Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಈ ಮಹಿಳೆ 50 ಕೆಜಿ ತೂಕ ಇಳಿಸಿಕೊಂಡರೂ, ಆಕೆಗೆ ಖಿನ್ನತೆ ಕಾಡಿತು!
ಬೊಜ್ಜು ದೇಹವೆನ್ನುವುದು ಅದನ್ನು ಹೊಂದಿರುವ ವ್ಯಕ್ತಿಗಳಿಗೆ ತುಂಬಾ ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ, ಹಲವಾರು ರೀತಿಯ ಅನಾರೋಗ್ಯಕ್ಕೂ ಇದು ಕಾರಣವಾಗುವುದು. ಇಂತಹ ದೇಹವನ್ನು ಹೊಂದಿರುವ ಕೆಲವು ಜನರು ಆರೋಗ್ಯಕರವಾಗಿರುವಂತಹ ಆಹಾರ ಕ್ರಮ ಮತ್ತು ಬದ್ಧತೆಯ ವ್ಯಾಯಾಮದೊಂದಿಗೆ ದೇಹಭಾರ ಕಡಿಮೆ ಮಾಡಿಕೊಳ್ಳುವರು. ಆದರೆ ಇದಕ್ಕೆ ತುಂಬಾ ಪರಿಶ್ರಮ ಹಾಗೂ ಬದ್ಧತೆ ಬೇಕು. ಇಲ್ಲವಾದಲ್ಲಿ ಇದು ನೀರಿನಲ್ಲಿಟ್ಟ ಹೋಮದಂತೆ ಆಗುವುದು.
ಈ ಲೇಖನದಲ್ಲಿ ಹೇಳಲು ಹೊರಟಿರುವುದು ತೂಕ ಕಳೆದುಕೊಂಡರೂ ಖಿನ್ನತೆಗೆ ಒಳಗಾಗಿರುವ ಮಹಿಳೆ ಬಗ್ಗೆ. ಹೌದು, ಎಲ್ನಾ ಬೇಕರ್ ಎನ್ನುವ ಮಹಿಳೆ ಆಹಾರ ಕ್ರಮ, ಕಠಿಣ ವ್ಯಾಯಾಮ ಮತ್ತು ವೈದ್ಯರು ಸೂಚಿಸಿದಂತಹ ಔಷಧಿಯಿಂದ ಸುಮಾರು 50 ಕೆಜಿ ದೇಹಭಾರ ಇಳಿಸಿಕೊಂಡರೂ ಆಕೆ ಖಿನ್ನತೆಗೆ ಒಳಗಾಗಿದ್ದಾರೆ. ಆಕೆಯ ಕಥೆಯೆಂದರೆ ಬೊಜ್ಜು ದೇಹವನ್ನು ಇಳಿಸಿಕೊಂಡರೂ ದೇಹದ ಚರ್ಮವು ಜೋತು ಬೀಳುವುದು. ಇಂತಹ ಸಮಸ್ಯೆಯು ಬೇಕರ್ ಗೆ ಕೂಡ ಕಾಡಿದೆ. ಇದರ ಬಗ್ಗೆ ಮುಂದಕ್ಕೆ ಓದಿಕೊಳ್ಳಿ.

ಆಕೆ ಬಾಲ್ಯದಲ್ಲಿ ಆರೋಗ್ಯವಂತ ಮಗುವಾಗಿದ್ದಳು
ಬಾಲ್ಯದಿಂದಲೂ ಎಲ್ನಾ ತುಂಬಾ ಬೊಜ್ಜು ಹೊಂದಿರುವ ಮಗುವಾಗಿದ್ದರೂ ಆರೋಗ್ಯವಾಗಿದ್ದಳು. ಆಕೆ ಅನಾರೋಗ್ಯಕ್ಕೆ ಅಂತ್ಯ ಹಾಡಲು ಬಯಸಿದಳು ಮತ್ತು ತನ್ನ ದೇಹವನ್ನು ಸುಂದರವಾಗಿಸಲು ಆಕೆ ಬೊಜ್ಜು ದೇಹವನ್ನು ಇಳಿಸುವ ಕಾರ್ಯಕ್ರಮಕ್ಕೆ ಸೇರಿಕೊಳ್ಳಲು ಬಯಸಿದಳು.

50 ಕೆಜಿ ಇಳಿಸಿಕೊಂಡಳು
ಆಕೆ ಈ ಕಾರ್ಯಕ್ರಮಕ್ಕೆ ಸೇರಿಕೊಂಡು ಐದುವರೆ ತಿಂಗಳಲ್ಲಿ ಸುಮಾರು 50 ಕೆಜಿ ತೂಕ ಇಳಿಸಿಕೊಂಡಳು. ಆಕೆ ಇದಕ್ಕಾಗಿ ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ವೈದ್ಯರು ಸೂಚಿಸಿರುವಂತಹ ಔಷಧಿ ಸೇವಿಸುತ್ತಿದ್ದರು.

ಇದಕ್ಕೆ ಮೊದಲು ಆಕೆ 120 ಕೆ.ಜಿ ಇದ್ದಳು!
ತೂಕ ಕಳೆದುಕೊಳ್ಳುವ ಮೊದಲು ಆಕೆ ಸುಮಾರು 120 ಕೆ.ಜಿ. ಭಾರ ಹೊಂದಿದ್ದರು ಮತ್ತು ತೂಕ ಕಳೆದುಕೊಂಡ ಬಳಿಕ ಆಕೆಯ ಚರ್ಮಗಳು ಜೋತು ಬೀಳಲು ಆರಂಭಿಸಿದವು. ಆಕೆ ತೂಕ ಕಳೆದುಕೊಂಡರೂ ಜೋತು ಬಿದ್ದ ಚರ್ಮದಿಂದಾಗಿ ತುಂಬಾ ಖಿನ್ನತೆಗೆ ಒಳಗಾದಳು. ತನ್ನ ದೇಹವನ್ನು ಸುಂದರವಾಗಿಸಲು ಆಕೆ ಬಯಸಿದಳು.

ಆಕೆ ಶಸ್ತ್ರಚಿಕಿತ್ಸೆಗೆ ಒಳಗಾದಳು
ಜೋತು ಬಿದ್ದ ಚರ್ಮದಿಂದಾಗಿ ಆಕೆ ತುಂಬಾ ಖಿನ್ನತೆಗೆ ಒಳಗಾದಳು ಮತ್ತು ಈ ಚರ್ಮದಿಂದ ಮುಕ್ತಿ ಪಡೆಯಲು ಬಯಸಿದಳು. ದುರಾದೃಷ್ಟದಿಂದ ಆಕೆಯ ಪರವಾಗಿ ಯಾವುದೂ ಕೆಲಸ ಮಾಡಲಿಲ್ಲ. ಇದರಿಂದಾಗಿ ಆಕೆ ಜೋತು ಬಿದ್ದ ಚರ್ಮವನ್ನು ತೆಗೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇದಕ್ಕಾಗಿ ಆಕೆಗೆ ನಾಲ್ಕು ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಯಿತು.

ಆಕೆ ಹೇಗೆ ಹೊಂದಿಕೊಂಡಳು ಎಂದು ಬಹಿರಂಗಪಡಿಸಿದಳು
ತುಂಬಾ ಕಡಿಮೆ ಸಮಯದಲ್ಲಿ ಸುಮಾರು 50 ಕೆಜಿ ತೂಕ ಇಳಿಸಿಕೊಂಡಿರುವ ಎಲ್ನಾ ಬೇಕರ್ ತುಂಬಾ ಸಂತೋಷಪಟ್ಟಿದ್ದಾರೆ. ಆದರೆ ಜೋತುಬಿದ್ದ ಚರ್ಮವು ಆಕೆಯನ್ನು ಖಿನ್ನತೆಗೆ ದೂಡಿದೆ. ಆಕೆಯು ತನ್ನ ಚರ್ಮವನ್ನು ಬಿಗಿಗೊಳಿಸಲು ಹಲವು ಶಸ್ತ್ರಚಿಕಿತ್ಸೆಗೆ ಒಳಗಾದರೂ ಈಗಲೂ ಆಕೆಯಲ್ಲಿ ಆತ್ಮವಿಶ್ವಾಸವು ಕಡಿಮೆಯಾಗಿದೆ. ಆದರೆ ನಮ್ಮ ಪ್ರಕಾರ ಆಕೆ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯಬೇಡಿ.



Click it and Unblock the Notifications
