Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಇವು ಅಂಗೈ ಮೇಲಿರುವ ದುರಾದೃಷ್ಟದ ರೇಖೆಗಳು! ನಿಮ್ಮ ಕೈಯಲ್ಲಿಯೂ ಇದೆಯಾ?
ಭವಿಷ್ಯ ಎನ್ನುವುದು ಪ್ರತಿಯೊಬ್ಬರಿಗೂ ತುಂಬಾ ಮುಖ್ಯವಾಗಿರುವುದು. ಯಾಕೆಂದರೆ ಭವಿಷ್ಯವೇ ಇಲ್ಲದೆ ಇರುವಂತಹ ವ್ಯಕ್ತಿಯ ಜೀವನ ಅಯೋಮಯ. ಆದರೆ ಹೆಚ್ಚಿನವರು ಇಂದಿನ ದಿನಗಳಲ್ಲಿ ಜ್ಯೋತಿಷ್ಯವನ್ನು ನಂಬುವುದಿಲ್ಲ. ಇದರಿಂದಾಗಿಯೇ ಏನೇ ಕೆಲಸ ಮಾಡಿದರೂ ಅಂತವರು ಎಡವುತ್ತಿರುವುದು ಕಾಣಿಸುತ್ತದೆ. ಯಾಕೆಂದರೆ ಸರಿಯಾದ ಸಮಯದಲ್ಲಿ ಸೂಕ್ತ ಕೆಲಸವನ್ನು ಹೇಗೆ ಮಾಡಬಹುದು ಮತ್ತು ಅದಕ್ಕೆ ಏನಾದರೂ ಅಡೆತಡೆಗಳು ಇದೆಯಾ ಎಂದು ಜ್ಯೋತಿಷ್ಯವು ನಿಖರವಾಗಿ ಹೇಳುವುದು. ಇಂತಹ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಂಗೈಶಾಸ್ತ್ರವು ಒಂದು.
ಅಂಗೈಯಲ್ಲೇ ನಮ್ಮ ಭವಿಷ್ಯ ಇದೆ ಎಂದು ಹೇಳುವರು. ಯಾಕೆಂದರ ನಮ್ಮ ಅಂಗೈ ಮೇಲಿನ ರೇಖೆಗಳು ನಮ್ಮ ವೃತ್ತಿ ಬದುಕು, ವೈವಾಹಿಕ ಜೀವನ ಹಾಗೂ ಇನ್ನು ಹಲವಾರು ವಿಚಾರಗಳನ್ನು ಹೊರಗೆಡವುದು. ಅಂಗೈ ಮೇಲಿರುವಂತಹ ಕೆಲವೊಂದು ರೇಖೆಗಳು ನಿಮಗೆ ಅದೃಷ್ಟವನ್ನು ಉಂಟು ಮಾಡಿದರೆ ಇನ್ನು ಕೆಲವೊಂದು ದುರಾದೃಷ್ಟ ತರಬಹುದು. ಇಂತಹ ರೇಖೆಗಳು ಎಲ್ಲಿರುತ್ತದೆ ಮತ್ತು ಅದನ್ನು ಕಂಡು ಹುಡುಕುವುದು ಹೇಗೆ ಎಂದು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಅದೃಷ್ಟ ಹಾಗೂ ದುರಾದೃಷ್ಟ ಉಂಟು ಮಾಡುವ ರೇಖೆಗಳನ್ನು ಅರ್ಥ ಮಾಡಿಕೊಂಡರೆ ಆಗ ನಮಗೆ ಜೀವನ ಸುಗಮವಾಗುವುದು.
ಈ ಲೇಖನದಲ್ಲಿ ನಾವು ನಿಮಗೆ ಅಂಗೈ ತಜ್ಞರು ಹೇಳುವಂತಹ ಕೆಲವೊಂದು ದುರಾದೃಷ್ಟ ಮತ್ತು ಅದೃಷ್ಟದ ರೇಖೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಅದು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂದು ನೀವು ತಿಳಿದುಕೊಳ್ಳಿ. ಅಂಗೈ ಮೇಲಿರುವ ಈ ರೇಖೆಗಳು ಅಥವಾ ಚಿಹ್ನೆಯು ತುಂಬಾ ದುರಾದೃಷ್ಟದ್ದು ಆಗಿದೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವವನ್ನು ಇದು ಹೇಳುವ ಕಾರಣದಿಂದಾಗಿ ಈ ಬಗ್ಗೆ ತುಂಬಾ ಗಮನಹರಿಸಬೇಕು. ಯಾಕೆಂದರೆ ಇಂತಹ ಎಂಟು ದುರಾದೃಷ್ಟದ ರೇಖೆಗಳು ನಿಮ್ಮ ಕೈಯಲ್ಲಿ ಇದೆಯಾ ಎಂದು ನೀವು ತಿಳಿಯಿರಿ.

ಮುಖ್ಯ ರೇಖೆಯು ತುಂಡಾಗಿದ್ದರೆ…
ನಿಮ್ಮ ಅಂಗೈ ಮೇಲಿನ ರೇಖೆಗಳು ತುಂಡಾಗಿದ್ದರೆ ಅದರಲ್ಲೂ ಮುಖ್ಯ ರೇಖೆಯು ತುಂಡಾಗಿದ್ದರೆ ಇದನ್ನು ತುಂಬಾ ಕೆಟ್ಟದು ಎಂದು ಪರಿಗಣಿಸಲಾಗಿದೆ. ತಜ್ಞರ ಪ್ರಕಾರ ರೇಖೆಯು ತುಂಡಾಗಿದ್ದರೆ ಆಗ ಆ ವ್ಯಕ್ತಿಗೆ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಉದಾಹರಣೆಗೆ ಮದುವೆಯ ಗೆರೆಯು ತುಂಡಾಗಿದ್ದರೆ ಆಗ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರಬಹುದು ಮತ್ತು ಜೀವನದಲ್ಲಿ ಇಂತಹ ವ್ಯಕ್ತಿಗಳು ವಿಚ್ಛೇದನಕ್ಕೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿರುವುದು.
ಜೀವನದ ರೇಖೆಯು ತುಂಡಾಗಿದ್ದರೆ ಆಗ ನೀವು ತುಂಬಾ ಅನಿರೀಕ್ಷಿತ ವಾಗಿರುವಂತಹ ಅಪಘಾತಕ್ಕೆ, ತುಂಬಾ ಅಪಾಯಕಾರಿ ಪರಿಸ್ಥಿತಿ ಅಥವಾ ತೊಂದರೆ ಅಥವಾ ಅನಾರೋಗ್ಯಕ್ಕೆ ಒಳಗಾಗಲಿದ್ದೀರಿ ಎಂದು ತಜ್ಞರು ಹೇಳುತ್ತಾರೆ. ಅಂಗೈಯಲ್ಲಿ ಇರುವಂತಹ ಹೃದಯ ಗೆರೆಯು ತುಂಡಾಗಿದ್ದರೆ ಆಗ ಇದು ನಿಮ್ಮ ಭಾವನಾತ್ಮಕ ಜೀವನದಲ್ಲಿ ದೊಡ್ಡ ಮಟ್ಟದ ಹಿನ್ನಡೆ ಎಂದು ಹೇಳಲಾಗುತ್ತದೆ.

ಸರಪಳಿಯಂತಹ ವಿನ್ಯಾಸ ಇದ್ದರೆ…
ಸಣ್ಣ ಸಣ್ಣ ದ್ವೀಪಗಳಂತೆ ಇರುವಂತಹ ಚುಕ್ಕಿಗಳು ಒಂದಕ್ಕೊಂದು ಅಂಟಿಕೊಂಡಿದ್ದರೆ ಆಗ ಇದನ್ನು ನೀವು ಸರಪಳಿ ವಿನ್ಯಾಸ ಎಂದು ಹೇಳಬಹುದು. ಸರಪಳಿಯಂತಹ ವಿನ್ಯಾಸವು ಅಂಗೈಯ ಯಾವುದೇ ಭಾಗದಲ್ಲಿ ಇದ್ದರೂ ಇದು ತುಂಬಾ ದುರಾದೃಷ್ಟ ಎಂದು ತಜ್ಞರು ಹೇಳುತ್ತಾರೆ. ಇಂತಹ ಸರಪಳಿಯಿಂದ ನಿಮ್ಮ ಜೀವನದಲ್ಲಿ ತುಂಬಾ ಕೆಟ್ಟ ಘಟನೆಗಳು ನಡೆಯಲಿದೆ ಎಂದು ಹೇಳಬಹುದು. ಉದಾಹರಣೆಗೆ ತಲೆಯ ಗೆರೆಯು ಆರಂಭದಿಂದ ಅಂತ್ಯದ ತನಕ ಸರಪಳಿ ಆಗಿದ್ದರೆ ಆಗ ನಿಮಗೆ ಮೆದುಳಿಗೆ ಸಂಬಂಧಿಸಿದಂತಹ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳಬಹುದು.

ಒಂದು ದ್ವೀಪವಿದ್ದರೆ…
ಅಂಗೈಶಾಸ್ತ್ರದಲ್ಲಿ ದ್ವೀಪವನ್ನು ಅಡೆತಡೆ ಮತ್ತು ಧ್ವಂಸದ ಸಂಕೇತ ಎಂದು ಪರಿಗಣಿಸಲಾಗಿದೆ. ಅಂಗೈಯ ಮುಖ್ಯ ರೇಖೆಯಲ್ಲಿ ಕಾಣಿಸಿಕೊಳ್ಳುವಂತಹ ದ್ವೀಪವು ದುರಾದೃಷ್ಟದ ಸಂಕೇತ ಎಂದು ತಜ್ಞರು ಬಹಿರಂಗಪಡಿಸುವರು. ಉದಾಹರಣೆಗೆ, ತಲೆಯ ರೇಖೆಯಲ್ಲಿ ದ್ವೀಪವಿದ್ದರೆ ಆಗ ಇದು ದುರಾದೃಷ್ಟದ ಸಂಕೇತ. ನೀವು ತುಂಬಾ ತೊಂದರೆಗೊಳಗಾಗುವ ವ್ಯಕ್ತಿ ಎಂದು ಇದು ಹೇಳುತ್ತದೆ. ನಿಮಗೆ ಸ್ವಲ್ಪ ಕಾಲ ನೆನಪಿನ ಶಕ್ತಿಯು ಕುಂದುವ ಸಮಸ್ಯೆಯು ಕಾಣಿಸುವುದು. ಇನ್ನೊಂದು ಕಡೆ ವಿಧಿ ರೇಖೆ ಮೇಲೆ ಏನಾದರೂ ದ್ವೀಪವಿದ್ದರೆ ಆಗ ನಿಮ್ಮ ವೃತ್ತಿ ಜೀವನದಲ್ಲಿ ಎದುರಿಸುವಂತಹ ಸಮಸ್ಯೆಗಳನ್ನು ಇದು ಹೇಳುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಸೂಚನೆ: ಅಂಗೈ ಮೇಲೆ ಇರುವಂತಹ ನಿಖರವಾದ ದ್ವೀಪದಂತೆ ನೀವು ತೀವ್ರವಾಗಿರುವ ಸಮಸ್ಯೆಗಳನ್ನು ಎದುರಿಸಲಿರುವಿರಿ.

ಅಂಗೈ ಮೇಲೆ ಮಚ್ಚೆಗಳು
ಅಂಗೈ ಮೇಲೆ ಮಚ್ಚೆಗಳು ಅಥವಾ ಯಾವುದೇ ರೀತಿಯ ಕಲೆಗಳು ಇದ್ದರೆ ಆಗ ನಿಮ್ಮ ಶಕ್ತಿಯ ಹರಿವಿನಲ್ಲಿ ತೊಂದರೆ ಕಾಣಿಸಿಕೊಳ್ಳುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂಗೈ ಮೇಲೆ ಇರುವಂತಹ ಮಚ್ಚೆಗಳು ಅಥವಾ ಬಿಂದುಗಳು ಯಾವುದೇ ದೊಡ್ಡ ಸಂಕಷ್ಟ, ಅನಾರೋಗ್ಯ ಮತ್ತು ಅಪಘಾತದ ಸೂಚನೆಯಾಗಿದೆ. ಉದಾಹರಣೆಗೆ, ಹೃದಯ ರೇಖೆಯ ಮೇಲೆ ಮಚ್ಚೆಯು ಇದ್ದರೆ ಆಗ ಜೀವನದಲ್ಲಿ ದೊಡ್ಡ ಮಟ್ಟದ ಭಾವನಾತ್ಮಕ ಸಮಸ್ಯೆ ಎದುರಿಸಲಿದ್ದೀರಿ.

ಕೆಳಮುಖವಾಗಿರುವ ರೇಖೆಗಳು
ಮುಖ್ಯ ರೇಖೆಯಿಂದ ಕೆಲವು ರೇಖೆಗಳು ಒಡೆದು ಶಾಖೆಗಳಾಗಿ ಕೆಳಮುಖವಾಗಿ ಇದ್ದರೆ ಇದು ತುಂಬಾ ದುರಾದೃಷ್ಟ ಎಂದು ಹೇಳಲಾಗುತ್ತದೆ. ತಜ್ಞರು ಹೇಳುವ ಪ್ರಕಾರ ಮುಖ್ಯ ರೇಖೆ ಮೇಲೆ ಶಾಖೆಗಳು ಕಾಣಿಸಿಕೊಂಡರೆ ಅದು ಆ ವ್ಯಕ್ತಿಗೆ ದೊಡ್ಡ ಮಟ್ಟದ ಸಮಸ್ಯೆಯನ್ನು ಉಂಟು ಮಾಡಲಿದೆ ಎಂದು ಹೇಳಬಹುದು. ಉದಾಹರಣೆಗೆ ಜೀವರೇಖೆಯ ಮಧ್ಯಭಾಗದಿಂದ ಆರಂಭವಾದ ಶಾಖೆಗಳು ಕೆಳಮುಖವಾಗಿ ಇದ್ದರೆ ಆಗ ಇದು ನೀವು ಸುಲಭವಾಗಿ ಆರಾಮದಾಯಕ ವಲಯದಿಂದ ಹೊರಗೆ ಹೋಗಲಾರಿರಿ ಎನ್ನುವುದರ ಸೂಚನೆಯಾಗಿದೆ. ನಿಮಗೆ ಮಧ್ಯ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು ಎಂದು ತಜ್ಞರು ತಿಳಿಸುತ್ತಾರೆ.

ಶನಿಯ ಉಂಗುರ
ಶನಿಯ ಪವರ್ತದ ಮೂಲದಲ್ಲಿ ನಿಮಗೆ ಉಂಗುರವು ಕಾಣಿಸಿಕೊಂಡರೆ ಮತ್ತು ಇದು ಮಧ್ಯದ ಬೆರಳನ್ನು ಕೆಳಭಾಗದಲ್ಲಿ ಸುತ್ತಿಕೊಂಡಿದ್ದರೆ ಆಗ ಇದು ತುಂಬಾ ದುರಾದೃಷ್ಟ ಎಂದು ಪರಿಗಣಿಸಲಾಗಿದೆ ಮತ್ತು ಅಶುಭ ಕೂಡ. ಇಂತಹ ರೇಖೆಯು ಕಾಣಿಸಿ ಕೊಂಡರೆ ಆಗ ಅದನ್ನು ಸೆರೆವಾಸ, ನಿರ್ಬಂಧ, ಅಡೆತಡೆಗಳು, ಹತಾಶೆ ಎಂದು ಪರಿಗಣಿಸಲಾಗಿದೆ. ಇಂತಹ ರೇಖೆಗಳು ನಿಮ್ಮ ಅಂಗೈ ಮೇಲೆ ಇದ್ದರೆ ಆಗ ನೀವು ಬೇರೆಯವರ ನಿರ್ಧಾರಕ್ಕೆ ಕಟ್ಟುಬೀಳುವವರು ಎಂದು ಹೇಳಲಾಗಿದೆ. ನಿಮಗೆ ಜೀವನವನ್ನು ಹೇಗೆ ಆನಂದಿಸಬೇಕು ಎಂದು ತಿಳಿದಿರುವುದಿಲ್ಲ.

ತೆಂಗಿನ ಗರಿಯಂತೆ…
ರೇಖೆಯು ಛೇದನಗೊಂಡು ಹಲವಾರು ಶಾಖೆಗಳಾಗಿ ಮೂಡುವುದನ್ನು ತಲೆಗರಿಯಂತೆ ಎಂದು ಕರೆಯಲಾಗುತ್ತದೆ. ಇಂತಹ ಪರಿಸ್ಥಿತಿಯು ರೇಖೆಯ ಅಂತ್ಯದಲ್ಲಿ ಕಾಣಿಸಿಕೊಳ್ಳುವುದು ಮತ್ತು ಅಂಗೈಶಾಸ್ತ್ರಜ್ಞರ ಪ್ರಕಾರ ಇದು ತುಂಬಾ ದುರಾದೃಷ್ಟ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಜೀವ ರೇಖೆ ಮೇಲೆ ತೆಂಗಿನ ಗರಿಯ ಆಕಾರ ಇದ್ದರೆ ಆಗ ನಿಮ್ಮ ಆರೋಗ್ಯವು ಕ್ಷೀಣಿಸುತ್ತಿದೆ ಎಂದು ಹೇಳಬಹುದು. ಇನ್ನೊಂದು ಬದಿಯಲ್ಲಿ ನಿಮ್ಮಲ್ಲಿ ಯಾವಾಗಲೂ ತುಂಬಾ ಬಳಲಿದವರಂತೆ ಮತ್ತು ಏಕಾಂಗಿ ಭಾವನೆಯು ಮೂಡುವುದು.

ಅಂಗೈ ಮೇಲೆ ಮೆಶ್
ಅಂಗೈ ಮೇಲೆ ಗ್ರಿಲ್ ಅಥವಾ ಮೆಶ್ ಆಕಾರದಲ್ಲಿ ರೇಖೆಗಳು ಇರುವುದನ್ನು ಹೀಗೆ ಕರೆಯಲಾಗುತ್ತದೆ. ಒಂದೊಂದು ರೇಖೆಗಳು ಪರಸ್ಪರ ಒಂದನ್ನೊಂದು ದಾಟಿದಾಗ ಇಂತಹ ಆಕಾರವು ಮೂಡುವುದು. ಇಂತಹ ವಿನ್ಯಾಸವು ಅಂಗೈ ಮೇಲೆ ಮೂಡಿದರೆ ಇದನ್ನು ತುಂಬಾ ನಕಾರಾತ್ಮಕ ಎಂದು ಹೇಳಲಾಗುತ್ತದೆ. ಇದು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು. ಇದು ಯಾವುದೇ ಒಂದು ಭಾಗದಲ್ಲಿ ಕಾಣಿಸಿಕೊಂಡರೆ ದುರಾದೃಷ್ಟವೆಂದು ಹೇಳಲಾಗದು. ಯಾಕೆಂದರೆ ಇದು ಅಂಗೈಯ ಯಾವುದೇ ಭಾಗದಲ್ಲೂ ಕಾಣಿಸಿಕೊಂಡರೂ ಅದನ್ನು ದುರಾದೃಷ್ಟ ಎಂದು ಹೇಳಲಾಗುತ್ತದೆ.

ಅಂಗೈ ಮೇಲೆ ಮೆಶ್
ಅಂಗೈ ಮೇಲೆ ಇಂತಹ ಮೆಶ್ ಆಕೃತಿಯು ಇರುವಂತಹ ವ್ಯಕ್ತಿಗಳ ಜೀವನದಲ್ಲಿ ಅಡೆತಡೆಗಳು ಮತ್ತು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುವುದರ ಸೂಚನೆ ಇದಾಗಿದೆ. ಉದಾಹರಣೆಗೆ, ಅಂಗೈ ಮೇಲೆ ಇಂತಹ ಆಕಾರವು ಬುಧನ ಪವರ್ತದ ಮೇಲೆ ಕಾಣಿಸಿಕೊಂಡರೆ ಆಗ ಆ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಹಲವಾರು ರೀತಿಯ ಏಳುಬೀಳುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಈ ಚಿಹ್ನೆಯ ಮತ್ತೊಂದು ಸಂಕೇತವೆಂದರೆ ಈ ವ್ಯಕ್ತಿಯು ಅಸಾಮಾನ್ಯ ಲೈಂಗಿಕತೆ ಹೊಂದಿರುವನು.ನಿಮ್ಮ ಅಂಗೈ ಮೇಲೆ ಯಾವ ರೀತಿಯ ಚಿಹ್ನೆಗಳು ಇದೆ ಎಂದು ತಿಳಿಯಿರಿ. ನಿಮ್ಮ ಅಂಗೈ ರೇಖೆಯ ಅನುಭವದ ಬಗ್ಗೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಅಂಗೈ ಶಾಸ್ತ್ರದ ಬಗ್ಗೆ ಇಂತಹ ಹಲವಾರು ರೀತಿಯ ಲೇಖನಗಳನ್ನು ಓದಲು ನೀವು ಇದೇ ವಿಭಾಗದಲ್ಲಿ ಯಾವಾಗಲೂ ಓದುತ್ತಲಿರಿ. ಇನ್ನಷ್ಟು ಅಂಗೈಶಾಸ್ತ್ರದ ಲೇಖನಗಳನ್ನು ನಾವು ನಿಮ್ಮ ಮುಂದಿಡಲಿದ್ದೇವೆ.



Click it and Unblock the Notifications