Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಿರರ್ಗಳವಾಗಿ ಪಂಜಾಬಿ ಮಾತನಾಡುವ ಚೀನಾದ ಹುಡುಗಿ!
ವಿದೇಶಕ್ಕೆ ಪ್ರಯಾಣಿಸಿದಾಗ ಅಥವಾ ವಿದೇಶದಲ್ಲಿ ನೆಲೆನಿಲ್ಲಲು ಹೋದಾಗ ನಮ್ಮ ದೇಶ, ಆಹಾರ ಮತ್ತು ಇಲ್ಲಿನ ಜನರು, ಭಾಷೆ ತುಂಬಾ ನೆನಪಾಗುವುದು. ಈ ವಿಡಿಯೋ ತುಂಬಾ ಒಳ್ಳೆಯದಿದೆ. ಪಂಜಾಬ್ ನ ವ್ಯಕ್ತಿಯೊಬ್ಬ ವಿದೇಶಕ್ಕೆ ಹೋದಾಗ ಆತನಿಗೆ ಅಲ್ಲಿ ಪಂಜಾಬಿ ಮಾತನಾಡುವ ಚೀನಾದ ಹುಡುಗಿಯೊಬ್ಬಳು ಸಿಗುವಳು.
ಈ ವಿಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿ 43ರ ಹರೆಯದ ರಿಶ್ವಂತ್ ಸಿಂಗ್ ರಾಂಧವ. ಪಂಜಾಬಿ ಭಾಷೆಯಲ್ಲಿ ಆಕೆಗೆ ಇರುವಂತಹ ಪಾಂಡಿತ್ಯ ನೋಡಿದ ರಾಂಧವ ಇದನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ ಮತ್ತು ಅದನ್ನು ಫೇಸ್ ಬುಕ್ ಗೆ ಹಾಕಿದ್ದಾರೆ.
ಈ ವಿಡಿಯೋ ವೈರಲ್ ಆಗಿದೆ ಎಂದು ತಿಳಿದ ಲಿಮ್ ತುಂಬಾ ಅಚ್ಚರಗೊಳಗಾಗಿದ್ದಾಳೆ. ಆಕೆಗೆ ಭಾಷೆಯ ಮೇಲಿರುವ ಹಿಡಿತದಿಂದ ಹೆಚ್ಚಿನ ಜನರು ಆಕರ್ಷಿತರಾಗಿದ್ದಾರೆ ಮತ್ತು ಆಕೆ ಇದರ ಬಗ್ಗೆ ಸಂದರ್ಶನ ಕೂಡ ನೀಡುತ್ತಲಿದ್ದಾಳೆ. ರೆಸ್ಟೋರೆಂಟ್ ಒಂದರಲ್ಲಿ ಚಹಾ ಕುಡಿಯಲು ಹೋದ ರಿಶ್ವಂತ್ ಸಿಂಗ್ ರಾಂಧವರನ್ನು ಚೀನಾದ ಈ ಹುಡುಗಿ ಪಂಜಾಬಿಯಲ್ಲಿಯೇ ಸ್ವಾಗತಿಸಿದಳು. ಇವರಿಬ್ಬರು ಮಾತನಾಡಿರುವ ವಿಡಿಯೋವನ್ನು ರೆಕಾರ್ಡ್ ಮಾಡಲು ಅವರು ಬಯಸಿದರು. ಯಾಕೆಂದರೆ ಇದು ತುಂಬಾ ವಿಶೇಷ ಮತ್ತು ನಿರರ್ಗಳವಾಗಿ ಪಂಜಾಬಿ ಮಾತನಾಡುತ್ತಿದ್ದಳು.

ಇಷ್ಟು ಚೆನ್ನಾಗಿ ಪಂಜಾಬಿ ಮಾತನಾಡಲು ಎಲ್ಲಿ ಕಲಿತಿರುವೆ ಎಂದು ಆಕೆಯಲ್ಲಿ ರಾಂಧವ ಕೇಳಿದಾಗ, ನನಗೆ ಇದನ್ನು ಗೆಳೆತಿಯೊಬ್ಬಳು ಕಳೆದ ಐದು ವರ್ಷಗಳಿಂದ ಕಲಿಸುತ್ತಿದ್ದಾಳೆ. ಪಂಜಾಬಿಯನ್ನು ಮದುವೆಯಾಗಲು ಬಯಸುತ್ತಿಯಾ ಎಂದು ಕೇಳಿದಾಗ, ಆಕೆ ತುಂಬಾ ನಾಚುತ್ತಾ ಉತ್ತರಿಸಿ, ನೀವು ಕಾದು ನೋಡಿ ಎಂದಳಷ್ಟೇ!
ತನ್ನ ಪಂಜಾಬಿ ಗೆಳೆಯರಿಗೆ ಆಕೆಯ ನಂಬರ್ ನೀಡಲು ಅನುಮತಿ ಕೇಳುವುದು ತಮಾಷೆಯಾಗಿತ್ತು. ಆದರೆ ಅವರು ತುಂಬಾ ತೊಂದರೆ ನೀಡಬಹುದು ಎನ್ನುವ ಕಾರಣಕ್ಕಾಗಿ ಆಕೆ ನಿರಾಕರಿಸುವಳು. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
