Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
ಅಯ್ಯೋ! ಸೆಕ್ಸ್ ಬಗ್ಗೆ ಈ ಅಗತ್ಯ ವಿಷಯಗಳನ್ನು ಯಾರೂ ಹೇಳುವುದಿಲ್ಲವೇಕೆ?
ಕಾಮದ ಬಗ್ಗೆ ಹಲವು ವಿಷಯಗಳ ಬಗ್ಗೆ ಹೆಚ್ಚಿನವರು ಯಾವುದೇ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಏಕೆಂದರೆ ನಮ್ಮ ಸಮಾಜದಲ್ಲಿ ಈ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಒಂದು ಅಪರಾಧ ಎಂಬ ಭಾವನೆ ಬೆಳೆದುಬಂದಿದೆ. ಆದರೆ ವಿಪರ್ಯಾಸವೆಂದರೆ ಇದೇ ಸಮಾಜದಲ್ಲಿ ಪ್ರತಿ ನಿಮಿಷಕ್ಕೊಂದು ಅತ್ಯಾಚಾರದ ಪ್ರಕರಣವೂ ದಾಖಲಾಗುತ್ತಿದೆ. ಇಂದಿನ ಲೇಖನದಲ್ಲಿ ಸೆಕ್ಸ್ ಅಥವಾ ಲೈಂಗಿಕ ಜೀವನದ ಬಗ್ಗೆ ಸಮಾಜದಲ್ಲಿ ಅತಿ ಕಡಿಮೆ ಚರ್ಚಿಸಲ್ಪಡುವ ಅಥವಾ ವಿಚಾರ ವಿನಿಮಯಗೊಳ್ಳುವ ವಿಷಯಗಳನ್ನು ಅರಿತುಕೊಳ್ಳೋಣ
ಅಲ್ಲದೇ ಸಮಾಜದಲ್ಲಿ ಹರಡಿರುವ ಎಷ್ಟೋ ತಪ್ಪು ಕಲ್ಪನೆಗಳನ್ನೇ ಇಂದಿಗೂ ಜನರು ನಿಜವೆಂದೇ ಭಾವಿಸಿಕೊಂಡಿದ್ದು ಹೀಗಾಗದೇ ಇದ್ದರೆ ಏನೋ ತೊಂದರೆಯಾಗಿದೆ ಎಂಬ ಅಪಾರ್ಥಕ್ಕೊಳಗಾಗಿ ಹಲವು ತೊಂದರೆಗಳನ್ನು ತಾವಾಗಿಯೇ ಆಹ್ವಾನಿಸಿಕೊಳ್ಳುತ್ತಾರೆ. ಬನ್ನಿ, ತಪ್ಪು ಕಲ್ಪನೆಗಳ ಬಗ್ಗೆ ಅರಿತುಕೊಳ್ಳುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿರುವ ಈ ಮಾಹಿತಿಗಳು ಯಾವುವು ಎಂದು ನೋಡೋಣ...

ಪ್ರಥಮ ಸಮಾಗಮದಲ್ಲಿಯೇ ಕಡ್ಡಾಯ ರಕ್ತಸ್ರಾವವಾಗಬೇಕಿಲ್ಲ!
ಎಷ್ಟೋ ಸಂಪ್ರದಾಯಗಳಲ್ಲಿ ಇಂದಿಗೂ ಪ್ರಥಮ ಸಮಾಗಮದ ಪರಿಣಾಮ ರಕ್ತಸ್ರಾವದ ಮೂಲಕವೇ ಪ್ರಕಟಗೊಳ್ಳಬೇಕು ಎಂದು ತಿಳಿದುಕೊಂಡು ವಧೂವರರು ಮಲಗಿದ ಹಾಸಿಗೆಯಲ್ಲಿ ರಕ್ತದ ಕಲೆಗಳನ್ನು ಹುಡುಕಲಾಗುತ್ತದೆ! ಆದರೆ ವೈಜ್ಞಾನಿಕವಾಗಿ ಪ್ರತಿ ಸಂದರ್ಭದಲ್ಲಿಯೂ ಹೀಗೇ ಆಗಬೇಕೆಂದು ಇಲ್ಲ ಹಾಗೂ ಪ್ರಥಮ ಸೆಕ್ಸ್ ನಲ್ಲಿ ರಕ್ತಸ್ರಾವ ಆಗಲೇಬೇಕೆಂದೂ ಇಲ್ಲ. ರಕ್ತಸ್ರಾವ ಆಗದೇ ಇದ್ದುದು ಇದು ಪ್ರಥಮ ಸಮಾಗಮವಲ್ಲ ಎಂಬುದಕ್ಕೆ ಸಾಕ್ಷಿಯೂ ಅಲ್ಲ!

ಪ್ರಣಯದ ಬಳಿಕ ಸ್ವಚ್ಛ ಹಾಗೂ ಓರಣಗೊಳಿಸುವುದು ಅಗತ್ಯ
ಪ್ರಣಯದ ಸಮಯದಲ್ಲಿ ಒಪ್ಪ ಓರಣಗಳನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ದಂಪತಿಗಳಿಬ್ಬರೂ ಪರಸ್ಪರರ ಪ್ರೀತಿಯಿಂದ ನಿರೀಕ್ಷಿಸುವ ಯಾವುದೇ ಚಟುವಟಿಕೆಗೆ ತಡೆಯಿಲ್ಲದೇ ನೀಡುವ ಸಹಕಾರಕ್ಕಾಗಿ ಓರಣದ ಬಗ್ಗೆ ಗಮನ ನೀಡಲು ಸಾಧ್ಯವಿಲ್ಲ. ಆದರೆ ಆಪ್ತಸಮಯ ಕಳೆದ ಬಳಿಕ ಮಾತ್ರ ಮೊದಲಿನ ಓರಣದಲ್ಲಿ ಇರಿಸಲು ಮಾತ್ರ ಮರೆಯಬಾರದು.

ಪ್ರತಿ ಬಾರಿಯೂ ಪ್ರವೇಶವೇ ಆಗಬೇಕೆಂದೇನಿಲ್ಲ
ಆರೋಗ್ಯಕರ ದಾಂಪತ್ಯಕ್ಕೆ ಲೈಂಗಿಕ ಸಂಪರ್ಕ ಅಗತ್ಯವಾದರೂ ಇದೊಂದು ಮಾತ್ರವೇ ಅಗತ್ಯವಲ್ಲ. ಪರಸ್ಪರ ಸ್ಪರ್ಷ, ತೀಡನೆ ಹಾಗೂ ದೇಹದ ಇತರ ಭಾಗಗಳಿಗೂ ನೀಡುವ ಸಂವೇದನೆಯ ಮೂಲಕ ಸ್ಪರ್ಶಸುಖವನ್ನೂ ಪೂರ್ತಿಯಾಗಿ ಪಡೆದುಕೊಳ್ಳುವುದು ಸಂಗಾತಿಗೆ ನೀಡುವ ಉಡುಗೊರೆಯೇ ಆಗಿದೆ.

ಇಲ್ಲಿ ಮುಲುಕಾಟದ ಸದ್ದು ಮಾತ್ರವೇ ಅಲ್ಲ
ಸಾಮಾನ್ಯವಾಗಿ ಮುಲುಕಾಟದ ಸದ್ದು ಬಂದರೆ ಮಾತ್ರವೇ ಲೈಂಗಿಕ ತೃಪ್ತಿ ಸಿಕ್ಕ ರಸೀದಿ ಎಂದು ಹಲವರು ಭಾವಿಸಿದ್ದಾರೆ. ಆದರೆ ಸಮಾಗಮದ ಸಮಯದಲ್ಲಿ ಮುಲುಕಾಟದ ಸದ್ದಿಗಿಂತಲೂ ಸವರುವ, ಬೆರಳಾಟ ಮೊದಲಾದ ಸದ್ದುಗಳು ಮನಸ್ಸಿಗೆ ಮುದವನ್ನೂ ನೀಡುತ್ತವೆ ಹಾಗೂ ಸಂಗಾತಿಯ ಗಮನವನ್ನು ಸೆಳೆಯಲೂ ನೆರವಾಗುತ್ತದೆ.

ಒಂದೇ ಬಗೆಯ ಭಂಗಿಯೇ ಎಲ್ಲವೂ ಅಲ್ಲ!
ಸಾಮಾನ್ಯವಾಗಿ ಭಂಗಿಗಳ ಬಗ್ಗೆ ಹೆಚ್ಚಿನವರು ತಮ್ಮ ಕಲ್ಪನೆಗಳನ್ನೇ ತಮ್ಮ ಸಾಧನೆ ಎಂದು ಬಿಂಬಿಸಲು ಯತ್ನಿಸುತ್ತಾರೆ. ಕೆಲವು ಚಲನಚಿತ್ರಗಳಲ್ಲಿಯೂ, ಖುಜೂರಾಹೋ ಮೊದಲಾದ ದೇವಾಯಲಗಳ ಕಲ್ಲಿನ ಕೆತ್ತನೆಗಳಲ್ಲಿಯೂ ಅಸಾಧ್ಯವೆನಿಸುವ ಭಂಗಗಳನ್ನು ಕಂಡವರು ಇದನ್ನು ಸಾಧಿಸಲು ಅಪಾಯವನ್ನು ಆಹ್ವಾನಿಸುತ್ತಾರೆ. ಆದರೆ ಈ ಕ್ರಿಯೆಯಲ್ಲಿ ಮೊಣಕೈಯಿಂದ ಸಂಗಾತಿಯ ಕಣ್ಣಿಗೆ ತಿವಿಯುವ, ತಲೆ ಗೋಡೆಗೆ ಬಡಿಯುವ, ಸಂಗಾತಿಯ ಮೈಭಾರವೇ ಸೂಕ್ಷ್ಮಭಾಗದ ಮೇಲೆ ಬಿದ್ದು ಅಪಘಾತವಾಗುವ ಸಾಧ್ಯತೆ ಇದೆ. ಇಂದಿನ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ಸಂಭವಿಸಿದ ಅಪಘಾತಗಳೂ ಹೆಚ್ಚುತ್ತಿವೆ. ಆದ್ದರಿಂದ ಪರಸ್ಪರರಿಗೆ ಯಾವುದೇ ಅಪಾಯವಿಲ್ಲದೇ ಸುರಕ್ಷಿತ ಭಂಗಿ ಅನುಸರಿಸುವುದೇ ಕ್ಷೇಮ.

ಲೈಂಗಿಕ ಕ್ರಿಯೆಯಲ್ಲಿ ವಾಸನೆಯೂ ಇದೆ
ಲೈಂಗಿಕ ಕ್ರಿಯೆಯ ಸಮಯದಲ್ಲಿ ಕೊಂಚ ಕಮಟು ವಾಸನೆ ಹೊಮ್ಮುತ್ತದೆ ಹಾಗೂ ಸುತ್ತಲಿನ ಗಾಳಿಯಲ್ಲಿ ಪಸರಿಸುತ್ತದೆ. ಇದು ಅಂತಹ ಕೆಟ್ಟ ವಾಸನೆಯೇನೂ ಅಲ್ಲ, ಆದರೆ ನಂತರ ಈ ಸ್ಥಳಕ್ಕೆ ಬಂದವರಿಗೆ ಈ ವಾಸನೆಯಿಂದ ಈಗತಾನೇ ಇಲ್ಲಿ ಕಾಮಕೂಟ ನಡೆದಿದೆ ಎಂಬ ಸುಳಿವು ಸಿಗುತ್ತದೆ. ಒಂದು ವೇಳೆ ನಿಮ್ಮ ಮನೆಗೆ ಅತಿಥಿಗಳು ಬರುವವರಿದ್ದರೆ ಈ ಬಗ್ಗೆ ಎಚ್ಚರಿಕೆ ವಹಿಸಿ.

ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜನೆ ಅಗತ್ಯ
ಸಾಮಾನ್ಯವಾಗಿ ಹೆಚ್ಚಿನವರು ಲೈಂಗಿಕ ಕ್ರಿಯೆಯ ಬಳಿಕ ನಿದ್ದೆ ಹೋಗುತ್ತಾರೆ. ಆದರೆ ಈ ಮೂಲಕ ಬ್ಯಾಕ್ಟೀರಿಯಾಗಳ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಾಧ್ಯತೆ ಹೆಚ್ಚು. ಆದ್ದರಿಂದ ಲೈಂಗಿಕ ಕ್ರಿಯೆಯ ಬಳಿಕ ಮಹಿಳೆಯರು ಕಡ್ಡಾಯವಾಗಿ ಮೂತ್ರವಿಸರ್ಜಿಸಿ ಈ ಅಪಾಯದಿಂದ ಪಾರಾಗಬೇಕು.

ಲೈಂಗಿಕ ಕ್ರಿಯೆಯಲ್ಲಿ ಮುಖದಲ್ಲಿ ವ್ಯಂಗ್ಯ ಸೂಚಿಸುವುದು
ಕೆಲವೊಮ್ಮೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಸಂಗಾತಿಯ ಮುಖದಲ್ಲಿ ಬಗೆಬಗೆಯ ಭಾವನೆಗಳು ವ್ಯಕ್ತವಾಗುತ್ತಿದ್ದು ಇವುಗಳಲ್ಲಿ ವ್ಯಂಗ್ಯದ ಭಾವನೆಯೂ ಇದ್ದರೆ ಇದು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದ್ದರಿಂದ ಈ ಸಮಯದಲ್ಲಿ ಕತ್ತಲಿರುವಂತೆ ನೋಡಿಕೊಳ್ಳುವುದು ಅವಶ್ಯ.ಈ ಲೇಖನದ ವಿವರಗಳು ಇಷ್ಟವಾಯಿತೇ? ಇಂತಹ ಇನ್ನಷ್ಟು ರೋಚನ ಮಾಹಿತಿಗಳಿಗಾಗಿ ಈ ಪುಟವನ್ನು ಆಗಾಗ ಗಮನಿಸುತ್ತಿರಿ.



Click it and Unblock the Notifications











