Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜ್ಯೋತಿಷ್ಯ: ಹುಟ್ಟಿದ ವಾರ ಗೊತ್ತಿದ್ದರೆ ಸಾಕು, ಭವಿಷ್ಯ ನಿರ್ಧರಿಸಬಹುದು!
ಜನ್ಮ ದಿನ ಎಂದರೆ ಎಲ್ಲರಿಗೂ ಅದೇನೋ ಸಡಗರ ಸಂಭ್ರಮ. ಪ್ರೀತಿ ಪಾತ್ರರಿಂದ ಶುಭ ಹಾರೈಕೆ, ಉಡುಗೊರೆಯನ್ನು ಪಡೆಯುವುದು, ಸಿಹಿ ತಿಂಡಿಯ ಊಟ, ಮನೆಯಲ್ಲಿ ಸಡಗರದ ಸಂಭ್ರಮ ಎಲ್ಲವೂ ಸಂತೋಷವನ್ನು ನೀಡುತ್ತದೆ. ಪ್ರಪಂಚಕ್ಕೆ ಕಾಲಿಟ್ಟ ಆ ದಿನ ಯಾವುದು? ಎನ್ನುವುದರ ಆಧಾರದ ಮೇಲೆಯೇ ನಮ್ಮ ಭವಿಷ್ಯ ನಿರ್ಧಾರಗೊಂಡಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವಾರದ ಏಳು ದಿನಗಳನ್ನು ಒಂದೊಂದು ದೇವರಿಗೆ ಮೀಸಲಾಗಿ ಪೂಜಿಸುತ್ತೇವೆ. ಹಾಗೆಯೇ ಪ್ರತಿಯೊಂದು ದಿನಕ್ಕೂ ಅದರದ್ದೇ ಆದ ವಿಶೇಷತೆಗಳಿರುವುದು ವಿಶೇಷ.
ನಾವು ಕೆಲವು ವಾರಗಳಲ್ಲಿ ಜನಿಸುವುದರಿಂದ ವಿವಿಧ ಬಗೆಯ ಜೀವನವನ್ನು ಅನುಭವಿಸುತ್ತೇವೆ. ಅದು ನಮ್ಮ ಕುಂಡಲಿಗೆ ಅನುಗುಣವಾಗಿಯೇ ಇರುತ್ತದೆ. ಕೆಲವು ವಿಶೇಷ ಗ್ರಹಗಳು ಕೆಲವು ವಾರಗಳಲ್ಲಿ ಪ್ರಭಲವಾಗಿರುತ್ತಾನೆ. ಉದಾಹರಣೆಗೆ ಸೂರ್ಯನು ಭಾನುವಾರ, ಚಂದ್ರ ಸೋಮವಾರ, ಮಂಗಳ ಗ್ರಹ ಮಂಗಳವಾರ, ಬುಧನು ಬುಧವಾರ, ಗುರುವು ಗುರುವಾರ, ಶುಕ್ರನು ಶುಕ್ರವಾರ, ಶನಿಯು ಶನಿವಾರ ಪ್ರಭಲರಾಗಿರುತ್ತಾರೆ. ಆ ವಾರದಲ್ಲಿ ಜನಿಸಿದವರಿಗೆ ಆಯಾ ಗ್ರಹಗಳು ಹೆಚ್ಚು ಪ್ರಬಲವಾಗಿರುತ್ತವೆ ಎನ್ನಲಾಗುತ್ತದೆ. ನಿಮಗೂ ನೀವು ಯಾವ ಹುಟ್ಟಿದ್ದೀರಿ? ಆ ವಾರದಲ್ಲಿ ಜನಿಸುವುದರಿಂದ ಯಾವೆಲ್ಲಾ ಲಾಭ ಅದೃಷ್ಟಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿದು ಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಓದಿ...

ಸೋಮವಾರ
ನೀವು ಸ್ವಯಂ ಪ್ರೇರಣೆ ಪಡೆದುಕೊಂಡಿರುವ ವ್ಯಕ್ತಿಗಳಾಗಿರುತ್ತೀರಿ. ದಯೆ ಮತ್ತು ಕರುಣೆಯ ಸ್ವಭಾವ ನಿಮ್ಮದಾಗಿರುತ್ತದೆ. ಸಂತೋಷ ಹಾಗೂ ದುಃಖ ಎರಡನ್ನು ಹೇಗೆ ಸಮತೋಲನದಲ್ಲಿ ನಿಯಂತ್ರಿಸಬೇಕು ಎನ್ನುವುದು ನಿಮಗೆ ತಿಳಿದಿರುತ್ತದೆ.ವಿದ್ಯಾಭ್ಯಾಸದ ಆರಮಭದಲ್ಲಿ ಓದಿನ ಬಗ್ಗೆ ಅಷ್ಟು ಆಸಕ್ತಿ ಇರುವುದಿಲ್ಲ. ವಿದ್ಯಾಭ್ಯಾಸ ಮುಂದುವರಿದಂತೆ ನಿಧಾನವಾಗಿ ನಿಮಗೆ ಆಸಕ್ತಿ ಹೆಚ್ಚುತ್ತಾ ಸಾಗುತ್ತದೆ.

ಮಂಗಳವಾರ
ಈ ವಾರದಲ್ಲಿ ಹುಟ್ಟಿದವರು ಒಂದು ಬಗೆಯ ಉರಿಯ ಮನೋಭಾವವನ್ನು ಹೊಂದಿರುತ್ತಾರೆ. ಕೆಲವು ಮಾತುಗಳಿಂದ ನೀವು ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಜೀವನದ ಉದ್ದಕ್ಕೂ ನಿಮಗೆ ಅತ್ಯಂತ ಸ್ವಾಭಿಮಾನ ಹಾಗೂ ಅಹಂಕಾರದ ಗುಣಗಳಿರುತ್ತವೆ ಎಂದು ಹೇಳಲಾಗುವುದು.

ಬುಧವಾರ
ಈ ವಾರದಲ್ಲಿ ಹುಟ್ಟಿದ ವ್ಯಕ್ತಿಗಳು ಹೆಚ್ಚು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ.ಇವರು ದೇವರಲ್ಲಿ ಭಯ-ಭಕ್ತಿಯನ್ನು ಹೊಂದಿರುತ್ತಾರೆ. ಇವರು ಸಭ್ಯರು, ವಿನಮ್ರರು ಮತ್ತು ಕುಟುಂಬಕ್ಕೆ ಒಳಿತನ್ನು ಬಯಸುವವರು ಆಗಿರುತ್ತಾರೆ. ಮನಸ್ಸ ಪೂರ್ವಕವಾಗಿ ಕೆಲಸ ಮಾಡುತ್ತಾರೆ. ತಮ್ಮ ಭಾವನೆಯ ಆಧಾರದ ಮೇಲೆ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಗುರುವಾರ
ಈ ವಾರದಲ್ಲಿ ಜನಿಸಿದವರು ಬುದ್ಧಿವಂತರು ಮತ್ತು ಸಾಹಸಮಯ ವ್ಯಕ್ತಿತ್ವ ಹೊಂದಿದವರಾಗಿರುತ್ತಾರೆ. ಎಂತಹ ಕಠಿಣ ಸಮಯವನ್ನಾದರೂ ಎದುರಿಸುವ ಶಕ್ತಿ ನಿಮಗಿರುತ್ತದೆ. ಇವರು ಪ್ರೀತಿಪಾತ್ರರಿಂದ ಅಪಾರ ಪ್ರೀತಿ ಹಾಗೂ ಬೆಂಬಲವನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ ಅದೃಷ್ಟವು ಸದಾ ನಿಮ್ಮ ಕೈಹಿಡಿದಿರುತ್ತದೆ.

ಶುಕ್ರವಾರ
ಈ ವಾರದಲ್ಲಿ ಜನಿಸಿದವರು ಸದಾ ಸಂತೋಷದ ಮನೋಭಾವವನ್ನು ಹೊಂದಿರುತ್ತಾರೆ. ಇದರಿಂದ ಜನರು ಬಹಳ ಸುಲಭವಾಗಿ ಆಕರ್ಷಿತ ರಾಗುತ್ತಾರೆ. ಸುತ್ತಲಿನ ಜನರಿಗೆ ಹೆಚ್ಚು ಪ್ರಭಾವವನ್ನು ನೀಡುವಿರಿ. ಇವರು ತೀವ್ರವಾದ ಸಹಿಷ್ಣುತೆಯಿಂದ ಆಶೀರ್ವದಿಸಲ್ಪಟ್ಟಿರುತ್ತಾರೆ. ಹಲವು ಕಷ್ಟದ ಸನ್ನಿವೇಶವನ್ನು ಎದುರಿಸುತ್ತೀರಿ ಎನ್ನಲಾಗುವುದು.

ಶನಿವಾರ
ಈ ವಾರದಲ್ಲಿ ಜನಿಸಿದವರು ಕೃಷಿ. ವ್ಯಾಪಾರ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಆಳವಾದ ಆಸಕ್ತಿ ಹೊಂದಿದವರಾಗಿರುತ್ತೀರಿ. ನೀವು ಸಣ್ಣ ವಯಸ್ಸಿನಲ್ಲಿರುವಾಗ ಕೆಲವು ಕಷ್ಟದ ದಿನಗಳನ್ನು ಎದುರಿಸಬೇಕಾಗುವುದು. ದಿನ ಕಳೆದಂತೆ ಜನಗಳ ನಡುವೆ ಹೇಗೆ ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ತಿಳಿದುಕೊಂಡಿರುತ್ತೀರಿ. ಅದರಲ್ಲೂ ವಿಶೇಷವಾಗಿ ನಿಮ್ಮ ಸ್ನೇಹಿತರೊಂದಿಗೆ ಅಥವಾ ಬಂಧು ಬಾಂಧವರೊಂದಿಗೆ ಹೇಗಿರಬೇಕು ಎನ್ನುವುದನ್ನು ತಿಳಿದುಕೊಂಡಿರುತ್ತೀರಿ.

ಭಾನುವಾರ
ಈ ವಾರದಲ್ಲಿ ಜನಿಸಿದವರು ಸಾಮಾನ್ಯವಾಗಿ ವಿಶ್ರಾಂತಿಯನ್ನು ಪಡೆದುಕೊಳ್ಳುವ ಮನೋಭಾವದವರಾಗಿರುತ್ತೀರಿ. ಅಧಿಕ ಅದೃಷ್ಟವನ್ನು ಹೊಂದಿರುವ ನೀವು ಜೀವನದಲ್ಲಿ ನಿಧಾನಗತಿಯನ್ನು ಅನುಸರಿಸುವಿರಿ. ಹೆಚ್ಚು ಜನರೊಂದಿಗೆ ಬೆರೆಯಲು ಇಷ್ಟ ಪಡದ ವ್ಯಕ್ತಿಗಳಾಗಿರುವಿರಿ. ನಿಮ್ಮನ್ನು ಸಾಮಾಜಿಕವಾಗಿ ಅಂತರ್ಮುಖಿಗಳು ಎಂದು ಪರಿಗಣಿಸಲಾಗುವುದು. ನಿಮ್ಮ ಕುಟುಂಬದ ಸದಸ್ಯರನ್ನು ಸಂತೋಷವಾಗಿಟ್ಟುಕೊಳ್ಳಲು ಅಧಿಕ ಶ್ರಮ ವಹಿಸುವಿರಿ.



Click it and Unblock the Notifications
