ವಿಡಿಯೋ: ಪತ್ನಿಗೆ ಥಳಿಸಿದ ಪತಿ! ಮೂಕ ಪ್ರೇಕ್ಷಕರಾದ ಪೊಲೀಸರು…!?

Posted By: Deepu
Subscribe to Boldsky

ಇಂದಿನ ಆಧುನಿಕ ಯುಗದಲ್ಲೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಎಂದು ನಮಗೆ ನಂಬಲು ಸ್ವಲ್ಪ ಕಷ್ಟವಾಗುವುದು. ಆದರೆ ನಮ್ಮದೇ ದೇಶದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯಾಕೆಂದರೆ ಇಲ್ಲೊಂದು ಘಟನೆಯಲ್ಲಿ ಪತಿಯು ತನ್ನ ಪತ್ನಿಗೆ ಸರಿಯಾಗಿ ಥಳಿಸುತ್ತಿದ್ದರೂ ಪೊಲೀಸರು ಮಾತ್ರ ಮೂಖಪ್ರೇಕ್ಷಕರಾಗಿ ನೋಡುತ್ತಿದ್ದಾರೆ.

ಪೊಲೀಸರು ಮಾತ್ರವಲ್ಲ, ಜನರು ಕೂಡ ಆ ಮಹಿಳೆಯ ರಕ್ಷಣೆಗೆ ಹೋಗಲಿಲ್ಲ. ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಆಕೆಯ ಪತಿ ಥಳಿಸುತ್ತಿರುವಂತಹ ವಿಡಿಯೋ ಇದಾಗಿದೆ. ಆದರೆ ಸುತ್ತಮುತ್ತಲಿನವರು ಮೌನ ವಹಿಸಿರುವುದು. ನಮ್ಮ ದೇಶದಲ್ಲಿ ಹೀಗೇನಾ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿರುವುದು...

ಆಕೆಯ ಪತಿಯೇ ಹಲ್ಲೆ ನಡೆಸಿದಾತ!

ಆಕೆಯ ಪತಿಯೇ ಹಲ್ಲೆ ನಡೆಸಿದಾತ!

ತನ್ನ ಪತ್ನಿಯನ್ನು ಪತಿಯೇ ಲೈಂಗಿಕವಾಗಿ ಪೀಡಿಸಿದ. ಕಂಠಪೂರ್ತಿ ಕುಡಿದಿದ್ದ ಈ ಅಸಾಮಿ ತನ್ನ ಪತ್ನಿ ಹತ್ತಿದ ಮುಂಬಯಿಯ ಲೋಕಲ್ ರೈಲನ್ನು ಹತ್ತಿದ.

ಘಟನೆ ವಿಕಲಾಂಗರ ಬೋಗಿಯಲ್ಲಿ ನಡೆಯಿತು!

ಘಟನೆ ವಿಕಲಾಂಗರ ಬೋಗಿಯಲ್ಲಿ ನಡೆಯಿತು!

ಘಟನೆಯು ವಿಕಲಾಂಗರ ಬೋಗಿಯಲ್ಲಿ ನಡೆಯಿತು. ತಡರಾತ್ರಿ ಅಂಗವಿಕಲರ ಬೋಗಿಯಲ್ಲಿ ಇವರಿಬ್ಬರು ಪ್ರಯಾಣಿಸುತ್ತಿರುವ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಉಳಿದವರಿಗೆ ಅವರ ನೆರವಿಗೆ ಬರಲು ಸಾಧ್ಯವಾಗಿರಲಿಲ್ಲ.

ಪೊಲೀಸರನ್ನು ಎಚ್ಚರಿಸಿದರು…!

ಪೊಲೀಸರನ್ನು ಎಚ್ಚರಿಸಿದರು…!

ಹಿಂದಿನಿಂದ ಇದ್ದ ಪೊಲೀಸರನ್ನು ರೈಲಿನಲ್ಲಿದ್ದ ಕೆಲ ಪ್ರಯಾಣಿಕರು ಎಚ್ಚರಿಸಿದರು. ಆದರೆ ಪೊಲೀಸರು ಕೂಡ ಇದರ ಬಗ್ಗೆ ಏನೂ ಮಾಡುವಂತಿರಲಿಲ್ಲ. ಯಾಕೆಂದರೆ ಪೊಲೀಸ್ ಸಿಬ್ಬಂದಿ ಮತ್ತೊಂದು ಬೋಗಿಯಲ್ಲಿದ್ದರು. ಇದರ ಮಧ್ಯೆ ತಡೆಯಿದ್ದ ಕಾರಣ ನೆರವಿಗೆ ಧಾವಿಸಲು ಸಾಧ್ಯವಾಗಲಿಲ್ಲ.

ಆ ವ್ಯಕ್ತಿ ಬಳಿಕ ಸೆರೆಯಾದ

ಮುಂದಿನ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಆ ವ್ಯಕ್ತಿಯನ್ನು ಪೊಲೀಸರು ಬಂದಿಸಿದರು. ಆದರೆ ಇಂತಹ ಘಟನೆಗಳಿಂದ ಮಹಿಳೆಗೆ ಸಮಾನ ಹಕ್ಕು ಸಿಗುವುದು ಯಾವಾಗ ಎನ್ನುವ ಪ್ರಶ್ನೆ ಬರುವುದು. ಈ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಬಾಕ್ಸ್ ನಲ್ಲಿ ನಮಗೆ ಹಾಕಿ ತಿಳಿಸಿ.

 
English summary

Video: Man Assaulted His Wife While Cops Watched!

There is nothing that can go worse than this case when you realise the plight of women fighting for their rights even to this day. Seems like India as a nation has decided to be in a mute condition or as a silent spectator, while women are being abused in public and yet there's no one to really rescue them for the fear of being harmed.In this article, we are sharing one of the worst scenarios where a man abused his wife while the passengers on a train and even a cop watched helplessly. Know more about the case below...