Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಶಿ ಭವಿಷ್ಯ: ನಿಮ್ಮಲ್ಲಿರುವ ಕೆಟ್ಟ ಚಟಗಳಿಗೆ ರಾಶಿಚಕ್ರಗಳೇ ಕಾರಣ!
ಒಳ್ಳೆಯದು ಕೆಟ್ಟದ್ದು ಎನ್ನುವುದು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ವ್ಯಕ್ತಿಯಲ್ಲೂ ಒಳ್ಳೆಯದು ಹಾಗೂ ಕೆಟ್ಟದ್ದು ಎನ್ನುವ ಎರಡು ಗುಣಗಳು ಇರುತ್ತವೆ. ಪರಿಸ್ಥಿತಿ ಹಾಗೂ ಬೆಳೆದುಬಂದ ವಾತಾವರಣದ ಆಧಾರದ ಮೇಲೆ ವ್ಯಕ್ತಿಯ ಕೆಟ್ಟ ಮತ್ತು ಒಳ್ಳೆಯ ಗುಣಗಳ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಆಗುವುದನ್ನು ಕಾಣಬಹುದು. ಒಳ್ಳೆಯ ಗುಣಗಳಿಂದ ಸಮಾಜದಲ್ಲಿ ಮನ್ನಣೆಯನ್ನು ಪಡೆದುಕೊಂಡರೆ ಕೆಟ್ಟ ಗುಣಗಳಿಂದ ತನ್ನ ವ್ಯಕ್ತಿತ್ವದ ಬಗ್ಗೆ ಕೀಳಾಗಿ ಕರೆಯಿಸಿಕೊಳ್ಳುತ್ತಾನೆ. ಹಾಗಾಗಿಯೇ ಕೆಲವರು ತಮ್ಮ ಸ್ವಭಾವ ಹಾಗೂ ಅಭಿರುಚಿಗಳನ್ನು ಎಲ್ಲರೆದುರು ತೋರಿಸಿಕೊಳ್ಳಲು ಹೆದರುತ್ತಾರೆ. ಜೊತೆಗೆ ತಮ್ಮ ಗುಣಗಳನ್ನು ಮರೆಮಾಚುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಅನುಸಾರ ನಮ್ಮಲ್ಲಿರುವ ಗುಣಗಳು ಅದು ಕೆಟ್ಟದ್ದೇ ಆಗಿರಲಿ ಅಥವಾ ಒಳ್ಳೆಯದ್ದೇ ಆಗಿರಲಿ ಎಲ್ಲವೂ ನಮ್ಮ ರಾಶಿಚಕ್ರದ ಪ್ರಭಾವವಾಗಿರುತ್ತದೆ. ಹಾಗಾಗಿ ಪ್ರತಿ ರಾಶಿಚಕ್ರದ ಅನ್ವಯದಲ್ಲಿ ವ್ಯಕ್ತಿ ಇಂತಹದ್ದೇ ಕೆಟ್ಟಗುಣವನ್ನು ಹೊಂದಿರುತ್ತಾನೆ ಎಂದು ಹೇಳಲಾಗುವುದು. ನಿಮಗೂ ನಿಮ್ಮ ರಾಶಿಚಕ್ರದಡಿಯಲ್ಲಿ ಯಾವೆಲ್ಲಾ ಕೆಟ್ಟ ಗುಣಗಳಿವೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಓದಿ...

ಮೇಷ
ಈ ರಾಶಿಯವರು ಸಾಮಾನ್ಯವಾಗಿ ಜನರ ನಡುವೆ ತಮ್ಮ ವ್ಯಕ್ತಿತ್ವದ ಕುರಿತು ವಿವಾದವನ್ನು ಹೊಂದಿರುತ್ತಾರೆ. ಇವರಿಗೆ ಕಷ್ಟವಾದ ಸಂದರ್ಭದಲ್ಲಿ ಇಷ್ಟವಾದ ಜನರೊಂದಿಗೆ ಸೇರಿಕೊಂಡುಬಿಡುತ್ತಾರೆ. ಬಹಳ ಆತುರದ ಸ್ವಭಾವ ಹೊಂದಿರುವ ಇವರು ಬಹಳ ವಾದವನ್ನು ಮಾಡುತ್ತಾರೆ. ಇವರು ವಾದಕ್ಕೆ ಇಳಿದಾಗ ಮನವೊಲಿಸುವುದು ತುಂಬಾ ಕಷ್ಟವಾಗುವುದು. ಇನ್ನು ಈ ರಾಶಿಯವರಿಗೆ ಹೆಚ್ಚಾಗಿ ಕಾಫಿ ಅಥವಾ ಚಹಾ ಕುಡಿಯುವ ಚಟವಿರುತ್ತದೆ. ಇವರಿಗೆ ಎಲ್ಲಾ ಚಟಗಳಿಗಿಂತ ಹೆಚ್ಚು ಕಿಕ್ ಚಹಾ ಮತ್ತು ಕಾಫಿ ನೀಡುತ್ತದೆ. ಹಾಗಾಗಿ ಇವರು 24/7 ಆಗಾಗ ಕುಡಿಯುತ್ತಲೇ ಇರುತ್ತಾರೆ.

ವೃಷಭ
ಈ ರಾಶಿಯವರು ಒಂದು ಬಗೆಯ ಮೊಂಡು ಸ್ವಭಾವದವರು. ಇವರು ಒಂದು ಬಗೆಯ ಸೋಮಾರಿಗಳೂ ಹೌದು. ಕೆಲವೊಮ್ಮೆ ಪ್ರಮುಖ ಸಂದರ್ಭದಲ್ಲೂ ಇವರ ಸೋಮಾರಿ ತನದ ವರ್ತನೆ ಜನರಲ್ಲಿ ಬೇಸರವನ್ನುಂಟುಮಾಡುವುದು. ಕೆಲವೊಮ್ಮೆ ಭೌತಿಕವಾಗಿಯೂ ವರ್ತಿಸುವುದುಂಟು. ಇವರಿಗೆ ಬಾಯಿ ರುಚಿ ಬಹಳ ಮುಖ್ಯವಾಗಿರುತ್ತದೆ. ಆನೆ ಗಾತ್ರದ ಹಸಿವು ಹೊಂದಿರುವಂತೆ ವರ್ತಿಸುತ್ತಾರೆ. ಇವರು ಊಟ ತಿಂಡಿ ಮಾಡುವಾಗ ಯಾರಾದರೂ ಕಂಪನಿ ಕೊಡಬೇಕೆಂದು ಬಯಸುವುದಿಲ್ಲ. ಬೇಕೆಂದಾಗ ಒಬ್ಬರೇ ಬೇಕಾದರೂ ಸೇವಿಸುತ್ತಾರೆ!

ಮಿಥುನ
ಈ ರಾಶಿಯವರು ಒಂದು ಬಗೆಯ ಆತಂಕದ ವ್ಯಕ್ತಿಗಳು ಎನ್ನಬಹುದು. ಇವರು ಕೆಲವೊಮ್ಮೆ ತಮ್ಮ ಮನಸ್ಸಿಗೆ ಬಂದಂತೆ ಕೆಲವು ಯೋಜನೆಗಳನ್ನು ಬಿಟ್ಟುಬಿಡಬಹುದು. ಇವರು ಯಾವುದೇ ಗುರಿ ಸಾಧನೆಗೆ ಸೂಕ್ತವಾದ ಮಾರ್ಗ ಹೊಂದಿರುವುದಿಲ್ಲ. ಹಾಗಾಗಿ ಇವರಿಗೇ ಇವರ ಸೂಕ್ತ ಮಾರ್ಗ ಏನು ಎನ್ನುವುದು ತಿಳಿದುಕೊಳ್ಳಲು ಕಷ್ಟಪಡಬಹುದು. ಇವರು ಧೂಮಪಾನವನ್ನು ಅತಿಯಾಗಿ ಪ್ರೀತಿಸುತ್ತಾರೆ. ಇವರು ಕೆಲವೊಮ್ಮೆ ಸಾರ್ವಜನಿಕವಾಗಿ ತೋರಿಸಿಕೊಳ್ಳಬಾರದೆಂದು ಇಷ್ಟಪಡುತ್ತಾರೆ. ಧೂಮಪಾನದಿಂದ ಇವರು ತಮ್ಮ ದುಃಖವನ್ನು ಮರೆಯಲು ಪ್ರಯತ್ನಿಸುತ್ತಾರೆ.

ಕರ್ಕ
ಈ ರಾಶಿಯವರು ಬಹಳ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಅಂತೆಯೇ ತಮ್ಮ ವ್ಯವಹಾರಗಳನ್ನೂ ಬಹಳ ಭಾವನಾತ್ಮಕ ರೀತಿಯಲ್ಲಿಯೇ ವ್ಯವಹರಿಸುತ್ತಾರೆ. ಈ ರಾಶಿಯವರು ಹೆಚ್ಚಾಗಿ ನಿರಾಶಾವಾದಿ ಸ್ವಭಾವವನ್ನು ತೋರುತ್ತಾರೆ. ಇವರು ಹೈಪರ್ ಸೆನ್ಸಿಟಿವ್ ಗುಣವನ್ನೂ ಸಹ ಆಗಾಗ ತೋರುತ್ತಿರುತ್ತಾರೆ. ಸಣ್ಣ ಸಣ್ಣ ವಿಚಾರಗಳಿಗೂ ಅನುಮಾನ ವ್ಯಕ್ತ ಪಡಿಸುವುದು ಇವರ ಅತ್ಯಂತ ಕೆಟ್ಟ ಸ್ವಭಾವ ಎನ್ನಬಹುದು. ಇವರು ಅತ್ಯಂತ ಸಂವೇದನಾ ಶೀಲರು. ಇವರಿಗೆ ಆರೋಗ್ಯದಲ್ಲಿ ಬಹಳ ಬೇಗ ವ್ಯತ್ಯಾಸಗಳುಂಟಾಗುತ್ತವೆ. ಅವುಗಳ ನಿವಾರಣೆಗೆ ಮಾತ್ರೆ ಹಾಗೂ ಔಷಧವನ್ನು ಸೇವಿಸುತ್ತಾರೆ. ಇವರಿಗೆ ಅದೆಷ್ಟೇ ಬಾರಿ ಔಷಧಿಗಳನ್ನು ಸೇವಿಸಿದರೂ ಬೇಸರ ಉಂಟಾಗದು.

ಸಿಂಹ ರಾಶಿ
ಈ ರಾಶಿಯವರು ಅತ್ಯಂತ ಉದಾರವಾದಿಗಳಂತೆ ತೋರುತ್ತಾರೆ. ಇವರ ಅಹಂಕಾರ, ಅಸಹನೆ, ಅಸೂಯೆಯ ಗುಣವನ್ನು ಯಾವುದೇ ಭಯವಿಲ್ಲದೆ ತೋರುತ್ತಾರೆ. ಇವರಲ್ಲಿ ಕೆಲಸವನ್ನು ಮಾಡಿಸಬೇಕೆಂದರೆ ಅದು ಅತ್ಯಂತ ಕಠಿಣವಾದ ಕೆಲಸವಾಗಬಹುದು. ಇವರು ಸದಾ ಶಾಪಿಂಗ್ ಮಾಡುವುದರಲ್ಲಿ ಉತ್ಸುಕರಾಗಿರುತ್ತಾರೆ. ಒಳ್ಳೊಳ್ಳೆ ವಸ್ತುಗಳ ಖರೀದಿ ಮಾಡುವ ಸಾಮರ್ಥ್ಯ ಇವರದ್ದು. ಕೆಲವೊಮ್ಮೆ ಶಾಪಿಂಗ್ ಮಾಡುವುದು ಅತಿರೇಕಕ್ಕೆ ಹೋಗುವ ಸಾಧ್ಯತೆಯೂ ಇರುತ್ತದೆ.

ಕನ್ಯಾ
ಈ ರಾಶಿಯವರು ಅತ್ಯಂತ ಕ್ರೂರವಾದ ಪ್ರಾಮಾಣಿಕ ವ್ಯಕ್ತಿ ಎನ್ನಬಹುದು. ಇವರು ಯಾವಾಗಲೂ ತಾವೇ ಪರಿಪೂರ್ಣರು ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಇವರ ಅನುಮತಿ ಇಲ್ಲದೆ ಇರುವಾಗ ಬೇರೆಯಾರಾದರೂ ಇವರ ಜೀವನಕ್ಕೆ ಹೊಸ ಬದಲಾವಣೆಯನ್ನು ತಂದುಕೊಟ್ಟರೆ ದ್ವೇಷಿಸುತ್ತಾರೆ. ಸದಾ ಇನ್ನೊಬ್ಬರ ಸ್ನೇಹವನ್ನು ಬಯಸುವ ಇವರು ಚಂಚಲತೆಯನ್ನು ಹೊಂದಿರುತ್ತಾರೆ. ಅನೈತಿಕ ಸಂಬಂಧಗಳಲ್ಲಿ ಇರಲು ಬಯಸುತ್ತಾರೆ. ಕೆಲವೊಮ್ಮೆ ಇತರರಿಗೆ ಬೇಸರವನ್ನುಂಟುಮಾಡುವ ಸಾಧ್ಯತೆಯೂ ಇರುತ್ತದೆ.

ತುಲಾ
ಇವರು ಒಮ್ಮೆ ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಲ್ಲರು. ಆದರೆ ಇವರ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದೆ. ಆಗಾಗ ಮನಸ್ಸನ್ನು ಬದಲಾಯಿಸುತ್ತಲೇ ಇರುತ್ತಾರೆ. ಇವರು ಆಂತರಿಕ ಸೌಂದರ್ಯಕ್ಕೆ ಬೆಲೆಯನ್ನು ನೀಡರು. ಕೆಲವೊಮ್ಮೆ ಬಹಳ ಸೋಮಾರಿತನದ ಸ್ವಭಾವವನ್ನೂ ಸಹ ತೋರಿಸುತ್ತಾರೆ. ಇವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ಹೆಚ್ಚು ಪ್ರಚಾರ ಗೊಳಿಸಿಕೊಳ್ಳುವುದು ಎಂದರೆ ಬಹಳ ಇಷ್ಟ. ತಮ್ಮ ಭಾವಚಿತ್ರಗಳನ್ನು ಪದೇ ಪದೇ ಬದಲಾಯಿಸುವುದು, ಅನೇಕ ಪೋಸ್ಟ್‌ಗಳನ್ನು ಹಾಕುವುದು. ಹಾಕಿರುವ ಪೋಸ್ಟ್‌ಗಳ ಬಗ್ಗೆ ಹೆಚ್ಚು ಕಮೆಂಟ್‍ಗಳನ್ನು ಹಾಕುತ್ತಾರೆ. ದಿನವಿಡೀ ಈ ಕೆಲಸದಲ್ಲೇ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.

ವೃಶ್ಚಿಕ
ಈ ರಾಶಿಯವರಲ್ಲಿ ಅಧಿಕ ಪ್ರಮಾಣದ ಅಸೂಯೆಯ ಗುಣವನ್ನು ಕಾಣಬಹುದು. ದೈನಂದಿನ ಜೀವನದಲ್ಲಿ ಇವರು ಬಹಳ ಕೆಲಸವನ್ನು ಮಾಡುತ್ತಾರೆ ಆದರೆ ರಹಸ್ಯವಾಗಿ ಅನೇಕ ಕೆಟ್ಟ ಚಟಗಳನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ ಎನ್ನಲಾಗುವುದು. ಅಲ್ಲದೆ ಇವರು ಇತರರನ್ನು ದುರ್ಬಳಕೆಗೆ ಬಳಸಿಕೊಳ್ಳುತ್ತಾರೆ. ಇನ್ನು ಇವರಿಗೆ ಲೈಂಗಿಕ ಕೌಶಲ್ಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ. ಸದಾ ಈ ವಿಚಾರದ ಬಗ್ಗೆಯೇ ಹೆಚ್ಚು ತಲ್ಲೀನರಾಗಿರುತ್ತಾರೆ. ಇದರ ಬಗ್ಗೆಯೇ ಹೆಚ್ಚು ಪ್ರಚಾರವನ್ನು ಬಯಸುತ್ತಾರೆ.

ಧನು
ಈ ರಾಶಿಚಕ್ರದವರು ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸವನ್ನು ತೋರುತ್ತಾರೆ. ಇವರಲ್ಲಿ ಕೃತಜ್ಞತೆಯ ಗುಣವನ್ನು ವಿರಳವಾಗಿರುವುದನ್ನು ಕಾಣಬಹುದು. ಕೆಲಸ, ಶಾಲೆ, ಕುಟುಂಬ ಸೇರಿದಂತೆ ಇನ್ನಿತರ ವಿಚಾರದಲ್ಲೂ ಅಸಡ್ಡೆ ತೋರುತ್ತಾರೆ.
ಇವರು ಸದಾ ಸಾಹಸ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಾರೆ. ದೂರದ ಸ್ಥಳಗಳಿಗೆ ಹೋಗುವುದು ಅಲ್ಲಿಯ ಸಾಹಸ ಕ್ರೀಡೆ, ಚಾರಣ ಮಾಡಲು ಇಷ್ಟ ಪಡುತ್ತಾರೆ.

ಮಕರ
ಈ ರಾಶಿಚಕ್ರದವರು ಹೆಚ್ಚು ಮುಜುಗರವಾದ ವರ್ತನೆಯನ್ನು ತೋರುತ್ತಾರೆ. ಕೆಲವು ಸೀಮಿತ ವ್ಯಕ್ತಿಯೊಂದಿಗೆ ಮಾತ್ರ ಬೆರೆಯುತ್ತಾರೆ. ಇವರಲ್ಲಿ ಅಧಿಕ ಪ್ರಮಾಣದ ಹಠಮಾರಿ ಗುಣಗಳು ಇರುತ್ತವೆ. ತಮ್ಮ ಸುತ್ತಲಿನ ಜಗತ್ತಿನ ಬಗ್ಗೆ ಅತಿಯಾದ ನಿರಾಸೆಯ ಭಾವನೆಯನ್ನು ಹೊಂದಿರುತ್ತಾರೆ. ಇವರು ನೈಸರ್ಗಿಕವಾಗಿಯೇ ಉತ್ತಮ ಕೆಲಸಗಾರರು ಎಂದು ಹೇಳಬಹುದು. ಇವರು ತಮ್ಮ ಗುರಿಯನ್ನು ಸಾಧಿಸಲು ಸದಾ ಕೆಲಸ ಮಾಡುತ್ತಾರೆ. ಕಾಲಾಹರಣ ಮಾಡದೆಯೇ ಹೆಚ್ಚು ಸಮಯವನ್ನು ಕೆಲಸ ಮಾಡುವುದರಲ್ಲಿಯೇ ಕಳೆಯುತ್ತಾರೆ.

ಕುಂಭ
ಈ ರಾಶಿಯವರಲ್ಲಿ ಬಾರೀ ಪ್ರಮಾಣದ ಮೊಂಡುತನವಿರುತ್ತದೆ. ಕೆಲವು ವಿಚಾರದಲ್ಲಿ ಅಧಿಕ ಪ್ರಮಾಣದ ವಿಮರ್ಶೆಯನ್ನು ನಡೆಸುತ್ತಾರೆ. ಇವರ ನಡವಳಿಕೆಯಲ್ಲಿ ಅಧಿಕ ಪ್ರಮಾಣದ ಅನಿರೀಕ್ಷಿತ ವರ್ತನೆಯನ್ನು ಕಾಣಬಹುದು. ವಿಡಿಯೋ ಗೇಮ್ಸ್ ಮತ್ತು ಪುಸ್ತಕ ಇವರ ಜೀವನದ ತಂಗಾಳಿ ಎಂದು ಭಾವಿಸುತ್ತಾರೆ. ಇವೆರಡು ಇಲ್ಲದೆ ಜೀವನವೇ ಇಲ್ಲ ಎನ್ನುವಷ್ಟು ಅವಲಂಬಿತರಾಗಿರುತ್ತಾರೆ. ದಿನದಲ್ಲಿ ಹೆಚ್ಚು ಸಮಯವನ್ನು ಇವುಗಳ ಜೊತೆ ಕಳೆಯಲು ಇಷ್ಟ ಪಡುತ್ತಾರೆ.

ಮೀನ
ಇವರು ಬಹುತೇಕ ಸಂದರ್ಭದಲ್ಲಿ ಬಾರಿ ಆದರ್ಶವಾದಿಗಳಂತೆ ಕಾಣಿಸಿಕೊಳ್ಳುತ್ತಾರೆ. ಅಧಿಕವಾದ ಭಾವನಾತ್ಮಕ ಜೀವಿ ಎನ್ನಬಹುದು. ಇವರ ಈ ಗುಣದಿಂದ ಕೆಲವೊಮ್ಮೆ ತಮ್ಮ ಸ್ವಂತ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನು ಇವರು ರೊಮ್ಯಾಂಟಿಕ್ ಮತ್ತು ರೊಮ್ಯಾನ್ಸ್‌ಗಳ ವ್ಯಸನಿಗಳು ಎನ್ನಬಹುದು. ಬಹಳ ಸಂವೇದನಾಶೀಲರಾದ ಇವರು ತಮ್ಮ ಭಾವನೆ ಮತ್ತು ಮನಸ್ಸು ಬಯಸಿದ್ದನ್ನು ಪಡೆಯಲು ಹೆಚ್ಚು ಉತ್ಸುಕರಾಗಿರುತ್ತಾರೆ.



Click it and Unblock the Notifications











