2018ರಲ್ಲಿ ಈ ನಾಲ್ಕು ರಾಶಿಯವರು, ತುಂಬಾನೇ ಖುಷಿಯಾಗಿರುತ್ತಾರೆ

Posted By: Deepu
Subscribe to Boldsky

ಜೀವನದಲ್ಲಿ ಎಷ್ಟೇ ಶ್ರಮಪಟ್ಟು ದುಡಿದರೂ ಅದೃಷ್ಟ ಎನ್ನುವುದು ನಮ್ಮ ಬೆನ್ನಿಗೆ ಇರಬೇಕು. ಇಲ್ಲವಾದರೆ ನಾವು ಅದೆಷ್ಟೇ ಪ್ರಯತ್ನ ಪಟ್ಟರೂ ಯಶಸ್ಸಿನ ಪತಾಕೆಯನ್ನು ಹಾರಿಸಲು ಸಾಧ್ಯವಿಲ್ಲ. 2018ರಲ್ಲಿ ಗ್ರಹಗತಿಗಳು ಪಡೆದುಕೊಳ್ಳುವ ಬದಲಾವಣೆಯು ರಾಶಿಚಕ್ರಗಳ ಅದೃಷ್ಟವನ್ನು ಬದಲಿಸಲಿದೆ. ಈ ಬದಲಾವಣೆಗಳು ಕೆಲವು ರಾಶಿ ಚಕ್ರದವರನ್ನು ವರ್ಷ ಪೂರ್ತಿ ಸಂತೋಷದ ಅನುಭವ ನೀಡಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಹೌದು, 2018ರಲ್ಲಿ ನೀವು ನಿಮ್ಮ ಜೀವನದಲ್ಲಿ ಸಂತೋಷವನ್ನು ಪಡೆಯಬೇಕು ಎಂಬ ಹಂಬಲವನ್ನು ಹೊಂದಿರಬಹುದು. ಆದರೆ ನಿಮ್ಮ ಬಯಕೆಗೆ ಸರಿಯಾಗಿ ಗ್ರಹಗತಿಗಳು ಸಹ ಸರಿಯಾದ ಸಹಕಾರವನ್ನು ನೀಡಬೇಕಾಗುತ್ತದೆ. ಆದರೆ ಆಯ್ದ 4 ರಾಶಿಚಕ್ರಗಳಿಗೆ ಮಾತ್ರ ಈ ವರ್ಷ ಹೆಚ್ಚು ಸಂತೋಷವನ್ನು ಪಡೆದುಕೊಳ್ಳುವ ಅದೃಷ್ಟವಿದೆ. ಆ ನಾಲ್ಕು ರಾಶಿಚಕ್ರಗಳಲ್ಲಿ ನಿಮ್ಮ ರಾಶಿಚಕ್ರವೂ ಇದೆಯೇ ಎಂದು ತಿಳಿಯಲು ಮುಂದಿರುವ ವಿವರಣೆಯನ್ನು ತಿಳಿಯಿರಿ....

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಈ ರಾಶಿಯವರು ಈ ವರ್ಷ ಬಹಳ ಸ್ವತಂತ್ರರಾಗಿರುತ್ತಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವು ಅತ್ಯಂತ ಹರ್ಷವನ್ನು ನೀಡಲಿದೆ. ಮಾಡುವ ಕೆಲಸದಲ್ಲಿ ಅಥವಾ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ನಿಮ್ಮ ಸಂಪೂರ್ಣ ಪರಿಶ್ರಮವಿದ್ದರೆ ಅದೃಷ್ಟ ಎನ್ನುವುದು ಅದರ ಎರಡರಷ್ಟು ಉತ್ತಮ ಪರಿಣಾಮವನ್ನು ಕಲ್ಪಿಸಿಕೊಡುತ್ತದೆ. ನಿಮಗೆ ಸಿಗುವ ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ನೀವು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ನಿಮಗೆ ಈ ವರ್ಷ ಸಿಗುವ ಉತ್ಸಾಹ ಹಾಗೂ ಸ್ವಾತಂತ್ರ್ಯವು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಆತ್ಮ ವಿಶ್ವಾಸದಿಂದ ನೀವು ಈ ಹಿಂದೆ ಕಾಣದಷ್ಟು ಸಂತೋಷವನ್ನು ಅನುಭವಿಸಲಿದ್ದೀರಿ. ಯಾವುದೇ ಕಾರಣಕ್ಕೂ ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿರಿ. ನೀವು ಸದಾ ಜೀವನದಲ್ಲಿ ಯಾವೆಲ್ಲಾ ಬಗೆಯ ಸಂಗತಿಗೆ ಹೆಚ್ಚಿನ ಮಾನ್ಯತೆ ನೀಡುತ್ತಿದ್ದೀರೋ ಅದನ್ನು ಮುಂದುವರಿಸಿ. ಅದು ನಿಮ್ಮ ಜೀವನದ ಹಾದಿಗೆ ಉತ್ತಮವಾಗುವುದು. ಈ ವರ್ಷವು ನಿಮ್ಮ ಎಲ್ಲಾ ಬಯಕೆಗಳು ಪೂರ್ಣಗೊಳ್ಳಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇನ್ನು ನಿಮ್ಮ ಸಾಧ್ಯತೆ ಮತ್ತು ಸಾಮರ್ಥ್ಯ ಎರಡು ಪ್ರಕಾಶ ಮಾನವಾಗಿದೆ. ಈ ಎರಡು ವಿಚಾರದಿಂದಲೂ ನೀವು ಈ ವರ್ಷ ಅನೇಕ ವಿಚಾರದಲ್ಲಿ ಯಶಸ್ಸನ್ನು ಪಡೆದುಕೊಳ್ಳುವಿರಿ. 2018 ನೀವು ಬಯಸಿದ ಎಲ್ಲಾ ವಿಚಾರಗಳನ್ನು ಸಾಕಾರ ಗೊಳಿಸುತ್ತದೆ. ಜೊತೆಗೆ ಸಂತೋಷವನ್ನು ಪಡೆದುಕೊಳ್ಳುವ ವರ್ಷ ಇದು ಎಂದು ಹೇಳಬಹುದು. ಇನ್ನು ಈ ಹೊಸ ವರುಷದಲ್ಲಿ ಈ ರಾಶಿಚಕ್ರ ಚಿಹ್ನೆ ಪ್ರೀತಿಯ ಪರವಾಗಿ ಇರುತ್ತದೆ. ಸೋಮವಾರ, ಬುಧವಾರ, ಶನಿವಾರ ಅಥವಾ ಭಾನುವಾರದಂದು ತಮ್ಮ ಪ್ರೀತಿಯನ್ನು ಕೇಳಬಹುದು. ಇನ್ನು ಇಲ್ಲಿ ಗಮನಿಸಬೇಕಾದ ಸಂಗತಿಗಳೇನೆಂದರೆ ಇವರು ಸದಾ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎನ್ನುವ ಭಯದಲ್ಲಿಯೇ ಇರುತ್ತಾರೆ. ಇವರು ಈ ಭಯದಿಂದ ಹೊರಬರುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಹೊಸ ವರ್ಷದಲ್ಲಿ ಕಾರ್ಯವನ್ನು ಕೈಗೊಳ್ಳಲು ಅಡಚಣೆ ಉಂಟಾಗಬಹುದು. ಅಲ್ಲದೆ 2018ರಲ್ಲಿ ಪರಿಪೂರ್ಣತೆ ಪಡೆದುಕೊಳ್ಳಬೇಕೆಂದರೆ ಮೊದಲು ಭಯದಿಂದ ಹೊರ ಬರಬೇಕು.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಅದೃಷ್ಟವನ್ನು ಹೊಂದಿರುವ ರಾಶಿ ಚಕ್ರಗಳಲ್ಲಿ ಸಿಂಹ ರಾಶಿಯು ಒಂದು. ಈ ರಾಶಿಯವರು ಹಿಂದಿನ ವರ್ಷ ಅಗಾದ ನೋವು ಕಷ್ಟಗಳನ್ನು ಅನುಭವಿಸಿದ್ದರು. ಇದೀಗ ಅಂದರೆ 2018 ಅತ್ಯಂತ ಅದೃಷ್ಟವನ್ನು ತಂದುಕೊಡಲಿದೆ. ಸಾಮಾನ್ಯವಾಗಿ ಈ ರಾಶಿಯವರು ನೈಸರ್ಗಿಕವಾಗಿಯೇ ಹೆಚ್ಚು ಅದೃಷ್ಟ ಹಾಗೂ ನಾಯಕತ್ವದ ಸ್ವಭಾವವನ್ನು ಹೊಂದಿರುತ್ತಾರೆ. ಇದು ಅವರಿಗೆ ಸುತ್ತಲಿನ ಪರಿಸರದಲ್ಲಿ ರಾಜನಂತೆ ಬಾಳಲು ಅವಕಾಶ ಮಾಡಿಕೊಡುತ್ತದೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಈ ಹಿಂದೆ ಪಡೆದ ಅನುಭವಗಳಿಂದ ಮುಂದಿನ ದಿನದಲ್ಲಿ ಯಶಸ್ಸನ್ನು ಪಡೆಯಲು ಸೂಕ್ತ ಪಾಠವಾಗಿದೆ ಎನ್ನಬಹುದು. ನಿಮ್ಮ ಉತ್ತಮ ಗುರಿ ಹಾಗೂ ಶ್ರಮವನ್ನು ವಹಿಸಿ ಮಾಡುವ ಕೆಲಸದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ನಿಮ್ಮ ಮನಸ್ಸಿನಲ್ಲಿ ಏನೆಲ್ಲಾ ಮಾಡಬೇಕು ಎಂದು ಅಂದುಕೊಂಡಿದ್ದಿರೋ ಅದೆಲ್ಲವೂ ಈ ವರ್ಷ ನೆರವೇರಲಿದೆ. ಜೊತೆಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿಯ ಭಾವವನ್ನು ಅನುಭವಿಸುವಿರಿ ಎನ್ನಲಾಗುತ್ತದೆ. ಇನ್ನು ಕೆಲವು ಆಸೆ ಆಕಾಂಕ್ಷೆಗಳು ನಿಮ್ಮ ಆಸೆಯಂತೆ ನೆರವೇರುವುದು. ಇವರಿಗೆ 2018 ಅತ್ಯಂತ ಅದೃಷ್ಟವನ್ನು ಪಡೆದುಕೊಳ್ಳುವ ವರ್ಷ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ವರ್ಷ ಇವರ ಹಾದಿಯಲ್ಲಿ ಗೆಲುವು ಸುಲಭವಾಗಿ ದೊರೆಯುವುದು. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಹಾಗೆಯೇ ಈ ರಾಶಿಯವರೂ ಪ್ರತಿಬಾರಿಯೂ ತಪ್ಪನ್ನು ಮಾಡುತ್ತಾರೆ. ಇದರೊಟ್ಟಿಗೆ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಕೈಗೂಡಿ ಬರುವುದು. ವೈಯಕ್ತಿಕ ಮತ್ತು ದಾಂಪತ್ಯದ ಜೀವನವೂ ಪ್ರೀತಿ ವಿಶ್ವಾಸದಿಂದ ಕೂಡಿರುತ್ತದೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಈ ವರ್ಷವು ನಿಮಗೆ ಆಂತರಿಕವಾಗಿ ಶಾಂತಿ ಹಾಗೂ ಸಂತೋಷವನ್ನು ಪಡೆದುಕೊಳ್ಳಲು ಸಹಾಯ ಮಾಡುವುದು. ಕಳೆದ ವರ್ಷ ಸಾಕಷ್ಟು ಒತ್ತಡ ಹಾಗೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದರಿ. ಆದರೆ ಈ ವರ್ಷ ನಿಮಗೆ ಉತ್ತಮ ಫಲಿತಾಂಶವು ಒಂದಾದ ಮೇಲೊಂದರಂತೆ ಬರುವುದು. ಇದು ನಿಮ್ಮನ್ನು ಸಂತೋಷಗೊಳಿಸುವುದರ ಜೊತೆಗೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವಿರಿ. ಈ ವರ್ಷ ನಿಮಗೆ ವಿಶ್ರಾಂತಿ ಪಡೆಯಲು ಹಾಗೂ ಆನಂದಭರಿತ ಜೀವನವನ್ನು ಅನುಭವಿಸಲು ಸೂಕ್ತವಾದ ವರ್ಷ ಎನ್ನಬಹುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನಿಮ್ಮ ಪರಿಸ್ಥಿತಿಯು ಉನ್ನತ ಸ್ಥಾನಕ್ಕೆ ಏರುವುದು. ಈ ಹಿಂದಿನ ದಿನಗಳಲ್ಲಿ ನೀವು ಶಾಂತಿ ಹಾಗೂ ನೆಮ್ಮದಿಗಾಗಿ ಪರಿತಪಿಸುತ್ತಿದ್ದಿರಿ. ಇದೀಗ ಆ ಎಲ್ಲಾ ಸಮಸ್ಯೆಗಳು ನಿವಾರಣೆ ಹೊಂದುವುದರ ಮೂಲಕ ಉತ್ತಮ ಜೀವನವನ್ನು ಕಲ್ಪಿಸಿಕೊಡಲಿವೆ ಗ್ರಹಗತಿಗಳು ಎಂದು ಜ್ಯೋತಿಷ್ಯ ಶಾಶ್ತ್ರ ಹೇಳುತ್ತದೆ. ಇನ್ನು 2018 ನಿಮಗೆ ಅತ್ಯಂತ ಅದೃಷ್ಟಕರವಾದ ವರ್ಷವಾಗಲಿದೆ. ವರ್ಷ ಪೂರ್ತಿ ಸಂತೋಷ ಕರವಾದ ಜೀವನವನ್ನು ಅನುಭವಿಸಲಿದ್ದೀರಿ. ನಿಮ್ಮ ನಿಷ್ಠಾವಂತ ವರ್ತನೆ ನಿಮಗೆ ಪೂರಕವಾದ ಫಲಿತಾಂಶವನ್ನೇ ನೀಡಲಿದೆ. ಇನ್ನು ಈ ಹೊಸ ವರ್ಷದಲ್ಲಿ ಈ ರಾಶಿಚಕ್ರವು ಸಾಕಷ್ಟು ಒತ್ತಡ ಮತ್ತು ಸವಾಲುಗಳನ್ನು ಎದುರಿಸಲಿದೆ. ಆದರೆ ಅವರು ಚಿಂತೆ ಮಾಡಬೇಕಾಗಿಲ್ಲ, ಏಕೆಂದರೆ ಅವರು 100% ರಷ್ಟು ಲಾಭದಾಯಕ ಮತ್ತು ಪೂರೈಸುವ ದಿನಗಳನ್ನೂ ಹೊಂದಿರುತ್ತಾರೆ. ಈ ಹೊಸ ವರ್ಷದಲ್ಲಿ ಈ ರಾಶಿಚಕ್ರದ ಚಿಹ್ನೆಗಳಿಗೆ ಶನಿವಾರ ಮತ್ತು ಭಾನುವಾರಗಳು ಅದೃಷ್ಟದ ದಿನಗಳು. ಇವರು ತಮ್ಮ ಸುತ್ತಲಿನ ಎಲ್ಲಾ ಜನರನ್ನು ಸಂಪೂರ್ಣವಾಗಿ ಸಂತೋಷದಿಂದ ಇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿ ಕೊಳ್ಳಬೇಕು. ಇವರು ಬೇರೆಯವರನ್ನು ಸಂತೋಷಪಡಿಸುವ ಕಾರ್ಯವನ್ನು ಮೊದಲು ನಿಲ್ಲಿಸಬೇಕು. ಜೊತೆಗೆ ತಮ್ಮ ಕಾರ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. 2018ರಲ್ಲಿ ಇವರು ಬೇರೆಯವರ ಸಂತೋಷಕ್ಕಾಗಿ ಮಾಡುವ ಆಲೋಚನೆಗಳನ್ನು ನಿಲ್ಲಿಸಿ, ತಮ್ಮ ಅಭಿವೃದ್ಧಿಯ ಕಡೆಗೆ ಗಮನ ನೀಡಬೇಕಾಗುವುದು.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

2018 ನಿಮ್ಮ ಸಾಧನೆಗೆ ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತದೆ. ನಿಮಗೆ ಕೆಲವೊಮ್ಮೆ ಹೊಸ ಅವಕಾಶಗಳು ಹಾಗೂ ಬದಲಾವಣೆಗಳಿಂದ ಗೊಂದಲಕ್ಕೆ ಒಳಗಾಗಬಹುದು. ಅವಸರಕ್ಕೆ ಒಳಗಾಗದೆ ಶಾಂತ ರೀತಿಯಲ್ಲಿ ಒಂದು ನಿರ್ಧಾರಕ್ಕೆ ಬನ್ನಿ ಹಾಗೂ ಸೂಕ್ತ ನಿರ್ಣಯವನ್ನು ಪಡೆದುಕೊಳ್ಳಿ. ಇದರಿಂದ ಉತ್ತಮ ಫಲಿತಾಂಶವನ್ನು ನೀವು ಪಡೆದುಕೊಳ್ಳುವಿರಿ. ಕೆಲವು ಅದೃಷ್ಟಗಳು ನಿಮ್ಮ ಪರಿಶ್ರಮಕ್ಕೆ ಸಹಕಾರವನ್ನು ನೀಡಲಿದೆ. ಅತ್ಯಂತ ಸಂತೋಷದ ವರ್ಷ ಎಂದು ಹೇಳಬಹುದಾಗಿದೆ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಇನ್ನು ಈ ವರ್ಷ ಉತ್ತಮ ಕೆಲಸದ ರೂಪದಲ್ಲಿ, ಪ್ರೀತಿ ವಿಚಾರ, ಸಂಬಂಧಗಳಲ್ಲಿ ಗೌರವ ಹಾಗೂ ಪ್ರಶಂಸೆಗಳು ನಿಮ್ಮನ್ನು ಅರಸಿ ಬರುತ್ತವೆ. ಇನ್ನು 2018ರಲ್ಲಿ ಇವರ ಈ ಯೋಚನೆಗೆ ಅತ್ಯಂತ ಹೆಚ್ಚು ಅವಕಾಶಗಳು ಹಾಗೂ ಯಶಸ್ಸು ದೊರೆಯುವುದು. ಇವರ ಸಾಧನೆ ಅಥವಾ ಗುರಿಯನ್ನು ತಲುಪಲು ಯಾವುದೇ ಅಡೆತಡೆಗಳು ಅಡ್ಡವಾಗದೆ ಇರುವುದರಿಂದ ಬಹು ಬೇಗ ನಿಮ್ಮ ಕನಸು ನನಸಾಗುವುದು. ಲೆಕ್ಕವಿಲ್ಲದ ಹೊಸ ಹೊಸ ಅವಕಾಶಗಳು ಇವರ ಕಾಲ ಬಳಿ ಬರುವುದು. ಸ್ಥಿರತೆಯನ್ನು ಹೊಂದಿರುವ ಇವರು ತಮ್ಮ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಧನು ರಾಶಿಯವರು ಈ ವರ್ಷ ತಮ್ಮ ಆತ್ಮ ಸಂಗಾತಿಯನ್ನು ಪಡೆದುಕೊಳ್ಳುವ ಒಂದು ವಿಶೇಷ ಅದೃಷ್ಟವನ್ನು ಪಡೆದುಕೊಂಡಿದ್ದಾರೆ. 2018ರ ಇವರ ಪ್ರೀತಿ ಅತ್ಯಂತ ದೊಡ್ಡ ಹಾಗೂ ಅದೃಷ್ಟದ ಚಿಹ್ನೆ ಎಂದು ಪರಿಗಣಿಸಬಹುದು. ಧನು ರಾಶಿಯವರು ವರ್ಷದ ಆರಂಭದಲ್ಲಿ ಪ್ರೀತಿಯ ಜೀವನವನ್ನು ಪಡೆಯಲು ಹಾಗೂ ಅನುಭವಿಸಲು ವಿಶೇಷ ತಯಾರಿ ಅಥವಾ ಹುಡುಕಾಟವನ್ನು ನಡೆಸಬಹುದು. ಈ ವಿಚಾರದಲ್ಲಿ ನಿಮಗೆ ಯಾವುದೇ ಅಡೆತಡೆಗಳು ಅಥವಾ ಒತ್ತಡಗಳು ಇರುವುದಿಲ್ಲ. ನೀವು ಅತ್ಯಂತ ಸಂತೋಷವನ್ನು ಪಡೆದುಕೊಂಡಿದ್ದೀರಿ ಎನ್ನುವುದು ನಿಮಗೆ ಅರಿವಾಗುವುದು.

English summary

These Four Zodiac Signs Will Be the Happiest in 2018!

There are 4 Zodiac signs in particular who are guaranteed to be the happiest in 2018. Check the list before to find out if you are one of the luckiest four!