ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಚಕ್ರದ ಮಹಿಳೆಯರು ಅತ್ಯುತ್ತಮ ಪತ್ನಿಯರಾಗಬಲ್ಲರು

Subscribe to Boldsky

ವಿವಾಹ ಎನ್ನುವುದು ಮಹಿಳೆಯರ ಜೀವನದಲ್ಲಿ ಪ್ರಮುಖವಾದ ತಿರುವನ್ನು ನೀಡುವ ಸಂಗತಿ. ಅಂತೆಯೇ ಪುರುಷರ ಜೀವನ ನಿರ್ಧಾರವಾಗುವುದು ಸಹ ಅವರ ವಿವಾಹದ ನಂತರವೇ ಎನ್ನಬಹುದು. ತನ್ನದೇ ಆದ ಸಂಸಾರವನ್ನು ಕಟ್ಟಿಕೊಂಡು, ಇನ್ನೊಂದು ಜೀವಕ್ಕೆ ಜೀವನ ಪರ್ಯಂತ ಆಶ್ರಯ ನೀಡುವೆನು ಎನ್ನುವ ವಚನಬದ್ಧನಾಗಿರುತ್ತಾನೆ. ಜೊತೆಗೆ ಸಂಸಾರವನ್ನು ವೃದ್ಧಿಸುತ್ತಾ, ತನ್ನ ತಂದೆ ತಾಯಿಗೂ ಆಶ್ರಯವನ್ನು ನೀಡುವ ಜವಾಬ್ದಾರಿ ಪುರುಷರಿಗಿರುತ್ತದೆ. ಹಾಗಾಗಿ ಜೀವನದಲ್ಲಿ ವಿವಾಹದ ನಂತರ ಕೈಗೆತ್ತಿಕೊಳ್ಳಬೇಕಾದ ಜವಾಬ್ದಾರಿಗಳಿಗೆ ಸಂಗಾತಿಯಾದವಳು ಸಹ ಸೂಕ್ತ ರೀತಿಯಲ್ಲಿ ಸಹಕರಿಸಬೇಕಾಗುವುದು.

ಸಂಗಾತಿ ಅಥವಾ ಪತ್ನಿ ಎನಿಸಿಕೊಂಡವಳು ಗಂಡನ ಸುಖ-ದುಃಖ, ಕೆಲಸ-ಕಾರ್ಯ, ನೋವು-ನಲಿವು ಸೆರಿದಂತೆ ಎಲ್ಲಾ ವಿಚಾರದಲ್ಲೂ ಸಹಕರಿಸಬೇಕಾಗುವುದು. ಒಟ್ಟಿನಲ್ಲಿ ಪತಿ ಪತ್ನಿಯರು ಒಂದೇ ಜೀವ ಎರಡು ದೇಹ ಎನ್ನುವ ರೀತಿಯಲ್ಲಿ ಬದುಕಬೇಕಾಗುವುದು. ಪುರುಷನ ಬಾಳ ದೀಪವನ್ನು ಬೆಳಗುವ ಸಾಮಥ್ರ್ಯ ಪತ್ನಿಯ ಕೈಯಲ್ಲಿ ಇರುತ್ತದೆ. ಹಾಗಾಗಿ ವಿವಾಹವಾಗುವ ಮುಂಚೆ ವ್ಯಕ್ತಿಯ ಬಗ್ಗೆ ಸೂಕ್ತ ಮಾಹಿತಿಯನ್ನು ಅರಿತಿರಬೇಕಾಗುವುದು. ಇಲ್ಲವಾದರೆ ಜೀವನ ದುಃಖದಿಂದ ಕೂಡಿರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ರಾಶಿಚಕ್ರದ ಮಹಿಳೆಯರು ಅತ್ಯುತ್ತಮ ಪತ್ನಿಯರಾಗಬಲ್ಲರು. ಅವರು ಪತಿಗೆ ಸೂಕ್ತ ಸಹಕಾರ ಹಾಗೂ ಪ್ರೀತಿಯನ್ನು ಎರೆಯುವರು ಎನ್ನಲಾಗುವುದು. ಈ ಸಂಗತಿಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಅರಿಯಬೇಕು ಎನ್ನುವ ಹಂಬಲವಿದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

ಕರ್ಕ ರಾಶಿಯ ಮಹಿಳೆಯರು

ಕರ್ಕ ರಾಶಿಯ ಮಹಿಳೆಯರು

ಕರ್ಕ ರಾಶಿಯ ಮಹಿಳೆಯರು ತಮ್ಮ ಪಾಲುದಾರರಿಗೆ ತೀವ್ರವಾದ ಭಾವನೆಗಳನ್ನು ಅರ್ಪಿಸುತ್ತಾರೆ. ಅತ್ಯುತ್ತಮ ರೀತಿಯಲ್ಲಿ ಪ್ರೀತಿಯನ್ನು ಎರೆಯುತ್ತಾರೆ ಎನ್ನಲಾಗುವುದು. ಹಾಗಾಗಿ ನೀವೇನಾದರೂ ಕರ್ಕ ರಾಶಿಯ ಹುಡುಗಿಯನ್ನು ವಿವಾಹವಾಗುತ್ತಿದ್ದೀರಿ ಎಂದರೆ ಅದು ನಿಮ್ಮ ಸರಿಯಾದ ಆಯ್ಕೆಯಾಗಿರುತ್ತದೆ. ಇವರು ನಿಮಗೆ ಸಂತೋಷವನ್ನು ನೀಡಲು ಸಾಕಷ್ಟು ಸನ್ನಿವೇಶಗಳನ್ನು ಸೃಷ್ಟಿಮಾಡುವರು. ಇವರು ಕೆಲವೊಮ್ಮೆ ನಿಷ್ಪ್ರಯೋಜಕ ವಿಷಯಗಳ ಬಗ್ಗೆ ನಾಟಕೀಯ ರೀತಿಯಲ್ಲಿ ವರ್ತಿಸಬಹುದು. ಆದರೆ ಇವರಲ್ಲಿ ಇರುವ ಇತರ ಒಳ್ಳೆಯಗುಣಗಳು ಹಾಗೂ ಪ್ರೀತಿಯ ವಿಚಾರ, ತ್ಯಾಗದ ಭಾವನೆಗಳ ಮುಂದೆ ಇದೊಂದು ನ್ಯೂನತೆ ಗೌಣವಾಗಿ ಕಾಣುವುದು. ಹಾಗಾಗಿ ನೀವು ಒಳ್ಳೆಯ ಸಂಗತಿಗಳೇ ಹೆಚ್ಚಾಗಿರುವಾಗ ಒಂದು ಅಸಮಧಾನದ ವಿಚಾರಗಳನ್ನು ಮರೆಯುವುದು ಸೂಕ್ತ.

ಕರ್ಕ ರಾಶಿಯ ಮಹಿಳೆಯರು

ಕರ್ಕ ರಾಶಿಯ ಮಹಿಳೆಯರು

ಕರ್ಕ ರಾಶಿಯ ಮಹಿಳೆಯರು ನಿಮ್ಮ ಮತ್ತು ನಿಮ್ಮ ಕುಟುಂದವರ ಜೊತೆಗೆ ಬಹಳ ಸ್ನೇಹ ಜೀವಿಗಳಾಗಿ ಇರುತ್ತಾರೆ. ಅಲ್ಲದೆ ತಮ್ಮ ಕುಟುಂಬಕ್ಕೆ ಅಥವಾ ಮನೆಯ ಮಂದಿಗೆ ಬೆಚ್ಚಗಿನ ಮತ್ತು ರಕ್ಷಣೆಯ ಭಾವವನ್ನು ನೀಡುವರು. ಅಲ್ಲದೆ ವಿಶೇಷ ಭಕ್ಷ್ಯಗಳನ್ನು ತಯಾರಿಸುವುದರ ಮೂಲಕ ನಿಮ್ಮ ಆಸೆಯ ಅಡುಗೆಯನ್ನು ಮಾಡಿ ಬಡಿಸುವ ಪತ್ನಿಯರಾಗಿರುತ್ತಾರೆ. ಇವರು ನಿಮ್ಮ ಇಷ್ಟಾರ್ಥಗಳನ್ನು ಪೂರೈಸುವಲ್ಲಿಯೇ ಸಮಯವನ್ನು ವ್ಯಯಿಸುತ್ತಾರೆ ಎನ್ನಲಾಗುವುದು. ಪ್ರಾಮಾಣಿಕ ಪ್ರೀತಿಯನ್ನು ಎರೆಯುವ ಇವರು ತಮ್ಮ ಮಕ್ಕಳಿಗೆ, ಪತಿಗೆ ಹಾಗೂ ಕುಟುಂಬದ ಸದಸ್ಯರಿಗೆ ಪ್ರೀತಿ ವಿಶ್ವಾಸವನ್ನು ನೀಡುವರು. ಮಕ್ಕಳಿಗೆ ವಿಶೇಷ ಪ್ರೀತಿ ಆರೈಕೆ ಮಾಡುವುದರ ಮೂಲಕ ತಮ್ಮ ಸಂಸಾರವನ್ನು ರಕ್ಷಿಸುವರು.

ಮೇಷ ರಾಶಿಯ ಮಹಿಳೆಯರು

ಮೇಷ ರಾಶಿಯ ಮಹಿಳೆಯರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಮಹಿಳೆಯರು ತಮ್ಮ ಸಂಗಾತಿಯನ್ನು ತಮ್ಮ ತೊಡೆಯಮೇಲೆ ಮಲಗಿಸಿಕೊಂಡು ನೋಡಿಕೊಳ್ಳುವ ಪ್ರೀತಿಯ ಪತ್ನಿಯಾಗಿರುತ್ತಾರೆ. ಇವರು ಅತ್ಯಂತ ಬಲವಾದ ಮತ್ತು ನಿಷ್ಕಪಟವಾದ ಮಹಿಳೆಯರು ಆಗಿರುತ್ತಾರೆ. ತಮ್ಮ ಗುರಿಯನ್ನು ಸಾಧಿಸಲು ಸಾಕಷ್ಟು ಸಾಹಸ ಹಾಗೂ ಶ್ರಮವನ್ನು ವಹಿಸುವ ವ್ಯಕ್ತಿಗಳಾಗಿರುತ್ತಾರೆ. ಇಂತಹ ರಕ್ಷಣಾತ್ಮಕ ಮಹಿಳೆಯರು ನಿಮ್ಮ ಸಂಗಾತಿಯಾಗಿ ದೊರೆತರೆ ಜೀವನದಲ್ಲಿ ಸುಖ ಹಾಗೂ ಶಾಂತಿಯನ್ನು ಕಂಡುಕೊಳ್ಳುವಿರಿ. ಇವರು ಪತಿಯ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಸಹಾಯ ಮತ್ತು ಬೆಂಬಲವನ್ನು ನೀಡುವರು. ಈ ಕಾರಣಕ್ಕೆ ಇವರನ್ನು ಕುಟುಂಬದ ಸದಸ್ಯರು ಗೌರವವನ್ನು ನೀಡುವರು. ಅಲ್ಲದೆ ಶೀಘ್ರದಲ್ಲಿಯೇ ಹೆಚ್ಚಿನ ಸ್ಥಾನಮಾನವನ್ನು ಗಳಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುವ ಮಹಿಳೆಯರಾಗಿರುತ್ತಾರೆ. ಪುರುಷರ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ವರ್ತನೆಯನ್ನು ಬದಲಿಸಿ ಕೊಳ್ಳುವವರಾಗಿರುತ್ತಾರೆ. ಬಲವಾದ ಜವಾಬ್ದಾರಿಯನ್ನು ನಿರ್ವಹಿಸುವುದರ ಮೂಲಕ ಪುರುಷರ ಯೋಗ್ಯ ಗಮನವನ್ನು ಸೆಳೆದುಕೊಳ್ಳುವರು. ಇವರು ತಮ್ಮ ಸುತ್ತಲಿನ ಜನರಿಂದ ವಾಸ್ತವದ ನಿರೀಕ್ಷೆಯನ್ನು ಬಯಸುತ್ತಾರೆ.

Mobile summary:ಮೊಬೈಲ್ ನಂಬರ್‌ನ್ನು 'ಸಂಖ್ಯಾಶಾಸ್ತ್ರದ ಪ್ರಕಾರ' ಆಯ್ಕೆ ಮಾಡಿ-ಅದೃಷ್ಟವಂತರಾಗಿ!

ಮೇಷ ರಾಶಿಯ ಮಹಿಳೆಯರು

ಮೇಷ ರಾಶಿಯ ಮಹಿಳೆಯರು

ಮೇಷರಾಶಿಯ ಮಹಿಳೆಯರನ್ನು ಆಕರ್ಷಿಸುವುದು ಬಹಳ ಕಷ್ಟ ಎಂದು ಹೇಳಬಹುದು. ಇವರು ಸಂಗಾತಿಯಾಗುವವರ ಬಗ್ಗೆ ಸಾಕಷ್ಟು ನಿರೀಕ್ಷೆ ಹಾಗೂ ಅಭಿಪ್ರಾಯಗಳನ್ನು ಹೊಂದಲು ಬಯಸುತ್ತಾರೆ. ಉತ್ತಮ ಸಂಗತಿಗಳನ್ನು ಅರಿತ ನಂತರವೇ ಅವರು ನಿಮ್ಮೊಂದಿಗೆ ತೆರೆದುಕೊಳ್ಳಬಹುದು ಅಥವಾ ನಿಮ್ಮ ಪ್ರೀತಿಗೆ ಒಪ್ಪಿಗೆ ಸೂಚಿಸಬಹುದು. ಮೇಷ ರಾಶಿಯ ಮಹಿಳೆಯರು ಕಠಿಣ ಹಾಗೂ ನಾಯಕತ್ವ ಗುಣವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಅಂತೆಯೇ ನಿಷ್ಪಕ್ಷಪಾತ ತಾಯಂದಿರಾಗಿಯೂ ಕೆಲಸ ನಿರ್ವಹಿಸುವರು. ತನ್ನ ಪತಿಯ ಶ್ರೇಯಸ್ಸಿಗಾಗಿ ಹಾಗೂ ಅಭಿವೃದ್ಧಿಗಾಗಿ ಸಾಕಷ್ಟು ಸಹಕಾರ ಹಾಗೂ ಸಹಾಯವನ್ನು ಮಾಡುವಳು. ಜೊತೆಗೆ ಪತಿಗೆ ಸಂತೃಪ್ತಿಯ ಭಾವನೆಯನ್ನು ನೀಡುವರು.

ಸಿಂಹ ರಾಶಿಯ ಮಹಿಳೆಯರು

ಸಿಂಹ ರಾಶಿಯ ಮಹಿಳೆಯರು

ಸಿಂಹ ರಾಶಿಯ ಮಹಿಳೆಯರು ಪ್ರಬಲ ಮತ್ತು ಕಠಿಣ ವ್ಯಕ್ತಿಗಳಾಗಿರುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಅವರೊಬ್ಬ ಯೋಧರು ಎನ್ನಬಹುದು. ಇವರಲ್ಲಿ ನಂಬಲಾಗದಂತಹ ಸಾಮಥ್ರ್ಯವನ್ನು ಕಾಣಬಹುದು. ಇವರು ಸಾಮಾನ್ಯ ಪುರುಷರಿಗೆ ಅಷ್ಟು ಬೇಗ ಒಲಿಯುವ ಮಹಿಳೆಯರಾಗಿರುವುದಿಲ್ಲ. ಇವರು ತಮ್ಮ ಪತಿಯನ್ನು ಅತಿಯಾದ ಚಿಂತನೆಗೆ ಅಥವಾ ಕೆಲಸದಲ್ಲಿ ಒಳಗಾಗುವಂತೆ ಮಾಡುವುದಿಲ್ಲ. ತಮ್ಮ ಸರಳವಾದ ಸಂಗತಿ ಹಾಗೂ ಸ್ವಭಾವದಿಂದಲೇ ಪತಿಯ ಮನಸ್ಸನ್ನು ಬಂಧಿಸುತ್ತಾರೆ. ಇವರು ಸಮರ್ಪಕ ಹಾಗೂ ನಿಷ್ಠಾವಂತ ಸಂಗಾತಿಯಾಗಿ ಕಾರ್ಯ ನಿರ್ವಹಿಸುವರು. ಇವರು ತಮ್ಮ ಪ್ರೀತಿಯನ್ನು ತೀವ್ರವಾಗಿ ತೋರಿಸುವುದರ ಮೂಲಕ ಸಂಗಾತಿಯೊಂದಿಗೆ ಆಳವಾದ ಭಾವನೆಯನ್ನು ಪಡೆದುಕೊಳ್ಳುವರು. ಇವರಿಗಿಂತ ಹೆಚ್ಚಿನ ಪ್ರೀತಿಯನ್ನು ನೀಡುವ ಮಹಿಳೆಯರು ನಿಮಗೆ ಸಿಗಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಇವರಲ್ಲಿ ನಿಸ್ವಾರ್ಥ ಮತ್ತು ಶುದ್ಧ ಪ್ರೀತಿಯಿರುತ್ತದೆ ಎಂದು ಹೇಳಲಾಗುವುದು.

ಸಿಂಹ ರಾಶಿಯ ಮಹಿಳೆಯರು

ಸಿಂಹ ರಾಶಿಯ ಮಹಿಳೆಯರು

ಇವರು ತಮ್ಮ ಪತಿಯೊಂದಿಗೆ ಘರ್ಷಣೆ ಅಥವಾ ಜಗಳವಾಡಲು ಹೋಗುವುದಿಲ್ಲ. ಬದಲಿಗೆ ಪ್ರೀತಿಯಿಂದಲೇ ಸಂಬಂಧವನ್ನು ಭದ್ರಗೊಳಿಸುತ್ತಾರೆ. ತಮ್ಮ ಮಕ್ಕಳನ್ನು ತನ್ನ ಜೀವ ಎಂದು ಪಾಲನೆ ಪೋಷಣೆ ಮಾಡುವರು. ತಮ್ಮ ಮಕ್ಕಳಿಗೆ ಹಾಗೂ ಗಂಡನಿಗಾಗಿ ಎಂತಹ ತ್ಯಾಗ ಅಥವಾ ಕೆಲಸವನ್ನಾದರೂ ಮಾಡಲು ಸಿದ್ಧರಾಗಿರುತ್ತಾರೆ. ರಾಶಿಚಕ್ರಗಳು ಮತ್ತು ಹೊಂದಾಣಿಕೆಯ ಸಂಗತಿ: ಪ್ರತಿಯೊಂದು ರಾಶಿಚಕ್ರದ ವ್ಯಕ್ತಿಗಳಲ್ಲೂ ಪರಸ್ಪರ ಹೊಂದಾಣಿಕೆ ಹಾಗೂ ಜವಾಬ್ದಾರಿಯನ್ನು ನಿರ್ವಹಿಸುವ ಶಕ್ತಿಯಿರುತ್ತದೆ. ಅವುಗಳು ಒಂದೊಂದರಲ್ಲೂ ವಿಭಿನ್ನವಾಗಿರಬಹುದು. ವಿವಾಹದ ಬಂಧನ ಹಾಗೂ ಪತಿಯ ವಿಚಾರಕ್ಕೆ ಬಂದರೆ ಎಲ್ಲರೂ ಸಂಪೂರ್ಣವಾಗಿ ತಮ್ಮನ್ನು ತಾವು ಪ್ರೀತಿಗೆ ಅರ್ಪಿಸಿಕೊಳ್ಳುವರು.

ಪ್ರಣಯದ ವಿಚಾರಕ್ಕೆ ಬಂದರೆ

ಪ್ರಣಯದ ವಿಚಾರಕ್ಕೆ ಬಂದರೆ

ಪ್ರಣಯದ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರೂ ಒಂದೊಂದು ಬಗೆಯ ವಿಭಿನ್ನತೆಯನ್ನು ಹೊಂದಿರುತ್ತಾರೆ. ಅವುಗಳನ್ನು ಪರಿಗಣಿಸಲು ಅಥವಾ ನಿರ್ಧರಿಸಲು ಕೆಲವು ಸಮಯವನ್ನು ತೆಗೆದುಕೊಳ್ಳಬಹುದು. ಕೆಲವರು ಬಲು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇನ್ನೂಕೆಲವರು ತಮ್ಮ ಪ್ರೀತಿಯ ಸಮರ್ಪಣೆ ಹಾಗೂ ನಿರ್ವಹಣೆಯಲ್ಲಿ ವಿಭಿನ್ನತೆಯನ್ನು ಅಳವಡಿಸಿಟ್ಟುಕೊಂಡಿರಬಹುದು. ಇವೆಲ್ಲವೂ ಅವರವರ ರಾಶಿಚಕ್ರ ಹಾಗೂ ನಕ್ಷತ್ರಗಳ ಪ್ರಭಾವದಿಂದ ನಡೆಯುವುದು ಎಂದು ಸಹ ಹೇಳಲಾಗುವುದು. ಇತರ ರಾಶಿಚಕ್ರದ ಮಹಿಳೆಯರಲ್ಲಿ ಯಾವ ಬಗೆಯ ಗುಣಗಳು ಅಡಕವಾಗಿರುತ್ತವೆ? ಅವರಿಗೆ ಯಾವ ರಾಶಿಯ ಪುರುಷರು ಯೋಗ್ಯ ಪತಿಗಳಾಗಿರುತ್ತಾರೆ ಎನ್ನುವುದನ್ನು ತಿಳಿಯೋಣ ಬನ್ನಿ...

Most Read:ನವರಾತ್ರಿಯ ಮೂರನೇ ದಿನ: ಚಂದ್ರಘಂಟ ದೇವಿಯ ಆರಾಧನೆ ಹಾಗೂ ಪೂಜಾ ಮಂತ್ರಗಳು

ಮೀನ ರಾಶಿಯವರು

ಮೀನ ರಾಶಿಯವರು

ಮೀನರಾಶಿಯ ಮಹಿಳೆಯರನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಠಿಣ ಎಂದು ಹೇಳಬಹುದು. ಏಕೆಂದರೆ ಇವರು ರಾಶಿಚಕ್ರಗಳ ಆಧಾರದ ಮೇಲೆ ಹೆಚ್ಚು ಗಮನ, ಭಾವನಾತ್ಮಕ ಚಿಂತನೆ ಹಾಗೂ ಸಂವೇದನಾಶಿಲತೆಯನ್ನು ಹೊಂದಿರುತ್ತಾರೆ. ಇವರು ಅತ್ಯಂತ ಸೃಜನಾತ್ಮಕ ಸ್ವಭಾವದವರು. ಈ ರಾಶಿಯ ಮಹಿಳೆಯರೊಂದಿಗೆ ಡೇಟಿಂಗ್ ಹೊಂದುವಾಗ ಸ್ವಲ್ಪ ಸಿಹಿ, ಸ್ವಲ್ಪ ವಿಕಾರ ಮತ್ತು ಸ್ವಲ್ಪ ಮುಜುಗರವನ್ನು ಉಂಟುಮಾಡಬಹುದು. ಇವರು ಮಕರ ಮತ್ತು ಕರ್ಕ ರಾಶಿಯವರೊಂದಿಗೆ ಉತ್ತಮ ಸಂಗಾತಿಯಾಗಿ ಇರುವರು.

ಕುಂಭ ರಾಶಿಯವರು

ಕುಂಭ ರಾಶಿಯವರು

ಇವರು ದೀರ್ಘ ಕಾಲ ಒಂಟಿಯಾಗಿ ಇರಲು ಬಯಸದ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಜ್ಞಾನ ಮತ್ತು ಸೃಜನ ಶೀಲತೆಯ ಕುರಿತು ಹೆಚ್ಚು ದಾಹವನ್ನು ಹೊಂದಿರುತ್ತಾರೆ. ವೈರತ್ವ ಹಾಗೂ ಹಗೆತನವನ್ನು ನಿರಂತರವಾಗಿ ಮುಂದುವರಿಸಬಲ್ಲರು. ಸ್ವತಂತ್ರವಾಗಿ ಇರಲು ಇಷ್ಟಪಡುವ ವ್ಯಕ್ತಿಗಳಾಗಿರುತ್ತಾರೆ. ಇವರು ಮಿಥುನ ಮತ್ತು ತುಲಾ ರಾಶಿಯವರೊಂದಿಗೆ ಉತ್ತಮ ಸಂಗಾತಿಯಾಗಿ ಇರಬಲ್ಲರು.

ಮಕರ ರಾಶಿಯವರು

ಮಕರ ರಾಶಿಯವರು

ಈ ರಾಶಿಯ ಮಹಿಳೆಯರು ಹೆಚ್ಚು ಮೋಜು, ಮಸ್ತಿ, ಪ್ರೀತಿ, ಸಹಾನೂಭೂತಿ ಹಾಗೂ ಹಾಸ್ಯ ಮಾಡುವ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಇವರು ಅತ್ಯಂತ ಅಂತರ್ಮುಖಿ ಸ್ವಭಾವವನ್ನು ಹೊಂದಿರುತ್ತಾರೆ. ಹಾಗಾಗಿ ಸಂಬಂಧಗಳಲ್ಲಿ ಸಮಸ್ಯೆ ಉಂಟಾಗಬಹುದು. ಆಗಾಗ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇವರು ಸದಾಚಾರಗಳಿಂದ ಕೂಡಿರುತ್ತಾರೆ ಎನ್ನಲಾಗುವುದು. ಈ ರಾಶಿಯ ಮಹಿಳೆಯರಿಗೆ ಸೂಕ್ತ ವರ ಎಂದರೆ ಕನ್ಯಾ ಮತ್ತು ಮೀನರಾಶಿಯ ಪುರುಷರು.

ಧನು ರಾಶಿಯವರು

ಧನು ರಾಶಿಯವರು

ಇವರು ಅತ್ಯಂತ ಸಾಹಸ ಪ್ರವೃತ್ತಿಯ ವ್ಯಕ್ತಿಗಳಾಗಿರುತ್ತಾರೆ. ಸ್ವತಂತ್ರ್ಯವನ್ನು ಬಯಸುವ ಇವರು ನಾಟಕಗಳನ್ನು ಇಷ್ಟಪಡುವುದಿಲ್ಲ ಎನ್ನಬಹುದು. ತಮ್ಮವರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಸುಲಭವಾಗಿ ಜಯಿಸಬಹುದು. ತೆರೆದ ಮನಸ್ಸಿನ ಸ್ವಭಾವದವರು ಇವರು ತಮ್ಮ ಭಾವನೆಗಳನ್ನು ಬಹಳ ಸುಂದರವಾಗಿ ಹಂಚಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯವರಿಗೆ ಸೂಕ್ತ ವರರೆಂದರೆ ಕುಂಭ ಮತ್ತು ಮೇಷ ರಾಶಿಯ ಪುರುಷರು.

ವೃಶ್ಚಿಕ ರಾಶಿಯವರು

ವೃಶ್ಚಿಕ ರಾಶಿಯವರು

ಇವರು ಅತ್ಯಂತ ಸವಾಲಿನ ವ್ಯಕ್ತಿಗಳಾಗಿರುತ್ತಾರೆ. ಬಹಳ ಸಂವೇದನಾಶಿಲರಾದ ಇವರು ಕೆಲವೊಮ್ಮೆ ಅಸೂಯೆಗೆ ಒಳಗಾಗಬಹುದು. ಭಾವೋದ್ರಿಕ್ತ ಜೀವಿಗಳು ಎಂದು ಹೇಳಲಾಗುವುದು. ತಮ್ಮ ಸಂಗಾತಿಯನ್ನು ಪ್ರೀತಿಯಿಂದಲೇ ನೋಡುವರು. ಸಂಬಂಧಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿರಬಹುದು ಎನ್ನಲಾಗುತ್ತದೆ. ಇವರಿಗೆ ಹೊಂದುವ ಸೂಕ್ತ ವರರು ಎಂದರೆ ಸಿಂಹ ಮತ್ತು ಮಕರ ರಾಶಿಯ ಪುರುಷರು.

Most Read:ಚಿಕನ್- ಮಟನ್‌ಗಿಂತಲೂ ಇಂತಹ ಸಸ್ಯಾಹಾರಿ ಆಹಾರಗಳು ತುಂಬಾನೇ ಆರೋಗ್ಯಕಾರಿ

ತುಲಾ ರಾಶಿಯವರು

ತುಲಾ ರಾಶಿಯವರು

ಸಮತೋಲನವನ್ನು ಕಾಣುವ ವ್ಯಕ್ತಿಗಳಲ್ಲಿ ಇವರು ಮೊದಲಿಗರು ಎನ್ನಬಹುದು. ಇವರು ನಿಖರವಾಗಿ ಏನನ್ನು ಬಯಸುವರು ಎನ್ನುವುದಕ್ಕೆ ಪುರಾವೆಗಳಿರುವುದಿಲ್ಲ. ಕೆಲವು ನಿಗದಿತ ನಿರೀಕ್ಷೆಗಳನ್ನು ಹೊಂದಿರುವರು. ಅತ್ಯುತ್ತಮ ವಿಚಾರಗಳನ್ನು ಉತ್ತಮವಾಗಿದೆ ಎಂದು ಬಯಸಬಹುದು. ಇವರ ಮಾನಸಿಕ ಹೊಂದಾಣಿಕೆಯು ಉತ್ತಮವಾಗಿಯೇ ಇರುತ್ತದೆ ಎನ್ನಲಾಗುವುದು. ಇವರಿಗೆ ಹೊಂದುವ ವರರೆಂದರೆ ಸಿಂಹ ಮತ್ತು ಧನು ರಾಶಿಯ ಪುರುಷರು.

ಕನ್ಯಾ ರಾಶಿಯವರಿಗೆ

ಕನ್ಯಾ ರಾಶಿಯವರಿಗೆ

ಕನ್ಯಾ ರಾಶಿಯ ಮಹಿಳೆಯರು ಹೆಚ್ಚು ವಿಧೇಯ, ಸಹಿಷ್ಣು ಮತ್ತು ಕಡಿಮೆ ಘರ್ಷಣೆಯನ್ನು ಮಾಡುವ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ಸಂಗತಿ ಎನ್ನಬಹುದು. ಇವರು ತಮ್ಮ ಭಾವನೆಗಳನ್ನು ಏಕಕಾಲದಲ್ಲಿಯೇ ವ್ಯಕ್ತಪಡಿಸುವುದಿಲ್ಲ. ಆದರೆ ಅತ್ಯಂತ ಭಾವೋದ್ರಿಕ್ತ ಪ್ರೇಮಿಗಳಾಗಿರುತ್ತಾರೆ. ಇವರಿಗೆ ಹೊಂದುವ ವರರೆಂದರೆ ಮಕರ ಮತ್ತು ತುಲಾ ರಾಶಿಯ ಪುರುಷರು.

Most Read:ನಿಮಗೆ ಗೊತ್ತೇ? ಮಶ್ರೂಮ್‌ನ್ನು ಔಷಧಿಗಳಲ್ಲಿಯೂ ಬಳಸುತ್ತಾರಂತೆ!

ಸಿಂಹ ರಾಶಿಯವರು

ಸಿಂಹ ರಾಶಿಯವರು

ಇವರು ಸ್ವತಂತ್ರ ವ್ಯಕ್ತಿಗಳಾಗಲು ಬಯಸುವರು. ಆದರೆ ಒಮ್ಮೆ ಸಂಬಂಧದಲ್ಲಿ ಬಿದ್ದರೆ ಅದನ್ನು ವಿಶ್ವಾಸಾರ್ಹ ರೀತಿಯಲ್ಲಿ ನಡೆಸಿಕೊಂಡು ಸಾಗುವರು. ನಿಷ್ಠಾವಂತರಾದ ಇವರು ನಂಬಿಕೆಗೆ ಯೋಗ್ಯ ವ್ಯಕ್ತಿಗಳಾಗಿರುತ್ತಾರೆ. ಉತ್ತಮ ಸಹಕಾರ ಹಾಗೂ ಪ್ರೀತಿಯಿಂದ ಸಹಕರಿಸುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಹೊಂದುವ ವರರೆಂದರೆ ವೃಶ್ಚಿಕ ಮತ್ತು ಮಿಥುನ ರಾಶಿಯ ಪುರುಷರು.

ಕರ್ಕ ರಾಶಿಯವರು

ಕರ್ಕ ರಾಶಿಯವರು

ಇವರು ಅತ್ಯಂತ ಕರುಣಾಮಯಿ ವ್ಯಕ್ತಿಗಳಾಗಿರುತ್ತಾರೆ. ಇವರು ಇತರರ ಭಾವನೆಗಳನ್ನು ಬಹುಬೇಗ ಅರ್ಥೈಸಿಕೊಳ್ಳುವರು. ಇವರು ಇತರರೊಂದಿಗೆ ಹೆಚ್ಚು ಸಹಕಾರ ಹಾಗೂ ಸ್ನೇಹದಿಂದ ವರ್ತಿಸುತ್ತಾರೆ. ಸಂವೇದನಾಶೀಲರಾದ ಇವರು ಅತ್ಯುತ್ತಮ ಸಂಗಾತಿಯಾಗಿ ಕಾರ್ಯ ನಿರ್ವಹಿಸುವರು. ಇವರಿಗೆ ಹೊಂದಿಕೆಯಾಗುವ ವರರೆಂದರೆ ವೃಷಭ ಮತ್ತು ತುಲಾ ರಾಶಿಯ ಪುರುಷರು.

ಮಿಥುನ ರಾಶಿಯವರು

ಮಿಥುನ ರಾಶಿಯವರು

ಈ ರಾಶಿಯ ಮಹಿಳೆಯರು ಸದಾ ತಮ್ಮ ಪ್ರೀತಿಯನ್ನು ಹೃದಯದಿಂದ ವ್ಯಕ್ತಪಡಿಸುತ್ತಾರೆ. ಇವರು ಬಹುಮುಖಿ ಜೀವಿಗಳು ಎನ್ನಬಹುದು. ಆದರೆ ಉತ್ತಮ ಸಾಹಸ ಹಾಗೂ ಪ್ರೀತಿಯಿಂದ ಸಂಬಂಧವನ್ನು ನಿರ್ವಹಿಸುವರು. ಸಾಮಾಜಿಕವಾಗಿ ಹೆಚ್ಚು ಕಾಣಿಸಿಕೊಳ್ಳಲು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಸರಿ ಹೊಂದುವ ವರರೆಂದರೆ ತುಲಾ ಮತ್ತು ಕರ್ಕ ರಾಶಿಯ ಪುರುಷರು.

ವೃಷಭ ರಾಶಿಯವರು

ವೃಷಭ ರಾಶಿಯವರು

ಈ ರಾಶಿಯ ಮಹಿಳೆಯರಲ್ಲಿ ಸ್ವಲ್ಪ ಮೊಂಡುತನದ ಸ್ವಭಾವ ಇರುತ್ತದೆ. ತಮಗೆ ತಾವು ಹೆಚ್ಚು ಆದ್ಯತೆ ನೀಡಲು ಬಯಸುತ್ತಾರೆ. ಸ್ಥಿರತೆಗೆ ಹೆಚ್ಚು ಗಮನ ನೀಡುವ ಇವರು ಸಹಾನೂಭೂತಿ, ನಿಷ್ಠಾವಂತ ಹಾಗೂ ಪ್ರೀತಿಯ ಭಾವನೆಯನ್ನು ಹೊಂದಿರುತ್ತಾರೆ. ಇವರಿಗೆ ಹೊಂದುವ ವರರೆಂದರೆ ವೃಷಭ ಹಾಗೂ ಕರ್ಕ ರಾಶಿಯ ಪುರುಷರು.

ಮೇಷ ರಾಶಿಯವರು

ಮೇಷ ರಾಶಿಯವರು

ಇತರ ರಾಶಿಯವರಿಗೆ ಹೋಲಿಸಿದರೆ ಇವರು ಹೆಚ್ಚು ಉಗ್ರತೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ ಎನ್ನಲಾಗುವುದು. ಸಾಮಾಜಿಕವಾಗಿ ಹೆಚ್ಚು ಪ್ರಚಾರ ಹೊಂದುವ ಇವರು ಕೆಲವು ಸಂಗತಿಗಳಲ್ಲಿ ಸ್ಥಿರತೆಯನ್ನು ಹೊಂದಿರುತ್ತಾರೆ. ಸಂಗಾತಿಗೆ ಉತ್ತಮ ಪ್ರೀತಿಯನ್ನು ನೀಡುವ ಈ ರಾಶಿಯವರಿಗೆ ಹೊಂದುವ ವರರೆಂದರೆ ಮೀನ ಮತ್ತು ಕರ್ಕ ರಾಶಿಯ ಪುರುಷರು.

For Quick Alerts
ALLOW NOTIFICATIONS
For Daily Alerts

    English summary

    these three best women to marry according to the Zodiac Signs

    We often believe that we are destined to being with the right partner, according to our zodiac signs. But how sure are you that your lady love belongs to the perfect zodiac sign? There are listed zodiac signs for women, which are believed to be the perfect ones for having women of the marriage material type. Women of these zodiac signs are said to be the perfect partners in life.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more