Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಜುಲೈ 27 ರಂದು ಶತಮಾನದ ಅತೀ ದೀರ್ಘಕಾಲದ ಚಂದ್ರಗ್ರಹಣ ಗೋಚರಿಸಲಿದೆ!
ಖಗೋಳಶಾಸ್ತ್ರದಲ್ಲಿ ಆಗುವಂತಹ ಪ್ರತಿಯೊಂದು ವಿದ್ಯಮಾನಗಳು ಕೂಡ ವಿಜ್ಞಾನಿಗಳನ್ನು ತುಂಬಾ ಕುತೂಹಲ ಕೆರಳಿಸುವಂತೆ ಮಾಡುವುದು. ಜುಲೈ 27ರಂದು ನಡೆಯಲಿರುವ ಚಂದ್ರಗ್ರಹಣ ಕೂಡ ಇದಕ್ಕೆ ಹೊರತಾಗಿಲ್ಲ. ಈ ಚಂದ್ರಗ್ರಹಣವು ಶತಮಾನದ ಅತೀ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದೆ ಮತ್ತು ಈ ವೇಳೆ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಇದು ತುಂಬಾ ಅಪರೂಪದ ವಿದ್ಯಮಾನ.
ಜುಲೈ 27 ಮತ್ತು ಜುಲೈ 28ರ ರಾತ್ರಿಗಳಲ್ಲಿ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಜುಲೈ 27ರಂದು ನಡೆಯಲಿರುವ ಚಂದ್ರಗ್ರಹಣವು ಸುಮಾರು ಒಂದು ಗಂಟೆ ಮತ್ತು 43 ನಿಮಿಷಗಳ ಕಾಲ ಸುದೀರ್ಘವಾಗಲಿದೆ. ಇದರಿಂದ ಶತಮಾನದ ಈ ವಿದ್ಯಮಾನ ಮತ್ತು ಬ್ಲಡ್ ಮೂನ್ ಬಗ್ಗೆ ನಿಮಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ಓದಲು ತಯಾರಾಗಿ...

ಬ್ಲಡ್ ಮೂನ್ ಬಗ್ಗೆ…
ಬ್ಲಡ್ ಮೂನ್ ಎನ್ನುವುದು ಚಂದ್ರಗ್ರಹಣದಿಂದಾಗಿ ಸಂಭವಿಸುವ ಖಗೋಲಶಾಸ್ತ್ರದ ವಿದ್ಯಮಾನ. ಭೂಮಿಯ ವಾತಾವರಣದ ಮೂಲಕ ಸೂರ್ಯನ ಬೆಳಕು ಹಾದು ಹೋಗುವಾಗ,ಅನಿಲ ಪದರವು ಕಿರಣದ ದಿಕ್ಕನ್ನು ಬದಲಾಯಿಸುವಂತೆ ಕಾಣುವುದು. ಈ ವೇಳೆ ಗೋಚರ ವರ್ಣಪಟಲದ ಮೇಲೆ ನೇರಳೆ ತರಂಗಾಂತರಗಳು ಕೆಂಪು ಬಣ್ಣಕ್ಕಿಂತ ಹೆಚ್ಚು ಬಲವಾದ ಕಿರಣಗಳನ್ನು ಹರಡಲು ಹೇಳುತ್ತವೆ. ಇದರಿಂದ ಚಂದ್ರ ಕೆಂಪಾಗುವನು ಮತ್ತು ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುವುದು.

ಚಂದ್ರಗ್ರಹಣವು ಎಷ್ಟು ದೀರ್ಘಕಾಲ ಇರುವುದು
ಜುಲೈ 27ರಂದು ನಡೆಯಲಿರುವ ಬ್ಲಡ್ ಮೂನ್ ಈ ವರ್ಷದ ಜನರಿ 31 ರಂದು ಕಂಡದ್ದಕ್ಕಿಂತ ಸುಮಾರು 40 ನಿಮಿಷಗಳ ಕಾಲ ದೀರ್ಘವಾಗಿರಲಿದೆ. ಇದನ್ನು ಸೂಪರ್ ಬ್ಲೂ ಬ್ಲಡ್ ಮೂನ್ ಎಂದು ಕರೆಯಲಾಗಿದೆ.

ಚಂದ್ರಗ್ರಹಣವು ಎಷ್ಟು ದೀರ್ಘಕಾಲ ಇರುವುದು
ಜುಲೈ 27ರಂದು ನಡೆಯಲಿರುವ ಬ್ಲಡ್ ಮೂನ್ ಈ ವರ್ಷದ ಜನರಿ 31 ರಂದು ಕಂಡದ್ದಕ್ಕಿಂತ ಸುಮಾರು 40 ನಿಮಿಷಗಳ ಕಾಲ ದೀರ್ಘವಾಗಿರಲಿದೆ. ಇದನ್ನು ಸೂಪರ್ ಬ್ಲೂ ಬ್ಲಡ್ ಮೂನ್ ಎಂದು ಕರೆಯಲಾಗಿದೆ.

ಬ್ಲಡ್ ಮೂನ್ ಎಲ್ಲಿ ಕಾಣಿಸುವುದು?
ಜುಲೈ 27ರಂದು ಕಾಣಿಸಿಕೊಳ್ಳುವ ಚಂದ್ರಗ್ರಹಣವು ಪೂರ್ವ ಗೋಳಾರ್ಧದಲ್ಲಿ ನೆಲೆಸುವವರಿಗೆ ಕಾಣಿಸಿಕೊಳ್ಳಲಿದೆ. ಯುರೋಪ್, ಏಶ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಇದು ಗೋಚರಿಸಲಿದೆ. ಇಲ್ಲಿಯ ಜನರು ಬ್ಲಡ್ ಮೂನ್ ನೋಡಬಹುದು. ಯುರೋಪ್ ಮತ್ತು ಆಫ್ರಿಕಾದ ಸಂಜೆ ವೇಳೆ ಇದನ್ನು ನೋಡಬಹುದು.

ಏಶ್ಯಾ ಮತ್ತು ಆಸ್ಟ್ರೇಲಿಯಾದ ಜನರು ಮುಂಜಾನೆ ನೋಡಬಹುದು
ಏಶ್ಯಾ ಮತ್ತು ಆಸ್ಟ್ರೇಲಿಯಾದ ಜನರು ಮುಂಜಾನೆ ವೇಳೆ ನೋಡಬಹುದು. ಬ್ಲಡ್ ಮೂನ್ ಮತ್ತು ಮುಂದಿನ ಚಂದ್ರಗ್ರಹಣದ ಬಗ್ಗೆ ತಿಳಿಯಲು ಈ ಸೆಕ್ಷನ್ ನಲ್ಲಿ ಯಾವಾಗಲೂ ಕಣ್ಣಾಡಿಸುತ್ತಿರಿ.



Click it and Unblock the Notifications
