Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮದುವೆ ಮಂಟಪಕ್ಕೆ ಹಾರ್ಲೆ ಬೈಕ್‌ನಲ್ಲಿ ಬಂದ ವಧು! ವಿಡಿಯೋ ವೈರಲ್..
ಜೀವಮಾನದಲ್ಲಿ ಒಂದೇ ಒಂದು ಸಲ ಬರುವಂತಹ ಮದುವೆ ಸಂಭ್ರಮವನ್ನು ತುಂಬಾ ವಿಭಿನ್ನವಾಗಿ ಆಚರಿಸಬೇಕೆಂದು ಪ್ರತಿಯೊಬ್ಬರು ಬಯಸುವರು. ಅದರಲ್ಲೂ ಇಂದಿನ ದಿನಗಳಲ್ಲಿ ಎಲ್ಲರ ಗಮನ ಸೆಳೆಯಲು ಪ್ರತಿಯೊಬ್ಬ ವಧು, ವರರು ಪ್ರಯತ್ನಿಸುವುದು ಇದೆ. ಮದುವೆ ಆಮಂತ್ರಣ ಪತ್ರಿಕೆಯಿಂದ ಹಿಡಿದು, ಮದುವೆ ಮಂಟಪ ಮತ್ತು ಮದುವೆಗೆ ಮೊದಲು ಸ್ನೇಹಿತರಿಗೆ ನೀಡುವಂತಹ ಪಾರ್ಟಿ ಹೀಗೆ ಪ್ರತಿಯೊಂದು ವಿಭಿನ್ನವಾಗಿರಬೇಕೆಂದು ಯುವಜನತೆ ಬಯಸುವರು.
ಕೆಲವರು ಮಂಟಪಕ್ಕೆ ಕುದುರೆ ಗಾಡಿಯಲ್ಲಿ ಬಂದರೆ, ಇನ್ನು ಕೆಲವರು ಜೆಸಿಬಿಯಲ್ಲಿ ಬಂದಿರುವುದು ಇದೆ! ಆದರೆ ಇಲ್ಲೊಬ್ಬಳು ವಧು ಮದುವೆಗೆ ಹರ್ಲೆ ಬೈಕ್‌ನಲ್ಲಿ ಬಂದಿದ್ದಾಳೆ. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮದುವೆಯ ಉಡುಗೆಯಲ್ಲೇ ಇರುವ ವಧು ಹರ್ಲೆ ಬೈಕ್ ನ್ನು ಚಲಾಯಿಸುತ್ತಾ ಮದುವೆ ಹಾಲ್ ಗೆ ಬರುವ ವೀಡಿಯೋ ಸಾಕಷ್ಟು ಜನರ ಮೆಚ್ಚುಗೆ ಪಡೆದಿದೆ. ತನಗೆ ಹರ್ಲೆ ತುಂಬಾ ಇಷ್ಟ. ಕಳೆದ ಐದು ವರ್ಷಗಳಿಂದ ನಾನು ಇದನ್ನು ಚಲಾಯಿಸುತ್ತಿದ್ದೇನೆ. ತನ್ನ ಸಂಗಾತಿಗೆ ಕೂಡ ಹರ್ಲೆ ಎಂದರೆ ಇಷ್ಟ. ಆತ ಕೂಡ ಇದನ್ನು ಚಲಾಯಿಸುತ್ತಾನೆ ಎಂದು ಹೆಸರನ್ನು ಗೌಪ್ಯವಾಗಿಟ್ಟಿರುವಂತಹ ವಧು ಹೇಳಿದ್ದಾಳೆ.
ತನ್ನ ಭಾವಿ ಪತಿಯು ಹರ್ಲೆ ಜತೆಗೆ ಕೆಲವೊಂದು ಸುಂದರ ಪ್ರದೇಶಗಳಲ್ಲಿ ಫೋಟೊ ತೆಗೆಸಿ ಕೊಂಡಿರುವುದನ್ನು ನಾನು ನೋಡಿದ್ದೆ. ಇದರಿಂದ ಆತ ನನಗೋಸ್ಕರ ಭೂಮಿ ಮೇಲಿರುವ ವ್ಯಕ್ತಿಯೆಂದು ತಿಳಿದು ಮದುವೆಗೆ ಒಪ್ಪಿಕೊಂಡೆ ಎಂದು ವಧು ಹೇಳಿದ್ದಾಳೆ.
ವಧು ಹರ್ಲೆಯಲ್ಲಿ ಮಂಟಪಕ್ಕೆ ಬಂದಿರುವುದು ಸಾಹಸಿ ಪ್ರವೃತಿ ಹಾಗೂ ವಿಶೇಷವಾಗಿರುವುದನ್ನು ಮಾಡಲು ಬಯಸುವ ಜನರಿಗೆ ಪ್ರೇರಣೆಯಾಗಬಹುದು. ಇಂತಹ ವಿಶೇಷ ವಧು ಅಥವಾ ವರರ ಬಗ್ಗೆ ನಿಮಗೆ ತಿಳಿದಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ. ಇದೇ ವಿಭಾಗದಲ್ಲಿ ಇನ್ನಷ್ಟು ವೀಡಿಯೊಗಳ ನಿರೀಕ್ಷೆಯಲ್ಲಿರಿ...



Click it and Unblock the Notifications
