Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಚ್ಚರಿ ಲೋಕ: ಬೊಕ್ಕ ತಲೆ ಸಮಸ್ಯೆಗೆ ಇವರು 'ದನದ ಮೂತ್ರ' ಬಳಸುತ್ತಾರಂತೆ!!
ಈಜಿಪ್ಟಿನಲ್ಲಿ ಪುರಾತನ ಕಾಲದಲ್ಲಿ ಬೊಕ್ಕ ತಲೆ ನಿವಾರಣೆ ಮಾಡಲು ಅನುಸರಿಸುತ್ತಿದ್ದ ಕೆಲವು ವಿಚಿತ್ರ ಕ್ರಮಗಳನ್ನು ಜನರು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ಕೇಳಿದರೆ ಖಂಡಿತವಾಗಿಯೂ ನಿಮಗೆ ಆಘಾತವಾಗಬಹುದು. ಈ ಲೇಖನದಲ್ಲಿ ಬೊಕ್ಕ ತಲೆ ನಿವಾರಣೆ ಮಾಡಲು ಜನರು ಅಳವಡಿಸಿರುವ ಕೆಲವು ವಿಚಿತ್ರ ವಿಧಾನಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದುತ್ತಾ ಸಾಗಿ....

ಪಾರಿವಾಳದ ಹಿಕ್ಕೆ
ಬೊಕ್ಕ ತಲೆಗೆ ಪಾರಿವಾಳದ ಹಿಕ್ಕೆ ಬಳಸಿರುವ ಬಗ್ಗೆ ನೀವು ಎಂದಾರೂ ಕೇಳಿದ್ದೀರಾ? ಹೌದು, ಆಧುನಿಕ ಔಷಧಿಯ ಪಿತಾಮಹನೆಂದು ಕರೆಯಲ್ಪಡುವ ಹಿಪ್ಪೊಕ್ರೇಟ್ಸ್, ಕೆಲವೊಂದು ಚಿಕಿತ್ಸೆ ಸೂಚಿಸಿದ್ದಾನೆ. ಇದರಲ್ಲಿ ಪಾರಿವಾಳದ ಹಿಕ್ಕೆ, ಅಫೀಮು, ಬೀಟ್ ರೂಟ್, ಮೂಲಂಗಿ ಮತ್ತು ಇತರ ಕೆಲವೊಂದು ಗಿಡಮೂಲಿಕೆಗಳು ಇವೆ. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗುವುದಂತೆ.

ಗೂಳಿ ವೀರ್ಯ ಬಳಕೆ
ಗೂಳಿ ವೀರ್ಯವು ಪ್ರೋಟೀನ್ ನಿಂದ ಸಮೃದ್ಧವಾಗಿರುವ ಕಾರಣದಿಂದಾಗಿ ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು ಎಂದು ತಜ್ಞರು ಹೇಳಿದ್ದಾರೆ. ಅಮೆರಿಕಾ ಮತ್ತು ಇಂಗ್ಲೆಂಡ್ ನಲ್ಲಿ ಇದನ್ನು ಬಳಸಲಾಗುತ್ತಿದೆ.

ಗೋಮೂತ್ರ
ಭಾರತದಲ್ಲಿ ಆಯುರ್ವೇದ ಚಿಕಿತ್ಸೆಯಲ್ಲಿ ಗೋಮೂತ್ರ ಬಳಸಲಾಗುತ್ತದೆ. ಇದು ಕೂದಲು ಉದುರುವಿಕೆಗೂ ತುಂಬಾ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಚಿಕಿತ್ಸೆಗೆ ಬಳಸುವ ಗೋಮೂತ್ರವು ಕನ್ಯಾ ಗೋವಿನದ್ದಾಗಿರಬೇಕು. ಸೂರ್ಯಮೂಡುವ ಮೊದಲು ಗೋಮೂತ್ರ ಸಂಗ್ರಹಿಸಿ ಕುಡಿಯಬೇಕು. ಭಾರತದ ಕಂಪೆನಿಯೊಂದು ಶೇ.5ರಷ್ಟು ಗೋಮೂತ್ರವಿರುವ ತಂಪುಪಾನೀಯ ತಯಾರಿಸಿದೆ.

ಖಾರ ಮೆಣಸಿನ ಚಿಕಿತ್ಸೆ!
2003ರಲ್ಲಿ ಕೊರಿಯನ್ ಜರ್ನಲ್ ಆಫ್ ಡೆರ್ಮಟಾಲಜಿಯಲ್ಲಿ ಪ್ರಕಟಗೊಂಡಿರುವ ಲೇಖನದ ಪ್ರಕಾರ ಇಲಿಗಳಲ್ಲಿ ಕ್ಯಾಪ್ಸಿಕಂನಿಂದ ಕೂದಲು ತುಂಬಾ ವೇಗವಾಗಿ ಬೆಳೆಯಲು ನೆರವಾಗಿದೆಯಂತೆ. ಆದರೆ ದುರಾದೃಷ್ಟದಿಂದ ಮನುಷ್ಯರ ಮೇಲೆ ಇದನ್ನು ಪ್ರಯೋಗಿಸಿದಾಗ ಫಲಿತಾಂಶ ಧನಾತ್ಮಕವಾಗಿರಲಿಲ್ಲ.

ಈಜಿಪ್ಟಿನವರು ಪ್ರಾಣಿಗಳ ಕೊಬ್ಬು ಬಳಸುತ್ತಿದ್ದರು...
ಶತಮಾನಗಳ ಹಿಂದೆ ಈಜಿಪ್ಟಿನಲ್ಲಿ ಬೊಕ್ಕ ತಲೆಗೆ ಚಿಕಿತ್ಸೆ ನೀಡಲು ತುಂಬಾ ವಿಚಿತ್ರ ಚಿಕಿತ್ಸೆ ಮಾಡಲಾಗುತ್ತಿತ್ತು. ವಿವಿಧ ಪ್ರಾಣಿಗಳಾಗಿರುವ ಸಿಂಹ, ಕುದುರೆ, ಮೊಸಳೆ, ಬೆಕ್ಕು, ಸರ್ಪ ಮತ್ತು ಕಾಡುಕುರಿಯ ಕೊಬ್ಬನ್ನು ಹಾಕಿ ತಯಾರಿಸಿದ ಮಲಾಮ್ ನಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

ಇಲಿ ಮತ್ತು ಕುದುರೆ ಹಲ್ಲುಗಳು
ಜೂಲಿಯಸ್ ಸೀಸರ್ ನ ಪ್ರೇಮಿಯಾಗಿದ್ದಂತಹ ಕ್ಲಿಯೊಪಾತ್ರ ಬೊಕ್ಕ ತಲೆಗೆ ತುಂಬಾ ವಿಚಿತ್ರವಾದ ಚಿಕಿತ್ಸೆ ಅನುಸರಿಸುತ್ತಿದ್ದಳು. ಇಲಿ ಮತ್ತು ಕುದುರೆ ಹಲ್ಲುಗಳನ್ನು ಬಳಸಿಕೊಂಡು ಆಕೆ ಮದ್ದು ತಯಾರಿಸುತ್ತಿದ್ದಳು. ಅದಾಗ್ಯೂ, ಇದು ಯಾವುದೇ ಪರಿಣಾಮ ಬೀರಲಿಲ್ಲ. ಆಕೆ ತನ್ನ ಬೊಕ್ಕ ತಲೆ ಮುಚ್ಚಲು ಟೋಪನ್ ಬಳಸುತ್ತಿದ್ದಳು.

ಶಿರ್ಷಾಸನ
ಬೊಕ್ಕತಲೆ ನಿವಾರಿಸಲು ಯೋಗದಲ್ಲಿ ಶಿರ್ಷಾಸನವು ಒಳ್ಳೆಯ ಚಿಕಿತ್ಸೆಯಾಗಿದೆ. ಶಿರ್ಷಾಸನ ಮಾಡುವುದರಿಂದ ತಲೆಬುರುಡೆಗೆ ಹೆಚ್ಚಿನ ರಕ್ತ ಸಂಚಾರವಾಗುವುದು ಮತ್ತು ಇದರ ಪರಿಣಾಮ ಕೂದಲು ಉದುರುವುದು ತಪ್ಪುವುದು ಎಂದು ಯೋಗ ಗುರುಗಳು ಹೇಳುತ್ತಾರೆ.



Click it and Unblock the Notifications
