ರಾಶಿ ಭವಿಷ್ಯ: ಈ ರಾಶಿಯವರಿಗೆ ಮೋಸ ಮಾಡುವ ಗುಣ ಇದೆಯಂತೆ!

Posted By: Deepu
Subscribe to Boldsky

ಒಬ್ಬ ವ್ಯಕ್ತಿಯ ಬಗ್ಗೆ ಬರವಸೆ ಅಥವಾ ನಂಬಿಕೆ ಎನ್ನುವುದು ಹುಟ್ಟಿತು ಎಂದಾದರೆ ನಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳುವುದು. ಕಷ್ಟದ ಸ್ಥಿತಿಯನ್ನು ಸಹ ಹೇಳಿಕೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ಭಾವನೆಗೆ ಸ್ಪಂದಿಸಿದವರ ಮೇಲೆ ಇನ್ನಷ್ಟು ವಿಚಾರಗಳನ್ನು ಬಹು ಸುಲಭವಾಗಿ ಹೇಳಿಕೊಳ್ಳುತ್ತೇವೆ. ಆದರೆ ವಾಸ್ತವಿಕವಾಗಿ ಎಲ್ಲರೂ ನಮ್ಮ ನಂಬಿಕೆಗೆ ಅರ್ಹ ವ್ಯಕ್ತಿಗಳಾಗಿರುವುದಿಲ್ಲ. ನಮ್ಮ ವಿಚಾರವನ್ನು ತಿಳಿದುಕೊಳ್ಳಲು ಕೆಲವು ಅಭಿನಯ ಮಾಡುವ ವ್ಯಕ್ತಿಗಳು ಇರುತ್ತಾರೆ. ಹಾಗಾಗಿ ನಾವು ಸದಾ ನಮ್ಮ ಎಚ್ಚರಿಕೆಯಲ್ಲಿ ಇರಬೇಕಾಗುವುದು.

ಭರವಸೆ ಹಾಗೂ ನಂಬಿಕೆ ಎನ್ನುವುದು ನಮ್ಮ ವೈಕ್ತಿಕ ಜೀವನ ಹಾಗೂ ವೃತ್ತಿ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನಾವು ನಮ್ಮ ವಿಚಾರವನ್ನು ಇತರರಲ್ಲಿ ಹೇಳಿಕೊಳ್ಳುವಾಗ ವ್ಯಕ್ತಿಯ ಆಯ್ಕೆ ಬಹಳ ಮುಖ್ಯವಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿ ಚಕ್ರದವರು ಎಷ್ಟೇ ನಂಬಿಕಸ್ತ ವ್ಯಕ್ತಿಗಳು ಎನಿಸಿದರು ಅವರು ರಾಶಿಚಕ್ರದ ಪ್ರಭಾವದಿಂದ ಮೋಸಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. ಹನ್ನೆರಡು ರಾಶಿಚಕ್ರದಲ್ಲಿ ಕೆಲವು ರಾಶಿಚಕ್ರದವರು ನಮ್ಮ ನಂಬಿಕೆಗೆ ಅರ್ಹರಾಗಿರುವುದಿಲ್ಲ. ಅವರು ಮೋಸಗೊಳಿಸುವ ಸಾಧ್ಯತೆಗಳಿವೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರು ಯಾವ ಬಗೆಯ ಮೋಸ ಮಾಡುವ ಸಾಧ್ಯತೆಗಳಿರುತ್ತವೆ ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ....

ಮಕರ

ಮಕರ

ಈ ರಾಶಿಚಕ್ರವು ಭೂಮಿಯ ಚಿಹ್ನೆಯನ್ನು ಹೊಂದಿದೆ. ಈ ರಾಶಿಯವರು ಶ್ರಮಜೀವಿಗಳು ಹಾಗೂ ನಿಷ್ಠಾವಂತರಾಗಿರುತ್ತಾರೆ. ಇವರ ಅಂದಾಜಿನಂತೆ ಸಂಬಂಧಗಳು ಅಥವಾ ಸ್ನೇಹವಿದ್ದರೆ ಎಲ್ಲವೂ ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತದೆ. ಆದರೆ ಅವರ ಆಂತರಿಕ ವಿಚಾರಗಳು ಬೇರೆಯೇ ಇರುತ್ತದೆ. ಈ ರಾಶಿಚಕ್ರದವರ ಇನ್ನೊಂದು ವಿಚಾರವೆಂದರೆ ಇವರು ಒಬ್ಬರ ಸಂಬಂಧದಲ್ಲಿ ಇರುವಾಗಲೇ ಇತರರ ಸಂಬಂಧ ಬೆಳೆಸುವ ಸಾಧ್ಯತೆಗಳಿವೆ.

ಕುಂಭ

ಕುಂಭ

ಈ ರಾಶಿಯವರು ಸ್ವತಂತ್ರವನ್ನು ಪ್ರೀತಿಸುವ ವ್ಯಕ್ತಿಗಳು ಎಂದು ಹೆಸರುವಾಸಿಯಾಗಿದ್ದಾರೆ. ಸಂಬಂಧಗಳಲ್ಲಿಯೂ ನಿಷ್ಠಾವಂತರಾಗಿ ಅಥವಾ ಬಂಧಿಯಾಗಿ ಇರಲು ಬಯಸುವುದಿಲ್ಲ. ಹಾಗಾಗಿ ಇವರು ಎಲ್ಲರ ನಡುವೆಯೂ ಆಕರ್ಷಕತೆಯನ್ನು ಪಡೆದುಕೊಳ್ಳಲು ಹಾಗೂ ಅವರೊಂದಿಗೆ ಬೆರೆಯುತ್ತಾರೆ ಎಂದರೆ ಅದರ ಬಗ್ಗೆ ಆಶ್ಚರ್ಯವನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ.

ಮೀನ

ಮೀನ

ಇವರು ಪ್ರಣಯದ ವಿಚಾರದಲ್ಲಿ ಬಹಳ ಕನಸುಗಾರರಾಗಿರುತ್ತಾರೆ. ಇವರು ತಮ್ಮ ಮನಸ್ಸಿನಲ್ಲಿ ಸೃಷ್ಟಿಸಿಕೊಂಡ ಕನಸಿನ ಲೋಕದಲ್ಲಿ ಬದುಕಲು ಬಯಸುತ್ತಾರೆ. ಆ ಕನಸಿನ ಲೋಕದಲ್ಲಿ ಅವರು ರಹಸ್ಯವಾದ ಸಂಬಂಧವನ್ನು ಹೊಂದುವ ಸಾಧ್ಯತೆಗಳಿವೆ.

ವೃಷಭ

ವೃಷಭ

ಈ ರಾಶಿಚಕ್ರದವರು ಭೂಮಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಇವರು ಪಾಲುದಾರರ ಜೊತೆ ನಿಷ್ಠೆ ಮತ್ತು ವಿಶ್ವಾಸಾರ್ಹತೆಯಿಂದ ಬದುಕುತ್ತಾರೆ. ಹಾಗಿದ್ದರೂ ಸಹ ಇವರು ಕೆಲವೊಮ್ಮೆ ರಹಸ್ಯವಾದ ಇನ್ನೊಂದು ಸಂಬಂಧವನ್ನು ಹೊಂದುವ ಸಾಧ್ಯತೆಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ.

ಕರ್ಕ

ಕರ್ಕ

ಬಹಳ ಸೂಕ್ಷ್ಮ ಪ್ರವೃತ್ತಿಯನ್ನು ಹೊಂದಿರುವ ಈ ರಾಶಿಚಕ್ರದವರು ಭಾವನಾತ್ಮಕ ಜೀವಿಗಳು ಎಂದು ಹೇಳಬಹುದು. ಇವರು ಭಾವನೆಗಳಿಗೆ ಹಾಗೂ ಕುಟುಂಬಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಾರೆ ಎಂದಾದರೂ ಮಕರ, ಕುಂಭ, ಮೀನ ಮತ್ತು ವೃಷಭ ರಾಶಿಯವರಂತೆ ರಹಸ್ಯವಾದ ಬಗೆಯಲ್ಲಿ ಮೋಸವನ್ನು ಗೈಯುವ ಸಾಧ್ಯತೆಗಳಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರಾಶಿಯವರು ಉತ್ತಮ ನಡತೆ ಹಾಗೂ ಸ್ವಭಾವವನ್ನು ಹೊಂದಿದವರೇ ಆಗಿರುತ್ತಾರೆ. ಆದರೆ ಇವರು ಒತ್ತಡಕ್ಕೆ ಒಳಗಾದಾಗ ಮತ್ತು ಮಾನಸಿಕ ಕಿರಿಕಿರಿ ಉಂಟಾದಾಗ ಅದರಿಂದ ಬಹುಬೇಗ ಹೊರ ಬರಲು ಬಯಸುವರು. ಇದರ ಫಲವಾಗಿ ಮೋಸ ಉಂಟಾಗುವ ಸಾಧ್ಯತೆಗಳಿರುತ್ತವೆ ಎನ್ನಲಾಗುವುದು.

English summary

these-zodiac-signs-are-cheaters

While different astrologers may disagree on which signs are likely to cheat based on their own personal interpretation of the signs, Ashley Madison, ran a survey to see which ones are really more likely to be unfaithful, based on their numbers. Each sign has a specific set of traits that differentiate them from any other sign. By just knowing someone's birthday, you can discover pretty much anything about a person such as their dating dealbreakers, their biggest relationship challenges, and of course, how likely they are to cheat.