For Quick Alerts
ALLOW NOTIFICATIONS  
For Daily Alerts

  ಈ ಆರು ರಾಶಿಯವರು ತುಂಬಾನೇ ಬುದ್ಧಿವಂತರು! ಯೋಚಿಸಿ ಹೆಜ್ಜೆ ಇಡುವವರು...

  By Deepu
  |

  ಮೇಲ್ನೋಟಕ್ಕೆ ನಾವೆಲ್ಲರೂ ಮನುಷ್ಯರು. ಇತರ ಪ್ರಾಣಿಗಳಿಗಿಂತ ಮನುಷ್ಯನಿಗೆ ವಿಶೇಷವಾದ ಶಕ್ತಿಯಿದೆ ಎನಿಸುತ್ತದೆ. ಮನುಷ್ಯ ಎಷ್ಟೇ ಬುದ್ಧಿವಂತ ಅಥವಾ ಕ್ರಿಯಾಶೀಲ ವ್ಯಕ್ತಿಯಾಗಿದ್ದರೂ ಅವನಿಗೆ ಹಣೆ ಬರಹ ಹಾಗೂ ಕುಂಡಲಿ ಎನ್ನುವ ವಿಶೇಷ ಶಕ್ತಿಯ ಅಡಿಯಲ್ಲಿ ನಿಯಂತ್ರಣದಲ್ಲಿರುತ್ತಾನೆ. ಅವನೇನೇ ಮಾಡಲು ಹೊರಟರು ಅವನ ಗ್ರಹಗತಿಗಳು ಅವನಿಗೆ ಸಾಥ್ ನೀಡಬೇಕಾಗುತ್ತದೆ. ಇಲ್ಲವಾದರೆ ಮನುಷ್ಯ ತಾನು ಅಂದುಕೊಂಡ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಅಂತೆಯೇ ಪ್ರತಿಯೊಂದು ರಾಶಿಚಕ್ರದವರು ವಿಶೇಷ ಬಗೆಯ ಹಾಗೂ ಭಿನ್ನ ರೀತಿಯ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ 

  ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಚಕ್ರದ ಚಿಹ್ನೆಗಳು ವಿವಿಧ ಬಗೆಯ ವ್ಯಕ್ತಿತ್ವವನ್ನು ಮತ್ತು ಧೋರಣೆಗಳನ್ನು ಹೊಂದಿರುತ್ತವೆ. ಇವುಗಳ ಜೊತೆಗೆ ಕೆಲವು ವಿಶೇಷ ಬುದ್ಧಿವಂತಿಕೆಯನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ. ಅವು ದೈನಂದಿನ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯದ ಆಧಾರದ ಮೇಲೆ ತಾರ್ಕಿಕ, ವಿಶ್ಲೇಷಣಾತ್ಮಕ ಗುಣಗಳನ್ನು ಒಳಗೊಂಡಿರುತ್ತದೆ. ಅದರಲ್ಲೂ 12 ರಾಶಿ ಚಕ್ರಗಳಲ್ಲಿ ಕೆಲವು ರಾಶಿ ಚಕ್ರದವರು ವಿಶೇಷ ಗುಣ ವಿಶೇಷಗಳನ್ನು ಒಳಗೊಂಡಿವೆ. 

  ಕೆಲವು ಆಯ್ದ ರಾಶಿ ಚಕ್ರಗಳು ಯಾವವು? ಅವುಗಳ ಗುಣ ವಿಶೇಷಗಳು ಏನು? ಆ ರಾಶಿ ಚಕ್ರದ ಗುಂಪಿನಲ್ಲಿ ನಿಮ್ಮ ರಾಶಿಚಕ್ರವೂ ಇದೆಯೇ? ಎನ್ನುವಂತಹ ವಿವಿಧ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡುತ್ತಿದೆ ಎಂದಾದರೆ ಈ ಮುಂದೆ ವಿವರಿಸಲಾದ ರಾಶಿಚಕ್ರದ ವಿವರಗಳನ್ನು ಪರಿಶೀಲಿಸಿ....  

  ತುಲಾ ರಾಶಿಯವರು ತುಂಬಾನೇ ಬುದ್ಧಿವಂತರು...

  ತುಲಾ ರಾಶಿಯವರು ತುಂಬಾನೇ ಬುದ್ಧಿವಂತರು...

  ತುಲಾ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸಂದರ್ಭಗಳನ್ನು ವಿಶ್ಲೇಷಿಸುತ್ತಾರೆ ಮತ್ತು ಸಂಘರ್ಷದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಒಮ್ಮತವನ್ನು ಹುಡುಕುತ್ತಾರೆ. ಸಮಸ್ಯೆಗಳು ಉಂಟಾದಾಗ ತುಲಾ ರಾಶಿಯವರ ಬಳಿ ಬರಬಹುದು. ಆಗ ಅವರು ಬಲು ಸುಲಭವಾಗಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು. ಇವರು ಸಮಸ್ಯೆಗಳನ್ನು ಹಾಗೂ ಸಂದರ್ಭಗಳನ್ನು ಸಮನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅದಕ್ಕೆ ಅನುಸಾರವಾಗಿ ಹೇಗೆ ಸಮಸ್ಯೆಗಳಿಂದ ಪರಿಹಾರ ಕಾಣಬಹುದು ಎಂದು ಯೋಚಿಸುತ್ತಾರೆ. ಅದರ ಅನುಸಾರವೇ ಸಮಸ್ಯೆಯು ಪರಿಹಾರ ಕಾಣುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ತುಲಾ ರಾಶಿಯವರು ತುಂಬಾನೇ ಬುದ್ಧಿವಂತರು...

  ತುಲಾ ರಾಶಿಯವರು ತುಂಬಾನೇ ಬುದ್ಧಿವಂತರು...

  ತುಲಾ ರಾಶಿಯವರು ಸಂಬಂಧ ಅಭಿಪ್ರಾಯ ನೀಡುವ ಉತ್ತಮ ಸಲಹೆಗಾರರು. ಇವರು ಇತರರಿಗೆ ಉತ್ತಮ ಸ್ನೇಹಿತರಾಗಿಯೂ ಮತ್ತು ಸಲಹೆಗಾರರಾಗಿಯೂ ಇರುತ್ತಾರೆ. ಇನ್ನು ತುಲಾ ರಾಶಿಯ ವೃತ್ತಿಜೀವನದ ಜಾತಕ ಈ ವರ್ಷದ ಬಹಳ ಪರಿಶ್ರಮದ ಕೆಲಸವನ್ನು ಮಾಡಬೇಕಾದ ಸ್ಥಿತಿಯನ್ನು ತೋರಿಸುತ್ತದೆ. ಅವರು ನಿರ್ವಹಿಸಬೇಕಾದ ಕೆಲವು ಪ್ರಮುಖ ಕೆಲಸದ ರೂಪದಲ್ಲಿರಬಹುದು. ಈ ಹೊಸ ಸವಾಲುಗಳನ್ನು ಸ್ವೀಕರಿಸಲು ಅವರು ಸಿದ್ಧರಾಗಿರಬೇಕು. ರಾಶಿಚಕ್ರದ ಪ್ರಕಾರ ಮಂಗಳದ ಸಂಚಾರ ಮಾರ್ಚ್ ಮಧ್ಯಭಾಗದಲ್ಲಿ ಪ್ರಾರಂಭವಾಗುತ್ತದೆ ಮತ್ತು ಅದು ಅವರಿಗೆ ತುಂಬಾ ಸವಾಲು ಎಂದು ಸಾಬೀತುಪಡಿಸಬಹುದು. ಈ ವರುಷದಲ್ಲಿ ವರ್ಷದಲ್ಲಿ ಈ ರಾಶಿಚಕ್ರವು ಸಾಕಷ್ಟು ಒತ್ತಡ ಮತ್ತು ಸವಾಲುಗಳನ್ನು ಎದುರಿಸಲಿದೆ. ಆದರೆ ಅವರು ಚಿಂತೆ ಮಾಡಬೇಕಾಗಿಲ್ಲ, ಏಕೆಂದರೆ ಅವರು 100% ರಷ್ಟು ಲಾಭದಾಯಕ ಮತ್ತು ಪೂರೈಸುವ ದಿನಗಳನ್ನೂ ಹೊಂದಿರುತ್ತಾರೆ. ಹೊಸ ವರ್ಷದಲ್ಲಿ ಈ ರಾಶಿಚಕ್ರದ ಚಿಹ್ನೆಗಳಿಗೆ ಶನಿವಾರ ಮತ್ತು ಭಾನುವಾರಗಳು ಅದೃಷ್ಟದ ದಿನಗಳು. ಇವರು ತಮ್ಮ ಸುತ್ತಲಿನ ಎಲ್ಲಾ ಜನರನ್ನು ಸಂಪೂರ್ಣವಾಗಿ ಸಂತೋಷದಿಂದ ಇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇವರು ಬೇರೆಯವರನ್ನು ಸಂತೋಷಪಡಿಸುವ ಕಾರ್ಯವನ್ನು ಮೊದಲು ನಿಲ್ಲಿಸಬೇಕು. ಜೊತೆಗೆ ತಮ್ಮ ಕಾರ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು.

  ಕುಂಬ: ಇವರು ಯಾವತ್ತೂ ಯೋಜಿಸಿ ಹೆಜ್ಜೆ ಇಡುವರು

  ಕುಂಬ: ಇವರು ಯಾವತ್ತೂ ಯೋಜಿಸಿ ಹೆಜ್ಜೆ ಇಡುವರು

  ಸನ್ನಿವೇಶದಲ್ಲಿ ಎರಡು ದೃಷ್ಟಿಕೋನಗಳನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯದಿಂದಾಗಿ ಕುಂಬ ರಾಶಿಯವರು ಅತ್ಯುತ್ತಮ ಬುದ್ಧಿವಂತರು ಎನ್ನಬಹುದು. ಇದು ರಾಶಿಚಕ್ರದ ಪೂರ್ವಾಗ್ರಹವನ್ನು ಮುಕ್ತಗೊಳಿಸುತ್ತದೆ. ಕುಂಬ ರಾಶಿಯವರು ಇತರರಿಗೆ ಕೇಳಲು ಮತ್ತು ಸತ್ಯವನ್ನು ತಿಳಿದುಕೊಳ್ಳಲು ಸಿದ್ಧರಿದ್ದಾರೆ. ಯಾಕೆಂದರೆ ಎಲ್ಲರೂ ಏನಾದರೂ ಕಲಿಯಬಹುದೆಂದು ಅವರು ಸಾಮಾನ್ಯವಾಗಿ ತಿಳಿದಿದ್ದಾರೆ. ಅವರು ಬುದ್ಧಿವಂತರಾಗಿದ್ದಾರೆ ಆದರೆ ಕೆಲವೊಮ್ಮೆ ಮೌನವಹಿಸುವುದರ ಮೂಲಕ ಇತರರಿಂದ ದೂರವಿರುತ್ತಾರೆ. ಇವರು ಅತ್ಯುತ್ತಮ ಸ್ಮರಣಾ ಶಕ್ತಿಯನ್ನು ಹೊಂದಿರುತ್ತಾರೆ. ಏನನ್ನಾದರೂ ತಿಳಿದುಕೊಳ್ಳಬೇಕು ಎಂದುಕೊಂಡರೆ ಅದನ್ನು ಕಷ್ಟಪಟ್ಟು ತಿಳಿದುಕೊಳ್ಳುತ್ತಾರೆ. ಜೊತೆಗೆ ಕೆಲವು ಬುದ್ಧಿವಂತಿಕೆಯಿಂದ ವಿಷಯಗಳನ್ನು ಅರ್ಥೈಸಿಕೊಳ್ಳುತ್ತಾರೆ.

  ಕುಂಬ: ಇವರು ಯಾವತ್ತೂ ಯೋಜಿಸಿ ಹೆಜ್ಜೆ ಇಡುವರು

  ಕುಂಬ: ಇವರು ಯಾವತ್ತೂ ಯೋಜಿಸಿ ಹೆಜ್ಜೆ ಇಡುವರು

  ಕುಂಬ ರಾಶಿಯ ವೃತ್ತಿಜೀವನದ ಜಾತಕ ಪ್ರಕಾರ ಕೆಲಸದ ಸ್ಥಳದಲ್ಲಿ ವ್ಯಕ್ತಿಗಳು ಆರಾಮದಾಯಕರಾಗಿರುತ್ತಾರೆ. ಗುರುಗ್ರಹದ ಧನಾತ್ಮಕ ಕಂಪನಗಳು ಉದ್ಯೋಗಿಗ ಬೆಳವಣಿಗೆಯ ನಿರೀಕ್ಷೆಯನ್ನು ಹೆಚ್ಚಿಸುತ್ತದೆ. ಉತ್ತಮ ಉದ್ಯೋಗಗಳು ಮತ್ತು ಹೆಚ್ಚಿನ ಕೆಲಸದ ತೃಪ್ತಿ ಬೆಳವಣಿಗೆಗಳೊಂದಿಗೆ ಅವರು ಆಶೀರ್ವದಿಸಲಿರುವ ಸಾಧ್ಯತೆಗಳಿವೆ. ಈ ರಾಶಿಯ ಜನರು ತಮ್ಮ ಜೀವನದಲ್ಲಿ ಏರಿಳಿತದ ಪಾಲನ್ನು ಹೊಂದಿರುತ್ತಾರೆ. ಆದರೆ ಅದೃಷ್ಟದ ದಿನಗಳಲ್ಲಿ ಮಂಗಳವಾರ ಮತ್ತು ಶನಿವಾರಗಳು. ನಿಮ್ಮ ವಿಶೇಷ ಕೆಲಸ ಕಾರ್ಯಗಳನ್ನು ಈ ದಿನಗಳಲ್ಲಿ ಕೈಗೊಳ್ಳಬಹುದು. ಇವರಿಗೆ ಇತರರು ನೀಡಿದ ಭರವಸೆ ಹಾಗೂ ಮಾತುಗಳಿಂದ ಹೊರ ಬರಬೇಕಾದ ಅನಿವಾರ್ಯತೆಗಳಿವೆ. ಯಾರು ತಮ್ಮ ಮಾತಿಗೆ ಹಾಗೆಯೇ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ ಎನ್ನುವುದನ್ನು ಅರಿಯಬೇಕು. ಈ ವರುಷದಲ್ಲಿ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿರಬಾರದು ಎನ್ನುವುದನ್ನು ಅರಿಯಬೇಕಿದೆ.

  ಕನ್ಯಾ: ಉತ್ತಮ ವಿಮರ್ಶಕ ಮತ್ತು ವಿಶ್ಲೇಷಕರು

  ಕನ್ಯಾ: ಉತ್ತಮ ವಿಮರ್ಶಕ ಮತ್ತು ವಿಶ್ಲೇಷಕರು

  ಕನ್ಯಾ ರಾಶಿಯವರು ಹೆಚ್ಚು ಸಂಕೀರ್ಣ ಸಂದರ್ಭಗಳನ್ನು ವಿಶ್ಲೇಷಿಸಲು ಸಮರ್ಥರಾಗಿರುತ್ತಾರೆ. ಅವರು ಕ್ರಮಬದ್ಧ, ತಾರ್ಕಿಕ ಮತ್ತು ಒಂದು ಹಂತ ಅಥವಾ ಇನ್ನೊಂದನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ಆಯ್ಕೆಗಳನ್ನು ಅಧ್ಯಯನ ಮಾಡುತ್ತಾರೆ. ಇತರ ರಾಶಿಚಕ್ರದ ಚಿಹ್ನೆಗಳನ್ನು ಹೊಂದಿರುವ ಹೆಚ್ಚಿನ ಕೌಶಲ್ಯದೊಂದಿಗೆ ಸಮಸ್ಯೆಗಳನ್ನು ಪರಿಹರಿಸಲು ಅವರು ಸಹಾಯ ಮಾಡಬಹುದು. ಆದಾಗ್ಯೂ ಕೆಲವೊಮ್ಮೆ ತಮ್ಮದೇ ಆದ ಸಮಸ್ಯೆಗಳನ್ನು ಪರಿಹರಿಸಲು ವಿಶ್ಲೇಷಣೆ ನಡೆಸರು. ಅವರು ನಿರ್ಣಾಯಕ, ಮೋಸಗೊಳಿಸುವ ಮತ್ತು ಮಾಡುವ ಪ್ರತಿಯೊಂದು ಕೆಲಸದಲ್ಲೂ ಬಹಳ ಸಮರ್ಥರಾಗಿರುತ್ತಾರೆ.

  ಕನ್ಯಾ: ಉತ್ತಮ ವಿಮರ್ಶಕ ಮತ್ತು ವಿಶ್ಲೇಷಕರು

  ಕನ್ಯಾ: ಉತ್ತಮ ವಿಮರ್ಶಕ ಮತ್ತು ವಿಶ್ಲೇಷಕರು

  ಇನ್ನು ಕೆಲಸ ಮಾಡುವ ಕ್ಷೇತ್ರದಲ್ಲಿ ಅಥವಾ ನೀವಿರುವ ಸ್ಥಳಗಳಲ್ಲಿ ಯಾರಾದರೂ ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆಗಳಿವೆ. ನೀವು ಆದಷ್ಟು ಶಾಂತ ಚಿತ್ತರಾಗಿ, ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದರ ಮೂಲಕ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಈ ವ್ಯಕ್ತಿಗಳು ಕೆಲಸದ ಕಡೆಗೆ ಕೇಂದ್ರೀಕರಿಸಬೇಕು. ಅವರು ಬದಲಾವಣೆಯನ್ನು ನೋಡುತ್ತಿದ್ದರೆ, ರಾಶಿಚಕ್ರ ಚಿಹ್ನೆಯ ಪ್ರಕಾರ ಗ್ರಹಗಳು ಬೆಂಬಲವನ್ನು ತೋರುವುದಿಲ್ಲ ಎಂದು ಅವರು ತಿಳಿದುಕೊಳ್ಳಬೇಕು. ಆದ್ದರಿಂದ ಈ ರಾಶಿಚಕ್ರಕ್ಕೆ ಈ ಕ್ಷಣದ ಮಂತ್ರವು ಕೈಯಲ್ಲಿರುವ ಪ್ರಸ್ತುತ ಕಾರ್ಯವನ್ನು ಅಂಟಿಕೊಳ್ಳುವುದು ಮತ್ತು ಹೊಸ ಅಥವಾ ವಿಭಿನ್ನ ವಿಷಯಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಇನ್ನು ಈ ರಾಶಿಯ ಜನರು ಅಂತಿಮವಾಗಿ ತಮ್ಮ ಫಲಪ್ರದ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ಅವರು ದೀರ್ಘಕಾಲದ ವರೆಗೆ ಯೋಜನೆ ಮಾಡುತ್ತಿರುವ ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ನೋಡುತ್ತಿದ್ದಾರೆ. ಮುಂಬರುವ ವರ್ಷದಲ್ಲಿ ಅದೃಷ್ಟದ ದಿನಗಳು ಗುರುವಾರ, ಶುಕ್ರವಾರ ಮತ್ತು ಶನಿವಾರ.

  ಮೀನ: ಅತ್ಯಂತ ಭಾವನಾತ್ಮಕರು

  ಮೀನ: ಅತ್ಯಂತ ಭಾವನಾತ್ಮಕರು

  ಮೀನ ರಾಶಿಯವರು ಇತರರನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಾಮರ್ಥ್ಯ ಹೊಂದಿರುತ್ತಾರೆ. ಅದಕ್ಕಾಗಿಯೇ ಇದನ್ನು ಅತ್ಯಂತ ಭಾವನಾತ್ಮಕ ಬುದ್ಧಿವಂತಿಕೆಯ ರಾಶಿ ಚಿಹ್ನೆ ಎನ್ನುವರು. ಅವರು ತಮ್ಮ ಭಾವನೆಗಳನ್ನು ಮತ್ತು ನೀರಿನಲ್ಲಿರುವ ಮೀನುಗಳಂತಹ ಇತರರ ನಡುವೆ ಈಜುತ್ತಾರೆ. ಅವರು ಕಲಾತ್ಮಕ ಮತ್ತು ತಮ್ಮ ಭಾವನಾತ್ಮಕ ಬುದ್ಧಿವಂತಿಕೆಯನ್ನು ಮತ್ತು ಕಲೆಯ ಮೂಲಕ ಪ್ರಪಂಚದ ದೃಷ್ಟಿಗೆ ಪ್ರತಿಫಲಿಸುತ್ತಾರೆ. ಅವರು ಹೆಚ್ಚು ಅರ್ಥಗರ್ಭಿತರಾಗಿದ್ದಾರೆ ಮತ್ತು ಪರಿಸ್ಥಿತಿಯನ್ನು ಬಿಟ್ಟುಬಿಡಲು ಅಥವಾ ಏನಾದರೂ ಅಪಾಯಕಾರಿಯಾಗುತ್ತಿರುವಾಗ ಅವರಿಗೆ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ.

  ಮೀನ: ಅತ್ಯಂತ ಭಾವನಾತ್ಮಕರು

  ಮೀನ: ಅತ್ಯಂತ ಭಾವನಾತ್ಮಕರು

  ಇನ್ನು ಈ ರಾಶಿಯವರಿಗೆ ಕನಸು ಕಾಣುವುದೇ ಇವರ ಅದೃಷ್ಟದ ಸಂಕೇತ. ಕೆಟ್ಟ ಕನಸುಗಳನ್ನು ವಿಶ್ಲೇಸಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವು ಕನಸು ಕಾಣುವುದರಿಂದಲೇ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎನ್ನಲಾಗುವುದು. ಈ ರಾಶಿಯ ಜನರು ಸಹಾನುಭೂತಿ ತೋರುವ ವ್ಯಕ್ತಿಗಳಾಗಿದ್ದು ಜನರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಸಮಯ ವಿನಿಯೋಗಿಸುವುದರಲ್ಲಿಯೇ ಪರಿಪೂರ್ಣತೆಯನ್ನು ಅನುಭವಿಸುತ್ತಾರೆ. ಜನರನ್ನು ಅವರಿದ್ದ ಹಾಗೇ ಸ್ವೀಕರಿಸುವ ನಿಮ್ಮ ಪರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಂಗೀತ. ನಿಮ್ಮ ಮನೋಭಾವವನ್ನು ಉತ್ತಮಗೊಳಿಸಲು ಸಂಗೀತ ನಡೆಯುತ್ತಿದ್ದರೆ ಸಾಕಾಗುತ್ತದೆ. ಸಂಗೀತದ ಅಲೆ ಸುತ್ತ ತೇಲುತ್ತಿರುವಾಗ ನಿಮಗೆ ಹೊಸ ವಿಷಯಗಳು ಹೊಳೆಯುತ್ತವೆ ಹಾಗೂ ಹೆಚ್ಚು ಕ್ರಿಯಾತ್ಮಕರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಆರೋಗ್ಯ, ಆರೈಕೆ, ಸಾಮಾಜಿಕ ಕೆಲಸ ಮತ್ತು ಲೋಕೋಪಕಾರ.

  ಸಿಂಹ: ಚತುರತೆಯ ರಾಜ

  ಸಿಂಹ: ಚತುರತೆಯ ರಾಜ

  ಸಿಂಹ ಅತ್ಯಂತ ಬುದ್ಧಿವಂತ ರಾಶಿ ಚಿಹ್ನೆ. ಅವರು ತಮ್ಮ ಅಂತರ್ದೃಷ್ಟಿಯಿಂದ ಮತ್ತು ಅವರ ಮಹಾನ್ ಕುತಂತ್ರದಿಂದ ನಿಯಂತ್ರಿಸುತ್ತಾರೆ. ಪ್ರತೀ ವಿಷಯದಲ್ಲಿ ತಮ್ಮ ಗುರಿಗಳನ್ನು ತಲುಪುವಲ್ಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಸಿಂಹ ರಾಶಿಯವರು ಯಾವುದೇ ಅಡಚಣೆಗೆ ಶರಣಾಗುವುದಿಲ್ಲ. ಇವರು ಸದಾ ಹೋರಾಟದ ಬುದ್ಧಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಟೀಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ರಕ್ಷಿಸಲು ಅವರು ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಇತರರಿಗೆ ಮನವೊಲಿಸುವಲ್ಲಿ ಮಹತ್ತರರಾಗಿರುತ್ತಾರೆ. ಅವರು ಉತ್ತಮ ಭಾಷಣಕಾರರು ಮತ್ತು ರಾಜಕಾರಣಿಗಳು ಆಗಿರುತ್ತಾರೆ.

  ಸಿಂಹ: ಚತುರತೆಯ ರಾಜ

  ಸಿಂಹ: ಚತುರತೆಯ ರಾಜ

  ಈ ರಾಶಿಯವರಿಗೆ ಚಿತ್ತಾಕರ್ಷಕ ಮತ್ತು ಹೊಳೆಯುವ ಹರಳುಗಳು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತವೆ. ಜೆಮ್‍ಸ್ಟೋನ್ ಅಥವಾ ನೀಲಿಮಣಿ ಇವರಿಗೆ ಅತ್ಯಂತ ಅದೃಷ್ಟದ ವಸ್ತು ಎಂದು ಪರಿಗಣಿಸಲಾಗುತ್ತದೆ.ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ. ನಿಮಗೆ ಬಹಳಷ್ಟು ಕನಸುಗಳಿದ್ದು ಮಹತ್ವಾಕಾಂಕ್ಷಿಗಳೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ನೇಹ. ಜೀವನಸಂಗಾತಿ ಅಥವಾ ಪ್ರಾಣ ಸ್ನೇಹಿತ/ಸ್ನೇಹಿತೆಯ ಸ್ನೇಹಕ್ಕೆ ನೀವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ.

  ಮಿಥುನ

  ಮಿಥುನ

  ದ್ವಂದ್ವತೆ ಮತ್ತು ಎರಡು ವಿಭಿನ್ನ ದೃಷ್ಟಿಕೋನಗಳಿಂದ ಸನ್ನಿವೇಶಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಿರುವ ಅತ್ಯಂತ ಬುದ್ಧಿವಂತ ರಾಶಿಚಕ್ರ ಚಿಹ್ನೆ. ಸಾಮಾನ್ಯವಾಗಿ ಮಿಥುನ ರಾಶಿಯವರು ಯಾವಾಗಲೂ ಸಮತೋಲನ ಕಂಡುಹಿಡಿಯುವ ಮತ್ತು ತಮ್ಮ ಘರ್ಷಣೆಗಳು ಪರಿಹರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಈ ರಾಶಿಚಕ್ರದವರು ಓದುವುದು, ವಿಶ್ಲೇಷಣೆ ನಡೆಸುವುದು ಮತ್ತು ಅವರ ಲಾಭಕ್ಕಾಗಿ ಮಾಹಿತಿಯನ್ನು ಪಡೆದುಕೊಳ್ಳುವುದರಲ್ಲಿ ಚತುರತೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು.

  ಮಿಥುನ

  ಮಿಥುನ

  ಮೀನ ರಾಶಿಯ ವೃತ್ತಿಜೀವನದ ಜಾತಕ ಪ್ರಕಾರ ವ್ಯಕ್ತಿಗಳು ಅವರು ಹಿಡಿದಿರುವ ಸ್ಥಾನದೊಂದಿಗೆ ಸುರಕ್ಷಿತವಾಗಿರುತ್ತಾರೆ. ಆದಾಗ್ಯೂ ಮಾರ್ಚ್ ಮಧ್ಯಭಾಗದವರೆಗೆ ಕೆಲಸಗಾರರಿಗೆ ಉತ್ತಮವಾಗಿಲ್ಲದಿರಬಹುದು. ರಾಶಿಚಕ್ರದ ಮುನ್ಸೂಚನೆಗಳ ಪ್ರಕಾರ ಮಾರ್ಚ್ ಮಧ್ಯದಿಂದ ಉಂಟಾಗುವ ಒತ್ತಡಗಳು ಪೂರ್ಣಗೊಳ್ಳುತ್ತವೆ. ಅವರು ಕೆಲವು ಪ್ರಮುಖ ಕೆಲಸವನ್ನು ಮಾಡಬೇಕಾಗಬಹುದು. ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ತಮ್ಮ ಕೌಶಲ್ಯ ಮತ್ತು ಅನುಭವವನ್ನು ಹರಿತಗೊಳಿಸುವ ಅವಶ್ಯಕತೆ ಇದೆ. ಈ ರಾಶಿಚಕ್ರದವರಿಗೆ ಸೋಮವಾರ ಅದೃಷ್ಟದ ವಾರ. ಈ ರಾಶಿಯವರು ಎಲ್ಲಾ ವಿಚಾರಕ್ಕೂ ಅಧಿಕವಾಗಿ ಚಿಂತಿಸುತ್ತಾರೆ. ಕೆಲವು ವಿಷಯಗಳಿಗೆ ಮಾನಸಿಕವಾಗಿ ಚಿಂತಿಸುವ ಬದಲು ಹೃದಯದ ಮೂಲಕ ಚಿಂತಿಸಬೇಕಾದ ಅನಿವಾರ್ಯತೆಗಳಿರುತ್ತದೆ ಎನ್ನುವುದನ್ನು ಅರಿಯಬೇಕು. ಸಂದರ್ಭವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಂತಹ ಗುಣವನ್ನು ಹೊಂದಿರಬೇಕು. ಈ ವರುಷದಲ್ಲಿ ಅತಿಯಾದ ಚಿಂತನೆಗೆ ಒಳಗಾಗುವುದನ್ನು ನಿಲ್ಲಿಸಿ, ಸಂಭವಿಸಬೇಕಾದ ವಿಚಾರಗಳನ್ನು ಹಾಗೇಯೇ ನೆರವೇರಲು ಬಿಡಿ.

  English summary

  These six Zodiac Signs Are the Smartest and also Intelligent

  In order to make a good list of the most intelligent zodiacal signs, at one HOW TO we have undergone a previous study of each and every one of them, and chosen a selection accordingly, not without understanding that all signs are intelligent in their own way and there are different types of intelligence.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more