Latest Updates
-
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ!
ಈ 5 ರಾಶಿಯವರು ಎಲ್ಲರಂತಲ್ಲ!, ಎಲ್ಲಾ ವಿಷಯದಲ್ಲೂ ಪರ್ಫೆಕ್ಟ್!

ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧ ಹಾಗೂ ಜನರೊಂದಿಗಿನ ಸಂಪರ್ಕವು ತುಂಬಾ ಅಗತ್ಯವಾಗಿರುವುದು. ಕೆಲವೊಂದು ರಾಶಿಯಲ್ಲಿ ಹುಟ್ಟಿದವರು ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುವರು. ಇನ್ನು ಕೆಲವರು ಇದನ್ನು ಕಡೆಗಣಿಸುವರು.
ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುವ ಮತ್ತು ಜನರಿಗೆ ತುಂಬಾ ಹತ್ತಿರವಾಗಿ ಒಂದು ರೀತಿಯಲ್ಲಿ ಅಂಟಿಕೊಳ್ಳುವ ಸ್ವಭಾವ ಹೊಂದಿರುವ ಕೆಲವು ರಾಶಿಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಈ ರಾಶಿಗಳು ಯಾವುದು ಎಂದು ನೀವು ಲೇಖನದಿಂದ ತಿಳಿದುಕೊಳ್ಳಬಹುದು...

ಮಿಥುನ(ಮೇ 21-ಜೂನ್ 20)
ಈ ರಾಶಿಯವರ ಸಮಸ್ಯೆಯೆಂದರೆ ಯಾರಾದರೂ ಸ್ವಲ್ಪ ಮಟ್ಟಿನ ಅತ್ಯುತ್ಸಾಹ ತೋರಿಸಿದರೆ ಆಗ ಅವರು ಒಂದು ಕಾಲ್ಪನಿಕ ನಿರ್ಣಯಕ್ಕೆ ಬಂದುಬಿಡುವರು. ನಿಮ್ಮಿಬ್ಬರ ನಡುವೆ ಏನೆಲ್ಲಾ ಹೋಲಿಕೆಯಾಗುತ್ತದೆ ಎನ್ನುವ ಬಗ್ಗೆ ಅವರು ಕಾಲ್ಪನಿಕ ಆಲೋಚನೆ ಮಾಡುವರು. ಇನ್ನೊಂದು ಬದಿಯಲ್ಲಿ ಅವರು ಸ್ವಲ್ಪ ಆರಾಧನೆ ಮತ್ತು ಭಾವನೆಯ ರುಚಿ ಪಡೆದುಕೊಳ್ಳುವರು. ಇದರಿಂದ ಅವರು ತಕ್ಷಣವೇ ದೊಡ್ಡ ಕನಸು ಕಾಣಲು ಆರಂಭಿಸುವರು.

ಕರ್ಕಾಟಕ (ಜೂನ್ 21-ಜುಲೈ22)
ಈ ರಾಶಿಯವರೊಂದಿಗೆ ಸಂಬಂಧ ಇಟ್ಟುಕೊಂಡಿರುವ ಜನರಿಗೆ ಇವರು ತುಂಬಾ ನಂಬಿಕಸ್ಥ, ವಿಶ್ವಾಸಾರ್ಹ ವ್ಯಕ್ತಿಗಳು ಎಂದು ತಿಳಿದಿರಬಹುದು. ಇವರು ಯಾರೊಂದಿಗಾದರೂ ಒಂದು ಒಳ್ಳೆಯ ಶುದ್ಧ ಸಂಬಂಧ ಬೆಳೆಸಿದರೆ ಆಗ ಅವರು ಅದಕ್ಕಾಗಿ ಎಲ್ಲವನ್ನೂ ನೀಡಬಲ್ಲರು. ತಮ್ಮ ಆಕರ್ಷಣೆ ಹಾಗೂ ಭಾವನೆಯನ್ನು ಸರಳ ಹಾಗೂ ನಿಸ್ಸಂದಿಗ್ದವಾಗಿ ಹೇಗೆ ವ್ಯಕ್ತಪಡಿಸಬೇಕು ಎಂದು ಅವರಿಗೆ ತಿಳಿದಿದೆ. ಸ್ವಾಮ್ಯಸೂಚಕದ ವಿಚಾರವಾಗಿ ಇವರು ರಾಶಿಗಳಲ್ಲೇ ಮೊದಲ ಸ್ಥಾನ ಪಡೆಯುವರು.

ಕನ್ಯಾ (ಆ.23-ಸೆ. 22)
ನಿರೀಕ್ಷಿತ ಬದ್ಧತೆ ಮತ್ತು ಹೊಂದಾಣೆಯಾಗುವ ವ್ಯಕ್ತಿಗಳು ಎಂದು ಈ ರಾಶಿಯವರನ್ನು ಜನರು ಯಾವಾಗಲೂ ಅಪಾರ್ಥ ಮಾಡಿಕೊಳ್ಳುವರು. ಪರಶ್ರಮದ ಕೆಲಸದ ಬಗ್ಗೆ ಅವರಿಗೆ ತಿಳಿದಿದೆ ಮತ್ತು ಜೀವನದಲ್ಲಿ ಬರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವರಿಗೆ ತಿಳಿದಿದೆ. ತಮ್ಮ ಸಮಸ್ಯೆಗಳು ಅದಾಗಿಯೇ ಪರಿಹಾರವಾಗಲಿದೆ ಎಂದು ಕಾದು ಕುಳಿತುಕೊಳ್ಳುವ ವ್ಯಕ್ತಿಗಳು ಇವರಲ್ಲ.

ಕುಂಭ (ಜ.20-ಫೆ 18)
ಇವರು ನಾಟಕದ ರಾಣಿ ಸ್ವಭಾವದ ವ್ಯಕ್ತಿಗಳಾಗಿರುವರು. ಇವರು ಯಾವಾಗಲೂ ತಾವು ಆಕರ್ಷಣೆಯ ಕೇಂದ್ರಬಿಂದುವಾಗಬೇಕೆಂದು ಬಯಸುವರು ಮತ್ತು ತಮ್ಮನ್ನು ಕಡೆಗಣಿಸುವುದನ್ನು ಇವರು ದ್ವೇಷಿಸುವರು. ಇದೇ ಕಾರಣಕ್ಕಾಗಿ ಇವರು ತಮ್ಮ ಹೆಸರು ಜನಪ್ರಿಯವಾಗಲು ಪ್ರೇರಣೆ ಪಡೆದುಕೊಳ್ಳುವರು.

ಮೀನ (ಫೆ.19-ಮಾ.20)
ಇತರರೊಂದಿಗೆ ಸಂಬಂಧ ಬೆಳೆಸಿಕೊಳ್ಳುವಾಗ ಇವರು ಅಪಾಯವನ್ನು ಗ್ರಹಿಸಿಕೊಳ್ಳುವರು. ಈ ಜನರೊಂದಿಗೆ ಸಂಬಂಧ ಬೆಳೆಸಲು ಇರುವಂತಹ ಮಿತಿಯಿಂದಾಗಿ ಇವರು ಶ್ರೇಷ್ಠರೆಂದು ಭಾವಿಸುವರು ಹಾಗೂ ಪರಿಸ್ಥಿತಿ ಬಗ್ಗೆ ನಿರ್ಲಕ್ಷ್ಯ ವಹಿಸುವರು. ಇವರು ಒಂದು ಸಲ ನಿಮಗೆ ಹೊಂದಿಕೊಂಡರೆ ಮತ್ತೆ ಚೂಯಿಂಗ್ ಗಮ್ ನಂತೆ ಅಂಟಿಕೊಳ್ಳುವರು.



Click it and Unblock the Notifications