For Quick Alerts
ALLOW NOTIFICATIONS  
For Daily Alerts

  ಮನೆಯಲ್ಲಿ ಶಂಖವಿದ್ದರೆ ಇಂತಹ ವಿಷಯದ ಬಗ್ಗೆ ಆದಷ್ಟು ಎಚ್ಚರವಿರಲಿ!

  By Jaya
  |

  ವೇದಗಳ ಕಾಲದಿಂದಲೂ ಶಾಸ್ತ್ರ ಸಂಪ್ರದಾಯ, ರೀತಿ ರಿವಾಜುಗಳಿಗೆ ಹೆಚ್ಚಿನ ಮಾನ್ಯತೆಯನ್ನು ನೀಡಲಾಗುತ್ತಿದೆ. ಆದ್ದರಿಂದಲೇ ಮನೆ ಕಟ್ಟುವಂತಹ ಪ್ರಧಾನ ವಿಚಾರದಲ್ಲಿ ವಾಸ್ತುವಂತಹ ಅತ್ಯಮೂಲ್ಯ ಅಂಶವನ್ನು ಅನುಸರಿಸಲಾಗುತ್ತಿದೆ. ಮನೆಯ ಅಡುಗೆ ಮನೆ, ಬಚ್ಚಲು ಕೋಣೆ, ಮಲಗುವ ಕೋಣೆ ಹೀಗೆ ಪ್ರತಿಯೊಂದು ಕೊಠಡಿಯನ್ನು ನಿರ್ಮಿಸುವಾಗ ಕೂಡ ವಾಸ್ತು ಲೆಕ್ಕಾಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ನೀವು ಪರಿಹರಿಸಲು ಸಾಧ್ಯವಾಗದೇ ಇರುವ ಸಮಸ್ಯೆಗಳೊಂದಿಗೆ ಖಿನ್ನರಾಗಿದ್ದೀರಿ ಎಂದಾದಲ್ಲಿ ವಾಸ್ತುವು ನಿಮ್ಮ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ನೀಡಿ ಅದನ್ನು ಪರಿಹರಿಸುತ್ತದೆ.

  ಇಂದಿನ ಲೇಖನದಲ್ಲಿ ವಾಸ್ತುವಿನ ಮೂಲಕ ಶಂಖವನ್ನು ಮನೆಯಲ್ಲಿ ಹೇಗೆ ಇಡಬೇಕು, ಇದಕ್ಕಾಗಿ ಯಾವ ನಿಯಮವನ್ನು ಅನುಸರಿಬೇಕು ಎಂಬುದನ್ನು ನಾವು ಅರಿತುಕೊಳ್ಳಲಿದ್ದೇವೆ. ಮನೆಯಲ್ಲಿ ಶಂಖವನ್ನು ಇರಿಸುವುದು ಶುಭವಾಗಿದ್ದು ಇದನ್ನು ಊದುವುದರಿಂದ ದುಷ್ಟ ಅಂಶಗಳು ಮನೆಯನ್ನು ಸುತ್ತುವರಿದಿದ್ದರೂ ಅದರ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಮನೆಯಲ್ಲಿ ಶಂಖವನ್ನು ಸಂಜೆಯ ಹೊತ್ತು ದೀಪ ಹಚ್ಚಿದ ನಂತರ ಮೂರು ಬಾರಿ ಊದುತ್ತಾರೆ.

  ನಿಮ್ಮ ಮನೆಯಲ್ಲಿ ಶಂಖ ಇದೆ ಎಂದಾದರೆ ಅದನ್ನು ಪೂಜಿಸುವುದಕ್ಕೆ ನೀವು ಆದ್ಯತೆಯನ್ನು ನೀಡಬೇಕು. ಯುದ್ಧ ಕಾಲದಲ್ಲಿ ಶಂಖವನ್ನು ಊದುವುದರ ಮೂಲಕ ನಾವು ಯುದ್ಧಕ್ಕೆ ಸಜ್ಜಾಗಿದ್ದೇವೆ ಎಂಬುದನ್ನು ಸೂಚಿಸುತ್ತಿದ್ದರು. ಕೃಷ್ಣನ ಬಳಿ ಪಾಂಚಜನ್ಯ ಎಂಬ ಶಂಖವಿದ್ದು ಇದನ್ನು ಕೃಷ್ಣನು ಊದಿದಾಗ ಅದು ದುಷ್ಟರ ಕಿವಿಯಲ್ಲಿ ನೋವನ್ನುಂಟು ಮಾಡುತ್ತಿಂತೆ ಅಂತಹ ಶಕ್ತಿಯನ್ನು ಶಂಖವು ಹೊಂದಿದೆ. ಪೂಜೆಯ ಸಮಯದಲ್ಲಿ ಹಬ್ಬ ಹರಿದಿನಗಳಂದು ಶಂಖವನ್ನು ಊದುವುದು ಮಂಗಳಕರ ಎಂದು ಭಾವಿಸಲಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ಶಂಖದ ಕುರಿತು ಮತ್ತುಷ್ಟು ಅಂಶಗಳನ್ನು ಅರಿತುಕೊಳ್ಳೋಣ....

  ಶಂಖವನ್ನು ಮನೆಯಲ್ಲಿ ಹೇಗೆ ಪೂಜಿಸಬೇಕು?

  ಶಂಖವನ್ನು ಮನೆಯಲ್ಲಿ ಹೇಗೆ ಪೂಜಿಸಬೇಕು?

  ಸಮುದ್ರದಲ್ಲಿ ದೊರೆಯುವ ಉತ್ಪನ್ನವಾಗಿದ್ದು, ವೇದ ಶಾಸ್ತ್ರಗಳ ಕಾಲದಿಂದಲೂ ಇದು ಮಹತ್ವದ ಸ್ಥಾನವನ್ನು ಪಡೆದುಕೊಂಡು ಬಂದಿದೆ. ವಿಷ್ಣುವಿನ ಆಯುಧವಾಗಿರುವ ಇದನ್ನು ಪೂಜಾ ಕೋಣೆಯಲ್ಲಿ ಪ್ರಧಾನವಾಗಿ ಪೂಜಿಸಲಾಗುತ್ತದೆ. ಇದರಿಂದ ಹೊರಬರುವ ನಿನಾದವು ಋಣಾತ್ಮಕ ಅಂಶವನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.

  ವಿಷ್ಣುವಿನ ಆಯುಧ

  ವಿಷ್ಣುವಿನ ಆಯುಧ

  ವಿಶ್ವದಲ್ಲಿರುವ ಅಂಧಕಾರ ದುಷ್ಟತನವನ್ನು ನಿವಾರಿಸಲು ವಿಷ್ಣು ಭಗವಾನರು ಹಲವಾರು ಅವತಾರಗಳನ್ನು ಎತ್ತಿದ್ದಾರೆ. ಆದರೆ ಪ್ರತಿಯೊಂದು ಅವತಾರದಲ್ಲಿ ಕೂಡ ವಿಷ್ಣುವು ಶಂಖವನ್ನು ಆಯುಧವಾಗಿ ಬಳಸಿದ್ದಾರೆ. ಆದ್ದರಿಂದಲೇ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಶಂಖಕ್ಕೆ ಪ್ರಧಾನ ಸ್ಥಾನವನ್ನು ನೀಡಲಾಗಿದೆ.

  ಶಂಖದ ಉದ್ದೇಶ

  ಶಂಖದ ಉದ್ದೇಶ

  ಶಂಖವು ಎರಡು ಪ್ರಮುಖ ಉದ್ದೇಶವನ್ನು ಹೊಂದಿದೆ. 1 ಪೂಜೆಯಲ್ಲಿ 2. ಊದಲು. ಶಂಖವನ್ನು ನಿತ್ಯವೂ ಊದುವುದರಿಂದ ಹೃದಯ ಕಾಯಿಲೆಗಳು ಬರುವುದಿಲ್ಲ. ಅಂತೆಯೇ ಇದನ್ನು ಪವಿತ್ರ ಪೂಜನೀಯವಾಗಿ ಕಾಣಲಾಗುತ್ತದೆ. ಆದ್ದರೆ ಶಸ್ತ್ರವಾಗಿ ಕೂಡ ಇದನ್ನು ಬಳಸಿರುವುದರಿಂದ ಹೆಚ್ಚು ಸ್ಥಾನವನ್ನು ಶಂಖ ಪಡೆದಿಲ್ಲ.

  ಶಂಖದ ಪೂಜಾ ವಿಧಿ

  ಶಂಖದ ಪೂಜಾ ವಿಧಿ

  ಮನೆಯ ಸದಸ್ಯರು ಶಂಖವನ್ನು ಪೂಜಿಸಬೇಕಾಗಿದ್ದು ದಿನಕ್ಕೆ ಎರಡು ಬಾರಿ ಇದನ್ನು ಊದಲೇಬೇಕು. ಶಂಖವನ್ನು ನೀವು ಮನೆಯಲ್ಲಿ ಊದುವಾಗ ಅನುಸರಿಬೇಕಾದ ವಾಸ್ತು ವಿಧಿಗಳೇನು ಎಂಬುದನ್ನು ತಿಳಿದುಕೊಳ್ಳೋಣ...

  ಶಂಖದ ಪೂಜಾ ವಿಧಿ

  ಶಂಖದ ಪೂಜಾ ವಿಧಿ

  ನಿಮ್ಮ ಮನೆಯಲ್ಲಿ ನೀವು ಶಂಖವನ್ನು ತಂದಿಟ್ಟುಕೊಂಡಿದ್ದೀರಿ ಎಂದಾದಲ್ಲಿ ಮುಖ್ಯವಾಗಿ ಕೆಲವು ಅಂಶಗಳನ್ನು ಪಾಲಿಸಲೇಬೇಕು.

  ಊದುವ ಶಂಖ

  ಊದುವ ಶಂಖ

  ನೀವು ಶಂಖವನ್ನು ಮನೆಯಲ್ಲಿ ಊದಲು ಬಳಸುತ್ತಿದ್ದೀರಿ ಎಂದಾದಲ್ಲಿ ಅದಕ್ಕೆ ಯಾವುದೇ ಪವಿತ್ರ ಜಲದ ಅರ್ಪಣೆ ಮತ್ತು ಮಂತ್ರಗಳ ಪಠಣೆಯನ್ನು ಮಾಡಬಾರದು. ಅದನ್ನು ಹಳದಿ ಬಟ್ಟೆಯ ಮೇಲೆಯೇ ಇರಿಸಬೇಕು.

  ಪೂಜೆಗೆ ಬಳಸುವುದಿದ್ದರೆ

  ಪೂಜೆಗೆ ಬಳಸುವುದಿದ್ದರೆ

  ನೀವು ಶಂಖವನ್ನು ಪೂಜೆಗಾಗಿ ಖರೀದಿಸಿದ್ದಲ್ಲಿ ಗಂಗಾಜಲದಿಂದ ಅದನ್ನು ಶುದ್ಧಿಕರಿಸಬೇಕು ಮತ್ತು ಪವಿತ್ರ ಬಟ್ಟೆಯ ಮೇಲೆ ಅದನ್ನು ಇರಿಸಬೇಕು.

  ಪೂಜಾ ಶಂಖ

  ಪೂಜಾ ಶಂಖ

  ಶಂಖಕ್ಕೆ ನಿತ್ಯವೂ ಪೂಜೆಯನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ಅದನ್ನು ದೇವರ ಮನೆಯಲ್ಲಿ ಎತ್ತರದ ಸ್ಥಳದಲ್ಲಿ ಇರಿಸಬೇಕು.

  ಎರಡು ಶಂಖ ಇರಿಸಬಾರದು

  ಎರಡು ಶಂಖ ಇರಿಸಬಾರದು

  ಒಂದು ಶಂಖ ಪೂಜೆಗೆ ಇನ್ನೊಂದು ಶಂಖ ಊದಲು ಎಂದು ಎರಡೆರಡು ಶಂಖವನ್ನು ದೇವರ ಕೋಣೆಯಲ್ಲಿ ಇರಿಸಬಾರದು.

  ಶಿವ ಲಿಂಗದ ಸಮೀಪ ಇರಿಸಬಾರದು

  ಶಿವ ಲಿಂಗದ ಸಮೀಪ ಇರಿಸಬಾರದು

  ಶಿವಲಿಂಗದ ಮೇಲ್ಭಾಗದಲ್ಲಿ ಅಥವಾ ಸಮೀಪದಲ್ಲಿ ಶಂಖವನ್ನು ಇರಿಸಬಾರದು. ಅಲ್ಲದೆ ಇನ್ನಿತರ ಕಾರ್ಯಗಳಿಗೆ ಶಂಖವನ್ನು ಬಳಸಬಾರದು, ಅಷ್ಟೇ ಅಲ್ಲದೆ ಶಿವ ದೇವರು ಅಥವಾ ಸೂರ್ಯನಿಗೆ ನೀರಿನ ಅರ್ಪಣೆಯನ್ನು ಮಾಡುವುದಕ್ಕಾಗಿ ಶಂಖವನ್ನು ಬಳಸಬಾರದು.

  English summary

  Vastu Tips for keeping Shankha at home

  Conch or Shankh is a sea-dwelling mollusc, which holds a significant place in Vedic scriptures; particularly in Hinduism, where the Shankh is described as Lord Vishnu’s emblem. It is believed that the vibrations from Shankh are capable to exterminate any negative energy. In Hindu mythology it is described that Lord Vishnu, time and again in his various avatars, blows through the conch to destroy the negativity around the world. The Conch or Shankh is Vishnu’s sacred symbol and thus holds highest importance in both Hinduism and Buddhism.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more