Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 5 ರಾಶಿಯವರು ಯಾವಾಗಲೂ ಸಂತೋಷವಾಗಿರುತ್ತಾರಂತೆ!
ಕೆಲವರನ್ನು ನೀವು ನೋಡಿರಬಹುದು. ಅವರು ಯಾವಾಗ ನೋಡಿದರೂ ತುಂಬಾ ಸಂತೋಷದಲ್ಲಿ ಇರುವರು. ಇಂತಹ ಜನರನ್ನು ನೋಡಿ ನಮಗೆ ಅಸೂಯೆಯಾಗುವುದು. ಇವರಿಗೆ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇಲ್ಲವೆನ್ನುವಂತೆ ಇರುತ್ತಾರೆ. ಇವರಿಗೆ ಯಾವುದೇ ದುಃಖವಿಲ್ಲದೆಂದು ಮತ್ತು ಅವರಿಗೆ ಸಮಸ್ಯೆಗಳೇ ಇಲ್ಲವೆಂದು ನಾವು ಭಾವಿಸುತ್ತೇವೆ. ಆದರೆ ಇಂತಹ ವ್ಯಕ್ತಿಗಳು ತಮ್ಮ ರಾಶಿಚಕ್ರದಿಂದಾಗಿಯೇ ಇಷ್ಟು ಸಂತೋಷವಾಗಿರಲು ಸಾಧ್ಯ.
ಇಂತಹ ಅದೃಷ್ಟಶಾಲಿ ರಾಶಿಗಳು ಯಾವುದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಎಲ್ಲಾ ಸಮಯದಲ್ಲೂ ತುಂಬಾ ಸಂತೋಷವಾಗಿರುವಂತಹ ರಾಶಿಗಳ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ. ಇಂತಹವರಿಗೆ ಸಂತೋಷವಾಗಿರಲು ಯಾವುದೇ ಕಾರಣ ಬೇಕಾಗಿಲ್ಲ. ಇವರು ಯಾವುದೇ ಸಂದರ್ಭದಲ್ಲೂ ತುಂಬಾ ಧನಾತ್ಮಕವಾಗಿರುವರು....

ಧನು: ನ.23-ಡಿ.22
ಇವರು ತುಂಬಾ ಸ್ವಾಭಾವಿಕವಾಗಿರುವ ಕಾರಣ ಎಲ್ಲಾ ಸಾಧ್ಯತೆಗಳನ್ನು ತೆರೆಯುವರು. ಇವರು ಯಾವಾಗಲೂ ಆಶಾವಾದಿ ಮತ್ತು ಸಂತೋಷದಿಂದ ಇರುವರು. ಇವರಿಗೆ ಆತ್ಮವಿಶ್ವಾಸದ ಕೊರತೆಯಾದಾಗ ಅವರು ಯಾವುದಾದರೂ ಹೊಸತನ್ನು ಕಲಿಯುವರು ಅಥವಾ ಹೊಸ ಸ್ನೇಹಿತರನ್ನು ಸಂಪಾದಿಸುವರು. ಇವರು ಅನುಭವಗಳಿಗೆ ತೆರೆದುಕೊಳ್ಳುವ ಕಾರಣದಿಂದಾಗಿ ಇವರು ಯಾವಾಗಲು ಒಳ್ಳೆಯ ಮನಸ್ಥಿತಿಯಲ್ಲಿರುವರು. ಇವರು ತಮ್ಮನ್ನು ಬದಲಾವಣೆ ಮಾಡಬೇಕಿದ್ದರೆ ಆಗ ಅವರು ಪ್ರದೇಶವನ್ನು ಬದಲಾಯಿಸಿಕೊಂಡು ಇಂದಿನವರೆಗೆ ಮಾಡದೇ ಇರುವಂತಹ ಹೊಸತನ್ನು ಪ್ರಯತ್ನಿಸ ಬೇಕು.

ಮೇಷ: ನ.21-ಎ.19
ಮೇಷ ರಾಶಿಯವರು ಯಾವಾಗಲೂ ಲವಲವಿಕೆಯಿಂದ ಇರುವರು. ಇದರಲ್ಲಿನ ಎಂಡ್ರೋಫಿನ್ ಇವರ ಮನಸ್ಥಿತಿಯನ್ನು ಉತ್ತಮವಾಗಿಡಲು ನೆರವಾಗುವುದು. ಇವರು ಸಣ್ಣ ಸಣ್ಣ ವಿಚಾರಗಳ ಬಗ್ಗೆ ಮತ್ತು ಜೀವನದಲ್ಲಿ ಬದಲಾಯಿಸಲು ಸಾಧ್ಯವಿಲ್ಲದೆ ಇರುವಂತಹ ವಿಚಾರಗಳ ಬಗ್ಗೆ ಚಿಂತೆ ಮಾಡಲ್ಲ. ಇವರು ತಮ್ಮ ಸುತ್ತಲಿನ ಅತಿಯಾದ ಕಿರಿಕಿರಿ ಮತ್ತು ನಕಾರಾತ್ಮಕತೆ ತಪ್ಪಿಸುವರು. ಇವರು ಯಾವುದೇ ವಿಚಾರವನ್ನು ತುಂಬಾ ವೈಯಕ್ತಿಕವಾಗಿ ಪರಿಗಣಿಸಲ್ಲ ಮತ್ತು ಯಾವುದೇ ನಕಾರಾತ್ಮಕತೆಯು ಸಂಭವಿಸಿದರೆ ಆಗ ಅವರು ಇದರಲ್ಲೇ ಸ್ತಬ್ಧರಾಗಲ್ಲ.

ಸಿಂಹ: ಜುಲೈ 23- ಆ.23
ಸಿಂಹ ರಾಶಿಯವರು ಯಾವಾಗಲೂ ಶ್ರೇಷ್ಠವಾಗಿರುವುದನ್ನು ಕಂಡುಕೊಳ್ಳುವರು. ಇವರೊಂದಿಗೆ ಯಾವಾಗಲೂ ಸ್ನೇಹಿತರು, ಕುಟುಂಬದವರು ಮತ್ತು ಪ್ರೇರಕರು ಇದ್ದು, ಇವರಿಗೆ ಬೆಂಬಲ ಮತ್ತು ಪ್ರೀತಿ ನೀಡುವರು. ಈ ರಾಶಿಯ ವ್ಯಕ್ತಿಗಳು ಒಂದು ಕಾಫಿ ಶಾಪ್ ನ ಒಳಗಡೆ ಹೋಗಿ ಅಲ್ಲಿ ಒಂದು ಕಾಫಿ ತೆಗೆದುಕೊಂಡು ಕುಡಿಯುತ್ತಾ ಸುತ್ತಲಿನಲ್ಲಿ ಇರುವವರನ್ನು ತಮ್ಮ ಸ್ನೇಹಿತರನ್ನಾಗಿ ಮಾಡುವರು. ಈ ವ್ಯಕ್ತಿಗಳ ಒಳಗಿನಿಂದ ಒಂದು ತೇಜಸ್ಸು ಇರುವುದು ಮತ್ತು ಇದು ಅವರು ಹೋದ ಕಡೆಯೆಲ್ಲಾ ಬೆಳಗುವುದು. ಇದನ್ನು ಹೊರತುಪಡಿಸಿ ಅವರು ಇವರು ಕೃತಜ್ಞತೆ ಸೂಚಿಸುವರು ಮತ್ತು ಇದರಿಂದಾಗಿ ಇವರು ಯಾವಾಗಲೂ ಒಳ್ಳೆಯ ಮನಸ್ಥಿತಿಯಲ್ಲಿರುವರು.

ತುಲಾ: ಸೆ.24-ಅ.23
ಇವರು ತುಂಬಾ ಖುಷಿಯಲ್ಲಿರುವಂತಹ ಸಮಯದಲ್ಲಿ ಕೆಲವು ಜಾಗೃತ ಆಯ್ಕೆಗಳನ್ನು ಮಾಡಿಕೊಳ್ಳುವರು. ಇವರು ಯಾವಾಗಲೂ ನಕಾರಾತ್ಮಕತೆಯಲ್ಲಿ ಇರುವುದನ್ನು ಇಷ್ಟಪಡಲ್ಲ ಮತ್ತು ಬೇಸರದಿಂದ ಇರುವುದನ್ನು ಕಡೆಗಣಿಸುವರು. ಇವರಿಗೆ ಸಂತೋಷ ನೀಡುವಂತಹ ಸಣ್ಣ ವಿಷಯಗಳನ್ನು ಇವರು ಮಾಡುವರು. ಇವರಿಗೆ ತುಂಬಾ ಬೇಸರವಾಗಿದ್ದಾಗ ಈ ರಾಶಿಯವರು ತಮಗಾಗಿ ಹೂಗಳನ್ನು ಖರೀದಿಸುವರು ಮತ್ತು ತಮ್ಮನ್ನು ಸಮಾಧಾನಿಸುವರು.

ಮಿಥುನ: ಮೇ 21- ಜೂನ್ 20
ಇವರ ಮನಸ್ಥಿತಿಯು ಬದಲಾಗುತ್ತಲಿರುವುದು. ಆದರೆ ಅವರು ತಮಗೆ ಅನಿಸಿರುವುದನ್ನು ಹೇಳಿಬಿಡುವರು. ಇವರು ಬೇಸರ ಮತ್ತು ಕೋಪದಿಂದ ಇದ್ದರೆ ಆಗ ಇದು ತಮ್ಮಿಂದ ದೂರವಾಗಬೇಕೆಂದು ಬಯಸುವರು. ಇವರು ಏನನ್ನಾದರೂ ಸಂತೋಷವಾಗಿ ಪರಿವರ್ತಿಸಿಕೊಳ್ಳುವುರು. ಇದರಿಂದಾಗಿ ಇವರನ್ನು ಕುಸಿಯುವಂತೆ ಮಾಡುವುದು ಬೇರೆಯವರಿಗೆ ದೊಡ್ಡ ಸವಾಲಾಗುವುದು. ಇವರು ಪುಸ್ತಕ ಓದಿ ಅಥವಾ ತಮ್ಮ ಇಷ್ಟದ ಸಂಗೀತ ಕೇಳುವ ಮೂಲಕ ಸಂತೋಷ ಪಡುವರು.



Click it and Unblock the Notifications
