For Quick Alerts
ALLOW NOTIFICATIONS  
For Daily Alerts

ಭಾವನಾತ್ಮಕ ಗುಣವನ್ನು ಹೊಂದಿರುವ ಐದು ರಾಶಿ ಚಕ್ರದವರು...

By Divya Pandit
|

ಭಾವನೆಗಳು ಎಂದರೆ ಅದು ಯಾರನ್ನೂ ಹೇಳಿ ಕೇಳಿ ಬರುವ ವಿಚಾರಗಳಲ್ಲ. ಅದೇನೇ ಇದ್ದರೂ ವ್ಯಕ್ತಿಯ ಅಂತರ್ಗತ ಚಿಂತನೆ ಹಾಗೂ ಸ್ವಭಾವದಿಂದ ಬರುತ್ತದೆ. ಯಾರು ಹೆಚ್ಚು ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೋ ಅಂತಹವರ ಸ್ವಭಾವ ಮೃದುವಾಗಿರುತ್ತದೆ. ಅಲ್ಲದೆ ಅವರು ಚಿಂತಿಸುವ ಹಾಗೂ ಕೈಗೊಳ್ಳುವ ನಿರ್ಧಾರಗಳೆಲ್ಲವೂ ಭಾವನಾತ್ಮಕವಾಗಿಯೇ ಇರುತ್ತದೆ. ಜೊತೆಗೆ ತಾವು ಕೈಗೊಳ್ಳುವ ನಿರ್ಧಾರದಿಂದ ಇತರರ ಭಾವನೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಮೊದಲು ಚಿಂತಿಸುತ್ತಾರೆ.

ವ್ಯಕ್ತಿಯ ಭಾವನೆ, ಬುದ್ಧಿವಂತಿಕೆ, ಚಿಂತನೆ, ವರ್ತನೆ, ವ್ಯಕ್ತಿತ್ವ ಹಾಗೂ ಅನುಭವಿಸುವ ಅದೃಷ್ಟಗಳು ಎಲ್ಲವೂ ರಾಶಿಚಕ್ರ ಹಾಗೂ ಅವರವರ ಕುಂಡಲಿಗೆ ಅನುಗುಣವಾಗಿ ಇರುತ್ತದೆ. ಗ್ರಹಗತಿಗಳ ಬದಲಾವಣೆ ಹಾಗೂ ಚಿಂತನೆಗಳಿಗೆ ಅನುಗುಣವಾಗಿಯೇ ವ್ಯಕ್ತಿಯ ಸ್ವಭಾವವು ಬದಲಾವಣೆಯಾಗುತ್ತಲಿರುತ್ತವೆ. ಇವುಗಳ ಆಧಾರದ ಮೇಲೆಯೇ ವ್ಯಕ್ತಿ ಭಾವನಾತ್ಮಕ ಜೀವಿಯೇ? ಅಥವಾ ವಸ್ತುನಿಷ್ಠ ಸ್ವಭಾವದವನೇ? ಎನ್ನುವುದನ್ನು ನಿರ್ಧರಿಸಲಾಗುತ್ತದೆ.

Ranked From The Most Emotional

ಕೆಲವು ರಾಶಿಚಕ್ರದ ವ್ಯಕ್ತಿಗಳು ಭಾವನಾತ್ಮಕ ಜೀವಿಗಳಾಗಿರುವುದಿಲ್ಲ. ಅವರು ಏನೇ ಚಿಂತನೆ ನಡೆಸಿದರು ಅದು ವಸ್ತುನಿಷ್ಠ ಅಥವಾ ಸಂದರ್ಭಕ್ಕೆ ತಕ್ಕಂತೆ ಇರುತ್ತದೆ ಎಂದು ಹೇಳಲಾಗುವುದು. ಇವರ ಈ ಸ್ವಭಾವ ಸಂಬಂಧಗಳ ವಿಚಾರದಲ್ಲಿ ಹಾಗೂ ಪಾಲುದಾರರ ವಿಷಯದಲ್ಲೂ ಹಾಗೆಯೇ ಇರುತ್ತದೆ. ಅದರಲ್ಲಿ ಯಾವ ಬದಲಾವಣೆಗಳು ಇರುವುದಿಲ್ಲ ಎಂದು ಹೇಳಲಾಗುವುದು. ನಿಮ್ಮ ರಾಶಿಚಕ್ರದವರು ಭಾವನಾತ್ಮಕ ಜೀವಿಗಳಲ್ಲದ ಪಟ್ಟಿಯಲ್ಲಿ ಇದೆಯೇ ಎನ್ನುವುದನ್ನು ಪರಿಶೀಲಿಸಲು ಮುಂದಿನ ವಿವರಣೆಯನ್ನು ಓದಿ...

1.ಮೇಷ

1.ಮೇಷ

ಮೇಷ ರಾಶಿಯ ವ್ಯಕ್ತಿಗಳು ಜೀವನದಲ್ಲಿ ಬೇಕಾದ ಎಲ್ಲಾ ವಿಚಾರಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಇದು ಸ್ಪಷ್ಟ ಮತ್ತು ಅದ್ಭುತವಾದ ಸಂಗತಿಯಾಗಿರುತ್ತದೆ. ಆದರೆ ಸಂಬಂಧಗಳಲ್ಲಿ ಭಾವನಾತ್ಮಕ ವಿಚಾರ ಬಂದಾಗ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಇವರಿಗೆ ಕಷ್ಟವಾಗಬಹುದು. ಏಕೆಂದರೆ ಈ ರಾಶಿ ಚಕ್ರದವರಿಗೆ ಭಾವನಾತ್ಮಕ ಚಿಂತನೆಗೆ ಒಳಗಾಗುವ ವ್ಯಕ್ತಿಗಳಾಗಿರುವುದಿಲ್ಲ ಎಂದು ಹೇಳಲಾಗುವುದು. ಭಾವನಾತ್ಮಕ ಚಿಂತನೆಗಳಿಗೆ ಒಳಗಾಗದ ರಾಶಿಚಕ್ರದವರು ಇವರು. ಆದರೆ ಆರೈಕೆ ಹಾಗೂ ಸಹಕಾರದ ವಿಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವರು. ಜೊತೆಗೆ ತಮ್ಮ ಕರ್ತವ್ಯ ಹಾಗೂ ಕೆಲಸದ ನಡುವೆ ಸಮತೋಲನವನ್ನು ತೋರುವರು. ಇತರರಿಗಾಗಿ ಸಾಕಷ್ಟು ಪರಿಶ್ರಮದಿಂದ ಕೆಲಸ ನಿರ್ವಹಿಸುತ್ತಾರೆ. "ಆರೋಗ್ಯಕರ, ಪ್ರೀತಿಯ ಸಂಬಂಧಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಅರಿತುಕೊಳ್ಳಬಹುದು. ಹಾಗೆಯೇ ಸಂಬಂಧಗಳಲ್ಲಿ ಉತ್ತಮವಾಗಿ ಇರುತ್ತಾರೆ.

2.ಮಿಥುನ

2.ಮಿಥುನ

ಬದ್ಧತೆಯ ವಿಚಾರದಲ್ಲಿ ಮಿಥುನ ರಾಶಿಯವರನ್ನು ಯಾರೂ ಹಿಮ್ಮೆಟ್ಟಲು ಸಾಧ್ಯವಿಲ್ಲ. ಇವರು ತಮ್ಮ ಸಂಗಾತಿಯ ಅಥವಾ ಪಾಲುದಾರರ ನಡುವಿನ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಇವರ ಮೇಲೆ ಹೆಚ್ಚಿನ ಭರವಸೆಯನ್ನು ಹೊಂದುವಂತೆ ಇರುವುದಿಲ್ಲ. ಗಾಳಿಯ ಚಿಹ್ನೆಯನ್ನು ಹೊಂದಿರುವ ಈ ವ್ಯಕ್ತಿಗಳು ತಮ್ಮ ಮನಸ್ಸಿನಲ್ಲಿ ಸದಾ ಆರಾಮದಾಯಕ ಹಾಗೂ ವಿಶ್ರಾಂತಿಯನ್ನು ಹೊಂದುವ ಚಿಂತನೆಗಳನ್ನು ಹೊಂದಿರುತ್ತಾರೆ.

ಇವರು ಆಶ್ಚರ್ಯಕರವಾದ ಪ್ರೀತಿಯ ಸಂಬಂಧವನ್ನು ಹೊಂದಿರುವುದಿಲ್ಲ ಎನ್ನುವ ಅರ್ಥವಲ್ಲ. ಇವರು ಹೆಚ್ಚು ಭಾವನಾತ್ಮಕ ಗುಣಗಳನ್ನು ಹೊಂದಿರುವುದಿಲ್ಲ. ಆದರೆ ಸಂಗಾತಿಯ ವಿಚಾರದಲ್ಲಿ ಆರೋಗ್ಯಕರ ಮತ್ತು ಜಾಗೃತರಾದ ಪಾಲುದಾರರಾಗಿರುತ್ತಾರೆ. ಉತ್ತಮ ಸಂವಹನವನ್ನು ಹೊಂದಿರುತ್ತಾರೆ. ಜೊತೆಗೆ ವಿಷಯಗಳನ್ನು ನಿರ್ಮಿಸಲು ಅವಕಾಶಮಾಡಿಕೊಡುತ್ತಾರೆ. ಹೋರಾಟ ಹಾಗೂ ಸಂಘರ್ಷಗಳನ್ನು ಹೊಂದುವುದಿಲ್ಲ.

3.ಧನು

3.ಧನು

ಇವರು ಮುಕ್ತ ಮನೋಭಾವದ ಮತ್ತು ಸಾಹಸಮಯ ಚಿಹ್ನೆಯವರಾಗಿರುತ್ತಾರೆ. ಇವರು ತಮ್ಮ ಸ್ನೇಹ ಹಾಗೂ ಹೃದಯಗಳ ವಿಚಾರದಲ್ಲಿ ಬದಲಾವಣೆಯನ್ನು ಹೊಂದುತ್ತಲೇ ಇರುತ್ತಾರೆ. ಯಾವುದೇ ರೀತಿಯಲ್ಲೂ ಬಂಧನಗಳನ್ನು ಹೊಂದಲು ಇಷ್ಟಪಡುವುದಿಲ್ಲ. ಸಂಬಂಧಗಳು ಧನು ರಾಶಿಯವರಿಗೆ ಬಹಳ ಪ್ರಮುಖವಾದದ್ದಾಗಿದ್ದರೂ ಅವರು ಸ್ವಾತಂತ್ರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.

ವಸ್ತು ನಿಷ್ಠ ಚಿಂತನೆಗಳು ಹಾಗೂ ಸಾಹಸದ ಪ್ರವೃತ್ತಿಯನ್ನು ಹೊಂದುವ ಇವರು ತಮ್ಮ ಸಂಗಾತಿಯನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ. ಆದರೆ ಭಾವನಾತ್ಮಕವಾಗಿಯೇ ಬಂಧನದಲ್ಲಿ ಉಳಿದುಕೊಳ್ಳುವುದಿಲ್ಲ. ಸಂಗಾತಿಯು ಭಯದ ಅಭಿಪ್ರಾಯದ ಮೇಲೆ ನಿಲ್ಲುವುದಕ್ಕಿಂತ ಸ್ವತಂತ್ರವಾಗಿ ನಿಲ್ಲಲು ಬಯಸುತ್ತಾರೆ.

4.ಮಕರ

4.ಮಕರ

ಮಕರ ರಾಶಿಯವರು ಸದಾ ತಮ್ಮ ಕೆಲಸದಲ್ಲಿಯೇ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಾರೆ. ಈ ಚಿಹ್ನೆಯ ಅಡಿಯಲ್ಲಿ ಜನಿಸಿದವರು ಸದಾ ಕೆಲಸದ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಜೀವನದಲ್ಲಿ ಹೆಚ್ಚಿನ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಈ ವ್ಯಕ್ತಿಗಳು ಭಾವನಾತ್ಮಕ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಇವರು ತಮ್ಮ ಹೃದಯದ ಸುತ್ತಲು ನುಡಿಗಟ್ಟುಗಳ ಗೋಡೆಯನ್ನು ಹೊಂದಿರುತ್ತಾರೆ. ಇವರಲ್ಲಿ ಭಾವನಾತ್ಮಕ ಭಾಗವನ್ನು ರಕ್ಷಿಸುವ ಪ್ರವೃತ್ತಿಯನ್ನು ಕಾಣಬಹುದು. ತಮ್ಮ ಕೆಲಸದಲ್ಲಿ ಹೆಚ್ಚಿನ ಗಮನ ಹಾಗೂ ಗುರಿಯನ್ನು ಹೊಂದಿರುವುದರಿಂದ ಭಾವನಾತ್ಮಕವಾಗಿ ಯಾವುದೇ ಬಂಧನಕ್ಕೆ ಒಳಗಾಗುವುದಿಲ್ಲ. ಆದರೆ ತಮ್ಮ ಸಂಗಾತಿಯ ಅಗತ್ಯತೆಗಳನ್ನು ಅರಿತುಕೊಳ್ಳುತ್ತಾರೆ. ಪ್ರೀತಿಯಿಂದ ನಿರ್ವಹಿಸುತ್ತಾರೆ.

5. ಕುಂಭ

5. ಕುಂಭ

ಇವರ ಮನಸ್ಸು ಸದಾ ಎಲ್ಲೆಲ್ಲೋ ಸಂಚಾರವನ್ನು ಮಾಡುತ್ತಲೇ ಇರುತ್ತದೆ. ಇವರ ಮಿದುಳು ಒಂದು ನಿಮಿಷದಲ್ಲಿ ಮೈಲಿಗಳಷ್ಟು ದೂರದಲ್ಲಿ ಸಂಚಾರ ಕೈಗೊಳ್ಳಬಹುದು. ಹೊಸತನದ ಚಿಂತನೆಯಲ್ಲಿ ಸದಾ ತೊಡಗಿರುತ್ತಾರೆ. ವಿವಿಧ ವಿಶೇಷ ಪ್ರವೃತ್ತಿಯನ್ನು ಹೊಂದಿರುವುದರಿಂದ ಭಾವನಾತ್ಮಕವಾಗಿ ಯಾವುದೇ ವಿಶೇಷ ಚಿಂತನೆಯನ್ನು ಹೊಂದಿರುವುದಿಲ್ಲ ಎಂದು ಹೇಳಲಾಗುವುದು. ತಮ್ಮ ಚಿಂತನೆ ಹಾಗೂ ವೃತ್ತಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರವೃತ್ತಿ ಇವರದ್ದಾದರೂ ಸಂಗಾತಿ ಹಾಗೂ ಸಂಬಂಧಗಳಲ್ಲಿ ಉತ್ತಮ ಪ್ರೀತಿ ಹಾಗೂ ಕಾಳಜಿಯ ಪರಿಯನ್ನು ಕಾಣಬಹುದು.

English summary

These five most emotional zodiac sign

While there are obviously many factors at play when it comes to how to be more emotionally available, your zodiac sign — and all its inherent traits — might have more to do with it than you think. "Some signs are wired to be more independent, detached from emotions, or free-spirited," professional astrologer Rachel Lang tells Bustle. In other words, the personality traits common for your sign may play a part in why you struggle to open up. Or, at the very least, why it might feel like you have different priorities.
Story first published: Tuesday, August 28, 2018, 17:22 [IST]
X
Desktop Bottom Promotion