ಐದು ರಾಶಿಯವರು ಮಾರ್ಚ್ ಕೊನೆಯ ವಾರದಲ್ಲಿ ಪ್ರೀತಿಯ ಹುಡುಕಾಟದಲ್ಲಿ ಇರುತ್ತಾರೆ!

Posted By: Deepu
Subscribe to Boldsky

ನಾವು ಅಂದುಕೊಂಡಿದ್ದು ನೆರವೇರುತ್ತದೆ ಎಂದಾಗ ನಮಗಾಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅದರಲ್ಲೂ ನಾವು ಬಯಸಿದ ವ್ಯಕ್ತಿ ನಮ್ಮ ಪ್ರೀತಿಯನ್ನು ಸ್ವೀಕರಿಸುತ್ತಾನೆ ಎಂದಾಗ ಅದರ ಸಂತೋಷವನ್ನು ಹೇಳಲು ಸಾಧ್ಯವಿಲ್ಲ. ಅದೇನೇ ಇದ್ದರೂ ಅನುಭವಿಸಿಯೇ ಹೇಳಬೇಕು ಅಷ್ಟೆ. ಅಂತಹ ಒಂದು ಅಮೋಘವಾದ ಸಂತೋಷವು ಈ ತಿಂಗಳ ಕೊನೆಯಲ್ಲಿ ಕೆಲವು ರಾಶಿಚಕ್ರದ ವ್ಯಕ್ತಿಗಳಿಗೆ ಲಭಿಸಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಒಂದು ಜೀವ ಇನ್ನೊಂದು ಜೀವಕ್ಕೆ ಪ್ರೀತಿಯ ಆಸರೆಯಾಗಿ, ಜೀವನ ಪರ್ಯಂತ ಜೊತೆಯಲ್ಲಿ ಇರುತ್ತೇನೆ ಎಂದು ವಚನ ನೀಡುವುದು ಅಥವಾ ಒಪ್ಪಿಗೆ ನೀಡುವುದು ಎಂದರೆ ಅವರ ಜೀವನವನ್ನೇ ಪ್ರೀತಿ ಪಾತ್ರರಿಗೆ ಅರ್ಪಿಸಿದಂತೆ. ಇಂತಹ ಒಂದು ಕಾರ್ಯ ನೆರವೇರುತ್ತದೆ ಎಂದರೆ ರಾಶಿಚಕ್ರಗಳ ಪ್ರಭಾವ ಗಾಢವಾಗಿಯೇ ಇರಬೇಕಾಗುತ್ತದೆ. ಅಂತಹ ಪ್ರಭಾವ ಈ ತಿಂಗಳು ಕೆಲವು ರಾಶಿಚಕ್ರದವರ ಮೇಲೆ ಬೀರಲಿದೆ. ಅವುಗಳನ್ನು ತಿಳಿದುಕೊಳ್ಳಬೇಕು ಎಂದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ... 

ಮೇಷ

ಮೇಷ

ಈ ರಾಶಿಯವರ ಜೀವನದಲ್ಲಿ ಹಠಾತ್ ಬದಲಾವಣೆ ಇರುತ್ತದೆ ಎಂದು ಹೇಳಲಾಗುತ್ತದೆ. ಈ ರಾಶಿಯವರು ಅತ್ಯಂತ ಅನಿರೀಕ್ಷಿತ ರೀತಿಯಲ್ಲಿ ಪ್ರೀತಿಯನ್ನು ಅನುಭವಿಸುತ್ತಾರೆ. ಇನ್ನೊಂದೆಡೆ ಇವರು ಹಣದ ಲಾಭವನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ಇವರು ಈ ತಿಂಗಳ ಕೊನೆಯಲ್ಲಿ ಪಡೆದುಕೊಳ್ಳುವ ಯಶಸ್ಸನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.

ಸಿಂಹ

ಸಿಂಹ

ಕೋಪದಿಂದ ತೆಗೆದುಕೊಂಡ ನಿರ್ಧಾರಗಳು ಅವರಿಗೆ ಅತ್ಯಂತ ಹಾನಿಯನ್ನುಂಟುಮಾಡುವುದು. ಇವರ ಪರಿಪೂರ್ಣವಾದ ಕೆಲಸವನ್ನು ಸಹ ಇವರ ಕೋಪ ಹಾಳುಮಾಡುವ ಸಾಧ್ಯತೆಗಳಿರುತ್ತವೆ. ಇನ್ನೊಂದೆಡೆ ಪ್ರೀತಿಯ ವಿಚಾರದಲ್ಲಿ ಅದೃಷ್ಟವನ್ನು ಪಡೆದುಕೊಳ್ಳಲಿದ್ದಾರೆ. ತಮ್ಮ ನಿಜವಾದ ಪ್ರೀತಿಯನ್ನು ಹುಡುಕುವಲ್ಲಿ ಇವರು ಯಶಸ್ವಿಯಾಗುವರು. ತಿಂಗಳ ಕೊನೆಯಲ್ಲಿ ತಮ್ಮ ಜೀವನದ ಪಾಲುದಾರರೊಂದಿಗೆ ಸಾಕಷ್ಟು ಬೆಂಬಲವನ್ನು ಅನುಭವಿಸುತ್ತಾರೆ. ಜೊತೆಗೆ ಒಂದಿಷ್ಟು ಉತ್ತಮ ಸುದ್ದಿಗಳನ್ನು ತಮ್ಮ ಮಾರ್ಗದಲ್ಲಿ ಪಡೆದುಕೊಳ್ಳುತ್ತಾರೆ ಎನ್ನಲಾಗುವುದು.

ಕನ್ಯಾ

ಕನ್ಯಾ

ಈ ರಾಶಿಯವರ ಪ್ರೇಮ ಜೀವನವು ಅತ್ಯಂತ ಶಕ್ತಿಯುತವಾಗಿದ್ದರೂ, ಅವರು ನಿರ್ದಿಷ್ಟ ಸ್ನೇಹಿತರಿಂದ ದ್ರೋಹ ಅನುಭವಿಸುತ್ತಾರೆ. ರಾಶಿಚಕ್ರಗಳ ಪ್ರೇಮ ಭವಿಷ್ಯದ ಪ್ರಕಾರ ಇವರು ಯಶಸ್ಸಿನ ದಾಖಲೆ ರಚಿಸುವ ಮೂಲಕ ನಿರಂತರವಾದ ಪ್ರಗತಿಯನ್ನು ಅನುಭವಿಸುತ್ತಾರೆ ಎನ್ನಲಾಗುವುದು. ವ್ಯಾಪಾರ ಕ್ಷೇತ್ರದಲ್ಲಿ ಅಪಾರ ಸಂಪತ್ತನ್ನು ಗಳಿಸುತ್ತಾರೆ. ಇದರಿಂದ ಮನಸ್ಸು ಸಂತೋಷದಿಂದ ಇರುವುದು. ಹೆತ್ತವರಿಂದಲೂ ಧನಾತ್ಮಕ ಬೆಂಬಲವನ್ನು ಪಡೆದುಕೊಳ್ಳುವರು.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರಿಗೆ ಈ ತಿಂಗಳು ಅತ್ಯುತ್ತಮ ಸಮಯವಾಗಿದೆ ಎನ್ನಲಾಗುವುದು. ಇವರು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅದನ್ನು ಅವರ ಮುಂದೆ ಪ್ರಸ್ತಾಪಿಸಲು ಸೂಕ್ತ ಸಮಯ ಎಂದು ಹೇಳಲಾಗುವುದು. ಈ ವ್ಯಕ್ತಿಗಳು ಕುಟುಂಬ ಸದಸ್ಯರಿಂದ ಸಾಕಷ್ಟು ಬೆಂಬಲವನ್ನು ಅನುಭವಿಸುತ್ತಾರೆ. ವಿಷಯವು ಸಕಾರಾತ್ಮಕ ರೀತಿಯಲ್ಲಿ ಚಲಿಸುವುದರ ಮೂಲಕ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.

ಕುಂಭ

ಕುಂಭ

ಈ ವ್ಯಕ್ತಿಗಳು ತಮ್ಮ ಅದೃಷ್ಟವನ್ನು ತಮ್ಮದೇ ಆದ ರೀತಿಯಲ್ಲಿ ಬದಲಾಯಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ತಮ್ಮ ಜೀವನದಲ್ಲಿ ವಿಶೇಷವಾದ ಬದಲಾವಣೆಯನ್ನು ಕಾಣಲಿದ್ದಾರೆ. ಇದು ಅವರ ಪ್ರೀತಿಯ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮತ್ತೊಂದೆಡೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಸಾಧಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವರು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಅವರಿಗೆ ಇದು ಪರಿಪೂರ್ಣವಾದ ಸಮಯ ಎಂದು ಹೇಳಲಾಗುವುದು.

English summary

These 5 Zodiacs Will Find True Love In The Last Week Of March!

If you have been looking out for some luck in love, then let us tell you for 5 particular zodiac signs, it is the perfect time to find true love. Yes, these signs, as per the astrology experts, are said to get lucky in love. Check out more on which of the zodiac signs would get lucky in love, by the end of the March month.
Story first published: Thursday, March 15, 2018, 23:31 [IST]