ಈ ವರ್ಷ ಮೂರು ರಾಶಿಯವರಿಗೆ ಪ್ರೀತಿಯಲ್ಲಿ ಮೋಸವಾಗಲಿದೆ!

By Divya Pandith
Subscribe to Boldsky
ಈ ಮೂರು ರಾಶಿಯವರಿಗೆ ಈ ವರ್ಷ ಪ್ರೀತಿಯಲ್ಲಿ ಮೋಸವಾಗಲಿದೆ | Oneindia Kannada

ಜೀವನದಲ್ಲಿ ಪ್ರೀತಿ, ಹಣ ಹಾಗೂ ಆಸ್ತಿಯು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಹಣ ಹಾಗೂ ಆಸ್ತಿಯನ್ನು ಕಳೆದುಕೊಂಡರೆ ಜೀವನವನ್ನು ಹೇಗೋ ನಡೆಸಬಹುದು. ಆದರೆ ಮನಸ್ಸಿಗೆ ಹತ್ತಿರವಾದವರು, ನಮ್ಮ ಜೀವ ಎನಿಸಿಕೊಂಡ ವ್ಯಕ್ತಿಯನ್ನು ಕಳೆದುಕೊಂಡರೆ ಅಥವಾ ಅವರು ನಮ್ಮಿಂದ ದೂರವಾದರೆ ಅದರಿಂದ ಉಂಟಾಗುವ ನೋವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆ ನೋವು ಹಾಗೂ ಬೇಸರ ನಮ್ಮನ್ನು ಮಾನಸಿಕವಾಗಿ ಕುಂದುವಂತೆ ಮಾಡುತ್ತದೆ.

ನಮ್ಮ ಜೀವನದಲ್ಲಿ ನಾವು ಪಡೆದುಕೊಳ್ಳುವ ಪ್ರೀತಿ ಹಾಗೂ ವಾತ್ಸಲ್ಯ ಎಲ್ಲವೂ ನಮ್ಮ ಕುಂಡಲಿಯನ್ನು ಆಧರಿಸಿರುತ್ತದೆ. ಕುಂಡಲಿಯಲ್ಲಿ ಸಂಚಾರ ಕೈಗೊಳ್ಳುವ ಗ್ರಹಗತಿಗಳು ವಿಭಿನ್ನ ಬಗೆಯ ಪರಿಣಾಮವನ್ನು ನೀರುತ್ತವೆ. ಇವುಗಳ ಆಧಾರದ ಮೇಲೆಯೇ ವ್ಯಕ್ತಿ ತನ್ನ ವರ್ತನೆಯನ್ನು ತೋರುತ್ತಾನೆ. ಜೊತೆಗೆ ಅದೃಷ್ಟ ಮತ್ತು ನತದೃಷ್ಟ ಬದುಕನ್ನು ಅನುಭವಿಸುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

2018ರಲ್ಲಿ ಗ್ರಹಗತಿಗಳು ವಿಭಿನ್ನ ತಿರುವನ್ನು ತೆಗೆದುಕೊಂಡಿವೆ. ಇದರ ಅನ್ವಯವಾಗಿ ಕೆಲವು ರಾಶಿ ಚಕ್ರದವರು ಲಾಭವನ್ನು ಅನುಭವಿಸಲಿದ್ದಾರೆ. ಇನ್ನೂ ಕೆಲವರು ವರ್ಷದುದ್ದಕ್ಕೂ ಅದೃಷ್ಟ ಹಾಗೂ ಸಂತೋಷವನ್ನು ಅನುಭವಿಸಲಿದ್ದಾರೆ. ಕೆಲವು ರಾಶಿಚಕ್ರದವರು ನೋವನ್ನು ಅನುಭವಿಸಲಿದ್ದಾರೆ. ಕೆಲವು ರಾಶಿಯವರು ತಮ್ಮ ಪ್ರೀತಿಯನ್ನು ಕಳೆದುಕೊಂಡು ಬಹಳ ನೋವನ್ನು ಅನುಭವಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ಪ್ರೀತಿ ದೂರಾಗಲು ಕಾರಣವೇನು? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.... 

ಮಿಥುನ

ಮಿಥುನ

2017ರ ಅಂತ್ಯದಲ್ಲಿ ಶನಿಯು ಮಕರ ರಾಶಿಗೆ ಪ್ರವೇಶ ಪಡೆದಿದೆ. ಮುಂದಿನ ಎರಡೂವರೆ ವರ್ಷಗಳ ಕಾಲವೂ ಇದು ಹಾಗೆಯೇ ಮುಂದುವರಿಯಲಿದೆ. ಈ ಪರಿಣಾಮದಿಂದ ವ್ಯಕ್ತಿಯ ಪ್ರೀತಿ ಹಾಗೂ ಸಂಬಂಧಗಳ ಮೇಲೆ ಹೆಚ್ಚಿನ ಪ್ರಭಾವ ಉಂಟಾಗುವುದು. ಈ ಬದಲಾವಣೆಯಿಂದ ವ್ಯಕ್ತಿಯ ಪ್ರೀತಿಯ ಜೀವನದಲ್ಲಿ ಗೊಂದಲಗಳು ಹಾಗೂ ಭಿನ್ನಾಭಿಪ್ರಾಯಗಳು ಹೆಚ್ಚುವುದು. ವ್ಯಕ್ತಿ ಯಾವ ಬಗೆಯ ಹವ್ಯಾಸಗಳನ್ನು ಮುಂದುವರಿಸುತ್ತಾನೆ ಹಾಗೂ ಆತ ಈ ಮೊದಲು ಯಾವ ಬಗೆಯ ಜೀವನ ಕ್ರಮವನ್ನು ಎದುರಿಸುತ್ತಾ ಬಂದಿದ್ದಾನೆ ಎನ್ನುವುದು ಸಹ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಮಿಥುನ

ಮಿಥುನ

ಮಿಥುನ ರಾಶಿಚಕ್ರದವರು ಸಾಮಾನ್ಯವಾಗಿ ಇತರರಲ್ಲಿ ತಮ್ಮನ್ನು ಹುಡುಕುತ್ತಾರೆ. ಅವರು ಇತರರಲ್ಲಿ ತಮ್ಮ ತನವನ್ನು ಹುಡುಕುವ ಪ್ರವೃತ್ತಿ ಹೊಂದಿರುವುದರಿಂದ ಬಹು ಬೇಗ ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳಿವೆ. ಇವರು ಮೆಚ್ಚಿರುವ ವ್ಯಕ್ತಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಬದಲಿಸಿಕೊಳ್ಳಲು ಸಹ ಸಿದ್ಧರಾಗಿರುತ್ತಾರೆ. 2018ರ ಈ ವರ್ಷ ಮಿಥುನ ರಾಶಿಯವರು ಹೇಗೆ ತಮ್ಮನ್ನು ತಾವು ಸಂಪೂರ್ಣವಾದ ವ್ಯಕ್ತಿತ್ವವನ್ನು ಹೊಂದಬೇಕು. ಬೇರೆಯವರಲ್ಲಿ ಹೇಗೆ ತಮ್ಮ ಪ್ರೀತಿಯನ್ನು ಕಾಣಬೇಕು ಎನ್ನುವುದನ್ನು ತಿಳಿದುಕೊಳ್ಳುವಿರಿ. ಈ ವರ್ಷ ಕೆಲವರು ತಮ್ಮ ಪ್ರೀತಿಯನ್ನು ಕಳೆದುಕೊಳ್ಳಬಹುದು. ಪ್ರೀತಿಯ ಹುಡುಕಾಟದಲ್ಲಿರುವವರು ನಿಮ್ಮ ಪ್ರೀತಿಯನ್ನು ಪಡೆಯಲು ಸೂಕ್ತ ದಾರಿಯನ್ನು ಅನುಸರಿಸಿ. ಆದರೆ ಈ ವರ್ಷ ಅದು ನಿಮಗೆ ಲಭಿಸದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.

ತುಲಾ

ತುಲಾ

ಈ ವರ್ಷ ನೀವು ನಿಮ್ಮ ಜೀವನವನ್ನು ಹೇಗೆ ಸಮತೋಲನದಲ್ಲಿ ಕೊಂಡೊಯ್ಯುತ್ತೀರಿ ಎನ್ನುವುದು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಬಾಲ್ಯದಲ್ಲಿ ಕಂಡ ನಿರಾಶೆಯ ಬದುಕು ಈ ಬಾರಿ ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ನಿಮ್ಮದೇ ರೀತಿಯಲ್ಲಿ ಸನ್ನಿವೇಶ ಹಾಗೂ ಸಮಸ್ಯೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಜಾಣ್ಮೆಯನ್ನು ನೀವು ತೋರಬೇಕಾಗುವುದು. ಈ ವರ್ಷ ನಿಮ್ಮ ಭಾವನೆಯ ಆಸೆಗಳು ಪ್ರೀತಿಯು ಭೂಸಮನಾಗಿಸುತ್ತದೆ ಎಂದು ಹೇಳಬಹುದು.

ತುಲಾ

ತುಲಾ

2018ರ ವರ್ಷದುದ್ದಕ್ಕೂ ನಿಮ್ಮ ಜೀವನ ಛಿದ್ರತೆಯನ್ನು ಅನುಭವಿಸುವ ಸಾಧ್ಯತೆಗಳಿವೆ. ನೀವು ಇಟ್ಟ ನಂಬಿಕೆಯನ್ನು ಕಳೆದುಕೊಳ್ಳುವಿರಿ. ನಿಮ್ಮ ಪ್ರೀತಿ ಪಾತ್ರರು ನಿಮ್ಮ ಭಾವನೆಯೊಂದಿಗೆ ಆಟ ಆಡುವ ಲಕ್ಷಣಗಳೇ ಹೆಚ್ಚಾಗಿವೆ. ನಿಮ್ಮ ಸೌಹಾರ್ದ ಆದರ್ಶಗಳು ಅಸ್ತವ್ಯಸ್ತಗೊಳ್ಳುವುದು. ನಿಮ್ಮ ಎಲ್ಲಾ ಸಮಯವು ಈ ವರ್ಷ ಸಂತೋಷವನ್ನು ನೀಡದು. ನಿಮ್ಮ ಸ್ವಂತ ಆಂತರಿಕ ಸಮತೋಲನಕ್ಕೆ ನೀವೇ ಹೋರಾಡಬೇಕಾಗುವುದು. ನಿಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಂಡು ಸನ್ನಿವೇಶವನ್ನು ಮತ್ತು ಸಮಸ್ಯೆಗಳನ್ನು ನಿಭಾಯಿಸಬೇಕಾಗುವುದು.

ವೃಶ್ಚಿಕ

ವೃಶ್ಚಿಕ

ಈ ವರ್ಷ ನಿಮ್ಮ ಪ್ರೀತಿಯನ್ನು ನೀವೇ ಕಳೆದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಹೃದಯಕ್ಕೇ ನೀವೇ ನೋವುಂಟುಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ವರ್ಷದ ಆರಂಭದಲ್ಲಿ ಕಾಣುವ ಕೆಲವು ಪ್ರಕ್ರಿಯೆಯು ನಿಮ್ಮ ಮಮನಸ್ಸಿಗೆ ಅಪಾರವಾದ ನೋವನ್ನು ಉಂಟು ಮಾಡುವುದು. ಆಗಾಗ ನಿಮ್ಮ ಸಮಸ್ಯೆಗಳು ನಿಮ್ಮನ್ನು ಪ್ರಚೋದಿಸುತ್ತಲೇ ಇರುತ್ತದೆ. ಜೊತೆಗೆ ಸುತ್ತಲಿನ ಜನರ ಪ್ರಚೋದನೆಗೂ ನೀವು ಒಳಗಾಗುವಿರಿ. ನಿಮ್ಮ ಹಾನಿಕಾರಕ ಶಕ್ತಿಯನ್ನು ನೀವು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಆಗಲೇ ಸಮಸ್ಯೆ ಹಾಗೂ ಸನ್ನಿವೇಶಗಳನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಲು ಸಾಧ್ಯವಾಗುವುದು.

ವೃಶ್ಚಿಕ

ವೃಶ್ಚಿಕ

ಈ ವರ್ಷದ ಕೆಲವು ಗ್ರಹಗತಿಗಳ ಬದಲಾವಣೆಯಿಂದ ನೀವು ಅನೇಕ ನಷ್ಟಗಳನ್ನು ಎದುರಿಸಬೇಕಾಗುವುದು. ನೀವು ಯಾವ ಕೆಲಸವನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಎನ್ನುವುದರ ಬಗ್ಗೆ ನಿಮಗೆ ಅರಿವಿರಬೇಕು. ಆಗಲೇ ನೀವು ನಿಮ್ಮ ಕಷ್ಟ, ನಷ್ಟ ಹಾಗೂ ನೋವುಗಳ ಪ್ರಮಾಣವನ್ನು ತಗ್ಗಿಸಿಕೊಳ್ಳಲು ಸಾಧ್ಯವಾಗುವುದು. ವರ್ಷದ ಅಂತ್ಯದಲ್ಲಾದರೂ ಒಂದಷ್ಟು ಸಮಾಧಾನವನ್ನು ಪಡೆದುಕೊಳ್ಳಬಹುದು.

For Quick Alerts
ALLOW NOTIFICATIONS
For Daily Alerts

    English summary

    these three zodiac Signs That Will Break Your Heart

    There are years when you are up and years when you are down. In 2018, there are zodiac signs that could experience heartbreak because the planets don't seem to be working in their favor. But that's a matter of perception. In truth, when the universe seems to be against you, it's really only trying to teach you a lesson. As when you were in school, some of life's lessons come harder than others.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more