Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
'ಬಿ' ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ನೋಡಿ...
ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯ ಹೆಸರಿನ ಮೊದಲನೇ ಅಕ್ಷರವು ಒಂದು ಸಂಖ್ಯೆಗೆ ಸಂಬಂಧಪಟ್ಟಿರುತ್ತದೆ.ಈ ಸಂಖ್ಯೆಯು ಆ ವ್ಯಕ್ತಿಯ ಬಗ್ಗೆ ಇನ್ನು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಸಹಾಯಕಾರಿಯಾಗಿದೆ.ಆದ್ದರಿಂದ ಒಬ್ಬ ವ್ಯಕ್ತಿಯ ಗುಣ,ಆಯ್ಕೆಗಳು,ವೃತ್ತಿಜೀವನ,ಪ್ರೇಮ ಜೀವನ ಮುಂತಾದ ವಿಷಯಗಳ ಬಗ್ಗೆ ಅವರ ಹೆಸರಿನ ಮೊದಲನೇ ಅಕ್ಷರದಿಂದಲೇ ನಾವು ತಿಳಿದುಕೊಳ್ಳಬಹುದು.
ಸಂಖ್ಯಾಶಾಸ್ತ್ರಜ್ಞರ ಪ್ರಕಾರ ನಮ್ಮ ಹೆಸರಿನ ಉಚ್ಚಾರಣೆಯೊಂದಿಗೆ ಇದು ಸಂಬಂಧವನ್ನು ಹೊಂದಿದೆ.ಆದರೆ ಮೊದಲನೇ ಅಕ್ಷರವೇ ಹೆಚ್ಚಾಗಿ ಹೆಸರಿನ ಉಚ್ಚಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಅದು ವ್ಯಕ್ತಿಯೊಬ್ಬನ ಗುಣಲಕ್ಷಣ ಹಾಗು ವ್ಯಕ್ತಿತ್ವದ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ. ಇದರ ಪ್ರಕಾರ ನಾವು "ಬಿ" ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳ ಗುಣಲಕ್ಷಣ ಮತ್ತು ವ್ಯಕ್ತಿತ್ವದ ಬಗ್ಗೆ ಹಲವು ವಿಷಯಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ.

ರೋಮ್ಯಾಂಟಿಕ್
ನಿಮಗೆ ಹೀಗೆಂದು ಅನಿಸದೇ ಇರಬಹುದು ಆದರೆ ಈ ವ್ಯಕ್ತಿಗಳು ರೋಮ್ಯಾಂಟಿಕ್ ವ್ಯಕ್ತಿಗಳ ಪಟ್ಟಿಯಲ್ಲಿ ಸೇರುತ್ತಾರೆ.ಅವರು ಪ್ರೀತಿಯ ಬಗ್ಗೆ ಕ್ರಿಯಾತ್ಮಕ ಮತ್ತು ಸುಂದರವಾದ ಕಲ್ಪನೆಗಳನ್ನು ಹೊಂದಿರುತ್ತಾರೆ.ತಮ್ಮ ಸಂಗಾತಿಯೊಂದಿಗೆ ಹೊರಗೆ ಸುತ್ತಾಡುವುದು,ಸಿನೆಮಾಗೆ ಹೋಗುವುದು ಮತ್ತು ಡೇಟಿಂಗ್ ಮುಂತಾದವುಗಳ ಬಗ್ಗೆ ಅವರು ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ.ಅವರು ತಮ್ಮ ಸಂಗಾತಿಯ ಒಪ್ಪಿಗೆಯೊಂದನ್ನು ಮಾತ್ರ ಅಪೇಕ್ಷಿಸುತ್ತಾರೆ.ಅವರು ತಮ್ಮ ಸಂಗಾತಿಗಳು ತಮ್ಮನ್ನು ಮುದ್ದಿಸುವುದನ್ನು ಹೆಚ್ಚು ಇಷ್ಟ ಪಡುತ್ತಾರೆ.ಹಾಗಿದ್ದೂ ಕೂಡ ಇವರು ತಮ್ಮ ಭಾವನೆಗಳನ್ನು ನಿಯಂತ್ರಿಸುವುದರಲ್ಲಿ ಅಮೋಘವಾದ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಸೂಕ್ಷ್ಮ ಸ್ವಭಾವ
"ಬಿ" ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳು ಸಂಖ್ಯಾಶಾಸ್ತ್ರದ ಪ್ರಕಾರ ಸೂಕ್ಷ್ಮಜೀವಿಗಳಾಗಿರುತ್ತಾರೆ.ಹೇಗೆ ಅವರು ಬೇರೆಯವರ ಭಾವನೆಗಳನ್ನು ಬಹಳ ಬೇಗ ಅರ್ಥ ಮಾಡಿಕೊಳ್ಳುತ್ತಾರೋ ಅಷ್ಟೇ ಸುಲಭವಾಗಿ ಅವರು ದುಃಖಪಡುತ್ತಾರೆ. ಸೂಕ್ಷ್ಮ ಸ್ವಭಾವದ ಕಾರಣದಿಂದಲೇ ಅವರು ತಮ್ಮ ಕುಟುಂಬ ಹಾಗು ಗೆಳೆಯರ ಜೊತೆಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ.ತಮ್ಮನ್ನು ಪ್ರೀತಿಸುವ ವ್ಯಕ್ತಿಗಳಿಗೆ ಉಡುಗೊರೆಯನ್ನು ಕೊಡುವುದು ಮತ್ತು ಪಡೆಯುವುದು ತಮ್ಮ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಭಾವಿಸುತ್ತಾರೆ.ಸೂಕ್ಷ್ಮವಾದ ಸ್ವಭಾವ ಇರುವುದರಿಂದ ಇವರು ಬೇರೆ ಯವರಿಗೆ ಸಹಾಯ ಮಾಡುವುದರಲ್ಲಿ ಖುಷಿಯನ್ನು ಹೊಂದುತ್ತಾರೆ.ಇವರು ದಾನ ಹಾಗು ಕೊಡುಗೆಗಳನ್ನು ನೀಡುವುದರಲ್ಲಿ ಮುಂದೆ ಇರುತ್ತಾರೆ.

ಶಾಂತಿ ಪ್ರಿಯರು
ಈ ವ್ಯಕ್ತಿಗಳು ತುಂಬಾ ಸಹಕಾರಿ ಗುಣವನ್ನು ಹೊಂದಿರುತ್ತಾರೆ ಹಾಗೂ ಶಾಂತಿಪ್ರಿಯರಾಗಿ ಇರುತ್ತಾರೆ. ಅನಾವಶ್ಯಕವಾದ ವಾದಗಳನ್ನು ತಪ್ಪಿಸಲು ಅವರು ತಮ್ಮ ಕೈಲಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಇದನ್ನೇ ಜನರು ತಪ್ಪಾಗಿ ಭಾವಿಸಿ ಈ ವ್ಯಕ್ತಿಗಳಿಗೆ ಕೋಪವೇ ಬರುವುದಿಲ್ಲ ಎಂದು ತಿಳಿದುಕೊಂಡುಬಿಡುತ್ತಾರೆ . ಶಾಂತಿ ಇವರ ವ್ಯಕ್ತಿತ್ವದ ಪ್ರಮುಖ ಲಕ್ಷಣವಾಗಿರುವುದರಿಂದ ಇವರು ತಮಗೆ ಹತ್ತಿರವಿರುವ ವ್ಯಕ್ತಿಗಳನ್ನು ಬಹಳ ಪ್ರೀತಿ ಹಾಗು ಜಾಗ್ರತೆಯಿಂದ ನೋಡಿಕೊಳ್ಳುತ್ತಾರೆ.ಇವರು ಕೋಪಗೊಂಡರೂ ಕೂಡ ಹೆಚ್ಚು ಮಾತನಾಡುವುದಿಲ್ಲ ಹಾಗೂ ಅಂತಹ ಸಂದರ್ಭದಲ್ಲಿ ಇವರು ತಮ್ಮ ಗಮನವನ್ನು ಬೇರೆ ಕಡೆ ಹೋಗುವಂತೆ ನೋಡಿಕೊಳ್ಳುತ್ತಾರೆ.

ಸಾಮಾಜಿಕ ವ್ಯಕ್ತಿತ್ವ
ಇವರು ಎಲ್ಲರಿಗೂ ತುಂಬಾ ಹತ್ತಿರವಾಗದೇ ಇದ್ದರೂ ಬಹಳ ಜನ ಗೆಳೆಯರನ್ನು ಹೊಂದಿರುತ್ತಾರೆ. ಇವರು ಪಾರ್ಟಿಗಳು ಹಾಗು ಇತರೆ ಕಾರ್ಯಕ್ರಮಗಳಿಗೆ ಹೋಗುವುದನ್ನು ಹೆಚ್ಚು ಇಷ್ಟ ಪಡುತ್ತಾರೆ.ತಮ್ಮ ಸುತ್ತ ನಡೆಯುವ ಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಇವರು ತಿಳಿದುಕೊಳ್ಳುವುದನ್ನು ಇಚ್ಛಿಸುತ್ತಾರೆ.ಅವರ ಸಾಮಾಜಿಕ ಹಾಗು ಎಲ್ಲರನ್ನೂ ಸ್ವಾಗತಿಸುವ ಗುಣ ಎಲ್ಲರೂ ಇವರನ್ನು ಇಷ್ಟ ಪಡುವಂತೆ ಮಾಡುತ್ತದೆ.ಆದರೂ ಇವರು ಯಾರೊಂದಿಗೂ ಅಷ್ಟು ಸುಲಭವಾಗಿ ವೈಯುಕ್ತಿಕವಾದ ಬಾಂಧವ್ಯವನ್ನು ಇರಿಸಿಕೊಳ್ಳಲು ಇಷ್ಟಪಡುವುದಿಲ್ಲ.

ಧೈರ್ಯವಂತರು ಹಾಗೂ ಕೆಚ್ಚೆದೆಯವರಾಗಿರುತ್ತಾರೆ
ಇವರಿಗೆ ಭಯವೆಂಬ ಪದದ ಅರ್ಥವೇ ಗೊತ್ತಿರುವುದಿಲ್ಲ.ಇವರು ಸಾಕಷ್ಟು ತಾಳ್ಮೆಯನ್ನು ಹೊಂದಿದ್ದರೂ ಸಹ ಧೈರ್ಯವಂತರಾಗಿರುತ್ತಾರೆ.ತಮಗೆ ಹತ್ತಿರವಾದವರಿಗೆ ಏನಾದರು ಸಮಸ್ಯೆ ಬಂದಲ್ಲಿ ಒಂದು ಕ್ಷಣವೂ ತಡಮಾಡದೇ ಅವರನ್ನು ಕಾಪಾಡುವುದರಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ.ಸೂಕ್ಷ್ಮವಾದ ಹೃದಯವನ್ನು ಹೊಂದಿರುವುದರಿಂದ ಇವರು ಜನ ಕಷ್ಟ ಪಡುವುದನ್ನು ನೋಡಲು ಸಹಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಾವೇ ಮುಂದೆ ಹೋಗಿ ಅವರನ್ನು ಕಾಪಾಡುತ್ತಾರೆ.ಇವರಿಗೆ ಇರುವ ಧೈರ್ಯದಿಂದ ಇವರು ಯಾವಾಗಲೂ ಕೆಚ್ಚೆದೆಯಿಂದ ಇರುತ್ತಾರೆ ಹಾಗು ಯಾವುದೇ ಸಂದರ್ಭದಲ್ಲಿ ಬಿಟ್ಟುಕೊಡುವುದನ್ನು ಇವರು ಇಷ್ಟ ಪಡುವುದಿಲ್ಲ.



Click it and Unblock the Notifications











