For Quick Alerts
ALLOW NOTIFICATIONS  
For Daily Alerts

ಕೊನೆಯುಸಿರಿರುವವರೆಗೂ ಸಂಗಾತಿಯೊಂದಿಗೇ ಇರುವ ರಾಶಿಯವರಿವರು

|

ಬದುಕಿನಲ್ಲಿ ಉತ್ತಮ ಅದೃಷ್ಟ ಎನ್ನುವುದು ನಮ್ಮ ಜೊತೆಯಿದ್ದರೆ ನಾವು ಮುಟ್ಟಿದ್ದು, ನಮ್ಮೊಂದಿಗೆ ಬಂದಿದ್ದು ಎಲ್ಲವೂ ಸಂತೋಷವನ್ನು ನೀಡುತ್ತವೆ. ಅಂತಹ ಒಂದು ಅದೃಷ್ಟದಲ್ಲಿ ಸಂಗಾತಿಯನ್ನು ಪಡೆದುಕೊಳ್ಳುವುದು ಸಹ ಒಂದು. ಬೇರೆ ಬೇರೆ ವ್ಯಕ್ತಿತ್ವ, ವಿಭಿನ್ನ ಸಂಪ್ರದಾಯ, ಮನೆಯ ವಾತಾವರಣ, ಭಿನ್ನವಾದ ಆಹಾರ ಪದ್ಧತಿ ಹೀಗೆ ಎಲ್ಲವೂ ಭಿನ್ನವಾದ ರೀತಿಯಲ್ಲಿ ಬೆಳೆದು ದೊಡ್ಡವರಾಗುತ್ತಾರೆ. ಅಂತಹವರು ಒಂದೇ ಸೂರಿನ ಅಡಿಯಲ್ಲಿ ಸಂಗಾತಿಯಾಗಿ, ಪರಸ್ಪರ ಪ್ರೀತಿ ಸಹಕಾರ, ತ್ಯಾಗ, ಮಾಡಿಕೊಂಡು ಬದುಕು ಸಾಗಿಸುವುದು ಎಂದರೆ ಅದು ಸುಲಭದ ವಿಚಾರವಲ್ಲ. ಅಲ್ಲಿ ಸಾಕಷ್ಟು ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

ಯಾವ ಸಂಗಾತಿಗಳು ಸ್ವಾರ್ಥ ಭಾವನೆ ತೋರದೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಾರೋ ಅವರು ಜೀವನದಲ್ಲಿ ದಾಂಪತ್ಯದ ಸುಖವನ್ನು ಅನುಭವಿಸುತ್ತಾರೆ. ಸುಂದರ ಜೀವನವನ್ನು ಪಡೆಯುತ್ತಾರೆ ಎನ್ನಬಹುದು. ದಾಂಪತ್ಯ ಎನ್ನುವುದು ಜನುಮ ಜನುಮಗಳ ಅನುಬಂಧ ಎನ್ನಲಾಗುವುದು. ಉತ್ತಮ ಸಂಗಾತಿಯನ್ನು ಪಡೆಯುವುದು, ಸುಂದರ ಜೀವನವನ್ನು ಹೊಂದುವುದು, ಇದರೊಟ್ಟಿಗೆ ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದು ಎಲ್ಲವೂ ಒಂದು ಅದೃಷ್ಟದ ಸಂಗತಿ.

ದಾಂಪತ್ಯ ಅಥವಾ ಸಂಗಾತಿ ಎಂದರೆ ಬಹುತೇಕ ಮಂದಿ ಕೇವಲ ತಮ್ಮ ಆಸೆ, ಸ್ವಾರ್ಥಗಳಿಗೆ ಅನುಗುಣವಾಗಿ ವರ್ತಿಸುತ್ತಾರೆ. ತಮ್ಮ ಸುಖ ಜೀವನಗಳನ್ನು ಮಾತ್ರ ಮನದಲ್ಲಿ ಇಟ್ಟುಕೊಂಡಿರುತ್ತಾರೆ. ಬದಲಿಗೆ ತಮ್ಮ ಸಂಗಾತಿ, ಸಂಗಾತಿಯ ಕನಸು, ಕುಟುಂಬ ಎನ್ನುವುದರ ಬಗ್ಗೆ ಯಾವುದೇ ಚಿಂತನೆ ನಡೆಸುವುದಿಲ್ಲ. ಎಲ್ಲವೂ ಸ್ವಾರ್ಥಕ್ಕೆ ಅನುಗುಣವಾಗಿ ಇರುತ್ತವೆ.

ಅದೇ ಕೆಲವು ರಾಶಿಚಕ್ರದ ವ್ಯಕ್ತಿಗಳು ತಮ್ಮ ಜೀವನ ಪರ್ಯಂತ ಸಂಗಾತಿಗಾಗಿ ಇರುತ್ತಾರೆ. ಅವರೊಂದಿಗೆ, ಅವರ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ, ಗುರಿ ಸಾಧನೆಯ ವಿಚಾರದಲ್ಲಿ, ಕುಟುಂಬದ ರಕ್ಷಣೆಯಲ್ಲಿ ಸೇರಿದಂತೆ ಎಲ್ಲಾ ಹಂತದಲ್ಲೂ ಸಹಕಾರ ನೀಡುತ್ತಾರೆ. ತಮ್ಮ ಜೀವನ ಹಾಗೂ ಪ್ರಪಂಚವೇ ಸಂಗಾತಿ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಅದರಲ್ಲೂ ನಾಲ್ಕು ರಾಶಿಚಕ್ರದವರು ಈ ರೀತಿಯ ಭಾವನೆಗಳನ್ನು ಅಧಿಕವಾಗಿ ಹೊಂದಿರುತ್ತಾರೆ. ಈ ಪ್ರಮುಖವಾದ ನಾಲ್ಕು ರಾಶಿಚಕ್ರದವರು ನಿಮ್ಮ ಸಂಗಾತಿ ಅಥವಾ ಪ್ರೇಮಿಯಾಗಿದ್ದರೆ ಅದು ನಿಮ್ಮ ಅದೃಷ್ಟವಾಗುವುದು.

ಹಾಗಾದರೆ ಆ ನಾಲ್ಕು ರಾಶಿಚಕ್ರವರು ಯಾರು? ಅವರು ಯಾವ ರೀತಿಯಲ್ಲಿ ಸಂಗಾತಿಯೊಂದಿಗೆ ಸಹಕರಿಸುತ್ತಾರೆ? ಅವರೊಂದಿಗೆ ಪಾಲುದಾರರಾಗಿದ್ದರೆ ಯಾವ ಬಗೆಯ ಸಂತಸದ ಜೀವನ ದೊರೆಯುವುದು? ಎನ್ನುವುದನ್ನು ತಿಳಿಯಲು ಬೋಲ್ಡ್ ಸ್ಕೈ ವಿವರಿಸಿರುವ ಈ ನಾಲ್ಕು ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ವೃಷಭ:

ವೃಷಭ:

ಈ ರಾಶಿಯ ವ್ಯಕ್ತಿಗಳು ತಮ್ಮ ಸಂಗಾತಿ ಅಥವಾ ಪಾಲುದಾರರಿಗಾಗಿ ಸದಾ ಸಿದ್ಧರಾಗಿರುತ್ತಾರೆ. ನೀವು ಈ ರಾಶಿಚಕ್ರದವರೊಂದಿಗೆ ಪಾಲುದಾರರಾಗಿದ್ದೀರಿ ಎಂದಾದರೆ ಅದು ನಿಮ್ಮ ಅದೃಷ್ಟ ಎನ್ನಬಹುದು. ಇವರು ತಮ್ಮ ಸಂಗಾತಿಗಾಗಿ ಸಾಕಷ್ಟು ಪ್ರೀತಿಯನ್ನು ನೀಡುವರು. ಇವರು ಸಂಗಾತಿಗೆ ನೀಡುವ ಪ್ರೀತಿ-ವಾತ್ಸಲ್ಯಕ್ಕೆ ಯಾವುದೇ ಅಂತ್ಯವಿರುವುದಿಲ್ಲ ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸುತ್ತಾರೆ.

ಇವರು ಒಮ್ಮೆ ತಮ್ಮ ಸಂಗಾತಿಯ ಪ್ರೀತಿಯಲ್ಲಿ ಇಳಿದಿದ್ದಾರೆ ಅಥವಾ ಅವರನ್ನು ಪ್ರೀತಿಸಲು ಪ್ರಾರಂಭಿಸಿದರು ಎಂದರೆ ಅದು ಅವರ ಜೀವನದ ಅಂತ್ಯದ ವರೆಗೂ ಮುಂದುವರಿಯುತ್ತಲೇ ಇರುತ್ತದೆ. ಹಾಗಾಗಿ ಇವರ ಜೀವನದಲ್ಲಿ ನೀವು ಇಳಿದಿದ್ದೀರಿ ಎಂದಾದರೆ ಅದು ನಿಮ್ಮ ಜೀವನದ ಉತ್ತಮ ಸ್ಥಿತಿ. ನೀವು ಅವರ ಪ್ರೀತಿ ಅಥವಾ ಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸದಿರಿ.

ಕರ್ಕ:

ಕರ್ಕ:

ಈ ರಾಶಿಯ ವ್ಯಕ್ತಿಗಳು ತಮ್ಮ ಪಾಲುದಾರರನ್ನು ಅತ್ಯಂತ ಪ್ರೀತಿ ಹಾಗೂ ವಾತ್ಸಲ್ಯದಿಂದ ಕಾಣುತ್ತಾರೆ. ನಿರಂತರವಾದ ಪ್ರೀತಿಯನ್ನು ನಿಷ್ಠೆಯಿಂದ ನೀಡುವರು. ಕರ್ಕ ರಾಶಿಯ ಮೂಲ ರೂಪ ಏಡಿ. ಏಡಿಯಂತೆಯೇ ಇವರು ಸಹ ತಮ್ಮ ಸಂಬಂಧವನ್ನು ಪ್ರೀತಿಯಿಂದ ಹಿಡಿದಿಟ್ಟುಕೊಂಡಿರುತ್ತಾರೆ. ತಮ್ಮ ಪ್ರೀತಿಯ ಬಂಧನದಲ್ಲಿಯೇ ಸಂಗಾತಿಯನ್ನು ಬಂಧಿಸುತ್ತಾರೆ ಎನ್ನಲಾಗುವುದು. ಇವರೊಂದಿಗೆ ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಅಥವಾ ಸಂಗಾತಿಯನ್ನಾಗಿ ಪಡೆದರೆ ಅವರು ನಿಕಟವಾಗಿ ಹಿಡಿದಿಟ್ಟುಕೊಂಡಿರುತ್ತಾರೆ ಎನ್ನಲಾಗುವುದು.

ಆರಂಭದ ಹಂತದಲ್ಲಿ ಇವರಿಗೆ ಕೊಂಚ ಮುಜುಗರ ಅಥವಾ ಅಸ್ಪಷ್ಟ ಭಾವನೆಗಳು ಕಾಡಬಹುದು. ಆದರೆ ಒಂದು ನಿರ್ಧಾರ ಅಥವಾ ಪ್ರೀತಿಯಲ್ಲಿ ಸಿಲುಕಿದ ಮೇಲೆ ಸಂಬಂಧದಲ್ಲಿ ಸ್ಥಿರತೆಯನ್ನು ಕಾಣುತ್ತಾರೆ. ತಮ್ಮ ಜೀವನದ ಕೊನೆಯುಸಿರಿರುವ ತನಕವೂ ಸಂಗಾತಿಗಾಗಿಯೇ ಇರುತ್ತಾರೆ. ಉತ್ತಮ ಸಹಕಾರ ಹಾಗೂ ಪ್ರೀತಿಯ ಆರೈಕೆಯಲ್ಲಿ ಜೀವನವನ್ನು ಮುಂದುವರಿಸುವರು. ತಮ್ಮ ಪ್ರೀತಿಗಾಗಿಯೇ ಎಲ್ಲಾ ಕೆಲಸವನ್ನು ಮಾಡುವರು ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸುತ್ತಾರೆ.

ವೃಶ್ಚಿಕ:

ವೃಶ್ಚಿಕ:

ಇವರು ಎಲ್ಲವನ್ನೂ ನೀಡುವ ಅಥವಾ ಏನೂ ನೀಡದ ಸಂಗಾತಿಯಾಗಿಯೂ ಇರುವ ಸಾಧ್ಯತೆಗಳಿರುತ್ತದೆ. ಈ ರಾಶಿಯವರು ಕೆಲವು ಸಂಗತಿಗಳೊಂದಿಗೆ ಸ್ಪಷ್ಟವಾಗಿರುತ್ತಾರೆ. ಪ್ರತಿಶತ ನೂರರಷ್ಟು ನಿಷ್ಠೆ, ಭಕ್ತಿ, ಪ್ರೀತಿ, ನಿಸ್ವಾರ್ಥ ತೋರುತ್ತಾರೆ ಎಂದಾದರೆ ಅವರಿಗಾಗಿ ಇವರು ತಮ್ಮ ಜೀವನವನ್ನು ಮುಡುಪಾಗಿ ಇಡುತ್ತಾರೆ. ಅವರ ಪ್ರೀತಿಯನ್ನು ಸದಾ ಹಂಬಲಿಸುವುದರ ಮೂಲಕವೇ ಅವರಿಗೆ ಪ್ರೀತಿಯ ಧಾರೆ ಎರೆಯುತ್ತಾರೆ. ನಿಷ್ಕಲ್ಮಷ ಪ್ರೀತಿಯೊಂದಿಗೆ ಅವರೊಂದಿಗೆ ಸಾಯಲು ಬಯಸುತ್ತಾರೆ ಎನ್ನಲಾಗುವುದು.

ಈ ರಾಶಿಚಕ್ರದವರು ನಿಶ್ಚಿತ ಚಿಹ್ನೆಯವರು. ಶ್ರಮಜೀವಿಗಳು ಹಾಗೂ ಜೀವನದಲ್ಲಿ ತಮ್ಮದೇ ಆದ ಧ್ಯೇಯ ಹಾಗೂ ಗುರಿಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಸಮಾಜದಲ್ಲಿ ಸಾಕಷ್ಟು ಸ್ಥಾನ ಮಾನ ಹಾಗೂ ಹೆಸರನ್ನು ಹೊಂದಲು ಬಯಸುವ ವ್ಯಕ್ತಿಗಳು. ಇವರು ನೈಸರ್ಗಿಕವಾಗಿಯೇ ಅತ್ಯುತ್ತಮ ಪ್ರೇಮಿ ಅಥವಾ ಸಂಗಾತಿಯಾಗಿ ಜವಾಬ್ದಾರಿಯನ್ನು ನಿರ್ವಹಿಸುವ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯವರನ್ನು ನೀವು ಪಾಲುದಾರರನ್ನಾಗಿ ಪಡೆದಿದ್ದೀರಿ, ನಿಮ್ಮ ಪ್ರೀತಿಯನ್ನು ನಿಷ್ಕಲ್ಮಷವಾಗಿ ತೋರುವಿರಿ ಎಂದಾದರೆ ನಿಮಗಾಗಿ ಇವರು ಏನು ಮಾಡಲು ಸಹ ಸಿದ್ಧರಾಗಿರುತ್ತಾರೆ. ಅದು ನಿಜವಾಗಿಯೂ ಒಂದು ದೊಡ್ಡ ಸಾಹಸವಾಗಿರುತ್ತದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.

ಮೀನ:

ಮೀನ:

ತಮ್ಮ ಪಾಲುದಾರರ ಜೀವನಪರ್ಯಂತ ಸಂಗಾತಿಯಾಗಿ ಸಾಗುವ ಹಾಗೂ ಅವರೊಂದಿಗೆ ಜೀವನದ ಕೊನೆಯುಸಿರನ್ನು ಹೊಂದುವ ವ್ಯಕ್ತಿಗಳಾಗಿರುತ್ತಾರೆ. ಶುದ್ಧವಾದ ಪ್ರೀತಿ ಹಾಗೂ ರಕ್ಷಣೆಯ ಭಾವನೆ ನೀಡುವುದರ ಮೂಲಕ ಬದ್ಧರಾಗಿರುತ್ತಾರೆ. ತ್ಯಾಗದ ಸಂಕೇತವಾದ ಮೀನು ಇವರ ಚಿಹ್ನೆಯನ್ನು ಪ್ರತಿನಿಧಿಸುತ್ತದೆ. ಅಂತೆಯೇ ಇವರು ಸಹ ಜೀವನದಲ್ಲಿ ಸಂಗಾತಿ ಅಥವಾ ಪಾಲುದಾರರಿಗಾಗಿ ಸಾಕಷ್ಟು ತ್ಯಾಗ ಮಾಡುವುದರ ಮೂಲಕ ಪ್ರೀತಿಯನ್ನು ನೀಡುವರು. ಜೊತೆಗೆ ತಮ್ಮ ಪ್ರೀತಿ ಶಾಶ್ವತವಾಗಿರುವಂತೆ ಕಾಯ್ದುಕೊಳ್ಳುವರು. ಅತ್ಯಂತ ಸಹಾನುಭೂತಿಯನ್ನು ಹೊಂದಿರುವ ವ್ಯಕ್ತಿಗಳಾಗಿರುವುದರಿಂದ ಪಾಲುದಾರರ ಅಗತ್ಯಗಳನ್ನು ತಾವೇ ಸೂಕ್ಷ್ಮವಾಗಿ ಪರಿಗಣಿಸಿ ಸಹಕರಿಸುತ್ತಾರೆ.

ಇವರು ಸಾಮಾನ್ಯವಾಗಿ ತಮ್ಮ ಆದರ್ಶಗಳಿಗೆ ಅನುಗುಣವಾಗಿರುವ ಸಂಗಾತಿಯನ್ನು ಹುಡುಕಲು ಬಯಸುತ್ತಾರೆ. ಧಯಾವಂತರು, ದೃಢ ಚಿತ್ತರು ಹಾಗೂ ಸಹಕಾರ ನೀಡುವವರು ಆದ ಇವರು ತಮ್ಮ ಸಂಗಾತಿಗೆ ಎಲ್ಲಾ ಬಗೆಯ ಸಹಕಾರ ಹಾಗೂ ಪ್ರೋತ್ಸಾಹ ನೀಡುವುದರ ಮೂಲಕ ಉನ್ನತ ಸ್ಥಾನದಲ್ಲಿ ಇರುವಂತೆ ಮಾಡುವರು. ಸಂಗಾತಿಗೆ ಅತ್ಯುತ್ತಮ ವಿನೋದ ಹಾಗೂ ಸಂತೋಷವನ್ನು ನೀಡುವುದರ ಮೂಲಕ ಅವರ ಆಸೆಯನ್ನು ಪೂರೈಸುವರು. ಇವರು ನಿಮ್ಮ ಜೀವನದ ಸಂಗಾತಿಯಾಗಿದ್ದಾರೆ ಅಥವಾ ಆಗಲಿದ್ದಾರೆ ಎಂದರೆ ನಿಮ್ಮ ಸಂಗಾತಿಯ ಕನಸು ಪರಿಪೂರ್ಣವಾಗುವುದು ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸುತ್ತಾರೆ.

Read more about: life zodiac signs ಜೀವನ
English summary

This four zodiac is always with a partner

Marriage is the most crucial decision of your life. Therefore, everything has to be perfect. Amongst all the other things, the choice of your life partner matters the most.
X
Desktop Bottom Promotion