For Quick Alerts
ALLOW NOTIFICATIONS  
For Daily Alerts

ಶಿಶ್ನದ ಬಗ್ಗೆ ನೀವು ತಿಳಿದಿರದ ಕೆಲವೊಂದು ಆಸಕ್ತಿಕರ ಸಂಗತಿಗಳು

|

ಪುರುಷರಿಗೆ ತಮ್ಮ ಪುರುಷಾಂಗದ ಬಗ್ಗೆ ನೈಸರ್ಗಿಕವಾಗಿಯೇ ಹಲವು ವಿಷಯಗಳು ಅರಿತಿದ್ದು ತಮ್ಮ ಪೌರುಷವನ್ನು ಈ ಅಂಗದ ಸಾಮರ್ಥ್ಯ, ಕ್ಷಮತೆಗಳಿಂದಲೇ ಅಳೆಯುತ್ತಾರೆ. ಬಹುತೇಕ ಪುರುಷರು ಈ ಬಗ್ಗೆ ಉತ್ಪ್ರೇಕ್ಷೆಯ ಭಾವನೆಯನ್ನೇ ಹೊಂದಿರುತ್ತಾರೆ. ಇಂದಿನ ಲೇಖನದಲ್ಲಿ ಈ ಪ್ರಮುಖ ಅಂಗದ ಬಗ್ಗೆ ಹತ್ತು ಸ್ವಾರಸ್ಯಕರ ಹಾಗೂ ಹೆಚ್ಚಿನವರಿಗೆ ತಿಳಿದೇ ಇಲ್ಲದ ಮಾಹಿತಿಗಳನ್ನು ನೀಡಲಾಗಿದೆ. ಲೈಂಗಿಕತೆಗೂ ಮಡಿವಂತಿಕೆಗೂ ನೇರವಾದ ಸಂಬಂಧವಿರುವ ನಮ್ಮ ದೇಶದಲ್ಲಂತೂ ಈ ಅಂಗದ ನಿಜವಾದ ಹೆಸರಾದ 'ಶಿಶ್ನ'ಎಂದು ಕರೆಯುವುದೇ ಇಲ್ಲ.

ಈ ಹೆಸರನ್ನು ಹಿಡಿದು ಕರೆಯುವುದೇನಿದ್ದರೂ ವೈದ್ಯರಲ್ಲಿ ಹಾಗೂ ಸಾಹಿತ್ಯದಲ್ಲಿ ಮಾತ್ರ. ಉಳಿದಂತೆ ಇತರ ಹೆಸರುಗಳನ್ನು ಬಳಸುವುದು ಜಗಳದ ಸಂದರ್ಭದಲ್ಲಿ ಬೈಯಬೇಕಾಗಿ ಬಂದಾಗ ಮಾತ್ರ! ಉಳಿದಂತೆ ಹೆಚ್ಚಿನವರು ಅಡ್ಡ ಹೆಸರನ್ನು ಹಿಡಿದು ಕರೆಯುವುದೇ ಹೆಚ್ಚು. ಸಾಮಾನು, ಬಾಲ, ವಿಲ್ಲಿ, ಬುಲ್ಲಿ, ಲಿಂಗ ಮೊದಲಾದ ಹೆಸರುಗಳೇ ಹೆಚ್ಚು ಜನಪ್ರಿಯವಾಗಿವೆ. ಆದರೂ ಉಳಿದ ಅಂಗಗಳಿಗಿಂತಲೂ ಈ ಅಂಗ ಪುರುಷರಿಗೆ ವಿಶಿಷ್ಟವೂ ಭಿನ್ನವಾಗಿ ಪ್ರತಿಕ್ರಿಯಿಸುವ ಅಚ್ಚರಿ ತರುವಂತಹದ್ದೇ ಆಗಿದೆ.

ಲೈಂಗಿಕವಾಗಿ ಉದ್ರೇಕಗೊಂಡಾಗ ಸೆಟೆದು ನಿಲ್ಲುವ, ಉಳಿದ ಸಮಯದಲ್ಲಿ ಅನುದ್ರೇಕಗೊಂಡು ಜೋಲು ಬಿದ್ದಿರುವ ಈ ಅಂಗ ಜನಾಂಗವನ್ನು ಮುಂದುವರೆಸುವ ಪ್ರಮುಖ ಕಾರ್ಯವನ್ನು ವಹಿಸಿರುವುದರಿಂದಲೇ ಜನನಾಂಗ ಎಂಬ ಹೆಸರನ್ನೂ ಪಡೆದಿದೆ. ನಾವು ಇಂದು ಈ ಜಗತ್ತಿನಲ್ಲಿದ್ದರೆ ಇದಕ್ಕೆ ಜನ್ಮದಾತರಾದ ನಮ್ಮ ತಂದೆ, ಅಜ್ಜ, ಮುತ್ತಜ್ಜ ಮೊದಲಾದವರ ಜನನಾಂಗಗಳು ಸುಸ್ಥಿತಿಯಲ್ಲಿದ್ದಿರಲೇಬೇಕು, ಇದರಲ್ಲಿ ಎರಡು ಮಾತಿಲ್ಲ. ಹೀಗೇ ಹಿಂದೆ ಸಾಗುತ್ತಾ ಹೋದರೆ ಮಾನವ ಜನಾಂಗ ಪ್ರಾರಂಭವಾಗುವುದಕ್ಕಿಂತಲೂ ಹಿಂದಿನವರೆಗೂ ಕಲ್ಪಿಸಿಕೊಳ್ಳಬಹುದು.

ಪುರುಷರು ತಮ್ಮ ಶಿಶ್ನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳಲು ನೈಸರ್ಗಿಕ ಪರಿಹಾರ ಸೂತ್ರಗಳು

ಅಂದಹಾಗೆ, ಮೂಳೆಯಿಲ್ಲದ ಈ ಅಂಗ ಮಾನವದೇಹ ಅಳಿದ ಬಳಿಕ ಇಲ್ಲವಾಗುತ್ತದಲ್ಲ! ಆದರೆ 425 ಮಿಲಿಯನ್ ವರ್ಷಗಳ ಹಿಂದಿನ ಪಳೆಯುಳಿಕೆಯೊಂದರಲ್ಲಿ ಹೆಚ್ಚೂ ಕಡಿಮೆ ಕಲ್ಲಾಗಿರುವ ಪುರುಷ ಶರೀರವೊಂದರಲ್ಲಿ ಶಿಶ್ನವೂ ಸ್ಪಷ್ಟವಾಗಿ ಕಂಡುಬರುತ್ತಿದೆ. Colymbosathon ecplecticos ಅಥವಾ ಗ್ರೀಕ್ ಭಾಷೆಯಲ್ಲಿ 'ದೊಡ್ಡ ಶಿಶ್ನವಿರುವ ಅದ್ಭುತ ಈಜುಗಾರ'ಎಂದು ಈ ಪಳೆಯುಳಿಕೆಯನ್ನು ಕರೆಯಲಾಗುತ್ತದೆ.

ಮಾನವ ಸಂತತಿ ಮುಂದುವರೆಯಲು ಹಾಗೂ ಉಳಿಯಲು ಈ ಅಂಗದ ಕಾರ್ಯಕ್ಷಮತೆಯನ್ನೇ ಬಲವಾಗಿ ಅವಂಬಿಸಿರುವುದು ಹಾಗೂ ಈ ಕಾರ್ಯಕ್ಕಾಗಿ ಸನ್ನದ್ದವಾಗುವ ಪರಿನಿಮಗೆ ಅಚ್ಚರಿ ತರಬಹುದು. ವಂಶಾಭಿವೃದ್ದಿಯನ್ನು ಪರಿಗಣಿಸುವುದಾದರೆ, ತಪ್ಪಿದ ಅವಕಾಶಕ್ಕಿಂದಲೂ ಮಿಥ್ಯಾ ಉದ್ರೇಕವೇ ವಾಸಿ. ಖ್ಯಾತ ಲೇಖಕ ಮೊಕೊಕೋಮಾ ಮೊಕೋನೊವಾನಾ ರವರು ಹೀಗೆ ಬರೆದಿದ್ದಾರೆ "ಉದ್ರೇಕವನ್ನು ಜಗತ್ತಿನ ಅತ್ಯುತ್ತಮ ನಟದಿಂದಲೂ ನಟಿಸಲು ಸಾಧ್ಯವಿಲ್ಲ" ಈ ವಾಕ್ಯವೇ ಇಂದಿನ ಮಾಹಿತಿಯ ಮೊದಲ ವಿಷಯಕ್ಕೆ ನಾಂದಿಯಾಗಿದೆ....

ನಿಮ್ಮ ಮೊದಲ ಉದ್ರೇಕ

ನಿಮ್ಮ ಮೊದಲ ಉದ್ರೇಕ

ನಿಮಗೆ ಮೊದಲು ಯಾವಾಗ ಉದ್ರೇಕವಾಗಿತ್ತು ಎಂದು ತಲೆ ತುರಿಸಲು ಹೋಗಬೇಡಿ, ಏಕೆಂದರೆ ಈ ಸಹಜಗುಣಗಳನ್ನು ಮಗುವಿನ್ನೂ ತಾಯಿಯ ಗರ್ಭದಲ್ಲಿದ್ದಾಗಲೇ ಪ್ರಕಟಿಸ ತೊಡಗುತ್ತದೆ. ಹೆರಿಗೆಗೂ ಮುನ್ನ ನಡೆಸಿದ ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ಶಿಶುವಿನ ಬೆಳವಣಿಗೆಯನ್ನು ಗಮನಿಸಿದಾಗ ಮಗುವಿನ ಗಾತ್ರದ ಅನುಪಾತದಲ್ಲಿ ಮಗುವಿನ ಶಿಶ್ನವೂ ಪೂರ್ಣ ಪ್ರಮಾಣದ ಉದ್ರೇಕ ಸ್ಥಿತಿ ಪಡೆದಿರುವುದನ್ನು ಗಮನಿಸಲಾಗಿದೆ. 1991ರಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಮಗು ಗರ್ಭದಲ್ಲಿಯೇ ಗಾಢ ನಿದ್ದೆ ಹೊಂದಿದ್ದು ಕಣ್ಣುಗುಡ್ಡೆಗಳು ತೀವ್ರ ಚಲನೆಯನ್ನು ತೋರಿದಾಗ (andom eye movement (REM)ಗರಿಷ್ಟ ಉದ್ರೇಕತೆಯನ್ನು ಪಡೆಯುತ್ತದೆ. ಅಲ್ಲದೇ ಒಂದು ಬಾರಿ ಮಾತ್ರವಲ್ಲ, ಪ್ರತಿಘಂಟೆಯಲ್ಲಿ ಹಲವಾರು ಬಾರಿ ಕಾಣಿಸಿಕೊಳ್ಳಬಹುದು. ಇದು ಏಕೆ ಹೀಗೆ ಎಂಬ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿಲ್ಲ. ಆದರೆ ವೈದ್ಯರು ಸ್ಥೂಲವಾಗಿ ಅಂದಾಜಿಸುವಂತೆ ಮಗುವಿನ ದೇಹ ಜನ್ಮತಳೆಯುವುದಕ್ಕೂ ಮುನ್ನ ಎಲ್ಲಾ ಅಂಗಗಳು ಸರಿಯಾಗಿದೆಯೇ ಎಂದು ಪರೀಕ್ಷಿಸಿ ನೋಡಿಕೊಳ್ಳುವ ಒಂದು ನಿಸರ್ಗದ ವ್ಯವಸ್ಥೆಯೇ ಆಗಿರಬಹುದು.

ನಿಮ್ಮ ಶಿಶ್ನ ನೀವು ಊಹಿಸಿದ್ದಕ್ಕೂ ಎರಡರಷ್ಟು ಉದ್ದವಿದೆ!

ನಿಮ್ಮ ಶಿಶ್ನ ನೀವು ಊಹಿಸಿದ್ದಕ್ಕೂ ಎರಡರಷ್ಟು ಉದ್ದವಿದೆ!

ಸಾಮಾನ್ಯವಾಗಿ ಕಣ್ಣಿಗೆ ಕಾಣುವ ಭಾಗವನ್ನೇ ಪುರುಷರು ನಿಜವಾದ ಉದ್ದವೆಂದು ಪರಿಗಣಿಸುತ್ತಾರೆ. ವಾಸ್ತವವಾಗಿ ಸುಮಾರು ಅರ್ಧದಷ್ಟು ಭಾಗ ದೇಹದ ಒಳಗೇ ಇದ್ದು ಉಳಿದ ಭಾಗಕ್ಕೆ ಅಗತ್ಯವಾದ ಆಧಾರವನ್ನು ಒದಗಿಸುತ್ತದೆ.

ಶೂ ಗಾತ್ರದ ಮಿಧ್ಯೆ

ಶೂ ಗಾತ್ರದ ಮಿಧ್ಯೆ

ಶೂ ಗಾತ್ರ ಎಷ್ಟಿದೆಯೋ ಅಷ್ಟೇ ಉದ್ದದ ಶಿಶ್ನವಿರುತ್ತದೆ ಎಂದು ಕೆಲವರು ನಂಬಿದ್ದಾರೆ. ಈ ನಂಬಿಕೆ ಎಲ್ಲಿಂದ ಬಂತೋ ಗೊತ್ತಿಲ್ಲ, ಆದರೆ BJU International ಎಂಬ ವೈದ್ಯಕೀಯ ನಿಯತ ಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಈ ಹೋಲಿಕೆಯಲ್ಲಿ ಯಾವುದೇ ಹುರುಳಿಲ್ಲ. ಇದಕ್ಕೂ ಹಿಂದೆ, ಅಂದರೆ 1993ರಲ್ಲಿ ಪ್ರಕಟವಾದ ವರದಿಯಲ್ಲಿ ಪಾದದ ಉದ್ದಕ್ಕೂ ಶಿಶ್ನದ ಉದ್ದಕ್ಕೂ ತಾಳಮೇಳವಿರುವ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿತ್ತು. ಆದರೆ ಈ ತಾಳಮೇಳ ಕೇವಲ ಕಾಕತಾಳೀಯವೇ ಹೊರತು ಎಲ್ಲಾ ಸಂದರ್ಭಗಳಲ್ಲಿ ಈ ಮಾನದಂಡ ಉಪಯೋಗಕ್ಕೆ ಬರುವುದಿಲ್ಲ ಎಂದು ಲೇಖಕರು ಜಾರಿಕೊಂಡಿದ್ದರು.

ಅಂತಿಮ ಉದ್ರೇಕ

ಅಂತಿಮ ಉದ್ರೇಕ

ತಾಯಿಯ ಗರ್ಭದಲ್ಲಿರುವಾಗಲೂ, ನಿದ್ದೆಯಲ್ಲಿರುವಾಗಲೂ ಉದ್ರೇಕ ಸಂಭವಿಸುತ್ತದೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಆದರೆ ನಿಮಗೆ ಅಚ್ಚರಿಯಾಗಬಹುದಾದರೂ, ಇದು ನಿಜ, ಅದೇ ಅಂತಿಮ ಉದ್ರೇಕ, ಅಥವಾ ಸಾವಿನ ಸಮಯದ ಉದ್ರೇಕ. ಈ ಉದ್ರೇಕವನ್ನು angel lust ಅಥವಾ terminal erection ಎಂದೂ ಕರೆಯಲಾಗುತ್ತದೆ. ಸಾವು ಸಂಭವಿಸಿದ ಕೆಲವು ಕ್ಷಣಗಳ ಬಳಿಕ ಈ ಉದ್ರೇಕ ಸಂಭವಿಸುತ್ತದೆ. ವಿಶೇಷವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪುರುಷ ದೇಹಗಳಲ್ಲಿ ಈ ಪರಿ ಹೆಚ್ಚಾಗಿ ಕಂಡುಬರುತ್ತದೆ. ಬಿಗಿತದ ಕಾರಣ ಮೆದುಳಿನ ಮೇಲೆ ಬೀಳುವ ಒತ್ತಡದಿಂದಾಗಿ ಈ ಸಂಕೇತ ಹೊರಟಿರಬಹುದು ಎಂದು ಅಂದಾಜಿಲಾಗಿದೆ. ಆದರೆ ಬಂದೂಕಿನ ಗುಂಡು ತಲೆಗೆ ಬಿದ್ದ, ನರಗಳಿಗೆ ಜಜ್ಜಿದ ಪೆಟ್ಟಾಗಿ ಹಾಗೂ ವಿಶಪ್ರಾಶನದಿಂದ ಸಂಭವಿಸಿರುವ ಸಾವುಗಳಲ್ಲಿಯೂ ಈ ಬಗೆಯ ಉದ್ರೇಕವಾಗಿರುವುದನ್ನು ಗಮನಿಸಲಾಗಿದೆ.

ಸ್ಖಲನದ ಮೇಲೆ ಇಲ್ಲದ ನಿಯಂತ್ರಣ

ಸ್ಖಲನದ ಮೇಲೆ ಇಲ್ಲದ ನಿಯಂತ್ರಣ

ಸ್ಖಲನದ ಮೇಲೆ ನಿಯಂತ್ರಣ ಸಾಧಿಸಿರುವ ಪುರುಷರೇ ಈ ಜಗತ್ತಿನಲ್ಲಿಲ್ಲ ಎನ್ನಬಹುದು. ಏಕೆಂದರೆ ಇದು ಮೆದುಳನ್ನು ಅವಲಂಬಿಸಿಲ್ಲ. ವಾಸ್ತವವಾಗಿ ಸ್ಖಲನದ ಸೂಚನೆಯನ್ನು ಮೆದುಳುಬಳ್ಳಿ ನೀಡುತ್ತದೆ. ಮೆದುಳುಬಳ್ಳಿಯ ಕೆಲವು ನಿರ್ದಿಷ್ಟ ಭಾಗವೇ ಸ್ಖಲನವನ್ನು ನಿರ್ಧರಿಸುತ್ತದೆ. ಸ್ಖಲನವಾಗುವ ಸಮಯದಲ್ಲಿ ಮೆದುಳು ಬೇರೆ ವಿಷಯದತ್ತ ಹೊರಳಿಸುವ ಮೂಲಕ ಸ್ಖಲನವನ್ನು ಮುಂದೂಡಬಹುದಾದರೂ ಇದರಿಂದಲೇ ಸ್ಖಲನವನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಅನುದ್ರೇಕದ ಸ್ಥಿತಿಗೂ ಉದ್ರೇಕಿತ ಸ್ಥಿತಿಗೂ ಸಂಬಂಧವಿಲ್ಲ

ಅನುದ್ರೇಕದ ಸ್ಥಿತಿಗೂ ಉದ್ರೇಕಿತ ಸ್ಥಿತಿಗೂ ಸಂಬಂಧವಿಲ್ಲ

ಸುಮಾರು 274 ಪುರುಷರ ಮೇಲೆ ಈ ವಿಷಯದ ಮೇಲೆ ನಡೆಸಿದ ಅಧ್ಯಯನದ ಬಳಿಕ ಅನುದ್ರೇಕ ಸ್ಥಿತಿಯಲ್ಲಿರುವ (ಅಂದರೆ ದಿನದ ಹೆಚ್ಚಿನ ಹೊತ್ತಿನಲ್ಲಿ ಯವುದೇ ಉದ್ರೇಕವಿಲ್ಲದಿದ್ದಾಗ) ಶಿಶ್ನದ ಗಾತ್ರ ಬೇರೆ ಬೇರೆಯದ್ದಾಗಿರುತ್ತದೆ, ಆದರೆ ಉದ್ರೇಕಗೊಂಡಾಗ ಹೆಚ್ಚೂ ಕಡಿಮೆ ಒಂದೇ ಗಾತ್ರ ಪಡೆಯುತ್ತವೆ. ಅಂದರೆ ಅನುದ್ರೇಕ ಸ್ಥಿತಿಯಲ್ಲಿ ತೀರಾ ಚಿಕ್ಕದಿದ್ದ ಶಿಶ್ನ ತೀರಾ ಹೆಚ್ಚು ಉದ್ರೇಕವನ್ನೂ, ಅನುದ್ರೇಕದ ಸ್ಥಿತಿಯಲ್ಲಿಯೂ ಹೆಚ್ಚು ಕಡಿಮೆ ಗಾತ್ರ ಪಡೆಯದ ಶಿಶ್ನ ಕೊಂಚವೇ ಉದ್ರೇಕವನ್ನು ಪಡೆಯುತ್ತವೆ. ಅಂತಿಮ ಗಾತ್ರ ಪಡೆಯುವ ಬಗ್ಗೆ ಯಾವುದೇ ತರ್ಕ ಅಥವಾ ನಿಯಮ ಕಂಡುಬಂದಿಲ್ಲ.

ಜೋಳದ ಹುರಿ (Cornflakes) ತಿನ್ನುವುದರಿಂದ ಹಸ್ತಮೈಥುನ ತಡೆಗಟ್ಟಬಹುದೇ?

ಜೋಳದ ಹುರಿ (Cornflakes) ತಿನ್ನುವುದರಿಂದ ಹಸ್ತಮೈಥುನ ತಡೆಗಟ್ಟಬಹುದೇ?

ಇದು ಮಿಧ್ಯೆ ಎಂದು ಕೆಲ್ಲಾಗ್ಸ್ ಎಂಬ ಸಿದ್ದ ಉಪಾಹಾರ ಸಿದ್ಧ ಆಹಾರಗಳ ಸಂಸ್ಥೆಗಳ ಸ್ಥಾಪಕರಾದ ಡಾ. ಹಾರ್ವೇ ಕೆಲ್ಲಾಗ್ ತಿಳಿಸುತ್ತಾರೆ. ಆದರೆ ಇದು ಹೀಗೆ ಮಾಡಿದ್ದರೆ ಒಳ್ಳೆಯದಿತ್ತು ಎಂಬ ಅಭಿಪ್ರಾಯವನ್ನೂ ಮಂಡಿಸುತ್ತಾರೆ. ಸಾಮಾನ್ಯ ಆಹಾರಗಳನ್ನು ತಿನ್ನುವ ಬದಲು ಜೋಳದ ಹುರಿಯನ್ನು ಆಧರಿಸಿದ ಆಹಾರಗಳನ್ನು ಸೇವಿಸುವ ಮೂಲಕ ಹಸ್ತಮೈಥುನವೆಂಬ 'ಪಾಪ'ಕ್ರಿಯೆಯನ್ನು ನಿಲ್ಲಿಸಲು ಸಾಧ್ಯ ಎಂಬ ಅಮೇರಿಕನ್ನರ ನಂಬಿಕೆಯನ್ನೇ ಬಂಡವಾಳವಾಗಿಸಿ ಈ ಉತ್ಪನ್ನಗಳನ್ನು ಸಿದ್ದಪಡಿಸಲಾಗಿದೆ.

ಜೋಳದ ಹುರಿ (Cornflakes) ತಿನ್ನುವುದರಿಂದ ಹಸ್ತಮೈಥುನ ತಡೆಗಟ್ಟಬಹುದೇ?

ಜೋಳದ ಹುರಿ (Cornflakes) ತಿನ್ನುವುದರಿಂದ ಹಸ್ತಮೈಥುನ ತಡೆಗಟ್ಟಬಹುದೇ?

ಆದರೆ ವಿಜ್ಞಾನ ಇದು ಮಿಥ್ಯೆ ಎಂದು ಸಾಬೀತುಪಡಿಸಿರುವ ಕಾರಣ ಆಹಾರ ಸಂಸ್ಥೆಗಳು ಯುವಕರನ್ನು ಈ ಮಿಥ್ಯೆಯ ಮೂಲಕ ಸೆಳೆಯುವ ಪ್ರಯತ್ನಗಳನ್ನು ಕೈಬಿಡುತ್ತಿವೆ. ಒಂದು ವೇಳೆ ಇದರ ಬಗ್ಗೆ ಅನುಮಾನವಿದ್ದರೆ ಈ ಬಗ್ಗೆ ಕುರುಡರಾಗಬೇಕಾಗಿಲ್ಲ, ಬದಲಿಗೆ ಇಂದು ಸ್ಪಷ್ಟ ಹಾಗೂ ವೈಜ್ಞಾನಿಕ ಮಾಹಿತಿಗಳಿವೆ, ಇವುಗಳನ್ನೇ ನಂಬಿದರೆ ಸಾಕು.

English summary

Top things you didn't know about your penis

Although many of us men are relatively familiar with our penis and its antics, there's more to our appendage than meets the eye. In this feature, we discuss 10 interesting things that you probably didn't know about your genitals. Whatever you happen to call it — todger, wang, willy, or dangler — the penis is an odd-looking bit of kit. But beyond the japes and sniggers, it is, of course, vital to the survival of our species. When you consider the penis as an evolutionary adaptation, it has done remarkably well.
X
Desktop Bottom Promotion