For Quick Alerts
ALLOW NOTIFICATIONS  
For Daily Alerts

ಎಲ್ಲಾ 12 ರಾಶಿಚಕ್ರಗಳ ಬಗ್ಗೆ ನಿಮಗೆ ತಿಳಿಯದೇ ಇರುವ ವಿಚಾರಗಳು!

By Hemanth
|

ರಾಶಿಚಕ್ರಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೇ. ಯಾಕೆಂದರೆ ಪ್ರತಿಯೊಂದು ರಾಶಿಗಳಲ್ಲಿ ಏನಾದರೊಂದು ವಿಶೇಷತೆಗಳು, ದುರ್ಬಲತೆಗಳು ಇತ್ಯಾದಿ ಇದ್ದೇ ಇರುತ್ತದೆ. ಇದರಿಂದ ಪ್ರತಿಯೊಂದು ರಾಶಿಯ ಬಗ್ಗೆ ತಿಳಿಯದೇ ಇರುವಂತಹ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ರಾಶಿಚಕ್ರಗಳ ಬಗ್ಗೆ ಕೆಲವು ವಿಚಾರಗಳು ಎಲ್ಲರಿಗೂ ತಿಳಿದಿಲ್ಲ ಎಂದು ಜ್ಯೋತಿಷ್ಯ ಹೇಳುತ್ತದೆ.

ಜೀವನದಲ್ಲಿ ಅಸುರಕ್ಷತೆ ಭಾವನೆಯಿಂದ ಹಿಡಿದು, ಜೀವನದಲ್ಲಿ ಸಂಪೂರ್ಣವಾಗಿ ಭದ್ರತೆ ಪಡೆಯುವುದು ಕೂಡ ಕೆಲವು ರಾಶಿಗಳ ಆಕಾಂಕ್ಷೆಯಾಗಿರುವುದು. ಇಂತಹ ಕೆಲವೊಂದು ವಿಚಾರಗಳು ಬೇರೆ ರಾಶಿಯವರಿಗೆ ತಿಳಿದಿರುವುದು. ಇದರಿಂದಾಗಿ ಬೇರೆ ರಾಶಿಯವರನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು. ಈ ಲೇಖನವನ್ನು ಓದಿಕೊಂಡು ನೀವು ರಾಶಿಚಕ್ರಗಳ ಅರ್ಥ ಮಾಡಿಕೊಂಡರೆ ಆಗ ನಿಮಗೆ ಎಲ್ಲಾ ರಾಶಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು...

ಮೇಷ: ಮಾರ್ಚ್ 21-ಎಪ್ರಿಲ್ 19

ಮೇಷ: ಮಾರ್ಚ್ 21-ಎಪ್ರಿಲ್ 19

ಮೇಷ ರಾಶಿಯವರು ಎಷ್ಟೇ ಮಟ್ಟದಲ್ಲಿ ಆತ್ಮವಿಶ್ವಾಸದಿಂದ ಇದ್ದರೂ ಅವರು ತಮ್ಮ ಸುತ್ತಲು ಇರುವ ಎಲ್ಲವೂ ಸರಿಯಾಗಿರ ಬೇಕೆಂದು ದೃಢಪಡಿಸಿಕೊಳ್ಳಲು ಬಯಸುವರು. ತಮ್ಮ ಬಗ್ಗೆ ಸ್ನೇಹಿತರು ಹಾಗು ಕುಟುಂಬದವರು ಹೆಮ್ಮೆ ಪಟ್ಟು ಕೊಳ್ಳ ಬೇಕೆಂದು ಬಯಸುವರು. ಪ್ರೀತಿಪಾತ್ರರು ತಮ್ಮ ಬಗ್ಗೆ ಹೆಮ್ಮೆ ಪಡುವಾಗ ಇವರು ತುಂಬಾ ಅಭಿವೃದ್ಧಿಯಾಗುವರು.

ವೃಷಭ: ಎಪ್ರಿಲ್ 20-ಮೇ 21

ವೃಷಭ: ಎಪ್ರಿಲ್ 20-ಮೇ 21

ವೃಷಭ ರಾಶಿಯವರು ಯಾವಾಗಲೂ ಪೋಷಕ ಸ್ನೇಹಿತರಾಗಿರುವ. ಆದರೆ ಎಲ್ಲಾ ಸಮಯದಲ್ಲಿ ಬೇರೆಯವರ ಜವಾಬ್ದಾರಿ ವಹಿಸಿಕೊಳ್ಳುವುದರಿಂದ ಸುಸ್ತಾಗುವುದು. ಇವರು ಜವಾಬ್ದಾರಿಯಿಂದ ಮುಕ್ತಿ ಪಡೆದು ವಿಶ್ರಾಂತಿ ಬಯಸುವರು. ಆದರೆ ಇದನ್ನು ಯಾರೂ ಅರ್ಥ ಮಾಡಿಕೊಳ್ಳಲ್ಲ.

ಮಿಥುನ: ಮೇ 21- ಜೂನ್ 20

ಮಿಥುನ: ಮೇ 21- ಜೂನ್ 20

ಮಿಥುನ ರಾಶಿಯವರು ಯಾವಾಗಲೂ ರೂಢಿಗೆ ಅಂಟಿಕೊಂಡವರಲ್ಲ. ಇವರು ತಮ್ಮ ಪ್ರೀತಿಪಾತ್ರರನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಾರೆಂದರೆ ಸಣ್ಣ ವಿಚಾರಕ್ಕೂ ಇವರು ಗೀಳಿಗೆ ಬೀಳುವರು. ರಾಶಿಯಗಳಲ್ಲಿ ಇವರು ಒಳ್ಳೆಯ ಸಂವಹಕರು. ಆದರೆ ಇವರ ಮಾತನ್ನು ಕೂಡ ಕೇಳಬೇಕು.

ಕರ್ಕಾಟಕ: ಜೂನ್ 21-ಜುಲೈ 22

ಕರ್ಕಾಟಕ: ಜೂನ್ 21-ಜುಲೈ 22

ಕರ್ಕಾಟಕ ರಾಶಿಯವರು ಸ್ವಲ್ಪ ಸ್ವಾರ್ಥಿಯಂತೆ ನಿಮಗೆ ಕಾಣಿಸಬಹುದು. ಆದರೆ ಹಾಗಿಲ್ಲ. ಇವರು ಪ್ರತಿಯೊಂದನ್ನು ಬೇರೆಯವರಿಗಾಗಿ ಮಾಡುವರು. ಇವರಿಗೆ ಜೀವನದಲ್ಲಿ ಪ್ರೀತಿ ಎನ್ನುವುದು ತುಂಬಾ ಪೂಜ್ಯನೀಯ. ತಮ್ಮ ಪ್ರೀತಿಪಾತ್ರರು ಸಂತೋಷವಾಗಿದ್ದಾಗ ಇವರು ಕೂಡ ಸಂತಸದಲ್ಲಿರುವರು.

ಸಿಂಹ: ಜುಲೈ 23- ಆ. 23

ಸಿಂಹ: ಜುಲೈ 23- ಆ. 23

ಸಿಂಹ ರಾಶಿಯವರು ಕಾಣುವುದಕ್ಕಿಂತ ಹೆಚ್ಚು ಭಾವನಾತ್ಮಕ ವಾಗಿರುವರು. ಆದರೆ ತಾವು ದುರ್ಬಲರೆಂದು ಬಿಂಬಿಸಿಕೊಳ್ಳುವ ಭೀತಿಯಿಂದ ಭಾವನೆ ತೋರಿಸಿಕೊಡಲ್ಲ. ನಿಮ್ಮನ್ನು ಅವರು ಪ್ರೀತಿಸಿದರೆ ಅವರು ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ನಾಚಿಕೆ ಪಡಲ್ಲ. ಇವರ ಮೊಂಡತನವು ನರಕದಂತೆ ಮತ್ತು ಇದರಿಂದ ಅವರು ಸರಾಸರಿಯೆಂದು ಭಾವಿಸುವಂತೆ ಮಾಡಬಹುದು. ಆದರೆ ಹಾಗಿಲ್ಲ. ಅವರು ಹೀಗೆ ಇರುವುದು. ಯಾಕೆಂದರೆ ನೀವು ಯಶಸ್ಸು ಪಡೆಯಬೇಕೆಂದು ಅವರು ಬಯಸುವರು.

ಕನ್ಯಾ: ಆ.24-ಸೆ.23

ಕನ್ಯಾ: ಆ.24-ಸೆ.23

ಸಿಂಹ ರಾಶಿಯವರಂತೆ ಕನ್ಯಾ ರಾಶಿಯವರು ಕೂಡ ತಮ್ಮ ಪ್ರೀತಿಪಾತ್ರರರನ್ನು ಟೀಕಿಸುತ್ತಿರುವರು. ಯಾಕೆಂದರೆ ಅವರು ಯಶಸ್ಸು ಪಡೆಯುವುದು ಇವರಿಗೆ ಮುಖ್ಯವಾಗಿರುವುದು. ಎಲ್ಲಾ ರಾಶಿಗಳಿಗೆ ಹೋಲಿಸಿದರೆ ಈ ರಾಶಿಯವರು ತುಂಬಾ ಜಾಣ ರಾಶಿ. ಇವರ ಜೀವನವು ನಿಯಂತ್ರಣದಲ್ಲಿರುವ ಅವ್ಯವಸ್ಥೆ ಹೊಂದಿರುವುದು ಮತ್ತು ಇದರಿಂದ ಇವರು ಯಶಸ್ವಿಯಾಗುವರು.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ತುಲಾ ರಾಶಿಯವರು ಕಾಣುವುದಕ್ಕಿಂತ ಹೆಚ್ಚು ಸೂಕ್ಷ್ಮ ವ್ಯಕ್ತಿತ್ವದವರು. ಇವರು ರಾಶಿಗಳಲ್ಲಿ ತುಂಬಾ ಆತ್ಮವಿಶ್ವಾಸದಿಂದ ಇರುವವರು. ಅವರು ಪೆದ್ದನಂತೆ ಕಾಣಬಹುದು. ಆದರೆ ನಿಜವಾಗಿಯೂ ಹಾಗಿಲ್ಲ. ಇವರು ಯಾರೊಂದಿಗೂ ಸ್ನೇಹ ಸಂಪಾದಿಸಬಲ್ಲರು. ಇನ್ನೊಂದು ಬದಿಯಲ್ಲಿ ಅವರು ನಕಲಿಯೆಂದು ನಿಮಗೆ ಅನಿಸಬಹುದು. ಆದರೆ ಹಾಗಿಲ್ಲ. ಇವರಿಗೆ ಶಾಂತಿ ಮತ್ತು ಸಮತೋಲನ ಬೇಕಿರುವ ಕಾರಣ ಹೀಗೆ ಆಗುವುದು. ಪ್ರತಿಯೊಬ್ಬರು ಸಂತೋಷವಾಗಿರಬೇಕೆಂದು ಇವರು ಬಯಸುವರು.

ವೃಶ್ಚಿಕ:ಅ.24-ನ.22

ವೃಶ್ಚಿಕ:ಅ.24-ನ.22

ವೃಶ್ಚಿಕ ರಾಶಿಯವರು ರಾಶಿಚಕ್ರಗಳಲ್ಲೇ ತುಂಬಾ ಸೂಕ್ಷ್ಮವಾದ ವ್ಯಕ್ತಿತ್ವ ಹೊಂದಿದ್ದು, ಪ್ರತಿಯೊಂದು ವಿಚಾರವನ್ನು ವೈಯಕ್ತಿಕವಾಗಿ ತೆಗೆದು ಕೊಳ್ಳುವರು. ಇವರನ್ನು ಸುಲಭವಾಗಿ ನಗಿಸಬಹುದು. ಇವರು ಕಾಣುವಾಗ ಬೆದರಿಸುವವರಂತೆ ಕಾಣುವರು. ಆದರೆ ಹಾಗಿಲ್ಲ, ಇವರು ಕಾಣುವಂತೆ ಇರಲ್ಲ.

ಧನು: ನ.23-ಡಿ.22

ಧನು: ನ.23-ಡಿ.22

ಧನು ರಾಶಿಯವರು ಭಾವನೆಗಳಿಗೆ ಶ್ರೇಷ್ಠರಲ್ಲ. ಯಾಕೆಂದರೆ ಇವರ ಮನಸ್ಸಿನಲ್ಲಿ ತುಂಬಾ ಇರುವುದು ಮತ್ತು ಇವರು ಬಲಿಪಶು ಆಗಲು ಬಯಸಲ್ಲ. ಯಾಕೆಂದರೆ ಇವರು ಸಂವಹನವು ಇವರಿಗೆ ತುಂಬಾ ಕಠಿಣವಾಗಿರುವುದು. ಇನ್ನೊಂದೆಡೆಯಲ್ಲಿ ಇವರು ಕಠಿಣ ಸಮಯದಲ್ಲಿ ಯಾರಾದರೂ ತಮ್ಮ ಕಾಳಜಿ ವಹಿಸಬೇಕೆಂದು ಬಯಸುವರು.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಮಕರ ರಾಶಿಯವರು ತಮ್ಮ ಭಾವನೆಗಳನ್ನು ವ್ಯಕ್ತಿಪಡಿಸಲು ತುಂಬಾ ರಕ್ಷಣೆ ಬಯಸುವರು. ಇವರು ನಿರಾತಂಕ ವ್ಯಕ್ತಿಗಳಂತೆ ಕಾಣುವರು. ಯಾಕೆಂದರೆ ಇವರು ತಮ್ಮ ಹತ್ತಿರ ಬೇರೆಯವರನ್ನು ಬಿಟ್ಟುಕೊಡಲು ಹೆದರುವರು.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ಕುಂಭ ರಾಶಿಯವರು ಯಾವಾಗಲೂ ಪ್ರೀತಿಗಾಗಿ ಹಾತೊರೆಯುತ್ತಿರುವರು. ಇವರು ಎಷ್ಟೇ ಎತ್ತರಕ್ಕೆ ಏರಿಯಾದರೂ ಗೌರವ ಪಡೆದುಕೊಳ್ಳಲು ಬಯಸುವರು. ಅವರ ಬಗ್ಗೆ ಎಲ್ಲವೂ ತಿಳಿದಿದೆ ಎನ್ನುವಂತೆ ನೀವು ಭಾವಿಸುವಂತೆ ಮಾಡಬಲ್ಲ ನಿಪುಣರು. ಆದರೆ ಇದು ಸತ್ಯವಲ್ಲ. ನಿಮ್ಮ ಸಣ್ಣ ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ಮಾಡಬಲ್ಲರು. ಯಾಕೆಂದರೆ ಇವರು ಒಳ್ಳೆಯ ಕೇಳುಗರು. ಆದರೆ ಮನಸ್ಸಿನಾಳದಲ್ಲಿ ತಮ್ಮ ಬಗ್ಗೆ ಕೂಡ ಯಾರಾದರೂ ಕೇಳುವವರು ಇರಬೇಕೆಂದು ಬಯಸುವರು.

 ಮೀನ: ಫೆ.19- ಮಾ.20

ಮೀನ: ಫೆ.19- ಮಾ.20

ನಿಮ್ಮನ್ನು ನೋಡಿದ ಕೂಡಲೇ ನಿಮ್ಮ ತಲೆಯಲ್ಲಿ ಏನಿದೆ ಎಂದು ಮೀನ ರಾಶಿಯವರು ತಿಳಿಯುವರು. ಇವರು ನಿಮ್ಮ ಭಾವನೆಗಳಲ್ಲಿ ಬೇಗನೆ ಸಿಲುಕುವರು ಮತ್ತು ನೀವು ತಿಳಿದಿರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇವರು ನಿಮ್ಮನ್ನು ಅರ್ಥ ಮಾಡಿಕೊಳ್ಳುವರು. ಇವರು ಗಂಭೀರವಾಗಿ ಹೇಳುವಂತಹ ಪ್ರತಿಯೊಂದನ್ನು ಪರಿಗಣಿಸಬೇಕು. ಯಾಕೆಂದರೆ ಇವರಲ್ಲಿ ಪ್ರತಿಯೊಬ್ಬರು ವರ್ಷಗಳಿಂದ ಅಪಾರ ಜ್ಞಾನ ಪಡೆದಿರುವವರು.

English summary

Things No One Understands About Each Zodiac Sign

There are many untold facts about each zodiac sign that can be unknown to many. These are mainly something that people are hesitant to share about their zodiac signs. According to astrology, there are certain things that people are not aware of the zodiac signs.
Story first published: Wednesday, July 11, 2018, 18:07 [IST]
X
Desktop Bottom Promotion