For Quick Alerts
ALLOW NOTIFICATIONS  
For Daily Alerts

2019ರಲ್ಲಿ ಮೂರು ರಾಶಿಯವರು ವೃತ್ತಿ ಜೀವನದಲ್ಲಿ ಸ್ಟಾರ್ ರೀತಿಯಲ್ಲಿ ಯಶಸ್ಸನ್ನು ಕಾಣುವರು

|

ಮನುಷ್ಯನನ್ನು ಕಾಡುವ ಒಂದು ಅಗತ್ಯ ವಸ್ತು ಎಂದರೆ ಹಣ. ಹಣ ಎನ್ನುವ ಎರಡು ಅಕ್ಷರದ ಮೌಲ್ಯವು ಸಾಕಷ್ಟು ಪ್ರಮಾಣದಲ್ಲಿ ಇಲ್ಲ ಎಂದಾಗ ಜೀವನದಲ್ಲಿ ಹಲವಾರು ತೊಂದರೆಗಳು ಎದುರಾಗುತ್ತವೆ. ಬಡತನ ಅಥವಾ ದಾರಿದ್ರ್ಯ ಎನ್ನುವ ಪಟ್ಟವನ್ನು ಹೊತ್ತು ಸಾಗಬೇಕಾಗುವುದು. ಹಣವಿಲ್ಲದೆ ವ್ಯಕ್ತಿಯ ಜೀವನ ಸಾಗಲು ಸಾಧ್ಯವಿಲ್ಲ ಎಂದು ಹೇಳಬಹುದು. ಪ್ರಪಂಚ ನಡೆಯುತ್ತಿರುವುದು ಹಣದಿಂದಲೇ. ಸಮಾಜದಲ್ಲಿ ಹೆಸರು, ಸ್ಥಾನ ಹಾಗೂ ಸಾಕಷ್ಟು ಪ್ರಾಮುಖ್ಯತೆ ದೊರೆಯುವುದು ಕೇವಲ ಹಣದಿಂದಲೇ ಎನ್ನಬಹುದು. ಹಣ ವಿಲ್ಲದೆ ವ್ಯಕ್ತಿಯ ಜೀವನ ಸಾಗಲು ಸಾಧ್ಯವಿಲ್ಲ ಎಂದು ಹೇಳಬಹುದು.

ಜೀವನದ ಅಗತ್ಯತೆಯನ್ನು ಸುಲಭವಾಗಿ ಈಡೇರಿಸುವ ಹಣಕ್ಕಾಗಿ ಜನರು ಸಾಕಷ್ಟು ಸಾಹಸಗಳನ್ನು ಮಾಡುತ್ತಾರೆ. ಹಣ ಎನ್ನುವ ಮಾಯೆಯನ್ನು ಸಂಪಾದಿಸಲು ಪ್ರತಿಯೊಬ್ಬರು ವಿವಿಧ ಬಗೆಯ ವೃತ್ತಿ ಅಥವಾ ಉದ್ಯೋಗವನ್ನು ಕಂಡುಕೊಳ್ಳುತ್ತಾರೆ. ಕೈಗೊಂಡ ವೃತ್ತಿ ಅಥವಾ ವ್ಯಾಪಾರ ವಹಿವಾಟುಗಳು ಉತ್ತಮವಾಗಿ ಸಾಗುತ್ತಿದ್ದರೆ ಜೀವನದಲ್ಲಿ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಸಾಕಷ್ಟು ಮಾನಸಿಕ ನೆಮ್ಮದಿ ಹಾಗೂ ಉತ್ತಮ ಆರೋಗ್ಯದಿಂದ ಉಳಿದುಕೊಳ್ಳುತ್ತಾರೆ. ಅದೇ ಸಂಪಾದನೆಯು ಸಮಾಧಾನಕರವಾಗಿರುವುದಿಲ್ಲ, ನಷ್ಟಗಳು ಎದುರಾಗುತ್ತಿವೆ, ಅಗತ್ಯಕ್ಕೆ ಸಾಕಷ್ಟು ಹಣ ಇಲ್ಲ ಎಂದಾಗ ಬೇಕಾಗದ ಪ್ರಾಥಮಿಕ ವಸ್ತುಗಳನ್ನು ಪಡೆದುಕೊಳ್ಳುವುದು ಸಹ ಕಷ್ಟವಾಗುವುದು. ಜೊತೆಗೆ ಸಮಾಜದಲ್ಲಿ ಸಾಕಷ್ಟು ತುಳಿತ, ನೋವು ಮತ್ತು ಮಾನಸಿಕ ನೆಮ್ಮದಿಯೂ ನಾಶವಾಗುವುದು...

 ಅದೃಷ್ಟ ಹಾಗೂ ದುರಾದೃಷ್ಟ

ಅದೃಷ್ಟ ಹಾಗೂ ದುರಾದೃಷ್ಟ

ನಮ್ಮ ಬದುಕು ಹೀಗೆ ಇರಬೇಕು, ನಮ್ಮ ಜೀವನದಲ್ಲಿ ಈ ಬಗೆಯ ಐಶ್ವರ್ಯ ಹಾಗೂ ಹಣವನ್ನು ಗಳಿಸಬೇಕು ಎನ್ನುವುದು ನಾವು ಹುಟ್ಟಿದ ಕ್ಷಣದಿಂದಲೇ ಪಡೆದುಕೊಳ್ಳುತ್ತಾರೆ. ನಮ್ಮ ಕುಂಡಲಿ, ಗ್ರಹಗತಿಗಳು ಹಾಗೂ ರಾಶಿಚಕ್ರದ ಪ್ರಭಾವದಿಂದ ಜೀವನದಲ್ಲಿ ಕೆಲವು ಪ್ರಮುಖ ಸಂಗತಿಗಳನ್ನು ಪಡೆದುಕೊಳ್ಳುತ್ತಾರೆ. ನೋವು ನಲಿವು ಎಲ್ಲವೂ ಅವುಗಳ ಆಧಾರದ ಮೇಲೆಯೇ ನಮ್ಮ ಅನುಭವಕ್ಕೆ ಬರುವುದು. ಸಮಾಜದಲ್ಲಿ ಆಕರ್ಷಕ ವ್ಯಕ್ತಿಯಾಗುವುದು ಅಥವಾ ಎಲ್ಲರ ತುಳಿತಕ್ಕೆ ಒಳಗಾಗುವುದು ಎಲ್ಲವೂ ನಮ್ಮ ಅದೃಷ್ಟ ಹಾಗೂ ದುರಾದೃಷ್ಟದಿಂದಲೇ ಉಂಟಾಗುವುದು. 2019ರ ಹೊಸ ವರ್ಷದಲ್ಲಿ ಗ್ರಹಗಳು ಸಾಕಷ್ಟು ಬದಲಾವಣೆಯನ್ನು ಪಡೆದುಕೊಳ್ಳುತ್ತವೆ. ಅವುಗಳ ಬದಲಾವಣೆಯು ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದುಕೊಡುವುದು. ಅದು ಕೆಲವರಿಗೆ ಸಾಮಾನ್ಯ ಅದೃಷ್ಟಗಳನ್ನು ತಂದುಕೊಡುವುದು. ಕೆಲವರಿಗೆ ದುರಾದೃಷ್ಟದ ರೀತಿಯಲ್ಲಿ ಪರಿಸ್ಥಿತಿಗಳು ಬದಲಾಗಬಹುದು. ಇನ್ನೂ ಕೆಲವರಿಗೆ ವೃತ್ತಿ ಜೀವನದಲ್ಲಿ ಅತ್ಯುತ್ತಮ ಸ್ಥಿತಿ ಹಾಗೂ ಹೆಸರನ್ನು ನೀಡುವುದು. ಅದು ಅವರನ್ನು ಇತರರ ನಡುವೆ ಆಕರ್ಷಕ ವ್ಯಕ್ತಿಯನ್ನಾಗಿ ಮಾಡುವುದು. ಆರ್ಥಿಕ ಸ್ಥಿತಿಯು ಅತ್ಯುತ್ತಮವಾಗಿ ಇರುತ್ತದೆ ಎಂದು ಹೇಳಲಾಗುವುದು.

2019ರಲ್ಲಿ ತೆಗೆದುಕೊಳ್ಳುವ ಚಲನೆ ಅಥವಾ ಬದಲಾವಣೆ

2019ರಲ್ಲಿ ತೆಗೆದುಕೊಳ್ಳುವ ಚಲನೆ ಅಥವಾ ಬದಲಾವಣೆ

ವ್ಯಕ್ತಿಯ ಜೀವನದಲ್ಲಿ ಯಶಸ್ಸನ್ನು ಕರುಣಿಸುವ ಗುರು ಗ್ರಹವು 2019ರಲ್ಲಿ ತೆಗೆದುಕೊಳ್ಳುವ ಚಲನೆ ಅಥವಾ ಬದಲಾವಣೆಯು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುವುದು. ಬುದ್ಧಿವಂತಿಕೆ, ವಿಸ್ತರಣೆ, ಸಾಹಸ, ಅದೃಷ್ಟ ಎಲ್ಲವನ್ನು ಕರುಣಿಸುವ ಗ್ರಹ ಇದು. ಅಂತೆಯೇ ಶಿಸ್ತು, ಸತ್ಯ, ಕರ್ಮಗಳು, ಕೆಲಸ ಸೇರಿದಂತೆ ಇನ್ನಿತರ ನಿಷ್ಠೆಯ ಬದುಕನ್ನು ಕಲಿಸುವವನು ಶನಿ. ಈ ಎರಡು ಗ್ರಹಗಳು ಉತ್ತಮ ಬದಲಾವಣೆಯನ್ನು ಕಂಡುಕೊಳ್ಳುತ್ತಿರುವುದರಿಂದ ವ್ಯಕ್ತಿಯ ವೃತ್ತಿ ಜೀವನದಲ್ಲಿ ಮಹತ್ತರವಾದ ಬದಲಾವಣೆಯು ಉಂಟಾಗುವುದು. ಅದು ಪ್ರಮುಖವಾಗಿ ಮೂರು ರಾಶಿಯವರಿಗೆ ಅತ್ಯುತ್ತಮ ಪ್ರಭಾವವನ್ನು ನೀಡುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.ಹಾಗಾದರೆ ಈ ವರ್ಷದಲ್ಲಿ ಯಾವ ರಾಶಿಯವರು ಸಾಕಷ್ಟು ಅತ್ಯುತ್ತಮ ಅದೃಷ್ಟವಂತರು ಆಗಲಿದ್ದಾರೆ? ಅವರ ವೃತ್ತಿ ಜೀವನದ ಯಶಸ್ಸು ಹೇಗಿರುತ್ತದೆ? ಅವರ ಆಕರ್ಷಣೆ ಹೇಗೆ ಹೆಚ್ಚುವುದು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಿರುವ ರಾಶಿಚಕ್ರಗಳ ವಿವರಣೆಯನ್ನು ಅರಿಯಿರಿ...

Most Read:2019ರ ಅದೃಷ್ಟ ಹಾಗೂ ದುರಾದೃಷ್ಟದ ರಾಶಿಚಕ್ರಗಳ ಕಂಪ್ಲೀಟ್ ಡಿಟೇಲ್ಸ್

ಕರ್ಕ: ಸಾಕಷ್ಟು ಕಷ್ಟಪಟ್ಟು ದುಡಿಯುವರು

ಕರ್ಕ: ಸಾಕಷ್ಟು ಕಷ್ಟಪಟ್ಟು ದುಡಿಯುವರು

2019ರ ಭವಿಷ್ಯದ ಪ್ರಕಾರ ಕರ್ಕ ರಾಶಿಯವರಿಗೆ ಅತ್ಯುತ್ತಮ ಸಮಯ ಹಾಗೂ ಅವಕಾಶಗಳು ಒದಗಿ ಬರುತ್ತವೆ. 2019ರ ವರ್ಷದ ಉದ್ದಕ್ಕೂ ಗುರುವು ಇವರ ಆರನೇ ಮನೆಯಲ್ಲಿ ಸಂಚರಿಸುತ್ತಾನೆ. ಆರನೆ ಮನೆಯು ಮನೆ, ಕೆಲಸ ಮತ್ತು ಆರೋಗ್ಯವನ್ನು ಅವಲಂಬಿಸಿರುತ್ತದೆ. ಈ ವರ್ಷ ಈ ಮನೆಯಲ್ಲಿ ಇವರಿಗೆ ಗುರುವಿನ ಸಂಚಾರ ಪಡೆದುಕೊಳ್ಳುವುದರಿಂದ ವರ್ಷ ಪೂರ್ತಿ ಅದೃಷ್ಟವನ್ನು ಪಡೆದುಕೊಳ್ಳುವರು. ಸಮೃದ್ಧಿಯು ಅತ್ಯುತ್ತಮ ರೀತಿಯಲ್ಲಿ ಹೊರಹೊಮ್ಮುವುದು ಎಂದು ಹೇಳಲಾಗುವುದು. ಅಂತೆಯೇ ಸಾಕಷ್ಟು ಶ್ರಮದಾಯಕವಾದ ಕೆಲಸವನ್ನು ಕೈಗೊಳ್ಳಬೇಕು ಎಂದು ಹೇಳಲಾಗುವುದು. ಬದ್ಧತೆಯಿಂದ ನೀವು ನಿರ್ವಹಿಸುವ ಕೆಲಸವು ಇತರರ ಗಮನಕ್ಕೆ ಬರುವುದು. ಉತ್ತಮ ಪ್ರಯತ್ನದಿಂದ ಧನಾತ್ಮಕ ಫಲಿತಾಂಶ ಹಾಗೂ ಯಶಸ್ಸನ್ನು ಪಡೆದುಕೊಳ್ಳುವರು.

ಕರ್ಕ: ಸಾಕಷ್ಟು ಕಷ್ಟಪಟ್ಟು ದುಡಿಯುವರು

ಕರ್ಕ: ಸಾಕಷ್ಟು ಕಷ್ಟಪಟ್ಟು ದುಡಿಯುವರು

ಈ ಹಿಂದೆ ನೀವು ಪಟ್ಟ ಶ್ರಮಗಳಿಗೆ ಇದೀಗ ಅತ್ಯುತ್ತಮ ಫಲಿತಾಂಶ ದೊರೆಯುವ ಸಮಯವೂ ಹೌದು. ಈ ಹಿಂದೆ ನಿಮ್ಮ ಕೆಲಸ ಅಥವಾ ವ್ಯಾಪಾರದಲ್ಲಿ ಕಂಡರಿಯದಂತಹ ಯಶಸ್ಸು ಹಾಗೂ ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು. ಉತ್ತಮ ಅಡಿಪಾಯ ಮತ್ತು ಯೋಜನೆಯನ್ನು ರೂಪಿಸಿಕೊಳ್ಳುವುದರ ಮೂಲಕ ಜೀವನದ ಭವಿಷ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವ ಅಗತ್ಯವಿದೆ ಎಂದು ಸಹ ಹೇಳಲಾಗುವುದು. ಉತ್ತಮ ಪರಿಸ್ಥಿತಿಯು ನಿಮಗೆ ನಿಮ್ಮ ಕೆಲಸದಲ್ಲಿ ಅಥವಾ ವ್ಯವಹಾರದಲ್ಲಿ ಸಾಕಷ್ಟು ಗಮನವನ್ನು ಹಾಗೂ ಶಕ್ತಿಯನ್ನು ವಿನಿಯೋಗಿಸಲು ಅನುಕೂಲತೆಯನ್ನು ಕಲ್ಪಿಸುವುದು. ಉತ್ತಮ ಪರಿಸ್ಥಿತಿಯನ್ನು ಪಡೆದುಕೊಂಡಿರುವ ನಿಮಗೆ ನಿಮ್ಮ ತನವನ್ನು ಬಿಟ್ಟು ಸಾಗದಂತೆ ನೋಡಿಕೊಳ್ಳಬೇಕು. ಸಾಕಷ್ಟು ಸಂತೋಷ ಹಾಗೂ ನಿಮ್ಮ ಬಯಕೆಗಳು ನೀವು ಅಂದುಕೊಂಡಂತೆಯೇ ನೆರವೇರುವುದು. ಅದಕ್ಕೆ ದೈವ ಶಕ್ತಿ ಹಾಗೂ ಗುರುವಿನ ಅನುಗ್ರಹವು ಈ ವರ್ಷ ನಿಮ್ಮ ಪರವಾಗಿ ಇರುತ್ತದೆ ಎಂದು ಹೇಳಲಾಗುವುದು. 2019ರ ಅತ್ಯಂತ ಅದೃಷ್ಟವಂತ ವ್ಯಕ್ತಿಗಳಲ್ಲಿ ನೀವು ಮೊದಲಿಗರು ಎಂದು ಸಹ ಹೇಳಬಹುದಾಗಿದೆ.

ಕುಂಭ: ಅತ್ಯುತ್ತಮ ಸಂಪರ್ಕವನ್ನು ಪಡೆದುಕೊಳ್ಳುವರು

ಕುಂಭ: ಅತ್ಯುತ್ತಮ ಸಂಪರ್ಕವನ್ನು ಪಡೆದುಕೊಳ್ಳುವರು

ಕ್ರೀಯಾಶೀಲರು ಹಾಗೂ ಸ್ವತಂತ್ರ ಪ್ರಿಯರು ಕುಂಭ ರಾಶಿಯವರು. ಇವರು 2019ರಲ್ಲಿ ಸಾಕಷ್ಟು ಧನಾತ್ಮಕ ಫಲಿತಾಂಶವನ್ನು ಜೀವನದಲ್ಲಿ ಪಡೆದುಕೊಳ್ಳುವರು. ಇವರ ಹನ್ನೊಂದನೇ ಮನೆಯಲ್ಲಿ ಗುರು ಗ್ರಹವು ಸಂಚಾರವನ್ನು ಪಡೆದುಕೊಳ್ಳುವುದು. ಈ ಮನೆಯು ಸಾಕಷ್ಟು ಸಾಮಾಜಿಕ ಸಂಪರ್ಕ ಮತ್ತು ವೃತ್ತಿ ಜೀವನವನ್ನು ಕಲ್ಪಿಸಿಕೊಡುವುದು. ಇವರಿಗೆ ದೊರೆಯುವ ಅತ್ಯುತ್ತಮ ವ್ಯಕ್ತಿಗಳ ಸಂಪರ್ಕವು ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಭಾವವನ್ನು ಬೀರುವುದು. ಅಲ್ಲದೆ ವೃತ್ತಿ ಜೀವನದಲ್ಲಿ ವಿಕಸನವನ್ನು ಕಾಣುತ್ತಾ ಸಾಗುವರು ಎಂದು ಹೇಳಲಾಗುತ್ತದೆ. ಆಕಸ್ಮಿಕ ಕಾರಣಗಳಿಂದ ಅಥವಾ ಸದುದ್ದೇಶಗಳಿಂದಲೂ ಸಾಕಷ್ಟು ಅತ್ಯುತ್ತಮ ಹಾಗೂ ಪ್ರಭಾವಿ ವ್ಯಕ್ತಿಗಳ ಭೇಟಿ ಹಾಗೂ ಸಂಪರ್ಕವನ್ನು ಪಡೆದುಕೊಳ್ಳುವರು. ಇದು ಅವರಿಗೆ ಸಾಕಷ್ಟು ಧನಾತ್ಮಕ ಫಲಿತಾಂಶವನ್ನು ಕಲ್ಪಿಸಿಕೊಡುವುದು.

ಕುಂಭ: ಅತ್ಯುತ್ತಮ ಸಂಪರ್ಕವನ್ನು ಪಡೆದುಕೊಳ್ಳುವರು

ಕುಂಭ: ಅತ್ಯುತ್ತಮ ಸಂಪರ್ಕವನ್ನು ಪಡೆದುಕೊಳ್ಳುವರು

ಇವರು ಸಹಭಾಗಿತ್ವ, ಸಹಕಾರ ಮತ್ತು ಗಮನವನ್ನು ಸೂಕ್ತರೀತಿಯಲ್ಲಿ ನಿರ್ವಹಿಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಸಾಮಾಜಿಕ ಕ್ಷೇತ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸಾಮಥ್ರ್ಯ ಹಾಗೂ ಶ್ರೇಯಸ್ಸು ಇರುತ್ತದೆ. ಅವುಗಳ ಅನುಸಾರ ವ್ಯಕ್ತಿಯು ಸಾಧನೆ ಹಾಗೂ ಯಶಸ್ಸನ್ನು ಪಡೆದುಕೊಳ್ಳುವನು. ಅಂತಹ ವ್ಯಕ್ತಿಗಳ ಸಂಪರ್ಕ ಪಡೆದುಕೊಳ್ಳುವುದರಿಂದ ಸಾಕಷ್ಟು ಬದಲಾವಣೆ ಹಾಗೂ ವಿಶ್ವಾಸವನ್ನು ಪಡೆದುಕೊಳ್ಳುವರು. ವಿಶ್ವಾಸಾರ್ಹ ವ್ಯಕ್ತಿಯಾಗಲು ನೀವು ಸಿದ್ಧರಾಗಬೇಕಿದೆ. ಒಬ್ಬ ವ್ಯಕ್ತಿಯ ಉತ್ತಮ ಸಂಪರ್ಕದಿಂದಲೇ ನಿಮ್ಮ ಜೀವನದಲ್ಲಿ ಸಾಕಷ್ಟು ಅತ್ಯುತ್ತಮ ಬದಲಾವಣೆಯನ್ನು ಕಂಡುಕೊಳ್ಳುವಿರಿ. 2019ರಲ್ಲಿ ಅತ್ಯಂತ ಅದೃಷ್ಟವನ್ನು ಪಡೆದುಕೊಳ್ಳುವ ವ್ಯಕ್ತಿಗಳಲ್ಲಿ ನೀವು ಒಬ್ಬರು. ಇದು ನಿಮಗೆ ಸಾಕಷ್ಟು ಸಂತೋಷವನ್ನು ನೀಡುವುದು.

Most Read:ಮುಂಬರಲಿರುವ ಹೊಸ ವರ್ಷದಲ್ಲಿ ಈ 4 ರಾಶಿಯವರು ತುಂಬಾನೇ ಸಂತೋಷವಾಗಿರುತ್ತಾರಂತೆ!

ಮೀನ: ನಿಮ್ಮದೇ ಹೆಸರು ಹಾಗೂ ಯಶಸ್ಸನ್ನು ಪಡೆಯುವಿರಿ

ಮೀನ: ನಿಮ್ಮದೇ ಹೆಸರು ಹಾಗೂ ಯಶಸ್ಸನ್ನು ಪಡೆಯುವಿರಿ

ಮೀನ ರಾಶಿಯವರಿಗೆ 2019ರ ವರ್ಷ ದೀರ್ಘ ಕಾಲದ ವರೆಗೆ ಅತ್ಯುತ್ತಮ ಯಶಸ್ಸು ಹಾಗೂ ಹೆಸರನ್ನು ತಂದುಕೊಡುವ ವರ್ಷವಾಗಲಿದೆ. ಹತ್ತನೇ ಮನೆಯು ವೃತ್ತಿ ಮತ್ತು ಖ್ಯಾತಿಗೆ ಸಂಬಂಧಿಸಿರುತ್ತದೆ. ಇವರ ಹತ್ತನೇ ಮನೆಯಲ್ಲಿ ಗುರುವಿನ ಸಂಚಾರ ಇರುವುದರಿಂದ ಇವರು ಅಂದುಕೊಂಡ ಕೆಲಸ ಹಾಗೂ ಕನಸುಗಳೆಲ್ಲವೂ ಇವರ ಜೇಬಿನಲ್ಲಿ ಸಿಕ್ಕಂತೆ ಸುಲಭವಾಗಿ ದೊರೆಯುವುದು. ಕಂಡ ಕನಸುಗಳೆಲ್ಲವೂ ಸುಲಲಿತವಾಗಿ ನೆರವೇರುವುದು. ಸಂತೋಷಕ್ಕೆ ಸಾಕಷ್ಟು ಕಾರಣಗಳು ಸಾಲಲ್ಲಿ ಬರುತ್ತವೆ. ಆದರೆ ನೀವು ನಿಮ್ಮ ತನ ಹಾಗೂ ನಿಮ್ಮ ಕೆಲಸದ ಬಗ್ಗೆ ಯಾವುದೇ ಬಗೆಯ ತಾತ್ಸಾರ ಅಥವಾ ಅನುಚಿತ ವರ್ತನೆಯನ್ನು ತೋರಬಾರದು. ನಿಮ್ಮ ವರ್ತನೆ ಹಾಗೂ ಕೈಗೊಳ್ಳುವ ನಿರ್ಣಯಗಳು ಬಹು ಮಹತ್ತರವಾಗಿರುತ್ತವೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಮೀನ: ನಿಮ್ಮದೇ ಹೆಸರು ಹಾಗೂ ಯಶಸ್ಸನ್ನು ಪಡೆಯುವಿರಿ

ಮೀನ: ನಿಮ್ಮದೇ ಹೆಸರು ಹಾಗೂ ಯಶಸ್ಸನ್ನು ಪಡೆಯುವಿರಿ

ನಿಮ್ಮ ಈ ಯಶಸ್ಸುಗಳು ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರನ್ನು ತಂದುಕೊಡುವುದು. ಈ ಹಿಂದೆ ಅನುಭವಿಸಿದ್ದ ಅನಾನುಕೂಲತೆಗಳು ಹಾಗೂ ಕಷ್ಟಗಳು ಕ್ಷಣಾರ್ಧದಲ್ಲಿ ಕರಗಿದಂತೆ ಆಗುವುದು. ನಿಮ್ಮ ಖ್ಯಾತಿಯು ಪುನರುಜ್ಜೀವನ ಪಡೆದುಕೊಳ್ಳುವುದು. ನಿಮ್ಮ ಈ ಯಶಸ್ಸು ವಿಶ್ವಮಟ್ಟದಲ್ಲಿ ಸಾಧನೆ ಮಾಡುವಂತೆ ಮಾಡುವುದು. ವೃತ್ತಿ ಜೀವನದಲ್ಲಿ ನಂಬಿಕೆ ಎನ್ನುವುದು ಚಿಮ್ಮುವುದು. ನೀವು ಕೈಗೊಳ್ಳುವ ಕೆಲಸ ಕಾರ್ಯಗಳು ಅತ್ಯುತ್ತಮ ರೀತಿಯಲ್ಲಿ ಇತರರ ಗಮನಕ್ಕೆ ಬರುವುದು. ನಿಮ್ಮದೇ ಚಿಂತನೆ ಹಾಗೂ ಶ್ರಮಗಳು 2019ರಲ್ಲಿ ಸಾಕಷ್ಟು ಯಶಸ್ಸು ಹಾಗೂ ನೆಮ್ಮದಿಯನ್ನು ಕಲ್ಪಿಸಿಕೊಡುವುದು. ಇದರಿಂದ ಸಾಕಷ್ಟು ವಿಶ್ವಾಸ ಹಾಗೂ ಖಚಿತತೆಯನ್ನು ಪಡೆದುಕೊಳ್ಳುವುದರಿಂದ ನೀವು ಸಾಧನೆಯನ್ನು ಪಡೆದುಕೊಳ್ಳುವುದರಲ್ಲಿ ಸುಲಭವಾಗುವುದು. ಗ್ರಹಗಳು ಉತ್ತಮ ಸಹಕಾರ ನೀಡುವುದರಿಂದ ವರ್ಷ ಪೂರ್ತಿ ಅನುಕೂಲಕರ ಸ್ಥಿತಿಯನ್ನು ಅನುಭವಿಸುವಿರಿ.

English summary

These 3 Zodiac Signs Will Have Major Career Success In 2019!

If you're ready to make 2019 your year, then you'll want to listen closely. The cosmos are making damn sure that this new year is an incredibly prolific one. After how difficult 2018 was, don't you think we all deserve a break? I mean, at one point, there were upwards of seven different planets in retrograde at once. If it feels as though your entire life has been uprooted, it's no wonder.
X
Desktop Bottom Promotion