Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇಕಪ್ ನಿಂದ ಬದಲಾದ ಮಹಿಳೆ ಮುಖ!
ಮುಖದ ಮೇಲಿನ ಕಲೆ, ಗಾಯದ ಗುರುತು ಇತ್ಯಾದಿಗಳನ್ನು ಮರೆಮಾಚಿ, ಸೌಂದರ್ಯ ಪಡೆಯಲು ಪ್ರಮುಖವಾಗಿ ಮೇಕಪ್ ಹಚ್ಚಿಕೊಳ್ಳುವರು. ಆದರೆ ವ್ಯಕ್ತಿಯ ಚಹರೆಯನ್ನೇ ಬದಲಾಯಿಸಲು ಮೇಕಪ್ ಬಳಸಿದರೆ ಹೇಗಿರಬಹುದು ಎಂದು ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ?
ಚೀನಾದ ಮಹಿಳೆಯೊಬ್ಬಳು ಮೇಕಪ್ ಮೂಲಕ ಬದಲಾವಣೆ ಮಾಡಿಕೊಂಡ ವಿಡಿಯೋವು ಈಗ ನೆಟ್ಟಿಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಇಲ್ಲಿ ಮಹಿಳೆಯು ಮೇಕಪ್ ನೊಂದಿಗೆ ಕೆಲವು ಕೃತಕ ಸೌಂದರ್ಯಗಳನ್ನು ಬಳಸಿಕೊಂಡಿದ್ದಾಳೆ.

ಮಹಿಳೆಯು ತನ್ನ ಗಲ್ಲಕ್ಕೆ ಟೇಪ್ ಹಚ್ಚಿಕೊಳ್ಳುವುದು, ಕೃತಕ ಮೂಗು ಇಡುವುದು ಈ ವಿಡಿಯೋದಲ್ಲಿದೆ. ಈ ರೀತಿಯ ಶಿಲ್ಪ ಮೇಕಪ್' ಟ್ರೆಂಟ್ ಈಗ ಸಂಪೂರ್ಣ ಆಗ್ನೇಯ ಏಶ್ಯಾದಲ್ಲಿ ಹರಡಿಕೊಂಡಿದೆ. ಕ್ವಿ ಹುವಾಹಾವು ಎಂಬ ಮಹಿಳೆ ತನ್ನ ಮುಖವನ್ನು ತಯಾರಿಸಲು ಮೊಶ್ಚಿರೈಸರ್ ಮತ್ತು ಪ್ರೈಮರ್ ಗಳನ್ನು ಬಳಸುತ್ತಾಳೆ. ಬಣ್ಣದ ಕಾಂಟ್ಯಾಕ್ಟ್ ಲೆನ್ಸ್ ಗಳು, ಫೌಂಡೇಶನ್, ಕಣ್ಣರೆಪ್ಪೆಗಳ ಪೌಡರ್, ಐಶಾಡ್ಯೂ, ನಕಲಿ ಕಣ್ಣಿನ ರೆಪ್ಪೆ ಇತ್ಯಾದಿಗಳನ್ನು ಬಳಸಿಕೊಂಡಿದ್ದಾಳೆ. ಈ ವಿಡಿಯೋ ಕೊನೆಯಾಗುತ್ತಿರುವಂತೆ ನಿಮಗೆ ಮಹಿಳೆಯ ಗುರುತು ಸಿಗುವುದೇ ಇಲ್ಲ.
ಸೌಂದರ್ಯವರ್ಧಕಗಳ ಬಳಕೆಯು ತುಂಬಾ ಭಿನ್ನ ಮತ್ತು ಒಮ್ಮೆ ವ್ಯಕ್ತಿಯು ಇದನ್ನು ತೆಗೆದರೆ ಆಗ ಆಕೆಯ ಗುರುತು ಹಿಡಿಯುವುದು ತುಂಬಾ ಕಷ್ಟ ಎಂದು ವರದಿಗಳು ಹೇಳಿವೆ. ಈ ವಿಡಿಯೋ ನೋಡಿರುವಂತಹ ಜನರು ದಂಗಾಗಿ ಹೋಗಿದ್ದಾರೆ. ಇದರ ಬಗ್ಗೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬ, ಈ ಕಾರಣದಿಂದಾಗಿ ನಾನು ಸಮಸ್ಯೆಗಳನ್ನು ನಂಬುತ್ತೇನೆ, ಈ ದಿನಗಳಲ್ಲಿ ಮಳೆಯಲ್ಲಿ ಡೇಟಿಂಗ್ ಅತೀ ಅಗತ್ಯ'' ಎಂದಿದ್ದಾನೆ.
ಇದನ್ನು 1500ಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. ಯಾವ ರೀತಿಯ ಮಂತ್ರವಿದ್ಯೆ?'' ಎಂದು ಮತ್ತೊಬ್ಬ ಪ್ರತಿಕ್ರಿಯಿಸಿದ್ದಾನೆ. ನನಗೆ ಸಣ್ಣ ಮೊಡವೆಗಳನ್ನು ಮುಚ್ಚಿಡಲು ಬರುವುದಿಲ್ಲ'' ಎಂದು ಮತ್ತೊಬ್ಬಳು ಮಹಿಳೆ ನೋವು ವ್ಯಕ್ತಪಡಿಸಿದ್ದಾಳೆ. ಮಹಿಳೆಯ ಈ ರೀತಿ ಬದಲಾವಣೆ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
