Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಖ್ಯಾಶಾಸ್ತ್ರ: ಹುಟ್ಟಿದ ವರ್ಷದ ಸಂಖ್ಯೆಯು ಹೀಗಿದ್ದರೆ ನಡವಳಿಕೆ ಹೀಗಿರಲಿದೆ...
ಸಂಖ್ಯಾಶಾಸ್ತ್ರದ ಬಗ್ಗೆ ನಂಬಿಕೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಇದೆ. ವಿಶ್ವದಾದ್ಯಂತ ವಿಶ್ವವಿಖ್ಯಾತ ಆಟಗಾರರಾಗಲಿ ಅಥವಾ ಸಿನಿಮಾ ನಟನಟಿಯರಾಗಲಿ, ಅಂಕಿಶಾಸ್ತ್ರವನ್ನು ಬಹಳಷ್ಟು ನಂಬುವರು. ಆಟಗಾರರು ತಮ್ಮ ಜೆರ್ಸಿ ಮೇಲಿನ ಅಂಕೆಯನ್ನು ಬದಲಾಣೆ ಮಾಡಿಕೊಂಡರೆ ಅದೇ ನಟನಟಿಯರು ತಮ್ಮ ಹೆಸರಿನ ಅಕ್ಷರಗಳಲ್ಲಿ ಒಂದಕ್ಷರ ಕಡಿಮೆ ಅಥವಾ ಹೆಚ್ಚು ಮಾಡಿಕೊಳ್ಳುವರು. ನಿಮ್ಮ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಸಂಖ್ಯಾಶಾಸ್ತ್ರವು ಹೇಗಿರುತ್ತದೆ ಎಂದು ತಿಳಿದುಕೊಂಡಿರಬಹುದು. ಆದರೆ ನಿಮ್ಮ ಹುಟ್ಟಿನ ದಿನಾಂಕದ ಕೊನೆಯ ಅಂಕೆಯಿಂದ ವ್ಯಕ್ತಿತ್ವ ತಿಳಿದುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯಾ?
ಹೌದು, ಹುಟ್ಟಿದ ವರ್ಷದ ಕೊನೇ ಅಂಕೆ ಹಿಡಿದುಕೊಂಡು ವ್ಯಕ್ತಿತ್ವ ತಿಳಿಯಬಹುದು. ಇಲ್ಲಿ ಕೊಟ್ಟಿರುವ ವಿವರಣೆಯನ್ನು ಪಾಲಿಸಿಕೊಂಡು ಹೋಗಿ ನಿಮ್ಮ ಹುಟ್ಟಿದ ವರ್ಷದ ಅಂಕೆ ಯಾವುದು ಎಂದು ತಿಳಿಯಿರಿ. ಉದಾಹರಣೆಗೆ ನಿಮ್ಮ ಹುಟ್ಟಿದ ದಿನಾಂಕವು 7-09-1984 ಆಗಿದ್ದರೆ ಆಗ ನೀವು ಕೊನೆಯ ಅಂಕೆ 4ನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗ ನೀವು ಹುಟ್ಟಿದ ವರ್ಷವು 1951, 61, 71, 81, 91, 01, 11 ಇತ್ಯಾದಿ. ನಿಮ್ಮ ಅಂಕೆಯು 1 ಆಗಿದ್ದರೆ ನೀವು ತುಂಬಾ ಸ್ಪರ್ಧಾತ್ಮಕ ವ್ಯಕ್ತಿಯಾಗಿರುತ್ತೀರಿ. ನೀವು ಯಾವುದೇ ಪರಿಸ್ಥಿತಿಯಲ್ಲೂ ಗೆಲುವು ಪಡೆಯಲು ಬಯಸುವಿರಿ. ವೈಯಕ್ತಿಕವಾಗಿ ನೀವು ತುಂಬಾ ಮಹಾತ್ವಾಕಾಂಕ್ಷಿ ಯಾಗಿರುವಿರಿ. ನಿಮ್ಮ ಕನಸುಗಳ ವಿಚಾರಕ್ಕೆ ಬಂದಾಗ ನೀವೊಬ್ಬ ಯೋಧರಾಗಿರುವಿರಿ. ಇನ್ನೊಂದು ಕಡೆಯಲ್ಲಿ ನೀವು ಯಾವುದೇ ವಿಚಾರವಾಗಲಿ, ಅಷ್ಟು ಸುಲಭವಾಗಿ ಬಿಟ್ಟುಕೊಡುವ ವ್ಯಕ್ತಿಯಲ್ಲ ಮತ್ತು ಕೊನೆಯ ಉಸಿರಿರುವ ತನಕ ಹೋರಾಡುವಿರಿ.

1952,62, 72, 82, 92, 02, 12 ಇತ್ಯಾದಿ ನೀವು ಹುಟ್ಟಿರುವ ವರ್ಷವಾಗಿದ್ದರೆ....
ನಿಮ್ಮ ಹುಟ್ಟಿದ ವರ್ಷದಲ್ಲಿ 2 ಅಂಕೆ ಬಂದರೆ ಈ ವ್ಯಕ್ತಿಗಳಲ್ಲಿ ದ್ವಿವ್ಯಕ್ತಿತ್ವವಿರುವುದು. ನೀವು ಪ್ರೀತಿಸುತ್ತಿರುವಂತಹ ವ್ಯಕ್ತಿಗೆ ನೀವು ತುಂಬಾ ಭಿನ್ನವಾಗಿರುವಿರಿ ಮತ್ತು ನೀವು ಇಷ್ಟಪಡದೇ ಇರುವ ವ್ಯಕ್ತಿಗೆ ನೀವು ಬೇರೆಯೇ ರೀತಿಯ ವ್ಯಕ್ತಿಯಾಗಿರುವಿರಿ. ನೀವು ಜೀವನದಲ್ಲಿ ವ್ಯಕ್ತಿಗಳನ್ನು ಎರಡು ವಿಧದಿಂದ ವಿಂಗಡಿಸಲಿದ್ದೀರಿ.
ನಿಮ್ಮ ಹುಟ್ಟಿದ ವರ್ಷವು 1953, 63, 73, 83, 93, 03, 13 ಇತ್ಯಾದಿ ಆಗಿದ್ದರೆ....
ನಿಮ್ಮ ಹುಟ್ಟಿದ ವರ್ಷದ ಅಂಕೆಯು 3 ಆಗಿದ್ದರೆ ಆಗ ನೀವು ಬಹುಆಯಾಮದ ವ್ಯಕ್ತಿತ್ವದವರು ಎನ್ನಲಾಗಿದೆ. ನೀವು ಜೀವನವನ್ನು ವಿವಿಧ ದೃಷ್ಟಿಕೋನದಿಂದ ನೋಡಲಿದ್ದೀರಿ. ವಿಭಿನ್ನ ಅಭಿಪ್ರಾಯಗಳ ಬಳಿಕ ನೀವು ಒಂದು ನಿರ್ಧಾರಕ್ಕೆ ಬರುವಿರಿ. ಈ ಅಭಿಪ್ರಾಯವು ನಿಮ್ಮದು ಅಥವಾ ನಿಮ್ಮ ವಿರೋಧಿಗಳದ್ದೇ ಆಗಿದ್ದರೂ ಚಿಂತೆ ಮಾಡಲ್ಲ.
ನಿಮ್ಮ ಹುಟ್ಟಿದ ವರ್ಷವು 1954, 64, 74, 84, 94, 01, 14 ಇತ್ಯಾದಿ ಆಗಿದ್ದರೆ....
ಹುಟ್ಟಿದ ವರ್ಷದ ಅಂಕೆಯು 4 ಆಗಿದ್ದರೆ ಆಗ ನಿಮ್ಮ ಸುತ್ತಲಿನ ಸಂತೋಷದ ಬಗ್ಗೆ ನಿಮಗೆ ಅರಿವು ಇರುವುದು. ನಾಲ್ಕು ದಿಕ್ಕುಗಳು ಹೇಗೆ ಎಲ್ಲಾ ಸಾಧ್ಯತೆಗಳ ವಿವರ ನೀಡುವುದೋ ಅದೇ ರೀತಿ ಇತರರ ಅಗತ್ಯತೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವಂತಹ ವ್ಯಕ್ತಿತ್ವವು ನಿಮ್ಮದಾಗಿರುವುದು. ನಿಮ್ಮನ್ನು ಏನು ಮುನ್ನಡೆಸಲಿದೆ ಮತ್ತು ಯಾವುದು ತಡೆಯುವುದು ಎಂದು ಸರಿಯಾಗಿ ತಿಳಿದುಕೊಂಡಿರುವಿರಿ. ಇದೆಲ್ಲವನ್ನೂ ಹೊರತುಪಡಿಸಿ, ನಿಮ್ಮ ಆಲೋಚನೆಗಳು ದೊಡ್ಡ ಆಸ್ತಿಯೆಂದು ಪರಿಗಣಿಸಲಾಗಿದೆ.
1955, 65,, 75, 85, 95, 05, 15 ಇತ್ಯಾದಿಯು ನಿಮ್ಮ ಹುಟ್ಟಿದ ವರ್ಷವಾಗಿದ್ದರೆ
ನಿಮ್ಮ ಅಂಕೆಯು 5 ಆಗಿದ್ದರೆ ಆಗ ನೀವು ಮಾನವೀಯತೆಯ ಎಲ್ಲಾ ವಿಧಗಳನ್ನು ತೋರಿಸುವಿರಿ. ನಿಮ್ಮ ವ್ಯಕ್ತಿತ್ವದಲ್ಲಿ ಜೀವನದ ಐದು ಪ್ರಮುಖ ವಸ್ತಗಳಾದ ಬೆಂಕಿ, ನೀರು, ಭೂಮಿ, ಹೃದಯ ಮತ್ತು ಗಾಳಿಯು ಸೇರಿರುವುದು. ಈ ಎಲ್ಲದರ ಉಪಸ್ಥಿತಿಯು ನಿಮ್ಮ ವ್ಯಕ್ತಿತ್ವದಲ್ಲಿ ಇರುವ ಕಾರಣದಿಂದಾಗಿ ನೀವು ಬಯಸಿರುವ ಮತ್ತು ನೀವು ಆಯ್ಕೆ ಮಾಡುವಂತಹ ಯಶಸ್ಸನ್ನು ಪಡೆಯಲಿದ್ದೀರಿ.
ನಿಮ್ಮ ಹುಟ್ಟಿದ ವರ್ಷವು 1956, 66, 76, 86, 96, 06, 16 ಇತ್ಯಾದಿ ಆಗಿದ್ದರೆ....
ಹೀಗಿದ್ದರೆ ನಿಮ್ಮ ಅಂಕೆಯು 6 ಆಗಿರುವುದು. ಜೀವನದ ಕತ್ತಲೆಯತ್ತ ಇರುವುದು ನಿಮಗೆ ಇಷ್ಟವಾಗುವುದು. ವ್ಯಕ್ತಿಯಾಗಿ ನಿಮ್ಮ ವ್ಯಕ್ತಿತ್ವು ಕತ್ತಲೆಯೆಡೆಗೆ ನಿಮ್ಮನ್ನು ಸೆಳೆಯುವುದು. ಇದು ಕೆಟ್ಟದಲ್ಲ. ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಬೆದರಿಕೆ ಹಾಕುವವರನ್ನು ನೀವು ಧ್ವಂಸ ಮಾಡುವಂತಹ ಸಾಮರ್ಥ್ಯ ಹೊಂದಿರುವಿರಿ.
1957,67,77, 87, 97, 07, 17 ಇತ್ಯಾದಿ ನಿಮ್ಮ ಹುಟ್ಟಿದ ವರ್ಷವಾಗಿದ್ದರೆ....
ನಿಮ್ಮ ಹುಟ್ಟಿದ ವರ್ಷದ ಸಂಖ್ಯೆಯು 7 ಆಗಿದ್ದರೆ ಆಗ ನಿಮ್ಮ ವ್ಯಕ್ತಿತ್ವವು ತುಂಬಾ ವಿಚಿತ್ರವಾಗಿರುವುದು. ನೀವು ಒಬ್ಬ ವ್ಯಕ್ತಿಯಾಗಿ ತುಂಬಾ ಜಾಣ, ಸಾಧು ಮತ್ತು ವರ್ಚಸ್ವಿ ವ್ಯಕ್ತಿತ್ವದವರು. ಇನ್ನೊಂದು ಕಡೆಯಲ್ಲಿ ನಿಮ್ಮ ನಗುಮೊಗದ ಹಿಂದುಗಡೆ ಕೆಲವೊಂದು ರಹಸ್ಯಗಳು ಅಡಗಿರುವುದು. ನೀವು ತುಂಬಾ ರಹಸ್ಯವಾದ ವ್ಯಕ್ತಿಯಾಗಿರುವಿರಿ.
ನಿಮ್ಮ ಹುಟ್ಟಿದ ವರ್ಷವು 1958, 68, 78, 88, 98, 08, 18 ಇತ್ಯಾದಿಯಾಗಿದ್ದರೆ....
ಕೊನೆಯ ಅಂಕೆಯು 8 ಆಗಿದ್ದರೆ ಆಗ ನೀವು ತುಂಬಾ ವಿಶಾಲ ಹಾಗೂ ಯೋಚನಾತ್ಮಕ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿತ್ವದವರು. ನೀವು ಎಲ್ಲಾ ಸಮಯ ಹೊಸ ಆಲೋಚನೆಗಳೊಂದಿಗೆ ವ್ಯವಹರಿಸುವಂತಹ ಸಾಮರ್ಥ್ಯ ಹೊಂದಿರುವಿರಿ. ಅರ್ಥಗರ್ಭಿತವಾಗಿರುವಂತಹ ಮಾತುಕತೆಯಲ್ಲಿ ತೊಡಗಲು ನಿಮಗೆ ಇಷ್ಟವಾಗುವುದು. ಪ್ರೀತಿಪಾತ್ರರಿಗೆ ಹೆಚ್ಚು ಹತ್ತಿರವಾಗಿರಲು ಬಯಸುವಿರಿ.
ನೀವು 1959, 69, 79,89, 99, 09 ಇತ್ಯಾದಿಗಳಲ್ಲಿ ಹುಟ್ಟಿದ್ದರೆ...
ನಿಮ್ಮ ಸಂಖ್ಯೆಯು 9 ಆಗಿದ್ದರೆ ನೀವು ತುಂಬಾ ವಿವರ ಆಧಾರಿತ ವ್ಯಕ್ತಿಯಾಗಿರುವಿರಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿರುವಂತಹ ಕೆಲಸಗಳನ್ನು ಮಾಡುವಾಗ ನೀವು ತುಂಬಾ ನಿಖರವಾಗಿರುವಿರಿ. ವ್ಯಕ್ತಿಯಾಗಿ ನೀವು ತುಂಬಾ ಪರಿಪೂರ್ಣತೆಯ ವ್ಯಕ್ತಿಯಾಗಿರುವಿರಿ ಮತ್ತು ಆದರ್ಶ ವಿಷಯವನ್ನು ಹುಡುಕುತ್ತಲಿರುವಿರಿ. ನೀವು ಮಾಡುವಂತಹ ಪ್ರತಿಯೊಂದು ಕಾರ್ಯದಲ್ಲಿ ನಿಮಗೆ ದೊಡ್ಡ ಯಶಸ್ಸು ಸಿಗುವುದು.
ನೀವು 1950, 60, 70, 80, 90, 00, 2010 ಇತ್ಯಾದಿಯಲ್ಲಿ ಹುಟ್ಟಿದ್ದರೆ...
ನಿಮ್ಮ ಅಂಕೆಯು 0 ಆಗಿದ್ದರೆ ನೀವು ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಜಾಣ ವ್ಯಕ್ತಿಯಾಗಿರುತ್ತೀರಿ. ನಿರ್ಧಾರಗಳನ್ನು ವಿವೇಚನೆಯುಕ್ತವಾಗಿ ಹೇಗೆ ತೆಗೆದುಕೊಳ್ಳಬೇಕೆಂದು ನಿಮಗೆ ಚೆನ್ನಾಗಿ ತಿಳಿದಿದೆ. ವೈಯಕ್ತಿಕವಾಗಿ ನೀವು ಪ್ರತಿಯೊಂದನ್ನು ಮಾಡಬಹುದು. ಆದರೆ ಊಸರವಳ್ಳಿಯಂತೆ ನಿಮ್ಮ ನೈಜ ಸ್ವಭಾವವನ್ನು ಬಚ್ಚಿಡಬಹುದು. ನಿಮ್ಮ ನಿಜವಾದ ನಡತೆ ತಿಳಿದಿರುವವರು ತುಂಬಾ ಕಡಿಮೆ. ಇನ್ನೊಂದೆಡೆಯಲ್ಲಿ ನಿಮ್ಮದು ತುಂಬಾ ವರ್ಚಸ್ವಿ ವ್ಯಕ್ತಿತ್ವವಾದರೂ ಇದು ತುಂಬಾ ಆಸಕ್ತಿದಾಯಕ ಮತ್ತು ನಿಗೂಢವಾಗಿರುವುದು.



Click it and Unblock the Notifications











