Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 4 ರಾಶಿಚಕ್ರದ ಪುರುಷರಿಗೆ ಮಹಿಳೆಯರು ಬಹುಬೇಗ ಆಕರ್ಷಿತರಾಗುತ್ತಾರೆ!
ಪರಸ್ಪರ ವಿರುದ್ಧ ಲಿಂಗದವರನ್ನು ಪ್ರೀತಿಸುವುದು ಅಥವಾ ಆಕರ್ಷಿತರಾಗುವುದು ಸಹಜ. ವಿರುದ್ಧ ಲಿಂಗದವರು ಅಂದರೆ ಸ್ತ್ರೀ-ಪುರುಷರ ನಡುವೆ ಆಕರ್ಷಣೆಗಳು ಇರುವುದು ಸಹಜವಾದರೂ ಅದಕ್ಕೆ ಕಾರಣಗಳು ಬೇರೆಬೇರೆ ರೀತಿಯಲ್ಲಿ ಇರುತ್ತವೆ. ಪುರುಷರು ಸಾಮಾನ್ಯವಾಗಿ ಮಹಿಳೆಯ ಸೌಂದರ್ಯ, ಹಾವ-ಭಾವ, ನಡತೆ, ಸ್ನೇಹದ ರೀತಿ ಸೇರಿದಂತೆ ವಿವಿಧ ಕಾರಣಗಳಿಗೆ ಬಹುಬೇಗ ಆಕರ್ಷಿತರಾಗುತ್ತಾರೆ. ಆದರೆ ಮಹಿಳೆಯರ ವಿಚಾರಕ್ಕೆ ಬಂದಾಗ ಅವರ ಆಯ್ಕೆಗಳು ವಿಭಿನ್ನವಾಗಿರುತ್ತವೆ. ಅವರ ದೃಷ್ಟಿಯಲ್ಲಿ ಎಲ್ಲಾ ವಿಚಾರದಲ್ಲೂ ಸರಿ ಎಂದೆನಿಸಿದಾಗ ಮಾತ್ರ ಆಕರ್ಷಣೆಗೆ ಒಳಗಾಗುತ್ತಾರೆ.
ಮಹಿಳೆಯರ ದೃಷ್ಟಿಯಲ್ಲಿ ಪುರುಷರು ಸೈ ಎನಿಸಿಕೊಳ್ಳುವುದು ಎಂದರೆ ಅಷ್ಟು ಸುಲಭದ ವಿಚಾರವಲ್ಲ. ಪುರುಷರ ವ್ಯಕ್ತಿತ್ವ, ಗುಣಲಕ್ಷಣ, ನೈಜ ಸ್ವಭಾವ, ಪ್ರೀತಿ, ವೃತ್ತಿ, ಸಂಪತ್ತು, ಸಂಬಂಧ ಸೇರಿದಂತೆ ಎಲ್ಲಾ ವಿಚಾರದಲ್ಲಿಯೂ ಮನಸ್ಸಿಗೆ ಹಿತವೆನಿಸಿದಾಗ ಆಕರ್ಷಣೆಗೆ ಒಳಗಾಗುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ಪುರುಷರು ಮಹಿಳೆಯರಿಂದ ಬಹುಬೇಗ ಆಕರ್ಷಣೆಗೆ ಒಳಗಾಗುತ್ತಾರೆ ಎಂದು ಹೇಳಲಾಗುತ್ತದೆ.
ಮಹಿಳೆಯರ ಆಕರ್ಷಣೆಗೆ ಒಳಗಾಗಲು ಅವರು ಯಾವುದೇ ಪ್ರಯತ್ನಗಳನ್ನು ಮಾಡುವುದಿಲ್ಲ. ಅವರಲ್ಲಿರುವ ಸಹಜ ಗುಣಗಳೇ ಮಹಿಳೆಯರನ್ನು ಆಕರ್ಷಿಸುತ್ತವೆ ಎಂದು ಹೇಳಲಾಗುವುದು. ಹಾಗಾದರೆ ಆ ನಾಲ್ಕು ರಾಶಿಚಕ್ರದವರು ಯಾರು? ಅವರ ಯಾವೆಲ್ಲಾ ಗುಣಗಳು ಮಹಿಳೆಯರಿಗೆ ಪ್ರಿಯವೆನಿಸುವುದು? ಮಹಿಳೆಯರನ್ನು ಅವರು ಹೇಗೆ ನೋಡುತ್ತಾರೆ? ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮಿಥುನ
ಈ ರಾಶಿಯಲ್ಲಿ ಜನಿಸಿದ ಪುರುಷರು ಅದೃಷ್ಟವಂತರು ಇವರು ಇತರರ ಗಮನ ಸೆಳೆಯಲು ಅಥವಾ ಮಹಿಳೆಯರನ್ನು ಆಕರ್ಷಿಸಲು ಕಷ್ಟಪಡಬೇಕು ಎಂದೇನು ಇಲ್ಲ. ಇವರ ಆಕರ್ಷಕ ವ್ಯಕ್ತಿತ್ವವೇ ಮಹಿಳೆಯರ ಆಕರ್ಷಣೆಗೆ ಸಹಾಯ ಮಾಡುವುದು. ಇವರ ಮೃದುವಾದ ಮತ್ತು ಪ್ರಣಯಾತ್ಮಕ ಪ್ರವೃತ್ತಿಯು ಮಹಿಳೆಯರನ್ನು ಹೆಚ್ಚು ಆಕರ್ಷಿಸುವುದು. ಈ ಗುಣದಿಂದ ಮಹಿಳೆಯರು ತಾವಾಗಿಯೇ ಒಲಿದು ಬರುತ್ತಾರೆ.

ಮಿಥುನ
ಇವರಿಗೆ ಮಹಿಳೆಯರೊಂದಿಗೆ ಹೇಗೆ ಮಾತನಾಡಬೇಕು ಎನ್ನುವುದು ತಿಳಿದಿದೆ. ಉತ್ತಮ ಭಾವನಾತ್ಮಕ ವರ್ತನೆಯನ್ನು ಹೊಂದಿರುತ್ತಾರೆ. ಭಾವನಾತ್ಮಕ ಮನಸ್ಸಿನ ಮಹಿಳೆಯರು ಇವರನ್ನು ಬಲು ಇಷ್ಟಪಡುವರು. ಇವರಲ್ಲಿ ಹುಡುಗಿಯರನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವು ಹೆಚ್ಚೆಂದು ಹೇಳಬಹುದು.

ಸಿಂಹ
ಈ ರಾಶಿಯ ಪುರುಷರು ಅತ್ಯುತ್ತಮ ಹೃದಯವಂತರು. ಜೊತೆಗೆ ಉತ್ತಮ ಸಂಬಂಧವನ್ನು ನಿಭಾಯಿಸುವರು. ಇವರ ಪ್ರಣಯ ಪ್ರವೃತ್ತಿ ಮಹಿಳೆಯರಿಗೆ ಹೆಚ್ಚು ಸಂತೋಷ ಅಥವಾ ಇಷ್ಟವಾಗುವಂತೆ ಇರುವುದು. ಪ್ರಬಲ ಶಾಲಿಯಾದ ಈ ಪುರುಷರು ಸಂವೇದನೆಗಳಿಗೆ ಸೂಕ್ತ ರೀತಿಯಲ್ಲಿ ವರ್ತನೆ ತೋರುವರು. ಅತ್ಯುತ್ತಮ ಸ್ನೇಹಿತರಾಗಿರುವರು. ಇವರ ಈ ಗುಣವನ್ನು ಮಹಿಳೆಯರು ಪ್ರಶಂಸಿಸುವರು.

ಸಿಂಹ
ಇವರ ಉತ್ತಮ ಹವ್ಯಾಸಗಳು ಮಹಿಳೆಯರಿಗೆ ಮೊದಲ ನೋಟ ದಲ್ಲಿಯೇ ಇಷ್ಟ ವಾಗುವಂತೆ ಮಾಡುವುದು. ಮಹಿಳೆಯರಿಗೆ ಇಷ್ಟವಾಗುವಂತಹ ವರ್ತನೆ ಹಾಗೂ ಭಾವೋದ್ರಿಕ್ತ ಭಾವನೆಗಳಿಂದ ಮಹಿಳೆಯರನ್ನು ಆಕರ್ಷಿಸುವರು.

ತುಲಾ
ಇವರೊಬ್ಬ ವಿಶೇಷ ವ್ಯಕ್ತಿಗಳಂತೆ ಇರುತ್ತಾರೆ. ಸುಂದರ ಮಹಿಳೆ/ಹುಡುಗಿ ಇವರನ್ನು ಬಲು ಇಷ್ಟ ಪಡುವರು. ಇವರ ಶೈಲಿ ಹಾಗೂ ವರ್ತನೆಗಳು ಇತರರಿಗಿಂತ ವಿಭಿನ್ನವಾಗಿರುತ್ತದೆ. ಒಂದೇ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುವ ಸಾಮಥ್ರ್ಯವನ್ನು ಹೊಂದಿರುವರು. ಇವರ ದೃಷ್ಟಿಯಲ್ಲಿ ಪ್ರೀತಿ ಎನ್ನುವುದು ಆಳವಾದ ಭಾವನೆಯಾಗಿರುತ್ತದೆ.ಇವರು ಪ್ರೀತಿ ಮತ್ತು ಕರ್ತವ್ಯಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವರು. ಇದು ಮಹಿಳೆಯರಿಗೆ ಅತ್ಯಂತ ಖುಷಿಯನ್ನು ತರುವ ವರ್ತನೆ ಅಥವಾ ವಿಚಾರಗವಾಗಿ ಇರುವುದು. ಇವರಲ್ಲಿ ನಾಚಿಕೆ ಸ್ವಭಾವವು ಇರುವುದರಿಂದ ಯಾರಿಗೂ ಮಾ ಹಾನಿ ಮಾಡಲು ಇಷ್ಟಪಡದ ವ್ಯಕ್ತಿಗಳಾಗುವರು.

ಮಕರ
ಇವರು ತಮ್ಮ ಅತ್ಯುತ್ತಮ ನೋಟದಿಂದಲೇ ಆಕರ್ಷಿಸುತ್ತಾರೆ. ಇವರು ಅತ್ಯುತ್ತಮ ವ್ಯಕ್ತಿತ್ವ ಹಾಗೂ ಸೌಂದರ್ಯವನ್ನು ಹೊಂದಿರುವುದರಿಂದ ಮಹಿಳೆಯರು ಇವರಿಂದ ಆಕರ್ಷಣೆಗೆ ಒಳಗಾಗುತ್ತಾರೆ. ಇವರ ಮಾತನಾಡುವ ಶೈಲಿ ಹಾಗೂ ಕೆಲಸದಲ್ಲಿ ತೋರುವ ನಿಷ್ಠೆಯು ಇತರರನ್ನು ಆಕರ್ಷಿಸುವುದು. ಸಂತೋಷದಿಂದ ಇರುವಂತಹ ಇವರ ಪ್ರವೃತ್ತಿ ಹಾಗೂ ಸಕ್ರಿಯವಾಗುವ ಗುಣವು ಎಲ್ಲರ ನಡುವೆಯೂ ಎದ್ದು ಕಾಣುವಂತೆ ಮಾಡುವುದು. ಇವರು ತಾವು ಇಷ್ಟಪಡುವ ವ್ಯಕ್ತಿಗಳನ್ನು ಬಹಳ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುವರು.



Click it and Unblock the Notifications











