Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಐದು ರಾಶಿಚಕ್ರದವರು ಬೆನ್ನಹಿಂದೆ ಮೋಸದ ಜಾಲ ನಡೆಸುವರು!
ವಂಚನೆಯನ್ನು ಯಾರು ಬಯಸುವುದಿಲ್ಲ. ವಂಚನೆ ಮಾಡುವವರು ಸಹ ತಮಗೆ ಯಾರು ವಂಚಿಸಬಾರದು ಎಂದು ಆಶಿಸುತ್ತಾರೆ. ಎದುರು ನಂಬಿಕಸ್ಥರಂತೆ ಅಭಿನಯಿಸಿ. ಬೆನ್ನ ಹಿಂದೆ ಮೋಸ ಮಾಡುವುದು ಎಂದರೆ ಸಹಿಸಲಾಗದ ನೋವಾಗಿರುತ್ತದೆ. ಯಾರು ನಮಗೆ ವಂಚಿಸುತ್ತಾರೆ ಎನ್ನುವುದನ್ನು ಅಷ್ಟು ಸುಲಭವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ನಮ್ಮೊಂದಿಗೆ ಬಹಳ ಆಪ್ತರಂತೆ ಇದ್ದು, ನಮ್ಮ ಬೆನ್ನ ಹಿಂದೆ ನಡೆಸುವ ಮೋಸ/ವಂಚನೆಯನ್ನು ಗುರುತಿಸುವುದು ಕಷ್ಟ.
ಸಾಮಾನ್ಯವಾಗಿ ಎಲ್ಲರೂ ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಸಂಬಂಧವನ್ನು ಹೊಂದುತ್ತಾರೆ. ಸಂಬಂಧವನ್ನು ಬೆಳೆಸುವ ಮುನ್ನ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿಯಲ್ಲಿ ಬಿದ್ದಾಗ ವ್ಯಕ್ತಿಯ ಅವಗುಣಗಳು ಮರೆಮಾಚುವ ಪ್ರಯತ್ನ ನಡೆಯುವುದು. ಹಾಗಾಗಿ ವಿಶ್ವಾಸದ್ರೋಹ ಮಾಡುವಂತಹ ವ್ಯಕ್ತಿಗಳೊಂದಿಗೆ ಪ್ರೀತಿಯ ಬೆಸುಗೆ ಬೆಸೆದುಕೊಳ್ಳುವುದು ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸುತ್ತಾರೆ.

ಇಂತಹ ಒಂದು ಕೆಟ್ಟ ವರ್ತನೆಯು ಯಾರು ಮಾಡಬಲ್ಲರು ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ಬಲು ಸುಲಭವಾಗಿ ಹೇಳುವುದು. ಹನ್ನೆರಡು ರಾಶಿಚಕ್ರಗಳಲ್ಲಿ ಕೆಲವು ರಾಶಿಚಕ್ರದವರು ವಂಚನೆ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗುವುದು. ಹಾಗಾದರೆ ಅ ರಾಶಿಚಕ್ರಗಳು ಯಾವವು? ಅವರು ಎಸಗುವ ದ್ರೋಹ ಎಂತಹದ್ದು ಎನ್ನುವುದನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಓದಿ.

ಮೇಷ
ಈ ರಾಶಿಯು ಮಂಗಳ ಗ್ರಹದಿಂದ ಆಳಲ್ಪಡುತ್ತದೆ. ಈ ಗ್ರಹವು ಆಕ್ರಮಣಶೀಲ ಮತ್ತು ಲೈಂಗಿಕತೆಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗಾಗಿ ಈ ರಾಶಿಯ ವ್ಯಕ್ತಿಗಳುಮೋಸ ಅಥವಾ ವಂಚನೆ ಮಾಡುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುವುದು. ತಜ್ಞರು ಹೇಳುವ ಪ್ರಕಾರ ಈ ರಾಶಿಯವರಿಗೆ ಕೆಲವು ಸಂಗತಿಗಳಲ್ಲಿ ಅತಿಯಾದ ಆಸೆಗಳಿರುತ್ತವೆ. ಆ ನಿಟ್ಟಿನಲ್ಲಿಯೇ ಸಂಗಾತಿಗೆ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗುವುದು. ಆಗಲೇ ಸಂಬಂಧದಲ್ಲಿ ಇದ್ದರೂ ಸಹ ತಮ್ಮನ್ನು ಸೆಳೆಯುವವರೊಂದಿಗೆ ಸಾಗುವ ಸಾಧ್ಯತೆಗಳಿರುತ್ತವೆ. ಬಹುತೇಕ ಸಂದರ್ಭದಲ್ಲಿ ತಮ್ಮ ವಂಚನೆಯ ಸ್ವಭಾವವನ್ನು ಮರೆಮಾಚುತ್ತಾರೆ.

ಮಿಥುನ
ಎಲ್ಲಾ ರಾಶಿಚಕ್ರಗಳಿಗಿಂತ ಹೆಚ್ಚು ಮಿಥುನ ರಾಶಿಯವರು ಮೋಸ ಮಾಡುವ ಸಾಧ್ಯತೆಗಳಿರುತ್ತವೆ ಎನ್ನಲಾಗುವುದು. ದ್ವಿಮುಖ ವ್ಯಕ್ತಿತ್ವವನ್ನು ಹೊಂದಿರುವ ಇವರು ತಮ್ಮ ಅನೇಖ ಭಾವನೆಗಳನ್ನು ಗುಪ್ತವಾಗಿಡಲು ಬಯಸುತ್ತಾರೆ. ಇವರು ಸಾಮಾನ್ಯವಾಗಿ ಸ್ವಾತಂತ್ರ್ಯ, ನಮ್ಯತೆ, ವೈವಿಧ್ಯತೆ ಹಾಗೂ ಹೆಚ್ಚಿನ ಸಮಯವನ್ನು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುವರು. ತಮ್ಮ ಸಂಗಾತಿ ಅಥವಾ ಪಾಲುದಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಸಮಯದಲ್ಲೂ ಇತರರೊಂದಿಗೆ ಅಂದರೆ ಅವರು ಬಯಸುವ ವ್ಯಕ್ತಿಗಳೊಂದಿಗೆ ಸಂದೇಶ ರವಾನೆ ಹಾಗೂ ಸಾಕಷ್ಟು ಸಮಯವನ್ನು ಕಳೆಯುವ ಸಾಧ್ಯತೆಗಳಿರುತ್ತವೆ. ಬಹಳ ಬುದ್ಧಿವಂತರಾದ ಇವರು ತಮ್ಮ ಚಟುವಟಿಕೆಗಳ ಬಗ್ಗೆ ಮೂರನೆ ವ್ಯಕ್ತಿಗೆ ತಿಳಿಯದಂತೆ ನೋಡಿಕೊಳ್ಳುತ್ತಾರೆ.

ತುಲಾ
ಸಾಮಾಜಿಕವಾಗಿ ಹೆಚ್ಚು ತೆರೆದುಕೊಳ್ಳುವ ವ್ಯಕ್ತಿಗಳಲ್ಲಿ ಇವರೂ ಸಹೊಬ್ಬರಾಗಿರುತ್ತಾರೆ. ನೈಸರ್ಗಿಕವಾಗಿ ಉತ್ತಮ ಪ್ರೇಮಿಗಳು ಹಾಗೂ ಶಾಂತಸ್ವಭಾವದವರು ಇವರು. ಸಮತೋಲನಕ್ಕೆ ಹೆಚ್ಚಿನ ಮಹತ್ವ ನೀಡುವ ಇವರು ಸಂಬಂಧದಲ್ಲಿ ತಮ್ಮ ಪಾಲುದಾರರಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಸಂಗಾತಿಯ ಹಿಂಭಾಗದಲ್ಲಿ ವಂಚನೆ ನಡೆಸುತ್ತಾರೆ. ಆದರೆ ಆ ಕುರಿತು ಸಾಕಷ್ಟು ಅಪರಾಧದ ಭಾವನೆಗೆ ಒಳಗಾಗಿರುತ್ತಾರೆ. ಅವುಗಳನ್ನು ಮರೆಮಾಚಲು ಸಾಕಷ್ಟು ಕೆಲಸವನ್ನು ಕೈಗೊಳ್ಳುತ್ತಾರೆ ಎಂದು ಹೇಳಲಾಗುವುದು. ಇವರು ತಮ್ಮ ಸಂಗಾತಿಯು ತಮ್ಮ ಭಾವನೆಗಳಿಗೆ ಇದ್ದಾರೆ ಎಂದಾದರೆ ಮೋಸ ಮಾಡುವ ಸಾಧ್ಯತೆಗಳು ಕಡಿಮೆಯಾಗಿರುತ್ತವೆ ಎಂದು ಹೇಳಲಾಗುವುದು.

ವೃಶ್ಚಿಕ
ಈ ರಾಶಿಯ ವ್ಯಕ್ತಿಗಳು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಇವರು ಮೋಸ ಮಾಡುವ ಸಾಧ್ಯತೆಗಳು ಅತ್ಯಂತ ಕಡಿಮೆ ಎಂದು ಹೇಳಲಾಗುವುದು. ಆಳವಾದ ಪ್ರೀತಿಯನ್ನು ನೀಡುವ ಇವರು ತಮ್ಮ ಸಂಗಾತಿಯೂ ಅದೇ ರೀತಿಯಲ್ಲಿ ಇರಬೇಕು ಎಂದು ಬಯಸುತ್ತಾರೆ. ಅವರ ಭಾವನೆಗಳು ತಮ್ಮ ಪರವಾಗಿ ಕಡಿಮೆ ಪ್ರಮಾಣದಲ್ಲಿ ಇದೆ ಎಂದು ಭಾವಿಸಿದರೆ ನಿಧಾನವಾಗಿ ಇನ್ನೊಂದು ಪ್ರೀತಿಯ ಸೆಳೆಗೆ ಆಕರ್ಷಿತರಾಗುವರು. ಸಂಬಂಧಗಳಲ್ಲಿ ಮೌಲ್ಯಯುತ ನಂಬಿಕೆಯನ್ನು ಹೊಂದಿರುತ್ತಾರೆ. ಮನಸ್ಸು ಬೇಸತ್ತಿದ್ದರೆ ಬಹುಬೇಗ ಇನ್ನೊಂದು ಸಂಬಂಧಗಳಿಗೆ ಆಕರ್ಷಿತರಾಗುವರು. ಇವರು ಮಾಡುವ ವಂಚನೆಯನ್ನು ಅಷ್ಟು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ ಎನ್ನಲಾಗುವುದು.

ಮೀನ
ಮೋಸ ಮಾಡುವ ಚಿಹ್ನೆಗಳ ಪಟ್ಟಿಯಲ್ಲಿ ಬರುವ ಇನ್ನೊಂದು ರಾಶಿಚಕ್ರದವರು ಎಂದರೆ ಮೀನರಾಶಿಯವರು. ಸದಾ ಕನಸಿನ ಲೋಕದಲ್ಲಿ ತೇಲುವ ಇವರು ಸಂಬಂಧವು ನಿತ್ಯವೂ ಹೊಸತನದಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಸಂಗಾತಿಗೆ ವಂಚನೆ ಮಾಡುತ್ತಿದ್ದರೂ ಸಂತೋಷವನ್ನು ಅನುಭವಿಸುವುದಿಲ್ಲ. ತಮ್ಮ ಲಕ್ಪನೆಗೆ ಹೆಚ್ಚಿನ ಒಲವನ್ನು ತೋರುವ ಇವರು ಅದರಂತೆಯೇ ನಡೆದುಕೊಳ್ಳಲು ಬಯಸುವರು. ಈ ಪರಿಯಿಂದ ಉಂಟಾಗುವ ಘರ್ಷಣೆಯನ್ನು ತಪ್ಪಿಸಲು ಸದಾ ಸಿದ್ಧರಾಗಿರುತ್ತಾರೆ. ಮೋಸ ಮಾಡುವುದು ಇವರ ಸ್ವಭಾವದಲ್ಲಿ ಇಲ್ಲವಾದರೂ ಒಂದು ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ಮುಚ್ಚುವ ಸಲುವಾಗಿ ವಂಚನೆಯ ಕಾರ್ಯ ಮುಂದುವರಿಯುತ್ತಲೇ ಸಾಗುವುದು.



Click it and Unblock the Notifications
