For Quick Alerts
ALLOW NOTIFICATIONS  
For Daily Alerts

  29 ನೇ ಏಪ್ರಿಲ್ ನಿಂದ ಮೇ 5 ರ ವರೆಗಿನ, ಪ್ರತಿ ರಾಶಿಯ ವಾರದ ಭವಿಷ್ಯ

  |

  ಒಳ್ಳೆಯ ವಿಷಯಗಳು ಮತ್ತು ಕೆಟ್ಟ ವಿಷಯಗಳು ಎರಡೂ ಜೀವನದ ಒಂದು ಭಾಗವಾಗಿದೆ. ಆದರೆ ನಮ್ಮ ಭವಿಷ್ಯವು ಹೇಗಿದೆ ಎಂದು ತಿಳಿಯಲು ನಾವು ಮಾನವರು ಯಾವಾಗಲೂ ಕುತೂಹಲದಿಂದ ಕೂಡಿರುತ್ತೇವೆ. ಜ್ಯೋತಿಷ್ಯವು ನಮ್ಮ ಜೀವನದಲ್ಲಿನ ಘಟನೆಗಳನ್ನು ಜೋಡಿಸಲು ಸಹಾಯ ಮಾಡುತ್ತದೆ ಮತ್ತು ಅದಕ್ಕೆ ತಕ್ಕಂತೆ ವಿಷಯಗಳನ್ನು ಯೋಜಿಸುತ್ತದೆ. ಏಪ್ರಿಲ್ 29 ರಿಂದ ಮೇ 5 ರ ವರೆಗಿನ ಎಲ್ಲಾ ರಾಶಿಗಳ ಭವಿಷ್ಯವನ್ನು ಇಲ್ಲಿ ಕೊಡಲಾಗಿದೆ. ಭವಿಷ್ಯವನ್ನು ತಿಳಿಯಲು ಮುಂದೆ ಓದಿ.....

  ಮೇಷ ರಾಶಿ: 21 ಮಾರ್ಚ್ - 20 ಏಪ್ರಿಲ್

  ಮೇಷ ರಾಶಿ: 21 ಮಾರ್ಚ್ - 20 ಏಪ್ರಿಲ್

  ಈ ವಾರ ನಿಮ್ಮ ಹಣಕಾಸಿನ ಸುಧಾರಣೆಗಾಗಿ ನೀವು ಹೊಸ ಯೋಜನೆಗಳನ್ನು ಕಂಡುಕೊಳ್ಳುವ ಸಾಧ್ಯತೆಗಳಿವೆ. ಇದು ರಿಯಲ್ ಎಸ್ಟೇಟ್‌ನಲ್ಲಿ ಕೆಲವು ಹೊಸ ಹೂಡಿಕೆಗಳನ್ನು ಮಾಡುವ ಮೂಲಕ ಇರಬಹುದು. ಅತಿಯಾಗಿ ಕೆಲಸದ ಮೇಲೆ ಗಮನ ಹರಿಸುವುದು ನಿಮ್ಮ ಜೀವನ ಏಕತಾನತೆಯಿಂದ ಕೂಡುವಂತೆ ಮಾಡಬಹುದು. ಆದುದರಿಂದ ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೂ ಸಮಯ ಕಳೆಯುವಂತೆ ಸಲಹೆ ನೀಡಲಾಗಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಕ್ಷಣಗಳನ್ನು ಅನುಭವಿಸುವಿರಿ. ಆದರೆ ' ಚಂದ್ರನನ್ನು ತಂದುಕೊಡುವೆ' ಎಂದು ಅವರಿಗೆ ಭರವಸೆ ನೀಡುವ ಮೊದಲು ಚೆನ್ನಾಗಿ ಯೋಚಿಸುವುದು ಉತ್ತಮ. ಹೃದಯದ ಸಮಸ್ಯೆಗಳಿರುವವರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ.

  ವೃಷಭ ರಾಶಿ: 21 ಏಪ್ರಿಲ್ - 21 ಮೇ

  ವೃಷಭ ರಾಶಿ: 21 ಏಪ್ರಿಲ್ - 21 ಮೇ

  ಉನ್ನತ ಶಿಕ್ಷಣವನ್ನು ಅಥವಾ ವಿವಿಧ ಸಂಸ್ಕೃತಿಗಳ ಬಗ್ಗೆ ಕಲಿಯುವ ಜನರಿಗೆ ಈ ವಾರ ಅನುಕೂಲಕರವಾಗಿರುತ್ತದೆ. ನಿಮ್ಮ ಸ್ನೇಹಿತರೊಂದಿಗೆ ನೀವು ಹೆಚ್ಚಿನ ಸಮಯವನ್ನು ಕಳೆಯುವುದರಿಂದ ನೀವು ಪ್ರಕೃತಿಯೊಂದಿಗೆ ಬೆರೆಯುತ್ತೀರಿ. ನಿಮ್ಮ ಹಣಕಾಸಿನ ಮೇಲೆ ನಿಗಾ ಇರಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ, ಆದರೆ ಇದು ನಿಮ್ಮ ಸಂಗಾತಿಯನ್ನು ಅಸಮಾಧಾನಗೊಳಿಸಬಹುದು. ನಿಮ್ಮ ಹೆತ್ತವರ ಆಶೀರ್ವಾದಗಳನ್ನು ತೆಗೆದುಕೊಳ್ಳುವುದು ನಿಮ್ಮ ಎಲ್ಲಾ ಕಾರ್ಯಗಳನ್ನು ಅಡಚಣೆಯಿಲ್ಲದೇ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಆರೋಗ್ಯವು ಈ ವಾರ ಉತ್ತಮವಾಗಿರಲಿದೆ.

  ಮಿಥುನ ರಾಶಿ: 22 ಮೇ - 21 ಜೂನ್

  ಮಿಥುನ ರಾಶಿ: 22 ಮೇ - 21 ಜೂನ್

  ಈ ವಾರ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಸಾಕಷ್ಟು ಅವಕಾಶಗಳನ್ನು ನೀವು ಪಡೆಯುತ್ತೀರಿ ಆದ್ದರಿಂದ ಸಿಕ್ಕಿದ ಅವಕಾಶದ ಪ್ರಯೋಜನವನ್ನು ಚೆನ್ನಾಗಿ ಬಳಸಿಕೊಳ್ಳಿ. ನಿಮ್ಮ ಸ್ನೇಹಿತರ ಮೇಲೆ ಹಣವನ್ನು ಹೆಚ್ಚು ಖರ್ಚು ಮಾಡುವುದನ್ನು ತಡೆಯಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ಇದು ನಿಮ್ಮನ್ನು ಆರ್ಥಿಕ ಸಮಸ್ಯೆಗೊಳಗಾಗಬಹುದು. ಕೆಲಸದಲ್ಲಿರುವ ನಿಮ್ಮ ಸಹೋದ್ಯೋಗಿಯೆಡೆಗೆ ನೀವು ಆಕರ್ಷಿತರಾಗಬಹುದು. ಇದು ಯಾವಾಗಲೂ ಕೆಟ್ಟ ಆಲೋಚನೆ ಎಂದು ನೆನಪಿನಲ್ಲಿಡಿ. ವಿವಾಹಿತರು, ತಮ್ಮ ಸಂಗಾತಿಗೆ ಉಡುಗೊರೆಯನ್ನು ಕೊಡುವುದು ವಿವಾಹಿತ ಜೀವನಕ್ಕೆ ಹೊಸ ಮೆರುಗನ್ನು ನೀಡಬಹುದು. ಸಕಾಲಿಕ ಅಲರ್ಜಿಗಳು ನಿಮಗೆ ತಾತ್ಕಾಲಿಕವಾಗಿ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ.

  ಕರ್ಕ ರಾಶಿ: 22 ಜೂನ್-22 ಜುಲೈ

  ಕರ್ಕ ರಾಶಿ: 22 ಜೂನ್-22 ಜುಲೈ

  ನಿಮ್ಮ ಕೆಲಸ ಮತ್ತು ನಿಮ್ಮ ಸಂಗಾತಿ, ಎರಡೂ ಕೂಡಾ ನಿಮಗೆ ಮುಖ್ಯವಾಗಿದೆ. ಆದ್ದರಿಂದ ಇವೆರಡರ ನಡುವೆ ಯಾವುದನ್ನು ಆಯ್ಕೆ ಮಾಡುವುದು ಎನ್ನುವುದು ನಿಮಗೆ ಸಮಸ್ಯೆಯಾಗಬಹುದು. ನಿಮ್ಮ ಜೀವನದಲ್ಲಿ ಇಬ್ಬರಿಗೂ ಸ್ಪಷ್ಟ ಜಾಗಗಳನ್ನು ಖಾತ್ರಿಪಡಿಸಿಕೊಳ್ಳಿ. ಹೊಸ ಹೂಡಿಕೆಗಳಲ್ಲಿ ಪಾವತಿಸುವುದರಿಂದ ನಿಮ್ಮ ಹಣಕಾಸು ಈ ವಾರ ಪ್ರಬಲವಾಗಲಿದೆ. ನೀವು ನಿಮ್ಮ ಶಾಪಿಂಗ್ ಟ್ರಿಪ್ ನಲ್ಲಿ ಆಡಂಬರದ ಪ್ರದರ್ಶನ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಇದನ್ನು ಕೆಲವು ಸಮಯದವರೆಗೆ ಮುಂದೂಡಲು ಸಲಹೆ ನೀಡಲಾಗಿದೆ .

  ವಿಶೇಷವಾಗಿ ಯೋಜಿತ ದಿನ(date) ನಿಮ್ಮ ಸಂಗಾತಿಯನ್ನು ಅಚ್ಚರಿಗೊಳಿ ಬಹುದು ಮತ್ತು ನೀವು ಅವರ ಪ್ರಣಯ ಭಾಗವನ್ನು(romantic side) ನೋಡಬಹುದು. ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಈ ವಾರ, ಕಾಣದು.

  ಸಿಂಹ ರಾಶಿ: 23 ಜುಲೈ- 21 ಆಗಸ್ಟ್

  ಸಿಂಹ ರಾಶಿ: 23 ಜುಲೈ- 21 ಆಗಸ್ಟ್

  ನೀವು ಇತ್ತೀಚೆಗೆ ನಿಮ್ಮ ಕೆಲಸದ ಮೇಲೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೀರಿ, ಇದು ಈ ವಾರ ಪರಿಣಾಮವನ್ನು ತೋರಿಸುತ್ತದೆ. ಸ್ವಲ್ಪ ಹೆಜ್ಜೆ ಹಿಂದಕ್ಕೆ ಇಟ್ಟು ,ಒತ್ತಡವನ್ನು ನಿವಾರಿಸಲು ಸೂಚಿಸಲಾಗಿದೆ. ಹಣಕಾಸಿನ ಬಗ್ಗೆ ಊಹೆಮಾಡುವ ಕೆಲಸವು ನಿಮ್ಮನ್ನು ತೊಂದರೆಗೆ ತರಬಹುದು. ಆದ್ದರಿಂದ ಆರ್ಥಿಕ ಸಲಹೆಗಾರನ ಸಲಹೆ ಕೇಳಲು ಮರೆಯದಿರಿ. ನಿಮ್ಮ ಜೀವನ ಸಂಗಾತಿ ಇಂದು ನಿಮ್ಮ ಕುಟುಂಬವನ್ನು ವಿಸ್ತರಿಸುವ ಬಗ್ಗೆ ಮಾತನಾಡಬಹುದು, ಆದ್ದರಿಂದ ಅವರಿಗೆ ಕಿವಿ ನೀಡಿ. ನೀವು ಆರೋಗ್ಯಕರ ಆಹಾರವನ್ನು ಮತ್ತು ಪೂರಕಗಳನ್ನು ತಿನ್ನಬೇಕು. ಇದು ಶ್ರಮದಿಂದ ದಣಿದ ನಿಮ್ಮ ಆರೋಗ್ಯವನ್ನು ಮೊದಲಿನಂತೆ ಮಾಡಲು ಸಹಾಯ ಮಾಡುತ್ತದೆ.

  ಕನ್ಯಾ ರಾಶಿ: ಆಗಸ್ಟ್ 22 - 23 ಸೆಪ್ಟೆಂಬರ್

  ಕನ್ಯಾ ರಾಶಿ: ಆಗಸ್ಟ್ 22 - 23 ಸೆಪ್ಟೆಂಬರ್

  ಈ ವಾರ ನಿಮ್ಮ ಕೆಲಸದ ಸ್ಥಳದಲ್ಲಿ ಅತ್ಯಾಕರ್ಷಕ ಸಂಗತಿಗಳು ಏನೂ ಸಂಭವಿಸುವುದಿಲ್ಲ ಎಂದು ಊಹಿಸಲಾಗಿದೆ. ವಾರದ ಕೊನೆಯ ಭಾಗದಲ್ಲಿ ನೀವು ಕೆಲವು ಹಣಕಾಸಿನ ಸಮಸ್ಯೆಯನ್ನು ಎದುರಿಸಬಹುದು. ಆದರೆ, ನಿಮ್ಮ ಜೀವನ ಸಂಗಾತಿಯಿಂದ ನೀವು ಪಡೆಯುವ ಬೆಂಬಲ ಮತ್ತು ಪ್ರೀತಿ ನಿಮಗೆ ಸಹಾಯ ಮಾಡುತ್ತದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ವ್ಯಾಪಾರ ಅಥವಾ ಸಂತೋಷಕ್ಕಾಗಿ, ವಿದೇಶಿ ಸ್ಥಳಗಳಿಗೆ ಮಾಡುವ ಪ್ರವಾಸಗಳು ಯಶಸ್ವಿಯಾಗುವುದು. ಋತುಮಾನದ ಅಲರ್ಜಿಗಳಿಂದ ನೀವು ಬಳಲುವ ಸಾಧ್ಯತೆಯಿದೆ ಮತ್ತು ಅದನ್ನು ಕಡಿಮೆ ಮಾಡಿಕೊಳ್ಳಲು, ಕೆಲವು ಮನೆ ಪರಿಹಾರಗಳನ್ನು ಮಾಡಬಹುದು.

  ತುಲಾ ರಾಶಿ: 24 ಸೆಪ್ಟೆಂಬರ್- 23 ಅಕ್ಟೋಬರ್

  ತುಲಾ ರಾಶಿ: 24 ಸೆಪ್ಟೆಂಬರ್- 23 ಅಕ್ಟೋಬರ್

  ನಿಮ್ಮ ಸೃಜನಶೀಲತೆ ಈ ವಾರ ಉತ್ತಮ ಬಳಕೆಯಲ್ಲಿದೆ ಮತ್ತು ಇದು ನಿಮ್ಮ ಹಿರಿಯರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ನಿಮ್ಮ ಪಾಲುದಾರರೊಂದಿಗೆ ನೀವು ಎದುರಿಸುತ್ತಿರುವ ಹಣಕಾಸಿನ ಸಮಸ್ಯೆಗಳು ಅಂತಿಮವಾಗಿ ಪರಿಹರಿಸಲ್ಪಡುತ್ತವೆ. ಹೇಗಾದರೂ, ನಿಮ್ಮ ಕುಟುಂಬದೊಂದಿಗೆ ವ್ಯವಹರಿಸುವಾಗ ನೀವು ಕೆಲವು ಕಠಿಣ ಪದಗಳನ್ನು ಬಳಸಬಹುದು. ಮತ್ತು ಇದು ನಿಮ್ಮ ಮನೆಯವರನ್ನು ಬೇಸರಗೊಳಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಸಾಹಸಮಯ ಪ್ರವಾಸವನ್ನು ಕೈಗೊಳ್ಳಲು ನೀವು ಬಯಸಬಹುದು, ಆದರೆ ಅವರು ಆಸಕ್ತಿ ಹೊಂದಿಲ್ಲದಿದ್ದರೆ ಅವರನ್ನು ಒತ್ತಾಯ ಮಾಡಬೇಡಿ. ನಿಮ್ಮ ಆರೋಗ್ಯವು ಈ ವಾರ ಒಳ್ಳೆಯದಾಗಿರುತ್ತದೆ.

  ವೃಶ್ಚಿಕ ರಾಶಿ: 24 ಅಕ್ಟೋಬರ್-22 ನವೆಂಬರ್

  ವೃಶ್ಚಿಕ ರಾಶಿ: 24 ಅಕ್ಟೋಬರ್-22 ನವೆಂಬರ್

  ಇಂದು ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಕೆಲವು ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು. ನಿಮ್ಮ ಹಣಕಾಸು ದೀರ್ಘಕಾಲದ ನಂತರ ಸ್ಥಿರೀಕರಿಸಬಹುದು. ಆದ್ದರಿಂದ ಸಧ್ಯ ಯಾವುದೇ ಅನಗತ್ಯ ವೆಚ್ಚಗಳನ್ನು ಮಾಡದಿರಿ. ನಿಮ್ಮ ಪಾಲುದಾರರೊಂದಿಗಿನ ಚರ್ಚೆಗಳು ಯಾವುದೇ ಉಪಯೋಗ ನೀಡದು. ನಿಮ್ಮ ಪಾಲುದಾರನಿಗೆ ಹತ್ತಿರವಾಗಿರುವ ಕುಟುಂಬ ಸದಸ್ಯರ ಹಸ್ತಕ್ಷೇಪ, ನಿಮ್ಮ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನಿಮ್ಮ ಸಂಬಂಧದಲ್ಲಿ ಸ್ಪಾರ್ಕ್ ಮರಳಿ ತರಲು ಉಪಯುಕ್ತವಾದದನ್ನು ಮಾಡಲು ಪ್ರಯತ್ನಿಸಿ. ಅಧಿಕ ರಕ್ತದೊತ್ತಡ ಹೊಂದಿರುವ ಜನರು ಆರೋಗ್ಯದ ಕಾಳಜಿ ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.

  ಧನು ರಾಶಿ: 23 ನವೆಂಬರ್-22 ಡಿಸೆಂಬರ್

  ಧನು ರಾಶಿ: 23 ನವೆಂಬರ್-22 ಡಿಸೆಂಬರ್

  ಕುಟುಂಬದ ವ್ಯವಹಾರಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳಬಹುದು ಮತ್ತು ನೀವು ಇಂದು ನಿಮ್ಮ ಕೆಲಸದ ಮೇಲೆ ಗಮನ ಕೊಡಲು ಕಷ್ಟವಾಗಿಸಬಹುದು. ಇದು ಕೆಲಸದ ಮೇಲೆ ಗಂಭೀರವಾದ ಪರಿಣಾಮಗಳನ್ನು ಹೊಂದಿರುವುದರಿಂದ ಇದನ್ನು ತಪ್ಪಿಸಲು ಪ್ರಯತ್ನಿಸಿ. ಆರ್ಥಿಕವಾಗಿ, ನಿಮ್ಮ ಹವ್ಯಾಸಗಳು ಮತ್ತು ಆಸಕ್ತಿಯ ಮೇಲೆ ಹಣವನ್ನು ಖರ್ಚು ಮಾಡುವ ನಿಮ್ಮ ಬಯಕೆಯು ನಿಮ್ಮ ಕುಟುಂಬದಲ್ಲಿನ ವಾದಗಳ ಕಾರಣವಾಗಿರುತ್ತದೆ. ವಾದಿಸುವ ಮೊದಲು ಅವರ ದೃಷ್ಟಿಕೋನವನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಈ ವಾರ ವೈವಾಹಿಕ ಆನಂದವನ್ನು ನೀವು ಆನಂದಿಸುವಿರಿ. ಪ್ರತಿದಿನವೂ ಬೆಳಗ್ಗೆ ಧ್ಯಾನ ಮಾಡುವುದರಿಂದ ನಿಮ್ಮ ಆರೋಗ್ಯವು ಹೆಚ್ಚು ಪ್ರಯೋಜನವನ್ನು ನೀಡುತ್ತದೆ.

  ಮಕರ ರಾಶಿ: 23 ಡಿಸೆಂಬರ್ -20 ಜನವರಿ

  ಮಕರ ರಾಶಿ: 23 ಡಿಸೆಂಬರ್ -20 ಜನವರಿ

  ಈ ವಾರ ನಿಮ್ಮ ಗುರಿಗಳನ್ನು ಸಾಧಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು, ಆದರೆ ನಿಮಗಾಗಿ ಸ್ವಲ್ಪ ಸಮಯವನ್ನು ಉಳಿಸಿಕೊಳ್ಳುವುದನ್ನು ಮರೆಯಬೇಡಿ. ಹೊಸ ಹೂಡಿಕೆಯನ್ನು ಮಾಡುವುದು ನಿಮಗೆ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುತ್ತದೆ, ಇದು ಹಣಕಾಸಿನ ಬಾಧ್ಯತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಖರ್ಚು ಮಾಡುವುದರಿಂದ ನೀವು ಜೀವನದಲ್ಲಿ ಉತ್ತಮ ವಿಷಯಗಳ ಆನಂದ ಪಡೆಯಬಹುದು. ನಿಮ್ಮ ಕುಟುಂಬದೊಂದಿಗೆ ವ್ಯವಹರಿಸುವಾಗ ಕಠಿಣ ಪದಗಳನ್ನು ಬಳಸದಂತೆ ನೋಡಿಕೊಳ್ಳಿ. ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳಿಲ್ಲದೆ ಇದು ಸರಾಸರಿ ವಾರವಾಗಿರುತ್ತದೆ.

  ಕುಂಭ ರಾಶಿ: 21 ಜನವರಿ- 19 ಫೆಬ್ರವರಿ

  ಕುಂಭ ರಾಶಿ: 21 ಜನವರಿ- 19 ಫೆಬ್ರವರಿ

  ನಿಮ್ಮ ಕೆಲಸವು ಈ ವಾರ ವೇಗವನ್ನು ಪಡೆದುಕೊಳ್ಳಬಹುದು ಮತ್ತು ಇದು ಅನೇಕ ಕಾರ್ಯಗಳನ್ನು ಸಾಧಿಸಲು ಸಹಾಯಕವಾಗಿದೆ. ನೀವು ಹಣವನ್ನು ಮಾಡಬಹುದು, ಆದರೆ ಹೆಚ್ಚಿನದನ್ನು ನಿರೀಕ್ಷಿಸದಿರಿ. ಕುಟುಂಬದಲ್ಲಿನ ವಿಷಯಗಳು ಅಂತಿಮವಾಗಿ ಪರಿಹರಿಸಲ್ಪಡುತ್ತವೆ. ನಕಾರಾತ್ಮಕ ಚರ್ಚೆಗಳಿಂದ ದೂರವಿರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಹೆಚ್ಚು ಉದಾರವಾಗಿರುವುದರಿಂದ ಅವರಿಗೆ ವಿಶೇಷ ಭಾವನೆಯನ್ನುಂಟು ಮಾಡುತ್ತದೆ. ಅಂತಿಮವಾಗಿ ನೀವು ಪ್ರಮುಖ ಆರೋಗ್ಯ ಸಮಸ್ಯೆಯಿಂದ ಮುಕ್ತರಾಗಬಹುದು.

  ಮೀನ ರಾಶಿ: 20 ಫೆಬ್ರವರಿ- 20 ಮಾರ್ಚ್

  ಮೀನ ರಾಶಿ: 20 ಫೆಬ್ರವರಿ- 20 ಮಾರ್ಚ್

  ಈ ವಾರ ನಿಮ್ಮ ಕನಸುಗಳ ಬೆನ್ನಟ್ಟಲು ನೀವು ಸಾಕಷ್ಟು ಅವಕಾಶವನ್ನು ಪಡೆಯುತ್ತೀರಿ. ಆದರೆ ಸಾವಧಾನದಿಂದ ಇರುವುದು ಮುಖ್ಯ. ನಿಮ್ಮ ಹಣಕಾಸಿನ ವಿವರಗಳನ್ನು ನಿಕಟವಾಗಿ ಇರಿಸಿ. ಯಾಕೆಂದರೆ ಯಾರಾದರೊಬ್ಬರು ನಿಮ್ಮ ಕಾನೂನುಬದ್ದತೆಯನ್ನು ಪ್ರಯೋಜನವನ್ನು ಪಡೆಯಲು ಪ್ರಯತ್ನಿಸಬಹುದು. ಕುಟುಂಬದ ವಿಚಾರದಲ್ಲಿ, ವಿಷಯಗಳು ಶಾಂತಿಯುತ ಮತ್ತು ಸಂತೋಷದಾಯಕವಾಗಿರುತ್ತವೆ. ವಾರದ ನಂತರದ ಭಾಗಗಳಲ್ಲಿ ವಿಷಯಗಳು ಉತ್ತಮವಾಗಿಲ್ಲದಿರುವುದರಿಂದ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

  English summary

  Weekly Predictions for each Zodiac sign 29th April to 5th May

  Here is the Weekly prediction for each zodiac sign. For April 29th to may 5th.
  Story first published: Tuesday, May 1, 2018, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more