Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಂಗೈ ಶಾಸ್ತ್ರ: ಅಂಗೈಯಲ್ಲಿ ತ್ರಿಕೋನ ಬಂದಿರುವ ಸುಳಿವೇನು?

ಅಂಗೈಯಲ್ಲಿರುವಂತಹ ರೇಖೆಗಳನ್ನು ನೋಡಿಕೊಂಡು ಕೆಲವು ನಿಮ್ಮ ಭೂತ, ವರ್ತಮಾನ ಮತ್ತು ಭವಿಷ್ಯ ಹೇಳುವರು. ಜನರು ತಮ್ಮ ಅಂಗೈಯಲ್ಲಿ ರೇಖೆಗಳು ತ್ರಿಕೋನಾಕೃತಿ ಹೊಂದಿರುವುದನ್ನು ಕಾಣಬಹುದು. ನಿಮ್ಮ ಅಂಗೈಗಳನ್ನು ನೋಡಿದರೆ ಆಗ ನಿಮಗೆ ತ್ರಿಕೋನ ಆಕೃತಿಯು ಕಂಡುಬಂದರೆ ಇದು ತುಂಬಾ ಪವಿತ್ರವಾದ ಚಿಹ್ನೆಯೆಂದು ನಂಬಲಾಗಿದೆ.
ಅಂಗೈಯ ಯಾವ ಭಾಗದಲ್ಲಿ ಯಾವ ರೀತಿಯಲ್ಲಿ ಇದೆ ಎನ್ನುವುದರ ಮೇಲೆ ಇದರ ಅರ್ಥ ತಿಳಿಯಬಹುದು. ಅಂಗೈಯಲ್ಲಿ ಇರುವಂತಹ ತ್ರಿಕೋನ ಆಕೃತಿ ತಿಳಿದುಕೊಂಡರೆ ಅದು ತುಂಬಾ ಆಸಕ್ತಿಯ ವಿಚಾರವಾಗಿರುವುದು. ನಿಮ್ಮ ಅಂಗೈಯಲ್ಲಿರುವ ತ್ರಿಕೋನ ಆಕೃತಿಗಳು ಯಾವ ರೀತಿಯ ಅರ್ಥ ಕಲ್ಪಿಸುತ್ತದೆ ಎಂದು ತಿಳಿಯಿರಿ....

ಶುಕ್ರನ ಬೆಟ್ಟದ ಮೇಲೆ ದೊಡ್ಡ ತ್ರಿಕೋನ
ದೊಡ್ಡ ತ್ರಿಕೋನವು ದೊಡ್ಡ ಹೃದಯದ ಸೂಚಕವಾಗಿದೆ. ಶುಕ್ರನ ಬೆಟ್ಟದ ಮೇಲಿರುವ ದೊಡ್ಡ ತ್ರಿಕೋನವಿರುವ ವ್ಯಕ್ತಿಯು ತುಂಬಾ ಸರಳ, ಸರಿಹೊಂದುವ ಮತ್ತು ಉನ್ನತ ಮೌಲ್ಯಗಳೊಂದಿಗೆ ವಾಸಿಸುವಂತಹ ತುಂಬಾ ಭಾವನಾತ್ಮಕ ಪ್ರೇಮಿ. ಅಂಗೈಯಲ್ಲಿರುವ ತ್ರಿಕೋನದಲ್ಲಿ ಯಾವುದೇ ತೊಂದರೆಯಿದ್ದರೆ ಆಗ ಇವರು ಅಮರ ಪ್ರೇಮಿಯಾಗಿರುವರು.

ಮಂಗಳನ ಬೆಟ್ಟದ ಮೇಲೆ ತ್ರಿಕೋನ
ಮಂಗಳನ ಬೆಟ್ಟದ ಮೇಲೆ ತ್ರಿಕೋನ ಹೊಂದಿದ್ದರೆ ಆ ವ್ಯಕ್ತಿಯು ಒಬ್ಬ ಯೋಧನಾಗುವ ಮತ್ತು ತಾವು ಹಾಕಿಕೊಂಡ ಯೋಜನೆಗಳಲ್ಲಿ ಯಾವಾಗಲೂ ತುಂಬಾ ಧೈರ್ಯ ಮತ್ತು ತಾಳ್ಮೆ ಪ್ರದರ್ಶಿಸುವ ವ್ಯಕ್ತಿಯಾಗಿರುವರು. ಮಂಗಳನ ಬೆಟ್ಟದಲ್ಲಿ ಕಾಣಿಸುವ ತ್ರಿಕೋನದಲ್ಲಿ ತೊಂದರೆಯಿದ್ದರೆ ಆಗ ಈ ವ್ಯಕ್ತಿಯು ಹೇಡಿಯಾಗಿರುವ.

ಗುರುವಿನ ಬೆಟ್ಟದಲ್ಲಿ ತ್ರಿಕೋನ
ಗುರುವಿನ ಬೆಟ್ಟದ ಮೇಲೆ ತ್ರಿಕೋನ ಇರುವಂತಹ ವ್ಯಕ್ತಿಯು ತುಂಬಾ ರಾಜತಾಂತ್ರಿಕ ಮತ್ತು ತನ್ನ ಪ್ರಗತಿಗೆ ಹೆಚ್ಚಿನ ಆಕಾಂಕ್ಷೆ ಹೊಂದಿರುವವರು ಆಗಿರುವರು. ಮಂಗಳನ ಬೆಟ್ಟದಲ್ಲಿ ಇರುವ ತ್ರಿಕೋನದಲ್ಲಿ ಯಾವುದೇ ಸಮಸ್ಯೆಯಿದ್ದರೆ ಆಗ ವ್ಯಕ್ತಿಯು ತುಂಬಾ ಹೆಮ್ಮೆಪಡುವ ಮತ್ತು ಸ್ವಾರ್ಥಿಯಾಗಿರುವ.

ಶನಿಯ ಬೆಟ್ಟದಲ್ಲಿ ತ್ರಿಕೋನವಿದ್ದರೆ….
ಯಾವುದೇ ಸಮಸ್ಯೆಯಿಲ್ಲದೆ ಇರುವಂತಹ ತ್ರಿಕೋನವು ಶನಿಯ ಬೆಟ್ಟದ ಮೇಲೆ ಕಂಡುಬಂದರೆ ಅಂತಹ ವ್ಯಕ್ತಿಗಳು ದೈವ ಓಡಿಸುವುದು ಮತ್ತು ಸೌಂದರ್ಯದಲ್ಲಿ ಅಧಿಪತ್ಯ ಸ್ಥಾಪಿಸುವರು. ಈ ತ್ರಿಕೋನದಲ್ಲಿ ಯಾವುದೇ ತೊಂದರೆಯಿದ್ದರೆ ಆಗ ವ್ಯಕ್ತಿಯು ಮೋಸ ಮಾಡುವ ಮತ್ತು ನಂಬಿಕೆಗೆ ಅರ್ಹನಲ್ಲದವನಾಗಿರುವರು.

ತಲೆಯ ಗೆರೆಯ ಮೇಲೆ ತ್ರಿಕೋನ
ತಲೆಯ ಗೆರೆಯ ಮೇಲೆ ತ್ರಿಕೋನವು ಕಾಣಿಸಿಕೊಂಡರೆ ಆಗ ಆ ವ್ಯಕ್ತಿಯು ತುಂಬಾ ಜಾಣ ಮತ್ತು ಉನ್ನತ ಶಿಕ್ಷಣ ಪಡೆಯುವವನಾಗಿರುವ. ವಿಧಿರೇಖೆಯ ಮೇಲೆ ತ್ರಿಕೋನವಿದ್ದರೆ ಆಗ ಆ ವ್ಯಕ್ತಿಯು ತುಂಬಾ ದುರಾದೃಷ್ಟ ಮತ್ತು ಜೀವನದಲ್ಲಿ ಇವರಿಗೆ ಯಶಸ್ಸು ಸಿಗುವುದು ಕಡಿಮೆ.

ಸೂರ್ಯನ ಬೆಟ್ಟದ ಮೇಲೆ ತ್ರಿಕೋನ
ಸೂರ್ಯನ ಬೆಟ್ಟದ ಮೇಲೆ ತ್ರಿಕೋನವಿದ್ದರೆ ಆಗ ಆ ವ್ಯಕ್ತಿಯು ತುಂಬಾ ಧಾರ್ಮಿಕ ಮತ್ತು ಇತರರ ಹಿತ ಬಯಸುವವನು ಎಂದು ನಂಬಲಾಗಿದೆ. ತ್ರಿಕೋನದಲ್ಲಿ ದೋಷವಿದ್ದರೆ ಆಗ ಆ ವ್ಯಕ್ತಿಯನ್ನು ಸಮಾಜವು ಟೀಕಿಸುವುದು. ಇವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ತುಂಬಾ ಕಷ್ಟ.

ಮಂಗಳನ ಪ್ರದೇಶದಲ್ಲಿ ತ್ರಿಕೋನ
ಮಂಗಳನ ಪ್ರದೇಶದಲ್ಲಿ ತ್ರಿಕೋನವು ಕಂಡುಬಂದರೆ ಆ ವ್ಯಕ್ತಿಯು ತನ್ನ ಜೀವನದಲ್ಲಿ ಒಬ್ಬ/ಒಬ್ಬಳು ಯಶಸ್ವಿ ವಿಜ್ಞಾನಿಯಾಗವರು. ಇವರಿಗೆ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದು. ಜೀವನದ ರೇಖೆಯ ಮೇಲೆ ತ್ರಿಕೋನವಿದ್ದರೆ ಆಗ ಇದು ದೀರ್ಘಾಯುಷ್ಯದ ಸೂಚಕವಾಗಿದೆ.

ಮದುವೆ ರೇಖೆ ಮೇಲೆ ತ್ರಿಕೋನ
ಮದುವೆ ರೇಖೆ ಮೇಲೆ ತ್ರಿಕೋನವು ಕಂಡುಬರುವಂತಹ ವ್ಯಕ್ತಿಗಳ ವೈವಾಹಿಕ ಜೀವನದಲ್ಲಿ ತುಂಬಾ ಏಳುಬೀಳುಗಳು ಕಂಡುಬರಬಹುದು. ಇವರಿಗೆ ಯಶಸ್ಸು ಸಿಗುವುದಿಲ್ಲ. ಇನ್ನೊಂದೆಡೆ ಚಂದ್ರನ ಮೇಲೆ ತ್ರಿಕೋನವಿದ್ದರೆ ಅವರು ವಿದೇಶ ಪ್ರಯಾಣ ಕೈಗೊಳ್ಳುವರು ಮತ್ತು ಯಶಸ್ವಿಯಾಗುವರು.

ಜೀವನ ರೇಖೆ ಮತ್ತು ತಲೆರೇಖೆ ಮೇಲೆ ತ್ರಿಕೋನವಿದ್ದರೆ….
ಜೀವನರೇಖೆ ಮತ್ತು ತಲೆ ರೇಖೆ ಮೇಲೆ ತ್ರಿಕೋನವಿದ್ದರೆ ಆಗ ಇದು ಆ ವ್ಯಕ್ತಿಗೆ ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇನ್ನೊಂದೆಡೆ ಆರೋಗ್ಯದ ರೇಖೆ ಮತ್ತು ತಲೆರೇಖೆ ಮೇಲೆ ತ್ರಿಕೋನವಿದ್ದರೆ ಇವರು ತುಂಬಾ ಜಾಣ ವ್ಯಕ್ತಿಗಳಾಗಿರುವರು.

ಆರೋಗ್ಯ ರೇಖೆ ಮತ್ತು ತಲೆ ರೇಖೆ ಮೇಲೆ ತ್ರಿಕೋನವಿದ್ದರೆ…
ಆರೋಗ್ಯ ರೇಖೆ ಮತ್ತು ತಲೆರೇಖೆ ಮೇಲೆ ತ್ರಿಕೋನವಿದ್ದರೆ ಆಗ ಆ ವ್ಯಕ್ತಿ ವಿಶ್ವದಲ್ಲೇ ಪ್ರಸಿದ್ಧಿ ಪಡೆಯುವ ಎಂದು ನಂಬಲಾಗಿದೆ. ಈ ಗೆರೆಗಳು ಸ್ಪಷ್ಟವಾಗಿಲ್ಲದೆ ಇದ್ದರೆ ಆಗ ಆ ವ್ಯಕ್ತಿಯು ತುಂಬಾ ಸ್ವಾರ್ಥಿ ಹಾಗೂ ಭೌತಿಕವಾಗಿರುವರು. ನಿಮ್ಮ ಅಂಗೈಯ ಮೇಲೆ ಯಾವ ಭಾಗದಲ್ಲಿ ತ್ರಿಕೋನ ಇದೆ ಎಂದು ಈಗಲೇ ಹುಡುಕಿ. ನಮಗೆ ಅದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications
