Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸತ್ತ ಕಾಗೆಯ ಶವದೊಂದಿಗೆ ಸೆಕ್ಸ್ ನಡೆಸುವ ಕಾಗೆಗಳು!-ವೀಡಿಯೊ ವೈರಲ್
ಕಾಗೆಗಳು ತುಂಬಾ ಬುದ್ಧಿವಂತ ಪಕ್ಷಿಗಳು ಎಂದು ನಂಬಲಾಗಿದೆ. ಇವುಗಳ ನಡವಳಿಕೆ ಬಗ್ಗೆ ಅಧ್ಯಯನ ನಡೆಸುತ್ತಾ ಹೋದಾಗ ಹಲವಾರು ರೀತಿಯ ರಹಸ್ಯಗಳು ಹೊರಬಂದಿದೆ. ಪ್ರಾಣಿ ಹಾಗೂ ಪಕ್ಷಿಗಳು ಸತ್ತರೆ ಆ ಜಾತಿಯ ಪಕ್ಷಿ ಅಥವಾ ಪ್ರಾಣಿಗಳು ಜತೆಗೆ ಸೇರಿ ಅಂತಿಮ ವಿದಾಯ ಹೇಳುತ್ತವೆ. ಕಾಗೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಅಧ್ಯಯನದಿಂದ ಒಂದು ಬೆಚ್ಚಿಬೀಳಿಸುವಂತಹ ರಹಸ್ಯವು ಬಹಿರಂಗಗೊಂಡಿದೆ. ಕಾಗೆಗಳಲ್ಲಿ ಒಂದು ಅಸಾಮಾನ್ಯ ವರ್ತನೆಯಿದೆ. ಅದೇನೆಂದರೆ ಸತ್ತ ಕಾಗೆಯ ಶವದೊಂದಿಗೆ ಸಂಭೊಗ ನಡೆಸುವುದು. ಕಾಗೆಗಳು ಶವಸಂಭೋಗ ನಡೆಸುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಮಹತ್ವದ ರಹಸ್ಯದ ಬಗ್ಗೆ ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ.

ಸಂಪೂರ್ಣ ರೆಕಾರ್ಡ್ ಮಾಡಲಾಯಿತು!
ಕೇಲಿ ಸ್ವಿಫ್ಟ್ ಎಂಬ ಸಂಶೋಧಕರು ಈ ಅಧ್ಯಯನ ನಡೆಸಿದರು. ಅವರು ಮರದ ಕೆಳಗೆ ಸತ್ತ ಕಾಗೆಯ ಕಳೆಬರಹವನ್ನು ಇಟ್ಟರು ಮತ್ತು ಕಾಗೆಗಳು ಯಾವ ರೀತಿಯಲ್ಲಿ ವರ್ತಿಸುವುದು ಎಂದು ನೋಡಲು ಬಯಸಿದರು. ಕಾಗೆಗಳು ಸತ್ತ ಕಾಗೆ ಅಂತ್ಯಕ್ರಿಯೆ ನಡೆಸುತ್ತವೆ ಎಂದು ಸ್ವಿಫ್ಟ ಅವರು ಹಿಂದೆ ನಡೆಸಿದ್ದ ಅಧ್ಯಯನದಲ್ಲಿ ಕಂಡುಕೊಂಡಿದ್ದರು. ಇದರ ಮುಂದುವರಿದ ಭಾಗವಾಗಿ ಅವರು ಮತ್ತೆ ಅಧ್ಯಯನದಲ್ಲಿ ತೊಡಗಿದರು.

ಅಚ್ಚರಿ ಮೂಡಿಸಿದವು!
ಕಾಗೆಗಳು ಸತ್ತ ಕಾಗೆಯೊಂದಿಗೆ ಶವಸಂಭೋಗ ನಡೆಸುತ್ತಿರುವುದನ್ನು ನೋಡಿ ವಿಜ್ಞಾನಿಗಳು ಒಂದು ಕ್ಷಣಕ್ಕೆ ದಂಗಾಗಿ ಹೋದರು.

ಇದು ಅಸಾಮಾನ್ಯ ವರ್ತನೆ
ಈ ಅಸಾಮಾನ್ಯ ವರ್ತನೆಯನ್ನು ತಜ್ಞರು ಕೂಡ ನೋಡಿದ್ದಾರೆ. ಆರಂಭದಲ್ಲಿ ಕಾಗೆಯ ಶವ ನೋಡಿದ ಇನ್ನೊಂದು ಕಾಗೆಯು ಕೂಗಲಿಲ್ಲ ಮತ್ತು ಕಳೆಗೆ ಹಾರಿ ಬಂದು ಶವದ ಮೇಲೆ ಕುಳಿತುಕೊಂಡಿತು. ಇದರ ಬಳಿಕ ಸಾಮಾನ್ಯವಾಗಿ ಕಾಗೆಗಳು ಲೈಂಗಿಕ ಕ್ರಿಯೆ ಮಾಡುವಂತೆ ತನ್ನ ರೆಕ್ಕೆಗಳನ್ನು ಇಳಿಸಿ, ಬಾಲವನ್ನು ನಿಲ್ಲಿಸಿತು. ಇದು ಕಾಗೆಗಳು ಸಾಮಾನ್ಯವಾಗಿ ಮಾಡುವ ಲೈಂಗಿಕಕ್ರಿಯೆಯಂತಿತ್ತು.

ಕೆಲವರಿಗೆ ಗೊಂದಲ
ಆದರೆ ಇದನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಕೆಲವು ಮಂದಿಗೆ ಗೊಂದಲವಾಗಿತ್ತು ಮತ್ತು ಕಾಗೆಯು ಸತ್ತಿರುವ ಕಾಗೆ ಯಾಕೆ ಹೀಗೆ ಮಾಡುತ್ತಿದೆ ಎಂದು ಸ್ವಿಫ್ಟ್ ಅವರಲ್ಲಿ ಕೇಳಿದರು.

ಕಾಗೆಗಳ ನಡವಳಿಕೆ ಬಗ್ಗೆ ಪೂರ್ಣ ವರದಿ ಸ್ವಿಫ್ಟ್ ತಯಾರಿಸಿದರು!
ಸ್ವಿಫ್ಟ್ ತನ್ನ ಬ್ಲಾಗ್ ನಲ್ಲಿ ಕಾಗೆಗಳ ನಡವಳಿಕೆ ಬಗ್ಗೆ ಬರೆದುಕೊಂಡಿದ್ದಾರೆ. ಶೇ.24ರಷ್ಟು ಸಂದರ್ಭಗಳಲ್ಲಿ ಪಕ್ಷಿಗಳು ಸತ್ತಿರುವಂತಹ ಪಕ್ಷಿಯನ್ನು ಸ್ಪರ್ಶಿಸಬಹುದು, ಎಳೆಯಬಹುದು ಅಥವಾ ಶವದ ಮೇಲೆ ಕುಳಿತುಕೊಳ್ಳಬಹುದು. ಇನ್ನೊಂದು ಕಡೆಯಲ್ಲಿ ಶೇ.4ರಷ್ಟು ಸಂದರ್ಭಗಳಲ್ಲಿ ಈ ಘಟನೆಗಳು ಲೈಂಗಿಕ ಕ್ರಿಯೆಯದ್ದಾಗಿದೆ. ಇದರ ಬಗ್ಗೆ ಅಧ್ಯಯನಗಳು ಇನ್ನು ನಡೆಯುತ್ತಿದೆ ಮತ್ತು ಕಾಗೆಗಳಲ್ಲಿ ಇಂತಹ ನಡವಳಿಕೆ ಯಾಕೆ ಬಂತು ಎನ್ನುವ ಬಗ್ಗೆ ಇನ್ನಷ್ಟು ಸಂಶೋಧಕರಲ್ಲಿ ಕುತೂಹಲ ಕೆರಳಿಸಿದೆ. ಇದೇ ವೇಳೆ ನೀವು ವೀಡಿಯೋ ಕೂಡ ನೋಡಬಹುದು.



Click it and Unblock the Notifications
