Latest Updates
-
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ!
ನೋಡಿ ಈ ಐದು ರಾಶಿಯವರಿಗೆ ಸೆಕ್ಸ್ ನಲ್ಲಿ ಜಾಸ್ತಿ ಆಸಕ್ತಿಯಂತೆ!!
ಹೆಚ್ಚಿನ ಲೈಂಗಿಕ ಕ್ಷಮತೆ ಇರುವುದು ಲೈಂಗಿಕ ಜೀವನವನ್ನು ಅತ್ಯುತ್ತಮವಾಗಿ ಕಳೆಯಲು ಆ ದೇವರೇ ನೀಡಿದ ಒಂದು ವರವಾಗಿದೆ. ಹೊಸ ಸಂಬಂಧಕ್ಕೆ ಒಳಗಾಗಲು ಅಥವಾ ಸಂಗಾತಿಯೊಂದಿಗೇ ಒಂದು ವಾರಾಂತ್ಯವನ್ನು ಯಾವುದೇ ದುಗುಡ ಬಿಗುಮಾನವಿಲ್ಲದೇ ಸಾಂಗತ್ಯದಲ್ಲಿ ಕಳೆಯಲು ಈ ಕ್ಷಮತೆ ನೆರವಿಗೆ ಬರುತ್ತದೆ.
ಆದರೆ ಲೈಂಗಿಕ ಕ್ಷಮತೆ ಅಥವಾ ಲೈಂಗಿಕ ದಾರ್ಢ್ಯತೆ ಎಲ್ಲಾ ವ್ಯಕ್ತಿಗಳಲ್ಲಿ ಏಕಪ್ರಕಾರವಾಗಿರುವುದಿಲ್ಲ. ಇದರ ಅರ್ಥ ಎಲ್ಲಾ ವ್ಯಕ್ತಿಗಳೂ ಲೈಂಗಿಕ ಜೀವನವನ್ನು ಸಂತೋಷವಾಗಿ ನಡೆಸುತ್ತಿಲ್ಲವೆಂದಲ್ಲ. ಅಷ್ಟಕ್ಕೂ ಸಾರ್ಥಕ ದಾಂಪತ್ಯದಲ್ಲಿ ಲೈಂಗಿಕ ಸಂಪರ್ಕಕ್ಕೆ ಶೇಖಡಾ ಹತ್ತರಷ್ಟು ಮಾತ್ರವೇ ಮಹತ್ವವಿದ್ದು ಲೈಂಗಿಕ ಪರಾಕ್ರಮ
ಕೆಲವೊಮ್ಮೆ ಅತಿಯಾಗಿಬಿಡಬಹುದು. ಆದರೆ ಕೆಲವು ವ್ಯಕ್ತಿಗಳಲ್ಲಿ ಕಾಮಾಸಕ್ತಿ ಇತರರಿಗಿಂತ ಹೆಚ್ಚೇ ಇದ್ದು ಇವರಲ್ಲಿ 'ಸದಾಶಿವನಿಗೆ ಸದಾ ಅದೇ ಧ್ಯಾನ'ಎಂಬ ಪರಿ ಮನೆಮಾಡಿರುತ್ತದೆ. ಇವರು ತಮ್ಮ ಸಂಗಾತಿಯಿಂದ ಸದಾ ಹೊಸತನವನ್ನು ಪ್ರಯತ್ನಿಸುತ್ತಿರುತ್ತಾರೆ (ವಿಶೇಷವಾಗಿ, ವಾರಾಂತ್ಯದ ರಜಾವೇಳೆಯಲ್ಲಿ). ಜ್ಯೋತಿಷ್ಯಾಸ್ತ್ರದ ಪ್ರಕಾರ ಈ ಬಗೆಯ ಅತಿಯಾದ ಕಾಮಾಸಕ್ತಿ ಒಟ್ಟು ಐದು ರಾಶಿಯ ವ್ಯಕ್ತಿಗಳಲ್ಲಿ ಹೆಚ್ಚೇ ಇದ್ದು ಇವರು ತಮ್ಮ ಖಾಸಗಿ ಸಮಯವನ್ನು ಅತಿ ರೋಚಕವಾಗಿ ಹಾಗೂ ಹೆಚ್ಚಿನ ಕ್ಷಮತೆಯಿಂದ ಕಳೆಯುತ್ತಾರೆ.
ಹೊಸತನಕ್ಕೆ ಪ್ರಯತ್ನವೇ ಬಂಡವಾಳವಂತೆ. ಕಾಮಾಸಕ್ತಿಯ ವಿಷಯದಲ್ಲಿಯೂ ಹಾಗೇ, ಈ ರಾಶಿಯ ವ್ಯಕ್ತಿಗಳಲ್ಲಿ ಸದಾ ಹೊಸತನವನ್ನು ಪ್ರಯತ್ನಿಸುವ ತುಡಿತವಿದ್ದು ಇವರೊಂದಿಗಿನ ಸಂಗದ ಮೂಲಕ ಹೊಸತಾದ ಹಲವು ವಿಷಯಗಳನ್ನು ಕಲಿಯಲು ಸಾಧ್ಯ. ಒಂದು ವೇಳೆ ಈ ಕ್ಷಮತೆ ಇರುವ ವ್ಯಕ್ತಿಗಳು ಯಾವ ರಾಶಿಗೆ ಸೇರಿರುತ್ತಾರೆ ಎಂಬ ಕುತೂಹಲ ನಿಮಗಿದ್ದರೆ ಈ ಕೆಳಗಿನ ಮಾಹಿತಿ ನಿಮಗೆ ನೆರವಾಗಲಿದೆ...

ವೃಷಭ (ಏಪ್ರಿಲ್ 20 - ಮೇ 20)
ವೃಷಭ ರಾಶಿಯ ವ್ಯಕ್ತಿಗಳು ಪ್ರೀತಿ ಹಾಗೂ ಆತ್ಮೀಯ ಸ್ಪರ್ಶಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಹಾಗೂ ಈ ವ್ಯಕ್ತಿಗಳಲ್ಲಿ ಹೆಚ್ಚಿನ ಕಾಮಾಸಕ್ತಿ ಇರುವುದು ಅಚ್ಚರಿಯೇನಲ್ಲ! ಒಂದು ವೇಳೆ ನಿಮ್ಮ ಸಂಗಾತಿ ಈ ರಾಶಿಗೆ ಸೇರಿದ್ದರೆ ಅಥವಾ ಈ ರಾಶಿಯ ವ್ಯಕ್ತಿಯೊಂದಿಗೆ ಅಲ್ಪಕಾಲವನ್ನು ಕಳೆಯಬಯಸಿದರೆ ಈ ವ್ಯಕ್ತಿಯ ಕಾಮಾಸಕ್ತಿ ಹಾಗೂ ಸಾಮರ್ಥ್ಯ ಕೆಲವು ಘಂಟೆಗಳವರೆಗಾದರೂ ಕಾಮಸುಖವನ್ನು ಪಡೆಯುವಂತೆ ಮಾಡಬಹುದು.

ವೃಷಭ (ಏಪ್ರಿಲ್ 20 - ಮೇ 20)
ಈ ವ್ಯಕ್ತಿಗಳು ಹೆಚ್ಚು ಸೂಕ್ಷ್ಮಸಂವೇದಿಗಳೂ ಆಗಿದ್ದು ಇವರ ಕಾಮಾತುರ ಸಂಗಾತಿಗೆ ಯಾವುದೇ ರೀತಿಯಲ್ಲಿ ಒತ್ತಡ ಹೇರದಂತೆ ಎಚ್ಚರ ವಹಿಸುತ್ತಾರೆ. ಇವರ ಸಾಂಗತ್ಯದಲ್ಲಿ ಆಳವಾದ ಚುಂಬನ, ಸೂಕ್ಷ್ಮಸಂವೇದಿ ಭಾಗಗಳ ಸ್ಪರ್ಶ ಹಾಗೂ ಕಾಮೋತ್ತೇಜಕ ನಡೆಗಳು ತುಂಬಿರುತ್ತವೆ. ಈ ವ್ಯಕ್ತಿಯೊಂದಿಗಿನ ಕಾಮಸಂಪರ್ಕ ಹೆಚ್ಚಿನ ಸಮಯದವರೆಗೆ ನೆನಪಿನಲ್ಲಿಡುವಂತಹ ಅನುಭವವಾಗಿರುತ್ತದೆ.

ಸಿಂಹ (ಜುಲೈ 23 - ಆಗಸ್ಟ್ 22)
ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಪೋಲಿಗಳೂ ತೆರೆದ ಮನಸ್ಸಿನವರೂ ಆಗಿದ್ದು ಇದೇ ಕಾರಣಕ್ಕೆ ಹೆಚ್ಚಿನ ವ್ಯಕ್ತಿಗಳು ಇವರೊಂದಿಗೆ ಸ್ನೇಹವನ್ನು ಬಯಸುತ್ತಾರೆ. ಈ ವ್ಯಕ್ತಿಗಳನ್ನು ಬಯಸದೇ ಇರುವುದು ಕಷ್ಟಕರವಾಗಿದ್ದು ಈ ಆಕರ್ಷಣೆಯನ್ನು ಈ ವ್ಯಕ್ತಿಗಳು ತಮ್ಮ ಸಂಗಾತಿಗಳನ್ನು ಮೆಚ್ಚಿಸಲು ಯಥೇಚ್ಛವಾಗಿ ಬಳಸುತ್ತಾರೆ. ಈ ವ್ಯಕ್ತಿಗಳು ಜೀವನವನ್ನು ಪ್ರೀತಿಪೂರ್ವಕ ಹಾಗೂ ಸಾರ್ಥಕವಾಗಿ ಕಳೆಯಲು ಹೆಚ್ಚಿನ ಮಹತ್ವ ನೀಡುತ್ತಿದ್ದು ಈ ಪ್ರೇರಣೆ ಸಂಗಾತಿಯಲ್ಲಿಯೂ ಹೆಚ್ಚಿನ ಕಾಮಾಸಕ್ತಿ ಮೂಡಿಸಲು ಹಾಗೂ ಕಳೆಯುವ ಪ್ರತಿ ರಾತ್ರಿಯೂ ರಂಜನೀಯವಾಗಿರಲು ಸಾಧ್ಯವಾಗುತ್ತದೆ.

ಸಿಂಹ (ಜುಲೈ 23 - ಆಗಸ್ಟ್ 22)
ಈ ವ್ಯಕ್ತಿಗಳು ಪ್ರತಿಭಾವಂತರೂ ಕ್ರಿಯಾತ್ಮಕರೂ ಆಗಿದ್ದು ತಮ್ಮ ಕಲಾವಂತಿಕೆಯನ್ನು ಹಾಸಿಗೆಯಲ್ಲಿಯೂ ಪ್ರಕಟಿಸುತ್ತಾರೆ ಹಾಗೂ ಮಿಲನ ಕ್ರಿಯೆಯಲ್ಲಿ ಹೊಸತನ ಮತ್ತು ವೈವಿಧ್ಯವನ್ನು ತರುತ್ತಾರೆ. ಇವರೊಂದಿಗೆ ರಾತ್ರಿಯನ್ನು ಕಳೆಯುವ ವ್ಯಕ್ತಿಯಿಂದ ಈ ಸಮಯ 'ಬೇಸರದಲ್ಲಿಯೇ ಕಳೆದು ಹೋಯಿತು' ಎಂಬ ಒಂದೂ ಮಾತನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

ವೃಶ್ಚಿಕ (ಅಕ್ಟೋಬರ್ 23 - ನವೆಂಬರ್ 21)
ಇವರ ಆತ್ಮವಿಶ್ವಾಸದ ಮುನ್ನಡೆಯುವಿಕೆ ಇವರ ಸಂಗಾತಿಯನ್ನು ಇವರತ್ತ ಹೆಚ್ಚು ಆಕರ್ಷಣೆ ಪಡೆಯಲು ನೆರವಾಗುತ್ತದೆ. ಲೈಂಗಿಕ ವಿಷಯ ಬಂದಾಗ ಇವರ ಆಕ್ರಮಣಾಶೀಲ ಗುಣ ಇವರಿಗೆ ಪ್ರಯೋಜನಕಾರಿಯಾಗಿ ಪರಿಣಮಿಸುತ್ತದೆ. ಈ ವ್ಯಕ್ತಿಗಳಲ್ಲಿ ಹೆಚ್ಚಿನ ಕಾಮಸಾಮರ್ಥ್ಯ ಇರುವುದು ತಿಳಿದೇ ಇರುವ ವಿಷಯವಾದ ಕಾರಣ ಇವರ ಸಂಗವನ್ನು ಪಡೆಯಲು ಸಂಗಾತಿ ಹೆಚ್ಚೇ ಹಾತೊರೆಯುತ್ತಾರೆ.

ವೃಶ್ಚಿಕ (ಅಕ್ಟೋಬರ್ 23 - ನವೆಂಬರ್ 21)
ಈ ವ್ಯಕ್ತಿಗಳು ಜೀವನದ ಭಿನ್ನ ಅನುಭವಗಳನ್ನು ಪಡೆಯಲು ಉತ್ಸುಕರಾಗಿದ್ದು ಇದರಲ್ಲಿ ತಮ್ಮ ಲೈಂಗಿಕ ಕಾಮನೆ ಪೂರ್ಣಗೊಳ್ಳುವವರೆಗೂ ಕಾಮಕ್ರೀಡೆಯಲ್ಲಿ ಮುಂದುವರೆಯುವುದೂ ಒಂದಾಗಿದೆ. ಇವರ ಸಂಗಾತಿಗಳು ಈ ವ್ಯಕ್ತಿಗಳೆಂದೂ ತಮ್ಮನ್ನು ಕಾಮವಿಷಯದಲ್ಲಿ ನಿರಾಶೆಗೊಳಿಸುವುದಿಲ್ಲ ಎಂದು ತಿಳಿಸುತ್ತಾರೆ.

ಧನು (ನವೆಂಬರ್ 22 - ಡಿಸೆಂಬರ್ 19)
ಲೈಂಗಿಕ ಸಂಪರ್ಕದ ವಿಷಯ ಬಂದಾಗ ಈ ರಾಶಿಯ ವ್ಯಕ್ತಿಗಳೊಂದಿಗೆ ಸಮಯ ಕಳೆಯುವುದು ವಿನೋದ ಮತ್ತು ಸಂತೋಷಕರ ಅನುಭವವೇ ಆಗಿರುತ್ತದೆ. ಈ ವ್ಯಕ್ತಿಗಳ ಆಕರ್ಷಕ ವ್ಯಕ್ತಿತ್ವ ಹೆಚ್ಚಿನ ಜನರನ್ನು ಇವರತ್ತ ಸೆಳೆಯುತ್ತದೆ ಹಾಗೂ ಇವರೊಂದಿಗೆ ಸಮಯ ಕಳೆಯಲು ಪ್ರೇರೇಪಿಸುತ್ತದೆ. ಕಾಮಕ್ರೀಡೆಯಲ್ಲಿ ಇವರು ಹೆಚ್ಚು ಉತ್ಸುಕರಾಗಿದ್ದು ಸದಾ ಹೊಸತನವನ್ನು ಪ್ರಯತ್ನಿಸುವವರಾಗಿರುತ್ತಾರೆ ಹಾಗೂ ಇದೇ ಕಾರಣಕ್ಕೆ ಇಬ್ಬರೂ ಪೂರ್ಣಪ್ರಮಾಣದ ಲೈಂಗಿಕ ತೃಪ್ತಿ ಪಡೆಯಲು ಸಾಧ್ಯವಾಗುತ್ತದೆ. ಈ ವ್ಯಕ್ತಿಗಳು ಉದಾರ ಮನಸ್ಸಿನವರಾಗಿದ್ದು ಇವರೊಂದಿಗಿನ ಲೈಂಗಿಕ ಜೀವನವೂ ಉಲ್ಲಾಸಮಯವಾಗಿಯೇ ಇರುತ್ತದೆ.

ಕುಂಭ (ಜನವರಿ 20 - ಫೆಬ್ರವರಿ 18)
ಈ ವ್ಯಕ್ತಿಗಳು ಸಾಮಾಜಿಕವಾಗಿ ಸಕ್ರಿಯರಾಗಿದ್ದು ಸದಾ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತಮ್ಮೆಡೆಗೆ ಸೆಳೆಯುತ್ತಾರೆ. ಕೆಲವು ವ್ಯಕ್ತಿಗಳನ್ನು ತಮ್ಮಲ್ಲಿ ಹೆಚ್ಚಿನ ಆಕರ್ಷಣೆ ಪಡೆಯುವಂತೆ ಮಾಡಲು ಹಾಗೂ ಇದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಇವರು ಹೆಚ್ಚು ಸಮರ್ಥರಿರುತ್ತಾರೆ. ಸಾಮಾನ್ಯವಾಗಿ ಈ ವ್ಯಕ್ತಿಗಳು ಭಿನ್ನ ಸಂದರ್ಭಗಳಲ್ಲಿ ಭಿನ್ನವಾದ ವ್ಯಕ್ತಿತ್ವವನ್ನು ಪ್ರಕಟಿಸುವ ಮೂಲಕ ತಮ್ಮ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಅಲ್ಪಕಾಲೀನವೇ ಆಗಲಿ, ದೀರ್ಘಕಾಲೀನವೇ ಆಗಲಿ, ಇವರೊಂದಿಗಿನ ಲೈಂಗಿಕ ಸಂಪರ್ಕ ಸಾಮಾನ್ಯಕ್ಕೂ ಬಿನ್ನವೇ ಆಗಿರುತ್ತದೆ. ಮಲಗುವ ಕೋಣೆಯಲ್ಲಿ ಈ ವ್ಯಕ್ಗಿಗಳು ಸದಾ ಹೊಸ ಆಟಗಳನ್ನು ಆಡುವ ಹುಮ್ಮಸ್ಸಿನಲ್ಲಿರುತ್ತಾರೆ ಹಾಗೂ ಇವರಲ್ಲಿರುವ ಅಧಿಕ ಲೈಂಗಿಕ ಕ್ಷಮತೆಯ ಕಾರಣದಿಂದ ಇವರ ಸಂಗಾತಿ ಇವರತ್ತ ಇನ್ನೂ ಹೆಚ್ಚು ಹೆಚ್ಚಾಗಿ ಆಕರ್ಷಿತರಾಗುತ್ತಾರೆ.



Click it and Unblock the Notifications











