For Quick Alerts
ALLOW NOTIFICATIONS  
For Daily Alerts

ಮೇ ತಿಂಗಳಲ್ಲಿ ಕಠಿಣ ಸಮಯವನ್ನು ಎದುರಿಸುವ ಸಾಧ್ಯತೆ ಇರುವ ರಾಶಿಗಳು

|

ಈ ತಿಂಗಳಲ್ಲಿ ನೀವು ಎಷ್ಟು ಅದೃಷ್ಟಶಾಲಿ ಎಂದು ಊಹಿಸಬಲ್ಲಿರಾ? ಎಂದಾದರೂ ಯೋಚಿಸಿದ್ದೀರಾ?. ಈ ಲೇಖನದಲ್ಲಿ, ಮೇ ತಿಂಗಳಲ್ಲಿ ಕಠಿಣ ಸಮಯವನ್ನು ಹೊಂದಬಹುದಾದ ರಾಶಿಗಳ ಬಗ್ಗೆ ನಾವು ನಿಮಗೆ ತಿಳಿಸುತ್ತಿದ್ದೇವೆ. ಈ ರಾಶಿಯವರು ಈ ತಿಂಗಳಲ್ಲಿ ಹೆಚ್ಚಿನ ಕಠಿಣ ಸಮಯವನ್ನು ಅನುಭವಿಸುತ್ತಾರೆ ಎಂದು ಮುನ್ನೋಟವು ತಿಳಿಸುತ್ತದೆ. ಸರಿ, ನಾವು ನಿಮಗೆ ರಾಶಿಗಳ ಪಟ್ಟಿಯನ್ನು ನೀಡುತ್ತೇವೆ, ನಿಮ್ಮ ರಾಶಿಯನ್ನು ಇಲ್ಲಿ ಪಟ್ಟಿ ಮಾಡಲಾಗಿದೆಯೇ ಎಂದು ನೋಡಿ.

ಮೇ ತಿಂಗಳಲ್ಲಿ ಕಠಿಣ ಸಮಯವನ್ನು ಹೊಂದುವ 3 ರಾಶಿಗಳ ಬಗ್ಗೆ ನಮ್ಮ ಆಸ್ಟ್ರೋ-ತಜ್ಞರು ಬಹಿರಂಗಪಡಿಸಿದ್ದಾರೆ. ಆ ರಾಶಿಗಳು ವೃಷಭ, ಸಿಂಹ ಹಾಗೂ ವೃಶ್ಚಿಕ. ಈ ರಾಶಿಯವರ ಅದೃಷ್ಟವು ಈ ತಿಂಗಳಿನಲ್ಲಿ ದೀರ್ಘಕಾಲ ಉಳಿಯುವಂತೆ ತೋರುತ್ತಿಲ್ಲ ಮತ್ತು ಅವರು ಮಾಡುವ ಕೆಲಸಗಳು ಸಂಪೂರ್ಣವಾಗಲು ಇವರ ನಕ್ಷತ್ರಗಳು ಬಿಡುವುದಿಲ್ಲ.

 ಮೇ ತಿಂಗಳಲ್ಲಿ ಕಠಿಣ ಸಮಯವನ್ನು ಎದುರಿಸುವ ಸಾಧ್ಯತೆ ಇರುವ ರಾಶಿಗಳು

ಈ ರಾಶಿಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಮುಂದೆ ಓದಿ.

ವೃಷಭ ರಾಶಿ: ಏಪ್ರಿಲ್ 20-ಮೇ 20

ನೀವು ಈಗಾಗಲೇ ಕರ್ಮದ ವಿರಾಮಕ್ಕೆ ಸಿದ್ಧರಾಗಿರಬಹುದು, ಆದರೆ ಬಹಳ ಸವಾಲುಗಳು ದೀರ್ಘಾವಧಿಯಲ್ಲಿ ನಿಮಗೆ ಅಮೂಲ್ಯ ಪಾಠಗಳನ್ನು ಕಲಿಸಬಹುದು. ಮತ್ತೊಂದೆಡೆ, ಬ್ರಹ್ಮಾಂಡವು ವಾಸ್ತವವಾಗಿ ಈ ತಿಂಗಳಲ್ಲಿ ನಿಮ್ಮನ್ನು ಶಿಕ್ಷಿಸಲು ಪ್ರಯತ್ನಿಸುತ್ತಿಲ್ಲ.

ನೀವು ಸಾಮಾನ್ಯವಾಗಿ, ಆಕ್ರಮಣಶೀಲವಾಗಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂಬ ಪ್ರಚೋದನೆಯನ್ನು ಅನುಭವಿಸಬಹುದು. ಆದರೆ ಮಧ್ಯ ತಿಂಗಳ ಅವಧಿಯಲ್ಲಿ ಇದು ಕಡಿಮೆಯಾಗುವಂತೆ ತೋರುತ್ತದೆ. ನೀವು ತುಂಬಾ ಜೋರಾಗಿದ್ದರೆ ಅಥವಾ ಸಬಲವಾಗಿದ್ದರೆ ಸಂಬಂಧದ ಸಮಸ್ಯೆಗಳನ್ನು ಎದುರಿಸಬಹುದು ಎಂದು ಸಹ ಊಹಿಸಲಾಗಿದೆ.

ಇದಲ್ಲದೆ, ನೀವು ಪ್ರಗತಿಯ ವಿರುದ್ಧ ತಡೆಗೋಡೆ ಅನುಭವಿಸುತ್ತಿದ್ದೀರಿ ಎಂದಾದರೆ ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಂಡು ವಿರಾಮ ಮಾಡಲು ಸಮಯ ಎಂದು ನೆನಪಿಡಿ.


ಸಿಂಹ ರಾಶಿ: ಜುಲೈ 23-ಆಗಸ್ಟ್ 23

ಇದು ಮೇ ತಿಂಗಳಾಗಿದ್ದು, ಹಾಸಿಗೆಯಲ್ಲಿ ಉಳಿಯಲು ಮತ್ತು ನಿಮ್ಮ ತಲೆಯ ಮೇಲೆ ಹೊದಿಕೆಗಳನ್ನು ಹೊದೆದುಕೊಳ್ಳಲು ನೀವು ಬಯಸಬಹುದು. ಈ ತಿಂಗಳಲ್ಲಿ ಕೆಲವು ರೀತಿಯ ಕಿರಿಕಿರಿಯು ನಿಮ್ಮನ್ನು ನಿರತವಾಗಿಸುತ್ತದೆ ಕಾಡುತ್ತದೆ ಎಂದು ಊಹಿಸಲಾಗಿದೆ. ನಿಮಗೆ ಎದುರಾಗುವ ತೊಂದರೆ, ಸಂಗಾತಿ, ಕುಟುಂಬದ ಸದಸ್ಯ, ಅಥವಾ ಆಪ್ತ ಸ್ನೇಹಿತನ ರೂಪದಲ್ಲಿ ಬರಬಹುದೆಂದು ತಜ್ಞರು ಊಹಿಸುತ್ತಾರೆ.

ನೀವು ಮಾಡುತ್ತಿರುವ ಎಲ್ಲಾ ಕೆಲಸಗಳನ್ನು ನಿಲ್ಲಿಸಿ, ನೀವು ಹಿಂದೆ ಬಿಟ್ಟ ಅಪೂರ್ಣ ಕೆಲಸಗಳನ್ನು ಮುಗಿಸವಂತೆ ಸೂಚಿಸಲಾಗಿದೆ. ಮತ್ತೊಂದೆಡೆ, ನಿಮ್ಮ ಕೆಲಸದ ಹೊರೆ ಹೆಚ್ಚಾಗುತ್ತದೆ ಎಂದು ತೋರುತ್ತದೆ. ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು ಮತ್ತು ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳುವ ಅನೇಕ ಸಾಧ್ಯತೆಗಳಿವೆ ಎಂದು ಮುನ್ನೋಟವು ತಿಳಿಸುತ್ತದೆ.


ವೃಶ್ಚಿಕ ರಾಶಿ: ಅಕ್ಟೋಬರ್ 24-ನವೆಂಬರ್ 22

ತಿಂಗಳ ಮಧ್ಯಭಾಗ ಬೇಸರವನ್ನುಂಟುಮಾಡುತ್ತದೆ ಎಂದು ಊಹಿಸಲಾಗಿದೆ. ಇದು ನೀವು ಇತ್ತೀಚಿಗೆ ತೆಗೆದುಕೊಂಡ ನಿರ್ಧಾರದ ಫಲಿತಾಂಶವಾಗಿರಬಹುದು ಮತ್ತು ನಿಮ್ಮನ್ನು ನೀವು ಆರಾಮದಾಯಕವಾದ ಸಂಗತಿಗಳಂದ ದೂರವಿಡಲು ಕಷ್ಟವಾಗಬಹುದು, ಏಕೆಂದರೆ ನಿಮ್ಮ ಆರಾಮದಾಯಕ ಸಂಗತಿಗಳು ಮತ್ತು ಆಸಕ್ತಿ ಯಾವುದೋ, ಅದು ವೇಗವಾಗಿ ಬದಲಾಗಬಹುದು.

ನಿಮಗೆ ವಾದಗಳನ್ನು ತಪ್ಪಿಸಲು ಕಷ್ಟವಾಗಬಹುದು ಆದರೆ ನೀವು ಇತರರ ಬಗ್ಗೆ ಯೋಚಿಸಬೇಕು ಮತ್ತು ವಿಷಯಗಳನ್ನು ಉತ್ತಮ ರೀತಿಯಲ್ಲಿ ರಾಜಿ ಮಾಡಿಸಬೇಕು. ನೀವು ಮಾತನಾಡುವುದಕ್ಕಿಂತ ಹೆಚ್ಚು ಕೇಳಬೇಕು. ಇದು ನಿಮ್ಮ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಗೊಳಿಸಬಹುದು.

Read more about: life zodiac signs
English summary

ಮೇ ತಿಂಗಳಲ್ಲಿ ಕಠಿಣ ಸಮಯವನ್ನು ಎದುರಿಸುವ ಸಾಧ್ಯತೆ ಇರುವ ರಾಶಿಗಳು

Our astro-experts reveal about the 3 zodiac signs who are going to have a real tough time during the month of May. These zodiac signs are Taurus, Leo and Scorpio. Luck does not seem to stay with these signs for a longer time during the month and everything that they do, their stars do not let it happen.
Story first published: Friday, May 4, 2018, 13:19 [IST]
X
Desktop Bottom Promotion