Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಈ ಐದು ರಾಶಿಯವರು, ಚಿಂತೆ ಮಾಡಿಯೇ ಖಿನ್ನತೆಗೆ ಒಳಗಾಗುತ್ತಾರೆ!
ಮನುಷ್ಯ ಅದೆಷ್ಟೇ ಶ್ರೀಮಂತನಾಗಿರಲಿ ಅಥವಾ ಅಧಿಕ ಬುದ್ಧಿಯನ್ನು ಹೊಂದಿರುವ ಶಕ್ತಿಶಾಲಿ ವ್ಯಕ್ತಿಯಾಗಿರಲಿ ಮನಸ್ಸು ಎನ್ನುವುದು ಮಾತ್ರ ಬಹಳ ಸೂಕ್ಷ್ಮತೆಯನ್ನು ಹೊಂದಿರುತ್ತದೆ. ಸಣ್ಣಪುಟ್ಟ ಸಂತೋಷಕ್ಕೂ ಮನಸ್ಸು ಹಿಗ್ಗುತ್ತದೆ. ಹಾಗೆಯೇ ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಥವಾ ಬೇಸರಗಳಿಗೆ ಮನಸ್ಸು ಬಹು ಬೇಗ ಕುಗ್ಗುತ್ತದೆ. ಖಿನ್ನತೆಗೆ ಒಳಗಾಗುತ್ತದೆ. ಹಾಗಾಗಿ ಮನುಷ್ಯನ ಪ್ರಮುಖ ಆಸ್ತಿಯೆಂದರೆ ಮಾನಸಿಕ ಆರೋಗ್ಯ. ಈ ಆರೋಗ್ಯ ಹದಗೆಟ್ಟಿದೆ ಎಂದಾಗ ವ್ಯಕ್ತಿ ತನ್ನ ವ್ಯಕ್ತಿತ್ವಕ್ಕಿರುವ ಬೆಲೆಯನ್ನು ಕಳೆದುಕೊಳ್ಳುತ್ತಾನೆ.
ವ್ಯಕ್ತಿಯು ನಿರಂತರವಾಗಿ ದುಃಖಿತನಾದಾಗ ಅಥವಾ ಚಿಕ್ಕ ಸಮಸ್ಯೆಗಳಿಗೂ ದುಃಖಿಸುವ ವ್ಯಕ್ತಿ ಬಹುಬೇಗ ಖಿನ್ನತೆಗೆ ಒಳಗಾಗುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ವ್ಯಕ್ತಿಗಳು ಬಹುಬೇಗ ಖಿನ್ನತೆಗೆ ಒಳಗಾಗುತ್ತಾರೆ ಎಂದು ಹೇಳಲಾಗುತ್ತದೆ. 12 ರಾಶಿ ಚಕ್ರಗಳಲ್ಲಿ ಯಾವೆಲ್ಲಾ ರಾಶಿಚಕ್ರದವರ ಮೇಲೆ ಖಿನ್ನತೆಯ ಪರಿಣಾಮ ಅಧಿಕ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ....

ಮಕರ: 23 ಡಿಸೆಂಬರ್ -20 ಜನವರ
ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಉತ್ಸಾಹ ಭರಿತರಾಗಿರುತ್ತಾರೆ. ಇವರು ಯಶಸ್ಸಿಗಾಗಿ ಹಂಬಲಿಸುತ್ತಾರೆ. ಇವರ ಉತ್ಸಾಹವು ತಮ್ಮದೇ ಆದ ಕೆಲಸದ ಮಿತಿಯನ್ನು ಪರಿಶೀಲಿಸುವ ಸವಾಲನ್ನುಂಟುಮಾಡುತ್ತದೆ. ತಮ್ಮ ಗುರಿಯನ್ನು ಸಾಧಿಸಲು ವಿಫಲರಾದಾಗ ಕೆಲಸದಲ್ಲಿ ತಮ್ಮನ್ನು ತಾವು ಇನ್ನಷ್ಟು ಆಕ್ರಮಿಸಿಕೊಳ್ಳುತ್ತಾರೆ. ಸಣ್ಣ ಸಮಸ್ಯೆಗಳನ್ನು ಬಹುದೊಡ್ಡ ವಿಷಯಾವಗಿ ಪರಿಗಣಿಸುತ್ತಾರೆ. ಜೊತೆಗೆ ಅನೇಕ ವಿಚಾರಗಳಿಗೆ ತಪ್ಪು ಗ್ರಹಿಕೆಯನ್ನು ಹೊಂದುತ್ತಾರೆ. ಇವುಗಳ ಪರಿಣಾಮವಾಗಿಯೇ ಬಹುಬೇಗ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು.

ವೃಷಭ: ಏಪ್ರಿಲ್ 20-ಮೇ20
ಇವರು ವೈಯಕ್ತಿಕವಾಗಿ ಕನಸು ಮತ್ತು ಭ್ರಮೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಇವರಿಗೆ ಸತ್ಯವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದು. ಇದರ ಪರಿಣಾಮದಿಂದ ಬಹುಬೇಗ ಖಿನ್ನತೆಗೆ ಒಳಗಾಗುತ್ತಾರೆ. ಇವರು ಸಣ್ಣ ಕೆಲಸವನ್ನು ಸಹ ದೊಡ್ಡ ಸಮಸ್ಯೆಯನ್ನಾಗಿ ಪರಿಗಣಿಸುತ್ತಾರೆ. ಮಕರ ರಾಶಿಯವರಂತೆ ಇವರಿಗೂ ಕೆಲಸದ ಮಧ್ಯದಲ್ಲಿ ಒಂದಿಷ್ಟು ವಿರಾಮ ಅಥವಾ ವಿಶ್ರಾಂತಿಯ ಅಗತ್ಯವಿರುತ್ತದೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಈ ರಾಶಿಯವರು ತಮ್ಮ ಜೀವನದ ಪ್ರತಿಯೊಂದು ಅಂಶವನ್ನು ಒಂದೇ ಪ್ರಮಾಣದಲ್ಲಿ ಇಡಲು ಬಯಸುತ್ತಾರೆ. ಇವರು ಯಾರನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಹೋದರೆ ಹೋಗಲಿ ಎಂದು ಬಿಟ್ಟುಬಿಡುತ್ತಾರೆ. ಆದರೆ ನಂತರ ದುಃಖದ ಮಟ್ಟವು ಹೆಚ್ಚುವುದು. ಇವರು ನಷ್ಟವನ್ನು ಸರಿ ಪ್ರಮಾಣದಲ್ಲಿ ನಿಭಾಯಿಸಲಾರರು. ಅವರ ದುಃಖದ ಮಟ್ಟವು ಇವರಲ್ಲಿ ಶೂನ್ಯ ಭಾವವನ್ನು ತುಂಬಿಸುತ್ತದೆ. ಇವುಗಳ ಪರಿಣಾಮವಾಗಿ ಖಿನ್ನತೆ ಉಂಟಾಗುವುದು.

ಮೀನ: 20 ಫೆಬ್ರವರಿ -20 ಮಾರ್ಚ್
ಈ ರಾಶಿಯವರು ಹೆಚ್ಚಿನ ಸಮಯದಲ್ಲಿ ವಿಷಾದದ ಭಾವದಲ್ಲಿಯೇ ಇರುತ್ತಾರೆ. ಅವರ ದುಃಖಕ್ಕೆ ಪ್ರಮುಖವಾದ ಕಾರಣ ಬೇಕಾಗಿರುವುದಿಲ್ಲ. ಬಹಳ ಸೂಕ್ಷ್ಮ ಮತ್ತು ಕರುಣೆಯ ಭಾವನೆಯನ್ನು ಹೊಂದಿರುತ್ತಾರೆ. ಇವರ ಕೆಲವು ಮಾತುಗಳು ಇತರರ ಮೇಲೆ ದಾಳಿಮಾಡುವುದು. ಇವರಿಗೆ ಇವರ ಜೀವನದ ಸಮಸ್ಯೆಗಳನ್ನು ಎದುರಿಸಲು ಶೋಚನೀಯ ಎಂದು ಭಾವಿಸುತ್ತಾರೆ. ಇವರ ಈ ಎಲ್ಲಾ ಗುಣಗಳು ಬಹುಬೇಗ ಖಿನ್ನತೆಯನ್ನು ಸೃಷ್ಟಿಸಲು ಸಹಾಯ ಮಾಡುವುದು.

ಕರ್ಕ
ಈ ರಾಶಿಚಕ್ರದವರು ಸದಾ ನಕಾರಾತ್ಮಕ ಮತ್ತು ಸಕಾರಾತ್ಮಕ ರೀತಿಯಲ್ಲಿ ಯೋಚಿಸುತ್ತಾರೆ. ಇವರಲ್ಲಿ ಇರುವ ನಾಚಿಕೆ, ಅಂತರ್ಮುಖಿ ಸ್ವಭಾವ, ಆಸಕ್ತಿಯ ಸ್ವಭಾವದಿಂದ ಖಿನ್ನತೆಗೆ ದುಮುಖುತ್ತಾರೆ. ಇದರಿಂದ ಮೇಲೇಳಲು ಧೀರ್ಘವಾದ ಸಮಯ ಬೇಕಾಗುವುದು. ಇವರ ಭಾವನೆಗಳಿಗೆ ಯಾವುದೇ ಮಿತಿ ಇರುವುದಿಲ್ಲ ಎಂದು ತಿಳಿಯಬಹುದು.



Click it and Unblock the Notifications