Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೈಗೆ ವಾಚು ಕಟ್ಟುವ ಭಾಗದಲ್ಲಿ ಕಾಣಿಸುವ ಮಣಿಕಟ್ಟಿನ ರೇಖೆಗಳು ಏನು ಹೇಳುತ್ತವೆ?
ನಾವು ವಾಚು ಕಟ್ಟುವಲ್ಲಿ, ಹೆಬ್ಬೆರಳಿನ ಬುಡಭಾಗದಲ್ಲಿ ಅಡ್ಡಲಾಗಿರುವ ರೇಖೆಗಳನ್ನು Rascette lines ಅಥವಾ bracelet lines ಎಂದು ಕರೆಯುತ್ತಾರೆ. ಕನ್ನಡದಲ್ಲಿ ನಾವಿದನ್ನು ಮಣಿಕಟ್ಟಿನ ರೇಖೆಗಳು ಎಂದು ಕರೆಯಬಹುದು.

ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಮೂರು ರೇಖೆಗಳಿರುತ್ತವೆ. ಇವು ಸ್ಪಷ್ಟವಾಗಿದ್ದು ಪೂರ್ಣವಾಗಿದ್ದರೆ ಇವುಗಳನ್ನು ಖಚಿತ ರೇಖೆಗಳೆಂದು ಜ್ಯೋತಿಷಿಗಳು ಪರಿಗಣಿಸುತ್ತಾರೆ. ಬನ್ನಿ, ಈ ರೇಖೆಗಳು ನಿಮ್ಮ ಬಗ್ಗೆ ಏನು ಹೇಳುತ್ತಿವೆ ಎಂಬುದನ್ನು ನೋಡೋಣ:

ಮೊದಲ ಮಣಿಕಟ್ಟಿನ ರೇಖೆ
ನಮ ಹಸ್ತದ ಬುಡದಿಂದ ಪ್ರಾರಂಭವಾಗುವ ಮೊದಲ ರೇಖೆ ನಿಮ್ಮ ಇಪ್ಪತ್ತೆಂಟನೆಯ ವಯಸ್ಸಿಗೂ ಮುನ್ನ ನಿಮ್ಮ ಆರೋಗ್ಯ ಮತ್ತು ಸಂಪತ್ತು ಹೇಗಿತ್ತು ಮತ್ತು ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ತಜ್ಞರ ಪ್ರಕಾರ ಈ ರೇಖೆ ಸ್ಪಷ್ಟವಾಗಿದ್ದಷ್ಟೂ ಯೌವನದಲ್ಲಿ ಉತ್ತಮ ಆರೋಗ್ಯ ಇರುತ್ತದೆ ಎಂದು ತಿಳಿಸುತ್ತದೆ. ಒಂದು ವೇಳೆ ಇದು ತೆಳುವಾಗಿದ್ದು ಅಸ್ಪಷ್ಟವಾಗಿ ಕಿರಿದಾಗಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಮಾತ್ರವೇ ನಿಮಗೆ ಯಾವುದೇ ಅನಾರೋಗ್ಯ ಕಾಡದು ಎಂದು ತಿಳಿಸುತ್ತದೆ. ಒಂದು ವೇಳೆ ಈ ರೇಖೆ ತುಂಡು ತುಂಡಾಗಿದ್ದರೆ ಅಥವಾ ವಕ್ರವಾಗಿದ್ದರೆ ಯೌವನಾವಸ್ಥೆಯಲ್ಲಿ ನಿಮ್ಮ ಆರೋಗ್ಯ ಕುಂಠಿತಗೊಂಡಿದ್ದು ನಡುವಯಸ್ಸು ದಾಟಿದ ಬಳಿಕವೇ ನಿಮ್ಮ ದೇಹ ಉತ್ತಮವಾದ ರೋಗನಿರೋಧಕ ಶಕ್ತಿಯನ್ನು ಪಡೆಯುತ್ತದೆ ಎಂದು ತಿಳಿಸುತ್ತದೆ.

ಎರಡನೆಯ ಮಣಿಕಟ್ಟಿನ ರೇಖೆ
ಈ ರೇಖೆ ಇಪ್ಪತ್ತೆಂಟು ವಯಸ್ಸಿನ ಬಳಿಕ ಮತ್ತು ಐವತ್ತಾರು ವಯಸ್ಸಿನ ಮುನ್ನ ನಿಮ್ಮ ಆರೋಗ್ಯ ಮತ್ತು ಸಂಪತ್ತು ಹೇಗಿರುತ್ತದೆ ಎಂದು ತಿಳಿಸುತ್ತದೆ. ಒಂದು ವೇಳೆ ಈ ರೇಖೆ ಸ್ಪಷ್ಟ ಹಾಗೂ ದಪ್ಪನಾಗಿ ನೇರವಾಗಿದ್ದರೆ ಈ ಅವಧಿಯಲ್ಲಿ ನಿಮ್ಮ್ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಅನಾರೋಗ್ಯ ಅಪರೂಪವಾಗಿ ಮಾತ್ರವೇ ಕಾಡುತ್ತದೆ ಎಂದು ತಿಳಿಸುತ್ತದೆ. ಒಂದು ವೇಳೆ ಈ ರೇಖೆ ವಕ್ರ, ತೆಳು ಅಥವಾ ತುಂಡುತುಂಡಾಗಿದ್ದರೆ ತಜ್ಞರ ಪ್ರಕಾರ ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಬಾಧೆಗೊಳಗಾಗುತ್ತಾ ಇರುತ್ತದೆ.

ಮೂರನೆಯ ಮಣಿಕಟ್ಟಿನ ರೇಖೆ
ಈ ರೇಖೆ ಸಾಮಾನ್ಯವಾಗಿ ಐವತ್ತಾರನೇ ವಯಸ್ಸಿನ ಬಳಿಕ ನಿಮ್ಮ ಆರೋಗ್ಯ ಮತ್ತು ಸಂಪತ್ತು ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಈ ರೇಖೆ ಸ್ಪಷ್ಟ ದಪ್ಪ ಹಾಗೂ ನೇರವಾಗಿದ್ದರೆ ನಿಮ್ಮ ಇಳಿವಯಸ್ಸಿನಲ್ಲಿಯೂ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿದುಬರುತ್ತದೆ. ಒಂದು ವೇಳೆ ಈ ರೇಖೆ ಅಸ್ಪಷ್ಟ, ವಕ್ರ ಅಥವಾ ತುಂಡುತುಂಡಾಗಿದ್ದರೆ ನಿಮ್ಮ ಇಳಿವಯಸ್ಸಿನಲ್ಲಿ ನಿಮ್ಮ ಅರೋಗ್ಯ ಕುಂದುತ್ತದೆ ಎಂದು ತಿಳಿಸುತ್ತದೆ.

ಒಂದು ವೇಳೆ ಈ ರೇಖೆಯೊಂದು ಕವಲೊಡೆದು ಮತ್ತೆ ಸೇರಿ ದ್ವೀಪವೊಂದನ್ನು ಸೃಷ್ಟಿಸಿದ್ದರೆ
ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ ಒಂದು ರೇಖೆಯ ನಡುವೆ ದ್ವೀಪವಿರುವಂತೆ ಕಂಡುಬಂದರೆ ಇದು ನಿಮ್ಮ ದೇಹದಾರ್ಢ್ಯತೆ ಅತ್ಯುತ್ತಮವಾಗಿದೆ ಹಾಗೂ ನೀವು ಹೆಚ್ಚು ಶಕ್ತಿಯನ್ನು ವ್ಯಯಿಸುವವರಾಗಿದ್ದೀರಿ ಎಂದು ತಿಳಿಸುತ್ತದೆ. ಇದೇ ಕಾರಣಕ್ಕೆ ನೀವು ಹೆಚ್ಚು ಆಯಾಸಗೊಂಡಿರುತ್ತೀರಿ. ಆದರೆ ಈ ಚಿಹ್ನೆಯನ್ನು ಹೊಂದಿರುವವರಿಗೆ ಮೂತ್ರಪಿಂಡಗಳ ತೊಂದರೆ ಎದುರಾಗುವ ಸಾಧ್ಯತೆಯೂ ಹೆಚ್ಚೇ ಇರುತ್ತದೆ. ಒಂದು ವೇಳೆ ಮಹಿಳೆಯರಲ್ಲಿ ಈ ಚಿಹ್ನೆ ಕಂಡುಬಂದರೆ ಇವರಿಗೆ ಹೃದಯದ ಮತ್ತು ಶ್ವಾಸಕೋಶದ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಒಂದು ವೇಳೆ ಆಯಸ್ಸು ರೇಖೆ ಮಣಿಕಟ್ಟಿನ ರೇಖೆಯನ್ನು ಸಂಧಿಸಿದರೆ
ಒಂದು ವೇಳೆ ನಿಮ್ಮ ಆಯಸ್ಸು ರೇಖೆ ಸ್ಪಷ್ಟ ಮತ್ತು ನೇರವಾಗಿದ್ದು ನಡುವೆ ಎಲ್ಲಿಯೂ ತಡೆಯಿಲ್ಲದೇ ಮಣಿಕಟ್ಟಿನ ರೇಖೆಯನ್ನು ಸಂಧಿಸಿದರೆ ನಿಮಗೆ ದೀರ್ಘಾಯಸ್ಸು ಮತ್ತು ಶಾಂತಿಯುತ ಜೀವನ ಲಭಿಸುತ್ತದೆ ಎಂದು ತಿಳಿಸಲಾಗಿದೆ.

ಒಂದು ವೇಳೆ ವಿಧಿಯ ರೇಖೆ ಮಣಿಕಟ್ಟಿನ ರೇಖೆಯನ್ನು ಸಂಧಿಸಿದರೆ
ವಿಧಿಯ ರೇಖೆ ಹಸ್ತದ ಕೆಳಭಾಗದಿಂದ ಪ್ರಾರಂಭವಾಗಿ ಮೇಲೆ ಧಾವಿಸುತ್ತದೆ ಒಂದು ವೇಳೆ ಇದು ಮಣಿಕಟ್ಟಿನ ರೇಖೆಯಿಂದ ಪ್ರಾರಂಭವಾಗಿದ್ದರೆ ನಿಮ್ಮ ಜೀವನದಲ್ಲಿ ಹೆಚ್ಚು ಕಷ್ಟಗಳು ಎದುರಾಗಲಿವೆ ಹಾಗೂ ಹೆಚ್ಚಿನ ಸಮಯ ಹತಾಶೆ ಕಾಡಲಿದೆ. ಒಂದು ವೇಳೆ ವಿಧಿ ರೇಖೆ ಚಿಕ್ಕದಾಗಿದ್ದು ಪ್ರಮುಖ ರೇಖೆಯನ್ನು ಸಂಧಿಸಿ ಮುಂದುವರೆಯದೇ ನಿಂತಿದ್ದರೆ ನಿಮ್ಮ ವೃತ್ತಿಪರ ಜೀವನವೂ ಒಂದೇ ಕಡೆ ಸ್ಥಿತವಾಗಿರುತ್ತದೆ ಹಾಗೂ ದಿವಾಳಿತನವೂ ಎದುರಾಗಬಹುದು.

ಒಂದು ವೇಳೆ ಆರೋಗ್ಯ ರೇಖೆ ಮಣಿಕಟ್ಟಿನ ರೇಖೆಯನ್ನು ಸಂಧಿಸಿದರೆ
ಒಂದು ವೇಳೆ ಆರೋಗ್ಯ ರೇಖೆ ಇನ್ನಷ್ಟು ಉದ್ದನಾಗಿ ಮಣಿಕಟ್ಟಿನ ರೇಖೆಯನ್ನು ಸಂಧಿಸಿದರೆ ನಿಮ್ಮ ವ್ಯಕ್ತಿತ್ವ ಅತ್ಯಂತ ಕ್ಷೀಣವಾಗಿರುತ್ತದೆ ಹಾಗೂ ಸತತ ಶ್ರಮ ಮತ್ತು ಮಾನಸಿಕ ಒತ್ತಡದಿಂದ ಆರೋಗ್ಯವೂ ಬಾಧೆಗೊಳಗಾಗುತ್ತಾ ಇರುತ್ತದೆ ಎಂದು ತಿಳಿಸುತ್ತದೆ.



Click it and Unblock the Notifications
