For Quick Alerts
ALLOW NOTIFICATIONS  
For Daily Alerts

ವಾಸ್ತುಶಾಸ್ತ್ರ: ತಪ್ಪದೇ ಈ ಸೂತ್ರ ಅನುಸರಿಸಿ, ಮನಸ್ಸಿಗೆ ನೆಮ್ಮದಿ ಸಿಗುವುದು...

By
|

ಎಷ್ಟೇ ದುಡಿದರೂ ಕೈಯಲ್ಲಿ ಒಂದು ಪೈಸೆ ಕೂಡ ಉಳಿಯುವುದಿಲ್ಲ. ಮನೆಯಲ್ಲಿ ಯಾವತ್ತೂ ಮನಸ್ಸಿಗೆ ಶಾಂತಿಯಿಲ್ಲ. ಮನೆಗೆ ಹೋಗುವುದೇ ಬೇಡ ಎನ್ನುವಂತಹ ಪರಿಸ್ಥಿತಿ. ಯಾಕೆಂದರೆ ಮನೆಯಲ್ಲಿ ಯಾರನ್ನೇ ನೋಡಿದರೂ ಅವರಿಗೆ ಆರೋಗ್ಯವೇ ಸರಿಯಿಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮಕ್ಕಳು ಮಾತು ಕೇಳದೆ ತಮ್ಮದೇ ಲೋಕದಲ್ಲಿ ವ್ಯವಹರಿಸುತ್ತಾ ಇದ್ದಾರೆ. ಏನೇ ಮಾಡಿದರೂ ದುಡಿದ ಹಣವನ್ನು ಉಳಿತಾಯ ಮಾಡಲು ಆಗುತ್ತಿಲ್ಲ. ಯಾವುದಾದರೂ ವ್ಯವಹಾರಕ್ಕೆ ಕೈ ಹಾಕಿದರೆ ಕೈ ಸುಟ್ಟುಕೊಂಡದ್ದೇ ಹೆಚ್ಚು.

ಇಷ್ಟೆಲ್ಲಾ ಸಮಸ್ಯೆಗಳಿರುವ ಜನರು ಒಂದಾ ಮನೆಯನ್ನು ಬದಲಾಯಿಸಿ ಬೇರೆ ಕಡೆ ಹೋಗುತ್ತಾರೆ. ಇಲ್ಲವೆಂದಾದರೆ ಮನೆಯನ್ನು ಒಡೆದು ಬೇರೆ ಮನೆ ಮಾಡುತ್ತಾರೆ. ಆದರೂ ಸಮಸ್ಯೆಗಳು ಮಾತ್ರ ಮತ್ತೆ ಕಾಡುತ್ತಲೇ ಇರುತ್ತದೆ. ಇದಕ್ಕೆ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿರುವಂತಹ ನಕಾರಾತ್ಮಕ ಅಂಶಗಳೇ ಇದಕ್ಕೆಲ್ಲಾ ಕಾರಣವಾಗಿದೆ!... ಚಿಂತಿಸದಿರಿ ಮನೆಯಲ್ಲಿ ಕಾಡುವ ಇಂತಹ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಸರಳ ಪರಿಹಾರ....

ದೇವರ ವಿಗ್ರಹಗಳನ್ನು ಎದುರು ಬದುರಾಗಿಡಬೇಡಿ

ದೇವರ ವಿಗ್ರಹಗಳನ್ನು ಎದುರು ಬದುರಾಗಿಡಬೇಡಿ

ಒಂದು ವೇಳೆ ನಿಮ್ಮ ಮನೆಯಲ್ಲಿ ಹಲವಾರು ದೇವರ ವಿಗ್ರಹ ಮತ್ತು ಪಟಗಳಿದ್ದರೆ ಪ್ರತಿ ವಿಗ್ರಹವೂ ಇನ್ನೊಂದು ವಿಗ್ರಹಕ್ಕೆ ಎದುರುಬದುರಾಗಿರದಂತೆ ನೋಡಿಕೊಳ್ಳಿ. ಏಕೆಂದರೆ ಇದರಿಂದ ಋಣಾತ್ಮಕ ಶಕ್ತಿ ಅಪಾರವಾಗಿ ಹೆಚ್ಚುತ್ತದೆ. ಪ್ರತಿಯೊಂದನ್ನೂ ಪ್ರತ್ಯೇಕವಾಗಿರುವಂತೆ ಮತ್ತು ಒಂದು ಇನ್ನೊಂದರತ್ತ ಮುಖ ಮಾಡದಂತೆ ಜೋಡಿಸಿ

ಲಕ್ಷ್ಮಿ-ಗಣಪತಿಯ ಮೂರ್ತಿಯನ್ನು ಜತೆಯಲ್ಲಿ ಇಟ್ಟು ಪೂಜೆ ಮಾಡಿ

ಲಕ್ಷ್ಮಿ-ಗಣಪತಿಯ ಮೂರ್ತಿಯನ್ನು ಜತೆಯಲ್ಲಿ ಇಟ್ಟು ಪೂಜೆ ಮಾಡಿ

ಲಕ್ಷ್ಮಿ ಮತ್ತು ಗಣಪತಿ ವಿಗ್ರಹಗಳು ಲಕ್ಷ್ಮಿ ಹಾಗೂ ಗಣಪತಿಯ ಮೂರ್ತಿಯನ್ನು ಜತೆಯಲ್ಲಿ ಇಟ್ಟು ಯಾವಾಗಲೂ ಪೂಜೆ ಮಾಡುತ್ತಾ ಇದ್ದರೆ ಆಗ ಲಕ್ಷ್ಮಿಯೂ ಬೇಗನೆ ಒಲಿಯುತ್ತಾಳೆ ಎಂದು ನಂಬಲಾಗಿದೆ. ಮೂರ್ತಿಗಳು ಬೆಳ್ಳಿಯದ್ದಾಗಿದ್ದರೆ ಸಂಪತ್ತು ಯಾವತ್ತೂ ಮನೆಯಿಂದ ಹೊರಹೋಗುವುದಿಲ್ಲ ಎನ್ನುವ ನಂಬಿಕೆಯಿದೆ. ಅಲ್ಲದೆ, ಮನೆಯಲ್ಲಿ ಶಾಂತಿ ನೆಮ್ಮದಿ ದೊರೆಯಲಿದೆ.

ಲಕ್ಷ್ಮಿ ದೇವರ ಪಟ

ಲಕ್ಷ್ಮಿ ದೇವರ ಪಟ

ಮನೆಯಲ್ಲಿ ಸಂಪತ್ತು, ಹಾಗೂ ಸದಾ ನೆಮ್ಮದಿಯಿಂದ ಇರಬೇಕೆಂದರೆ ಲಕ್ಷ್ಮಿದೇವರ ಪಟ ಅಥವಾ ಮುದ್ರಿತ ಗೋಡೆಯ ಟೈಲ್ಸ್ ಅನ್ನು ಮನೆಯ ಪ್ರಧಾನ ಬಾಗಿಲಿಗೆ ಎದುರಾಗಿ, ಅಂದರೆ ಮನೆಯ ಒಳಗೆ ಅಡಿಯಿಡುತ್ತಿದ್ದಂತೆಯೇ ಕಾಣುವಂತೆ ಇರಿಸಿ. ಆದರೆ ಇದಕ್ಕೆ ಎದುರಾಗಿ ಪಾದರಕ್ಷೆಗಳು ಅಥವಾ ಪಾದರಕ್ಷೆಗಳ ಕಪಾಟು ಇರಿಸಕೂಡದು. ಒಂದು ಜೊತೆ ಲಕ್ಷ್ಮೀಪಾದಗಳನ್ನು ಮನೆಯ ಪ್ರಧಾನ ಬಾಗಿಲಿನ ಬಳಿ ಇರಿಸಿ. ಇವುಗಳು ಮನೆಯೊಳಕ್ಕೆ ಹೋಗುವ ದಿಕ್ಕಿನಲ್ಲಿರಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ ಆಗಮಿಸುತ್ತದೆ.

ಕಲ್ಲುಪ್ಪು ಬೆರೆಸಿದ ನೀರಿನಿಂದ ನೆಲ ಒರೆಸಿ...

ಕಲ್ಲುಪ್ಪು ಬೆರೆಸಿದ ನೀರಿನಿಂದ ನೆಲ ಒರೆಸಿ...

ಈ ವಿಧಾನವನ್ನು ಭಾನುವಾರದ ಹೊರತು ಇತರ ದಿನಗಳಲ್ಲಿ ಆಚರಿಸಬಹುದು. ಮೊದಲು ಕೊಂಚ ಕಲ್ಲುಪ್ಪನ್ನು ನೀರಿನಲ್ಲಿ ಬೆರೆಸಿ ಈ ನೀರನ್ನು ನೆಲ ಒರೆಸುವ ದ್ರಾವಣದಲ್ಲಿ ಮಿಶ್ರಣ ಮಾಡಿ ಇಡಿಯ ಮನೆಯ ನೆಲವನ್ನು ಒರೆಸಿ. ಮನೆಯ ಹಿಂಭಾಗದಿಂದ ಪ್ರಾರಂಭಿಸಿ ಮನೆಯ ಒಳಗಣ ಪ್ರತಿ ಕೋಣೆಯ ನೆಲದ ಒಂದಿಂಚನ್ನೂ ಬಿಡದಂತೆ ಒರೆಸುತ್ತಾ ಮನೆಯ ಹೊಸ್ತಿಲಿನಲ್ಲಿ ಕೊನೆಯಾಗುವಂತೆ ಒರೆಸುವ ಮೂಲಕ ಋಣಾತ್ಮಕ ಶಕ್ತಿಯನ್ನು ಹೊರಹಾಕುವ ಮೂಲಕ ದಾರಿದ್ರ್ಯದ ಲಕ್ಷಣಗಳನ್ನೂ ನಿವಾರಿಸಬಹುದು.

ಶ್ರೀ ಯಂತ್ರವನ್ನಿಡಬೇಕು

ಶ್ರೀ ಯಂತ್ರವನ್ನಿಡಬೇಕು

ಮನೆಯಲ್ಲಿ ಪವಿತ್ರವಾದ ಶ್ರೀ ಯಂತ್ರವನ್ನು ಇಟ್ಟಿರಬೇಕು. ಪುರಾಣದ ಪ್ರಕಾರ ಶ್ರೀ ಯಂತ್ರವು ಬ್ರಹ್ಮ ಮತ್ತು ವಿಷ್ಣು ದೇವರ ಕೃಪೆಗೆ ಒಳಗಾಗಿತ್ತು ಎನ್ನಲಾಗುತ್ತದೆ. ಶ್ರೀ ಯಂತ್ರವನ್ನು "ಓಂ" ಧ್ವನಿಯ ಕಂಪನ ದೃಶ್ಯ ಚಿತ್ರಣ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಈ ಯಂತ್ರವನ್ನು ಇಟ್ಟರೆ ಓಂ ಎನ್ನುವ ಧ್ವನಿಯಿಂದ ವಿಷ್ಣು ದೇವರ ಕೃಪೆಗೆ ಒಳಗಾಗಬಹುದು. ಈ ಯಂತ್ರದ ಚಿತ್ರವನ್ನು ಪೂರ್ವ ದಿಕ್ಕೆಗೆ ಬರುವಂತೆ ಇಟ್ಟರೆ ಆರ್ಥಿಕ ಸ್ಥಿತಿ ಸುಧಾರಣೆಯಾಗಿ, ಮನೆಯಲ್ಲಿ ಧನಾತ್ಮಕ ಶಕ್ತಿ ಆವರಿಸಲಿದೆ ಎನ್ನುವ ನಂಬಿಕೆಯಿದೆ.

ಊಟದ ಮೇಜಿನ ಮೇಲೆ ಸದಾ ಉಪ್ಪಿನ ಚಿಕ್ಕ ಭರಣಿ ಇಟ್ಟಿರಿ...

ಊಟದ ಮೇಜಿನ ಮೇಲೆ ಸದಾ ಉಪ್ಪಿನ ಚಿಕ್ಕ ಭರಣಿ ಇಟ್ಟಿರಿ...

ನಿಮ್ಮ ಮನೆಯ ಊಟದ ಮೇಜಿನ ಮೇಲೆ ಸದಾ ಉಪ್ಪಿನ ಚಿಕ್ಕ ಭರಣಿಯನ್ನು ಇರಿಸಿರುವ ಮೂಲಕ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಎಂದಿಗೂ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಈ ಪುಟ್ಟ ಉಪ್ಪಿನ ಭರಣಿಗೆ ಇಷ್ಟು ಶಕ್ತಿ ಇದೆಯೆಂದು ಅಚ್ಚರಿಯಾಗುತ್ತದಲ್ಲವೇ?

ಮನೆಯೊಳಗೆ ಸಮೃದ್ಧಿಗೆ ಹೀಗೆ ಮಾಡಿ...

ಮನೆಯೊಳಗೆ ಸಮೃದ್ಧಿಗೆ ಹೀಗೆ ಮಾಡಿ...

ಒಂದು ಚಿಕ್ಕ ಕೆಂಪು ಬಣ್ಣದ ಬಟ್ಟೆಯಲ್ಲಿ ಕೊಂಚ ಉಪ್ಪನ್ನು ಹಾಕಿ ಗಂಟುಕಟ್ಟಿ ಈ ಗಂಟನ್ನು ನಿಮ್ಮ ಮನೆಯ ಪ್ರಧಾನ ಬಾಗಿಲಿನ ಮೇಲೆ ನೇತುಹಾಕಿ. ಈ ಮೂಲಕ ನಿಮ್ಮ ಮನೆಗೆ ಪ್ರವೇಶಿಸುವ ಯಾವುದೇ ಋಣಾತ್ಮಕ ಶಕ್ತಿಯಿಂದ ರಕ್ಷಣೆ ಪಡೆದಂತಾಗುತ್ತದೆ ಹಾಗೂ ನಿಮ್ಮ ಮನೆಯೊಳಗೆ ಸಮೃದ್ಧಿ ಹಾಗೂ ಶುಭಶಕುನಗಳನ್ನು ಆಹ್ವಾನಿಸಲು ಸಾಧ್ಯವಾಗುತ್ತದೆ.

ಸಿಟ್ಟು, ಬೇಸರ, ಜಗಳ ಮಾಡಿಕೊಳ್ಳಬೇಡಿ

ಸಿಟ್ಟು, ಬೇಸರ, ಜಗಳ ಮಾಡಿಕೊಳ್ಳಬೇಡಿ

ಮನೆಯ ಮಂದಿಯೊಂದಿಗೆ ಮಾತನಾಡುವಾಗ ಸಿಟ್ಟು, ಬೇಸರ ಹಾಗೂ ಆಗಾಗ ಕಲಹಗಳು ಉಂಟಾಗುತ್ತಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ತಿಳಿಯಬಹುದು. ಅದಕ್ಕಾಗಿ ಸೂಕ್ತ ಪರಿಹಾರ ಮಾಡಿಕೊಳ್ಳುವುದು ಸೂಕ್ತ. ಕೆಲವೊಮ್ಮೆಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದಾದರೆ ಮನೆಯಲ್ಲಿ ಪರಸ್ಪರ ಟೀಕೆಗಳು ಉಂಟಾಗುತ್ತವೆ. ವ್ಯಕ್ತಿಗಳ ನಡುವೆ ಹೊಂದಾಣಿಕೆ ಅಥವಾ ಸಾಮರಸ್ಯದ ಗುಣಗಳು ಕಡಿಮೆಯಾಗಿರುತ್ತವೆ. ಚಿಕ್ಕ ಪುಟ್ಟ ವಿಚಾರಗಳಿಗೂ ಕೂಗಾಡುವುದನ್ನು ಕಾಣಬಹುದು.

ಪೀಠೋಪಕರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಪೀಠೋಪಕರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಪ್ರತಿ 2-3 ತಿಂಗಳಿಗೆ ಒಮ್ಮೆಯಾದರೂ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿ. ಸೋಫಾದ ಕವರ್‍ಗಳನ್ನು ಬದಲಾಯಿಸಿ. ಆದಷ್ಟು ಸ್ವಚ್ಛಗೊಳಿಸುತ್ತಿರಿ. ಇಲ್ಲವಾದರೆ ಕ್ರಿಮಿ ಕೀಟಗಳು ಹಾಗೂ ಇಲಿಗಳಂತಹ ಪ್ರಾಣಿಗಳು ಮನೆಯೊಳಗೆ ಪ್ರವೇಶ ಪಡೆಯುತ್ತವೆ. ಜೊತೆಗೆ ಋಣಾತ್ಮಕ ಶಕ್ತಿಯು ಆಕರ್ಷಿತಗೊಳ್ಳುತ್ತದೆ.

ಹರಳುಗಳು

ಹರಳುಗಳು

ಮನೆಯಲ್ಲಿ ಕೆಲವು ಸ್ಫಟಿಕದ ಹರಳುಗಳನ್ನು ಮನೆಯ ಬಾಗಿಲು, ಕಿಟಕಿ, ಮೆಟ್ಟಿಲು, ಮನೆಯೊಳಗಿನ ಮೂಲೆಗಳಲ್ಲಿ ಇರಿಸಿ. ಅದನ್ನು ಇರಿಸುವುದರಿಂದ ನಕಾರಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶಿಸದು. ಅಲ್ಲದೆ ಮನೆಯ ಸೌಂದರ್ಯವೂ ಹೆಚ್ಚುವುದು.

ಒಳಾಂಗಣ ಸಸ್ಯಗಳು

ಒಳಾಂಗಣ ಸಸ್ಯಗಳು

ಒಳಾಂಗಣ ಸಸ್ಯಗಳನ್ನು ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿರುತ್ತದೆ. ಜೊತೆಗೆ ವಾತಾವರಣವು ಶುದ್ಧ ಹಾಗೂ ತಾಜಾತನದಿಂದ ಕೂಡಿರುತ್ತದೆ. ಸಕಾರಾತ್ಮಕ ಶಕ್ತಿಯು ಆಕರ್ಷಿತಗೊಳ್ಳುತ್ತದೆ.

ಓಂ ಡ್ರಾಮ್ ಡ್ರೀಮ್ ಡ್ರಾಮ್ ಸಹ ಶುಕ್ರೇ ನಮಃ

ಓಂ ಡ್ರಾಮ್ ಡ್ರೀಮ್ ಡ್ರಾಮ್ ಸಹ ಶುಕ್ರೇ ನಮಃ" ಮಂತ್ರ ಜಪಿಸಿ

ಪ್ರತಿ ಶುಕ್ರವಾರ 108 ಬಾರಿ (ಒಂದು ಮಾಲಾ)ಶುಕ್ರಾ ಬೀಚ್ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮನ್ನು ಕಾಯುತ್ತಾಳೆ. ನೀವು ಹೇಳಬೇಕಾದ ಮಂತ್ರ ಹೀಗಿದೆ ನೋಡಿ... "ಓಂ ಡ್ರಾಮ್ ಡ್ರೀಮ್ ಡ್ರಾಮ್ ಸಹ ಶುಕ್ರೇ ನಮಃ"

English summary

Ways to Bring Positive Energy Into Your Home

In these challenging economic times, now more than ever our home is required to provide a feeling of serenity and comfort as a retreat from the distractions and turmoil of the outside world The focus on interior design to bring harmony between people and their homes has always been valued. In feng shui, one of the most important cures (a correction to adjust the energy in a space) is to restore order by the removal of clutter and negative energy from the home.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more