ಯಾವ್ಯಾವ ರಾಶಿಯವರ ಸ್ವಭಾವ, ಗುಣ ನಡತೆ ಹೇಗಿರುತ್ತದೆ ನೋಡಿ..

Posted By: Deepu
Subscribe to Boldsky

ಎಲ್ಲಾ ರಾಶಿಗಳು ಒಂದೇ ರೀತಿಯ ಗುಣಸ್ವಭಾವ ಹೊಂದಿರಲ್ಲ. ಆದರೆ ಕೆಲವೊಂದು ರಾಶಿಗಳಲ್ಲಿ ಸಾಮ್ಯತೆ ಇರುವುದು. 12 ರಾಶಿಗಳಲ್ಲಿ ಕೆಲವು ರಾಶಿಗಳು ತುಂಬಾ ಸಮಾನವಾಗಿರುವ ರಾಶಿಗಳು ಇವೆ. ಜ್ಯೋತಿಷ್ಯ ಶಾಸ್ತ್ರದಿಂದ ಒಬ್ಬ ವ್ಯಕ್ತಿಯ ಗುಣಸ್ವಭಾವವನ್ನು ಆತನ ರಾಶಿಯಿಂದ ತಿಳಿದುಕೊಳ್ಳಬಹುದಾಗಿದೆ.

ಹೀಗೆ ತಿಳಿದುಕೊಂಡರೆ ಅವರೊಂದಿಗೆ ವ್ಯವಹರಿಸುವಾಗ ನಾವು ಎಚ್ಚರಿಕೆಯಿಂದ ಇರಬಹುದು. ಇನ್ನು ಕೆಲವು ರಾಶಿಯವರು ತುಂಬಾ ಕೋಪಿಷ್ಠರು ಆಗಿರುವರು. ಇಂತಹ ಜನರೊಂದಿಗೆ ಮಾತನಾಡುವಾಗ ತುಂಬಾ ತಾಳ್ಮೆ ವಹಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ನಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ನಡೆಯುತ್ತದೆ.

ಹಾಗೆಯೇ ಕೆಲವು ಕೆಲಸಗಳನ್ನು ನಮ್ಮ ರಾಶಿಚಕ್ರದ ಅನುಗುಣವಾಗಿ ಮಾಡುವುದಿಲ್ಲ. ಹಾಗಾದರೆ ಆ ಕಲಸಗಳು ಯಾವವು? ನಿಮ್ಮ ರಾಶಿಚಕ್ರದ ಅನುಗುಣವಾಗಿ ಯಾವ ಕೆಲಸಗಳಿಂದ ನೀವು ದೂರ ಇರುತ್ತೀರಿ? ಅಪ್ಪಿ ತಪ್ಪಿಯೂ ಆ ಕೆಲಸವನ್ನು ಮಾಡಲು ಮುಂದಾಗುವುದಿಲ್ಲ ಎನ್ನುವ ವಿಚಾರಗಳು ಯಾವವು? ಎನ್ನುವುದನ್ನು ಈ ಮುಂದಿನ ಲೇಖನದಲ್ಲಿ ವಿವರಿಸಲಾಗಿದೆ ಪರಿಶೀಲಿಸಿ.... 

ಮೇಷ (Mar 29 - Apr 19)

ಮೇಷ (Mar 29 - Apr 19)

ಮೇಷ ರಾಶಿಯವರು ಡೈನಾಮಿಕ್ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ನೈಸರ್ಗಿಕವಾಗಿಯೇ ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಇವರ ನಿಯಂತ್ರಣಕ್ಕೆ ಅಂತರ್ಗತವಾಗಿಯೇ ಅನೇಕ ವಿಚಾರಗಳನ್ನು ಅರಿತಿರುತ್ತಾರೆ. ಎಂತಹ ಸನ್ನಿವೇಶಗಳು ಎದುರಾದರೂ ಅದನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ.ಈ ರಾಶಿಯ ಜನರು ಸಾಮಾನ್ಯವಾಗಿ ದಿಟ್ಟರೂ, ಹುರುಪುಳ್ಳವರೂ ಆತ್ಮ ವಿಶ್ವಾಸವುಳ್ಳವರೂ ಆಗಿರುತ್ತಾರೆ. ಯಾವುದೇ ಹೊಸ ಕಾರ್ಯವನ್ನು ಇವರು ಥಟ್ಟನೇ ಕೈಗೊಳ್ಳದೇ, ಇದರ ಸಾಧಕ ಬಾಧಕಗಳನ್ನು ಪರಿಗಣಿಸಿಯೇ ಮುಂದುವರೆಯುವಷ್ಟು ತಾಳ್ಮೆಯನ್ನು ತೋರುತ್ತಾರೆ. ಸರಿ ಎನಿಸಿದ ಬಳಿಕವೇ ಧೈರ್ಯದಿಂದ ಮುನ್ನುಗ್ಗುತ್ತಾರೆ.

ವೃಷಭ

ವೃಷಭ

ಇವರು ಅನುಮತಿ ಇಲ್ಲದೆ ಕೆಲಸ ಮಾಡುವವರನ್ನು ದ್ವೇಷಿಸುತ್ತಾರೆ. ಇವರನ್ನು ಕೇಳಿಯೇ ಬೇರೆಯವರು ಕೆಲಸ ಮಾಡಬೇಕು ಎಂದುಕೊಳ್ಳುತ್ತಾರೆ. ಇವರು ಯಾವುದೇ ಮೂಲಭೂತ ಆಲೋಚನೆಯನ್ನು ಮನರಂಜಿಸುವುದಿಲ್ಲ. ಜೊತೆಗೆ ಹಳೆಯ ಕಲ್ಪನೆಯನ್ನು ಬದಲಾಯಿಸುವುದಿಲ್ಲ.ಈ ರಾಶಿಯ ಜನರು ಸ್ಥಿತಪ್ರಜ್ಞರೂ, ಜವಾಬ್ದಾರಿಯುತರೂ, ಸಾವಧಾನಿಗಳೂ ಮತ್ತು ವಾಸ್ತವವನ್ನು ಆಧರಿಸಿ ಮುಂದುವರೆಯುವವರೂ ಆಗಿರುತ್ತಾರೆ. ಆದರೆ ಮೇಶರಾಶಿಯವರಿಗಿಂತ ಕಡಿಮೆ ಧೈರ್ಯ ತೋರುತ್ತಾರೆ.

 ಮಿಥುನ

ಮಿಥುನ

ಇವರು ಪ್ರಪಂಚಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಟೀಕಿಸುವುದನ್ನು ಅವರು ಇಷ್ಟಪಡುವುದಿಲ್ಲ. ಜೊತೆಗೆ ಆ ಕೆಲಸವನ್ನು ಅವರು ಮಾಡಲು ಮುಂದಾಗುವುದಿಲ್ಲ. ಅಲ್ಲದೆ ಜೀವನವನ್ನು ಎಂದಿಗೂ ಅವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಈ ರಾಶಿಯವರು ಎಲ್ಲಾ ವಿಷಯದಲ್ಲಿ ತಮ್ಮ ಕುತೂಹಲವನ್ನು ಪ್ರಕಟಿಸಿ ತಾವು ಎಲ್ಲೆಲ್ಲೂ ಸಲ್ಲುವವರು ಎಂಬ ಭಾವನೆಯನ್ನು ಹೊಂದಿರುತ್ತಾರೆ. ಆದರೆ ಯಾವುದೇ ಒಂದು ವಿಷಯದಲ್ಲಿ ತಮ್ಮ ಕುತೂಹಲವನ್ನು ಕೇಂದ್ರೀಕರಿಸಲು ವಿಫಲರಾಗುತ್ತಾರೆ. ಇವರಿಗೆ ಅತಿ ಆಕರ್ಷಕವಾಗಿ ಕಂಡ ವಿಷಯದಲ್ಲಿ ಮುನ್ನುಗ್ಗಲು ಇವರು ಧೈರ್ಯ ತೋರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇವರು ಯಾರೂ ಮುನ್ನುಗ್ಗದೆಡೆ ಮುನ್ನುಗ್ಗುವ ಧೈರ್ಯವನ್ನೂ ತೋರುತ್ತಾರೆ.

ಕರ್ಕ

ಕರ್ಕ

ಇವರ ಮೊದಲ ಆದ್ಯತೆ ಕುಟುಂಬ ಮತ್ತು ಸ್ನೇಹಿತರು. ಇವರು ತಮ್ಮನ್ನು ಅವರಿಗಾಗಿಯೇ ಸಮರ್ಪಿಸಿಕೊಳ್ಳುತ್ತಾರೆ. ಇವರಿಗೆ ಮುಖ್ಯ ಆದವರನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಅಲ್ಲದೆ ಇವರು ತಮ್ಮೆಲ್ಲಾ ಸಮಯವನ್ನು ಕೆಲಸದಲ್ಲಿಯೇ ತೊಡಗಿಸಿಕೊಳ್ಳುವುದಿಲ್ಲ. ಈ ರಾಶಿಯ ಜನರು ಅತಿ ಸೂಕ್ಷ್ಮಮತಿಗಳಾಗಿದ್ದು ಹೆಚ್ಚಿನ ಸಂವೇದನಾಶಾಲಿಗಳೂ ಆಗಿರುತ್ತಾರೆ. ವೈಯಕ್ತಿಕವಾಗಿ ಇದು ಅಗತ್ಯವಿಲ್ಲದಿರುವ ಹೊರತು ಇವರು ಹೊಸ ವಿಷಯದೆಡೆ ಮುನ್ನುಗ್ಗಲು ಧೈರ್ಯ ತೋರುವುದಿಲ್ಲ.

ಸಿಂಹ

ಸಿಂಹ

ಇವರು ಸದಾ ಅಗತ್ಯತೆ ಹಾಗೂ ಪ್ರಗತಿಯೆಡೆಗೆ ನಡೆಯಲು ಬಯಸುತ್ತಾರೆ. ಯಾವ ಮಾಹಿತಿಯನ್ನು ನಿರ್ಲಕ್ಷಿಸುವುದಿಲ್ಲ. ಜೊತೆಗೆ ಯಾವುದೇ ಮಾಹಿತಿಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅಲ್ಲದೆ ಈ ರಾಶಿಯ ಜನರು ಜನ್ಮತಃ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಇವರು ಸದಾ ಆಕರ್ಷಣೆಯ ಕೇಂದ್ರವಾಗಿರಬೇಕು ಎಂದು ಆಶಿಸುತ್ತಾರೆ. ಎಲ್ಲರೂ ಇವರನ್ನು ಇಷ್ಟಪಡಬೇಕು ಎಂದು ಬಯಸುತ್ತಾರೆ. ಇದೇ ಕಾರಣಕ್ಕೆ ಇವರು ತಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ಹೊರಗೆಡವುವ ಧೈರ್ಯ ತೋರುತ್ತಾರೆ.

ಕನ್ಯಾ

ಕನ್ಯಾ

ಇವರು ತಾವು ಹೇಗೆ ಪ್ರಗತಿ ಕಂಡೆವು? ಬದುಕಿಗೆ ಸಹಾಯ ಮಾಡಿದವರನ್ನು ಎಂದಿಗೂ ಮರೆಯುವುದಿಲ್ಲ. ಇವರು ಜೀವನದಲ್ಲಿ ಸರಳವಾದ ವಿಷಯಗಳನ್ನು ಆನಂದಿಸುತ್ತಾರೆ. ಈ ರಾಶಿಯ ಜನರು ಶಿಸ್ತುಬದ್ದರಾಗಿದ್ದು ತಮ್ಮ ನಿತ್ಯದ ಚಟುವಟಿಕೆಯಲ್ಲಿ ಒಪ್ಪ ಓರಣಗಳನ್ನೇ ಬಯಸುತ್ತಾರೆ. ಇವರಿಗೆ ತಮ್ಮ ಕೆಲಸದಲ್ಲಿಯೇ ಆಗಲಿ ಸಂಬಂಧಪಟ್ಟ ಇತರರಿಂದ ಪಡೆಯುವ ಸಹಾಯಗಳೇ ಆಗಲಿ ಓರಣವಾಗಿರಬೇಕು. ಇದಕ್ಕಾಗಿ ಇವರು ಕಠಿಣ ಕ್ರಮಗಳನ್ನು ಕೈಗೊಳ್ಳುವ ಧೈರ್ಯವನ್ನು ಪ್ರಕಟಿಸುತ್ತಾರೆ.

ತುಲಾ

ತುಲಾ

ಇವರು ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ. ಆದರೆ ಬಹು ಬೇಗ ಅವರಲ್ಲಿ ಒಳ್ಳೆಯವರನ್ನು ಆಯ್ದುಕೊಳ್ಳುತ್ತಾರೆ. ಇವರು ತಮ್ಮ ಪ್ರಪಂಚವನ್ನು ಸಮತೋಲನದಲ್ಲಿ ನಡೆಸಲು ಮುಂದೆ ಸಾಗುತ್ತಾರೆ. ಅವರೊಂದಿಗೆ ಹೊಂದಾಣಿಕೆ ಯಾಗದವರನ್ನು ಅವರು ತಡೆದು ನಿಲ್ಲಿಸುವ ಪ್ರಯತ್ನಕ್ಕೆ ಹೋಗುವುದಿಲ್ಲ. ಇನ್ನು ಈ ರಾಶಿಯ ಜನರು ತಮ್ಮ ಸಾಮರ್ಥ್ಯದ ಮಿತಿಗೆ ಹೊರತಾದ ಕಾರ್ಯಗಳಿಗೆ ಕೈ ಹಾಕಲು ಹೋಗುವುದೇ ಇಲ್ಲ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಮನುಷ್ಯರಿಗೆ ಸಾಮಾನ್ಯವಾಗಿದ್ದರೂ ಈ ರಾಶಿಯ ಜನರು ಸರಿಯಾದ ನಿರ್ಧಾರವನ್ನೇ ಕೈಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ.

ವೃಶ್ಚಿಕ

ವೃಶ್ಚಿಕ

ಇವರು ಸುಳ್ಳು ಮತ್ತು ಅನ್ಯಾಯಕ್ಕೆ ಎಂದಿಗೂ ಮನ್ನಣೆ ಮತ್ತು ಕ್ಷಮೆಯನ್ನು ನೀಡುವುದಿಲ್ಲ. ತಮ್ಮ ಪ್ರೀತಿ ಪಾತ್ರರಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಅದರಂತೆಯೇ ನಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯ ಜನರು ವಿವಿಧ ಗುಣಗಳನ್ನು ಹೊಂದಿದ್ದು ಧೈರ್ಯವಂತರಾಗಿರುವುದು ಇದರಲ್ಲೊಂದು. ಸಾಮಾನ್ಯವಾಗಿ ತಮ್ಮ ಚಟುವಟಿಕೆಯ ಬಗ್ಗೆ ಇವರು ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಾರೆ. ಇದೇ ಕಾರಣಕ್ಕೆ ಇವರು ಜೀವನದ ಇನ್ನೊಂದು ಮಗ್ಗುಲಿನ ಸಂತೋಷವನ್ನು ಕಳೆದುಕೊಳ್ಳುತ್ತಾರೆ. ಹೀಗೆ ಕಳೆದುಕೊಂಡಿರುವುದನ್ನು ಪಡೆಯಲು ಇವರು ಮುನ್ನುಗ್ಗಲು ಹೆಚ್ಚಾಗಿ ಯತ್ನಿಸುವುದಿಲ್ಲ.

 ಧನು

ಧನು

ಇವರು ಏನನ್ನಾದರೂ ಹೇಳಿದರೆ ಅದರಂತೆಯೇ ನಡೆದುಕೊಳ್ಳುತ್ತಾರೆ. ಎಂದಿಗೂ ಅದನ್ನು ಮೀರುವುದಿಲ್ಲ. ಒಮ್ಮೆ ಮನಸ್ಸು ಮಾಡಿದ ವಿಚಾರದ ಕುರಿತು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹಾಗೊಮ್ಮೆ ಅವರ ಪದಗಳು ಇತರರಿಗೆ ನೋವನ್ನುಂಟುಮಾಡಿದರೆ ಅದರ ಬಗ್ಗೆ ಮಾತನಾಡಿ ಬಗೆ ಹರಿಸುತ್ತಾರೆ. ಈ ರಾಶಿಯವರು ಸಾಮಾನ್ಯವಾಗಿ ಎಲ್ಲಕೂ ಸೈ ಎನ್ನುವ ಮನೋಭಾವ ಹೊಂದಿರುತ್ತಾರೆ. ಇಲ್ಲ, ಸಾಧ್ಯವಿಲ್ಲ ಎಂದು ಹೇಳುವುದನ್ನು ಇವರು ಇಷ್ಟಪಡುವುದಿಲ್ಲ. ಹೀಗೆ ಹೇಳಬೇಕಾದರೆ ಏಕಾಗಿ ಹೇಳಬೇಕಾಗಿ ಬಂತು? ಇದನ್ನು ಹೇಳದಿರಲು ಏನು ಮಾಡಬಹುದು ಎಂಬತ್ತ ಅವರ ಚಿಂತನೆ ಹರಿಯುತ್ತದೆ ಹಾಗೂ ಈ ನಿಟ್ಟಿನಲ್ಲಿ ಮುಂದುವರೆಯುವ ಧೈರ್ಯವನ್ನು ಪ್ರಕಟಿಸುತ್ತಾರೆ.

ಮಕರ

ಮಕರ

ಇವರು ಬಹಳ ಗಟ್ಟಿ ಮನಸ್ಸಿನವರು ಎಂದು ಹೇಳಬಹುದು. ಯಾವುದೇ ತೊಂದರೆ ಅಥವಾ ಅಪಘಾತಗಳಿಂದ ಅವರು ಎಂದಿಗೂ ಸಿಲುಕಿಕೊಳ್ಳುವುದಿಲ್ಲ. ಅವರು ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಾಣುವವರೆಗೂ ಹೋರಾಡುತ್ತಾರೆ. ಈ ರಾಶಿಯ ಜನರು ಸಾಮಾನ್ಯವಾಗಿ ನಿಯಮಗಳನ್ನು ಪಾಲಿಸುವವರಾಗಿದ್ದು ಉತ್ತಮ ಪ್ರೇಮಿಗಳೂ ಆಗಿರುತ್ತಾರೆ. ಇವರು ಸಂಪ್ರದಾಯಸ್ಥರೂ, ಹಠಮಾರಿಗಳೂ ಆಗಿರುತ್ತಾರೆ. ಹೊಸ ವಿಷಯಕ್ಕೆ ಇವರನ್ನು ಒಲಿಸುವುದು ಮತ್ತು ಬದಲಿಸುವುದೇ ಬಹಳ ತ್ರಾಸದಾಯಕ ಕಾರ್ಯವಾಗಿದೆ.

ಕುಂಬ

ಕುಂಬ

ಇವರು ಎಂದಿಗೂ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಾರೆ. ಇವರು ತಮ್ಮ ಸಾಮಥ್ರ್ಯವನ್ನು ಅರಿತಿರುತ್ತಾರೆ. ಜೊತೆಗೆ ಅದನ್ನು ಹಾಗೆಯೇ ಸ್ವೀಕರಿಸುತ್ತಾರೆ. ಇವರು ಯಶಸ್ಸಿನ ತುದಿಯನ್ನು ಎಂದಿಗೂ ಮುಟ್ಟಲಾರರು. ಇವರು ತಮ್ಮ ಮೆದುಳು ಮತ್ತು ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅಂದರೆ ಭಾವನಾತ್ಮಕವಾದ ಯಾವುದೇ ವಿಷಯವನ್ನು ಇವರು ಎದುರಿಸಲು ಸಮರ್ಥರಾಗಿದ್ದು ಇದಕ್ಕಾಗಿ ಧೈರ್ಯದಿಂದ ಮುನ್ನುಗ್ಗಲು ಸದಾ ಸಿದ್ಧರಿರುತ್ತಾರೆ.

ಮೀನ

ಮೀನ

ಇವರು ಋಣಾತ್ಮಕತೆಯನ್ನು ನಿವಾರಿಸಲು ಒಂದು ಅಂತರ್ಗತ ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಹಾಗೊಮ್ಮೆ ಏನಾದರೂ ತಪ್ಪು ಮಾಡುತ್ತಿದ್ದಾರೆ ಎಂದಾದರೆ ಅವರ ಮೇಲೆ ನಿಗಾ ಇಡುತ್ತಾರೆ. ಈ ರಾಶಿಯ ಜನರು ಸಾಮಾನ್ಯವಾಗಿ ತಮ್ಮ ಹಿಂದಿನ ದಿನಗಳ ದುಃಖವನ್ನೇ ಮೆಲುಕು ಹಾಕುತ್ತಾ ಋಣಾತ್ಮಕ ಭಾವನೆಯನ್ನು ಪ್ರಕಟಿಸುತ್ತಿರುತ್ತಾರೆ. ಇವರು ವಾಸ್ತವವನ್ನು ಎದುರಿಸಲು ಪುಕ್ಕಲುತನ ತೋರುತ್ತಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಹೊಸ ವಿಷಯದತ್ತ ಒಲವು ತೋರಲು ಇವರು ಧೈರ್ಯವನ್ನು ಎಲ್ಲರಿಗಿಂತ ಕಡೆಗೆ ಪ್ರಕಟಿಸುತ್ತಾರೆ.

English summary

things you wont ever do as per your-zodiac-sign

We all have some principles, rules and boundaries in life. Come what may, these are never to be crossed. Nor do we cross them ourselves nor do we let others walk all over us. There should be certain things in life which cannot be negotiated or compromised upon in life. Each one of us a list of such things and they are sacrosanct for us.These solid values, beliefs and rules shape our personalities. And these stem from our zodiac signs!