Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂಗೈಯಲ್ಲಿ ನಕ್ಷತ್ರದ ಆಕೃತಿಯಿದ್ದರೆ ಅವರು ತುಂಬಾನೇ ಅದೃಷ್ಟವಂತರು!
ಅಂಗೈಯಲ್ಲಿ ಇರುವಂತಹ ಪ್ರತಿಯೊಂದು ರೇಖೆಗೂ ತನ್ನದೇ ಆಗಿರುವಂತಹ ಅರ್ಥವಿದೆ. ಸಣ್ಣ ಸಣ್ಣ ಗೆರೆಗಳಿಂದಾಗಿ ಅಂಗೈ ಮೇಲೆ ನಕ್ಷತ್ರದ ಆಕೃತಿಯು ಮೂಡುವುದು. ಇಂತಹ ಆಕೃತಿಯನ್ನು ನೋಡಲು ತುಂಬಾ ಕಷ್ಟಪಡಬೇಕಾಗುತ್ತದೆ.
ಅಂಗೈಯ ಯಾವ ಭಾಗದಲ್ಲಿ ನಕ್ಷತ್ರದ ಗುರುತು ಇದೆ ಎನ್ನುವುದರ ಮೇಲೆ ಅದರ ಪ್ರಾಮುಖ್ಯತೆಯು ಅವಲಂಬಿಸಿದೆ. ಅಂಗೈಯ ಯಾವ ಭಾಗದಲ್ಲಿ ನಕ್ಷತ್ರದ ಆಕಾರವಿದೆ ಎಂದು ತಿಳಿದು ಇದು ಶುಭವೋ ಅಥವಾ ಅಶುಭವೋ ಎಂದು ಹೇಳಬಹುದು. ಅಂಗೈಯಲ್ಲಿ ನಕ್ಷತ್ರದ ಆಕೃತಿಯು ಮೂಡಿರುವ ಬಗ್ಗೆ ಈ ಲೇಖನದಲ್ಲಿ ತಿಳಿಯುವ....
ಅಂಗೈಯಲ್ಲಿ ನಕ್ಷತ್ರದ ಆಕೃತಿಯಿದ್ದರೆ ಶುಭವೇ?

ತೋರುಬೆರಳಿನ ಕೆಳಗೆ ನಕ್ಷತ್ರ ಗುರುತು
ಗುರುವಿನ ಬೆಟ್ಟದ ಮೇಲೆ ಮತ್ತು ತೋರುಬೆರಳಿನ ಕೆಳಗಡೆ ನಕ್ಷತ್ರದ ಆಕೃತಿಯು ಇದ್ದರೆ ಆಗ ಇದನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ನೀವು ತುಂಬಾ ಜಾಣ ವ್ಯಕ್ತಿ, ಆಡಳಿತದ ಗುಣ ಮತ್ತು ಮುನ್ನಡೆಸುವ ಗುಣವಿದೆ. ನಿಮಗೆ ಅದೃಷ್ಟ ಮತ್ತು ಯಶಸ್ಸು, ಸಂಪತ್ತು ಬರಲಿದೆ.
ಸೂಚನೆ: ನಕ್ಷದ ಆಕೃತಿಯು ದೊಡ್ಡದಿದ್ದಂತೆ ಅದು ಹೆಚ್ಚು ಪವಿತ್ರವೆನಿಸುವುದು.

ಮಧ್ಯದ ಬೆರಳಿನ ಕೆಳಗಡೆ ನಕ್ಷತ್ರದಾಕೃತಿ
ವಿಧಿ ರೇಖೆಯ ಅಂತ್ಯದಲ್ಲಿ ನಕ್ಷತ್ರದ ಆಕೃತಿಯು ಇದ್ದರೆ ಆಗ ಇದರಿಂದ ನಿಮಗೆ ವೃತ್ತಿಯಲ್ಲಿ ಯಶಸ್ಸು ಮತ್ತು ತುಂಬಾ ಸಾಧನೆ ಮಾಡಲಿದ್ದೀರಿ ಎಂದು ಅರ್ಥವಿದೆ.

ಉಂಗುರದ ಬೆರಳಿನ ಕೆಳಗಡೆ ನಕ್ಷತ್ರದ ಆಕೃತಿ
ಉಂಗುರದ ಬೆರಳಿನ ಕೆಳಗಡೆ ನಕ್ಷತ್ರದ ಆಕೃತಿಯು ಇದ್ದರೆ, ಆಗ ನಿಮಗೆ ತುಂಬಾ ಪ್ರತಿಭೆ ಇದೆ ಎಂದರ್ಥ. ನಿಮಗೆ ಸಂಪತ್ತಿನ ಅದೃಷ್ಟದೊಂದಿಗೆ ಅನಿರೀಕ್ಷಿತವಾದ ಅವಕಾಶಗಳು ಬದಲಿದೆ ಎಂದು ನಂಬಲಾಗಿದೆ.

ಕಿರುಬೆರಳಿನ ಕೆಳಗಡೆ ನಕ್ಷತ್ರದಾಕೃತಿ
ಕಿರುಬೆರಳಿನ ಕೆಳಗಡೆ ನಕ್ಷತ್ರದ ಆಕೃತಿಯು ಇದ್ದರೆ ಆಗ ನೀವು ತುಂಬಾ ಅದೃಷ್ಟದವರು ಮತ್ತು ಶ್ರೀಮಂತರಾಗುವಿರಿ ಎಂದು ಹೇಳಬಹುದು. ನಿಮ್ಮ ಸ್ಪಷ್ಟ ಆಲೋಚನೆ ಮತ್ತು ಬಲವಾದ ಅಭಿಪ್ರಾಯವಾಗಿರುವುದು. ಇನ್ನೊಂದು ಕಡೆಯಲ್ಲಿ ನಿಮಗೆ ಸಂಪತ್ತು ಮತ್ತು ಹುಡುಗಿ ವಿಚಾರದಲ್ಲಿ ತುಂಬಾ ಅದೃಷ್ಟವಿರುವುದು.

ಲೂನಾ ಮೌಂಟ್ ಮೇಲೆ ನಕ್ಷತ್ರಾಕೃತಿ
ಲೂನಾ ಮೌಂಟ್ ಮೇಲೆ ನಕ್ಷತ್ರದ ಆಕೃತಿಯು ಇದ್ದರೆ ಆಗ ಇದನ್ನು ಪ್ರತಿಭೆಯ ಪತೀಕ ಎಂದು ಕರೆಯಲಾಗುವುದು. ಈ ಚಿಹ್ನೆಯು ವ್ಯಕ್ತಿಯು ತುಂಬಾ ಜಾಣ. ಸುಶೀಕ್ಷಿತ ಮತ್ತು ಕಲಾವಿದನ ಪ್ರತಿಭೆ ಇರುವಾತನೆಂದು ಪರಿಗಣಿಸಲಾಗಿದೆ. ನೀವು ಉನ್ನತ ಸ್ಥಾನವನ್ನು ಪಡೆದುಕೊಂಡು, ಜೀವನದಲ್ಲಿ ಯಶಸ್ಸು ಪಡೆಯಲಿದ್ದೀರಿ.

ಅಂಗೈಯ ಮಧ್ಯಭಾಗದಲ್ಲಿ ನಕ್ಷತ್ರದ ಆಕೃತಿ
ಅಂಗೈಯ ಮಧ್ಯಭಾಗದಲ್ಲಿ ನಕ್ಷತ್ರದ ಆಕೃತಿಯು ಇದ್ದರೆ ಆಗ ಇದು ಅಶುಭವೆಂದು ಪರಿಗಣಿಸಲಾಗಿದೆ. ಇದರಿಂದ ನಿಮಗೆ ದುರಾದೃಷ್ಟ ಮತ್ತು ನಡತೆಯಲ್ಲಿ ನೀವು ತುಂಬಾ ಹಠವಾದಿ ಹಾಗೂ ಒರಟ ಎಂದು ಹೇಳುತ್ತದೆ.

ಸೂರ್ಯನ ರೇಖೆಯಲ್ಲಿ ನಕ್ಷತ್ರ
ಸೂರ್ಯನ ರೇಖೆ ಮೇಲೆ ನಕ್ಷತ್ರದ ಆಕೃತಿಯು ಇದ್ದರೆ ಆಗ ಇದನ್ನು ಶ್ರೇಷ್ಠ ಅದೃಷ್ಟವೆನ್ನಲಾಗುತ್ತದೆ ಮತ್ತು ನೀವು ಸುತ್ತಲು ಸಂತೋಷ ತುಂಬಲಿದ್ದೀರಿ. ಸೂರ್ಯನ ಗೆರೆಯ ಮಧ್ಯಭಾಗದಲ್ಲಿ ಇದು ಇದ್ದರೆ ಆಗ ನಿಮಗೆ ಅದ್ಭುತವಾದ ಅದೃಷ್ಟ ಮತ್ತು ಬೇರೆಯವರಿಂದ ನೆರವು ಸಿಗುತ್ತದೆ ಎಂದು ಹೇಳಬಹುದು.

ಹೃದಯ ಗೆರೆ ಮೇಲೆ ನಕ್ಷತ್ರ
ಹೃದಯ ಗೆರೆ ಮೇಲೆ ನಕ್ಷತ್ರವಿದ್ದರೆ ನಿಮಗೆ ಹಠಾತ್ ಆಗಿ ಅನಾರೋಗ್ಯ ಕಾಡುವ ಸಾಧ್ಯತೆಯು ಇದೆ. ಅಪಘಾತವಾಗಬಹುದು ಅಥವಾ ಅಪಘಾತದಿಂದ ಗಾಯಾಳು ಸಮಸ್ಯೆಯಾಗಬಹುದು.

ತಲೆರೇಖೆ ಮೇಲೆ ನಕ್ಷತ್ರ
ತಲೆರೇಖೆ ಮೇಲೆ ನಕ್ಷತ್ರವಿದ್ದರೆ ಇದು ಅಪವಿತ್ರವೆಂದು ಪರಿಗಣಿಸಲಾಗಿದೆ. ಈ ಚಿಹ್ನೆಯಿಂದಾಗಿ ಗಾಯಾಳು ಸಮಸ್ಯೆ, ರೋಗ ಅಥವಾ ಕೆಲಸದ ಕಡೆ ಸಮಸ್ಯೆಯಾಗಬಹುದು. ಇದರ ಹೊರತಾಗಿ ನೀವು ಜಾಣರು ಮತ್ತು ಚುರುಕು ಸ್ವಭಾವದವರು.

ವಿಧಿ ರೇಖೆ ಮೇಲೆ ನಕ್ಷತ್ರ
ವಿಧಿ ರೇಖೆ ಮೇಲೆ ನಕ್ಷತ್ರವಿದ್ದರೆ ಆಗ ನಿಮ್ಮ ಜೀವನವು ಬದಲಾಗುತ್ತಲಿರುವುದು ಎಂದು ಹೇಳಬಹುದು. ವೃತ್ತಿಯಲ್ಲಿ ನೀವು ಹೆಚ್ಚಿನದನ್ನು ಸಾಧಿಸಲಿದ್ದೀರಿ ಎಂದು ಇದು ಹೇಳುವುದು. ಇದರ ಹೊರತಾಗಿ ನಿಮ್ಮ ನಿರ್ವಹಣ ಮತ್ತು ಮುನ್ನಡೆಸುವ ಗುಣ ಅದ್ಭುತವಾಗಿರುವುದು.

ಜೀವನರೇಖೆ ಮೇಲೆ ನಕ್ಷತ್ರ
ಜೀವನರೇಖೆ ಮೇಲೆ ನಕ್ಷತ್ರವಿದ್ದರೆ ಆಗ ನಿಮಗೆ ಜೀವನದ ಯಾವುದಾದರೂ ಹಂತದಲ್ಲಿ ದೈಹಿಕ ಸಮಸ್ಯೆಯು ಕಾಡುತ್ತದೆ ಎಂದು ಹೇಳಬಹುದು. ಜೀವನರೇಖೆಯಲ್ಲಿ ಬಿರುಕು ಉಂಟಾಗಿದ್ದರೆ ಆಗ ಇದು ಗಂಭೀರ ಆರೋಗ್ಯ ಸಮಸ್ಯೆ ಚಿಹ್ನೆ ಮತ್ತು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು.



Click it and Unblock the Notifications
