಗೆ ಕಾಳಜಿ ವಹಿಸುತ್ತಾರೆ. ಜೊತೆಗೆ ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಸಮಯಕ್ಕೆ ತಕ್ಕಂತೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವರು. ಇವರು ಅದೃಷ್ಟವಂತರು ಎಂದು ಹೇಳಬಹುದು.



Click it and Unblock the Notifications











