Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಡೊಳ್ಳು ಹೊಟ್ಟೆಯ ಆಕಾರ ವ್ಯಕ್ತಿತ್ವವನ್ನೇ ಬಿಚ್ಚಿಡುತ್ತದೆ!
ಓರ್ವ ವ್ಯಕ್ತಿಯ ವ್ಯಕ್ತಿತ್ವ ಹೀಗಿರಬಹುದೆಂದು ಆತನ/ಆಕೆಯ ದೇಹದ ಆಕಾರದಿಂದ ಅಂದಾಜಿಸಲು ಸಾಧ್ಯವೇ? ಪರಿಣಿತರು ವ್ಯಕ್ತಿಯ ಮೂಗು, ಗದ್ದ, ಬೆರಳಚ್ಚು, ಹಸ್ತದ ರೇಖೆಗಳು, ಉಗುರುಗಳ ಆಕಾರ ಅಥವಾ ಗಾತ್ರ ಮೊದಲಾದವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಈ ವ್ಯಕ್ತಿಯ ವ್ಯಕ್ತಿತ್ವ ಹೀಗಿರಬಹುದೆಂದು ಅಂದಾಜಿಸುತ್ತಾರೆ.
ಇಂದಿನ ಲೇಖನದಲ್ಲಿ, ವ್ಯಕ್ತಿಯ ಹೊಟ್ಟೆಯ ಆಕಾರವನ್ನು ಗಮನಿಸುವ ಮೂಲಕ ಆ ವ್ಯಕ್ತಿಯ ವ್ಯಕ್ತಿತ್ವ ಹೇಗಿರಬಹುದು ಎಂಬುದನ್ನು ಅರಿಯುವ ವಿವರಗಳನ್ನು ನೀಡಲಾಗಿದ್ದು ನೀವೂ ಈ ಜ್ಞಾನವನ್ನು ಪಡೆಯಲು ಏಕೆ ಯತ್ನಿಸಬಾರದು?...

ಒಂದು ವೇಳೆ ವ್ಯಕ್ತಿಯ ಹೊಟ್ಟೆಯ ಆಕಾರ #1 ರಲ್ಲಿದ್ದಂತಿದ್ದರೆ
ಈ ವ್ಯಕ್ತಿಗಳು ತಮ್ಮ ಆರೋಗ್ಯ ಹಾಗೂ ದೈಹಿಕ ದಾರ್ಢ್ಯತೆಗೆ ಅತಿ ಹೆಚ್ಚಿನ ಕಾಳಜಿ ನೀಡುವವರಾಗಿರುತ್ತಾರೆ. ಓರ್ವ ಶಿಸ್ತಿನ ವ್ಯಕ್ತಿಯಾಗಿರುವ ಇವರು ತಮ್ಮ ಚಟುವಟಿಕೆಗಳ ವೇಳಾಪಟ್ಟಿಗೆ ಹಾಗೂ ಸ್ವತಃ ನಿರ್ಮಿಸಿಕೊಂಡಿರುವ ಕಟ್ಟುಪಾಡುಗಳಿಗೆ ಬದ್ದರಾಗಿದ್ದು ಇವರ ಪ್ರತಿ ಚರ್ಯೆಯಲ್ಲಿಯೂ ಈ ಶಿಸ್ತನ್ನು ಕಾಣಬಹುದು. ಇವರು ತಮ್ಮ ಸುತ್ತಮುತ್ತಲಿನವರಿಗೊಂದು ಮಾದರಿಯಾಗಿರುತ್ತಾರೆ ಹಾಗೂ ತಮ್ಮ ಮಾತುಗಳಿಗೆ ಬದ್ಧರಾಗಿರುತ್ತಾರೆ. ಇನ್ನೊಂದು ಕಡೆಯಿಂದ, ಇವರು ಅಪಾರ ತಾಳ್ಮೆಯುಳ್ಳವರೂ ಸೂಕ್ಷ್ಮವಾಗಿ ಅವಲೋಕಿಸುವವರೂ ಆಗಿರುತ್ತಾರೆ. ಇವರಿಗೆ ತಮ್ಮ ಜೀವನದಲ್ಲಿ ಏನಾಗಬೇಕು ಹಾಗೂ ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಅರಿವಿದ್ದು ಇದಕ್ಕಾಗಿ ಯೋಜನೆಯನ್ನು ಹಾಕಿಕೊಳ್ಳುವವರಾಗಿರುತ್ತಾರೆ. ತನ್ಮೂಲಕ ಇವರು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸುತ್ತಾ ಇತರರನ್ನು ಪ್ರೇರೇಪಿಸುತ್ತಾ ಮುಂದುವರೆಯುತ್ತಾರೆ.

ಒಂದು ವೇಳೆ ವ್ಯಕ್ತಿಯ ಹೊಟ್ಟೆಯ ಆಕಾರ #2 ರಲ್ಲಿದ್ದಂತಿದ್ದರೆ
ಈ ವ್ಯಕ್ತಿಗಳು ಸಪಾಟು ಹೊಟ್ಟೆಯನ್ನು ಹೊಂದಿದ್ದರೂ ಹೊಟ್ಟೆಯ ಸ್ನಾಯುಗಳು ಹುರಿಗಟ್ಟಿರುವುದಿಲ್ಲ. ಇವರು ಧನಾತ್ಮಕ ಧೋರಣೆ ಹಾಗೂ ಸ್ವಾಭಿಮಾನದ ವ್ಯಕ್ತಿಗಳಾಗಿದ್ದು ಸಮಾಜದಲ್ಲಿ ಎಲ್ಲರೊಂದಿಗೆ ಸುಲಭವಾಗಿ ಬೆರೆಯುವವರಾಗಿರುತ್ತಾರೆ. ಇವರು ನಿಸರ್ಗವನ್ನು ಪ್ರೀತಿಸುವವರೂ ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿರುವವರೂ ಆಗಿರುತ್ತಾರೆ. ಕೆಲವೊಮ್ಮೆ ಇವರು ಉಗ್ರರೂಪ ತಾಳುತ್ತಾರೆ ಹಾಗೂ ಇನ್ನೊಂದೆಡೆ ಇವರು ಜೀವನವನ್ನು ಸಮತೋಲನದಲ್ಲಿ ನಡೆಸಿಕೊಂಡು ಹೋಗುವ ವ್ಯಕ್ತಿಯೂ ಆಗಿದ್ದಾರೆ. ಇದರ ಹೊರತಾಗಿ, ಇವರು ತಮ್ಮ ಸ್ವಂತ ಪ್ರೇರಣೆಯಿಂದಲೇ ಮುಂದುವರೆಯುವವರಾಗಿದ್ದು ಇತರ ವ್ಯಕ್ತಿಗಳು ಇವರಲ್ಲಿ ಸಂತೋಷದ ಭಾವನೆಯನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ಇವರ ಸ್ವಭಾವ ಎಲ್ಲರನ್ನೂ ಸ್ವಾಗತಿಸುವ ಹಾಗೂ ಎಲ್ಲರಲ್ಲಿಯೂ ಒಳ್ಳೆಯದನ್ನೇ ಬಯಸುವಂತಹದ್ದಾಗಿರುವ ಕಾರಣ ಇವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.

ಒಂದು ವೇಳೆ ವ್ಯಕ್ತಿಯ ಹೊಟ್ಟೆಯ ಆಕಾರ #3 ರಲ್ಲಿದ್ದಂತಿದ್ದರೆ
ಈ ಬಗೆಯ ಹೊಟ್ಟೆಯನ್ನು ಅಡ್ರಿನಲ್ ಬಗೆ ಎಂದು ಕರೆಯಲಾಗುತ್ತದೆ. ಈ ವ್ಯಕ್ತಿಗಳು ವಿನೋದಮಯ, ಸ್ವಾರಸ್ಯಕರ ಹಾಗೂ ಸದಾ ಇತರರೊಂದಿಗೆ ಹಸನ್ಮುಖಿಯಾಗಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮೊಂದಿಗೆ ಇರುವ ಯಾರೇ ವ್ಯಕ್ತಿಯೊಂದಿಗೆ ಕಳೆಯುವ ಯಾವುದೇ ಕ್ಷಣವನ್ನು ವಿನೋದಮಯವಾಗಿ ಹಾಗೂ ಸಂತೋಷದಿಂದ ಮತ್ತು ನಗುನಗುತ್ತಾ ಕಳೆಯಲು ಇಚ್ಛಿಸುತ್ತಾರೆ. ಇವರ ಸಮಯೋಚಿತ ವಿನೋದ ಹಾಗೂ ಹಾಸ್ಯಸಂಭಾಷಣೆಗಳು ಎಲ್ಲರಿಗೂ ಇವರ ಸಾಂಗತ್ಯ ಇಷ್ಟವಾಗುತ್ತದೆ. ಇನ್ನೊಂದು ಕಡೆಯಿಂದ ಇವರು ತಮ್ಮವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರೂ ಹಾಗೂ ತೆರೆದ ಹೃದಯದಿಂದ ಎಲ್ಲರನ್ನೂ ಸ್ವಾಗತಿಸುವವರೂ ಆಗಿರುತ್ತಾರೆ. ಇದೇ ಕಾರಣಕ್ಕೆ ಸುತ್ತಮುತ್ತಲಿನವರು ಈ ವ್ಯಕ್ತಿಗಳನ್ನು ನಿಃಸ್ವಾರ್ಥ ಮನೋಭಾವದಿಂದ ಹೆಚ್ಚು ಪ್ರೀತಿಸುತ್ತಾರೆ.

ಒಂದು ವೇಳೆ ವ್ಯಕ್ತಿಯ ಹೊಟ್ಟೆಯ ಆಕಾರ #4 ರಲ್ಲಿದ್ದಂತಿದ್ದರೆ
ಈ ಬಗೆಯ ಹೊಟ್ಟೆಯನ್ನು ಥೈರಾಯ್ಡ್ ಬಗೆ ಎಂದು ಕರೆಯಲಾಗುತ್ತದೆ. ಈ ವ್ಯಕ್ತಿಗಳು ತಮ್ಮ ಸ್ವಂತ ಸಮಯದಲ್ಲಿ ಏಕಾಂಗಿಯಾಗಿ ನಿರಾಳರಾಗಿದ್ದುಬಿಡಲು ಇಚ್ಛಿಸುತ್ತಾರೆ. ಈ ವ್ಯಕ್ತಿಗಳು ಆರಾಮಜೀವಿಗಳಾಗಿದ್ದು ಇವರಿಗೆ ಗೌಜು ಗದ್ದಲ ಇಷ್ಟವಾಗುವುದಿಲ್ಲ ಹಾಗೂ ಇವರು ಶಾಂತ ಪರಿಸರದಲ್ಲಿರಲು ಇಚ್ಛಿಸುತ್ತಾರೆ. ಇವರು ಇತರ ವ್ಯಕ್ತಿಗಳನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ವಿಫಲರಾಗುತ್ತಾರೆ ಹಾಗೂ ವ್ಯಕ್ತಿಗಳನ್ನು ಅರಿಯಲು ಇವರು ಇತರರಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇನ್ನೊಂದು ಕಡೆಯಿಂದ, ಇವರು ಸ್ಥಿತಪ್ರಜ್ಞರೂ ಶಾಂತ ಸ್ವಭಾವದವರೂ ಆಗಿರುತ್ತಾರೆ.

ಒಂದು ವೇಳೆ ವ್ಯಕ್ತಿಯ ಹೊಟ್ಟೆಯ ಆಕಾರ #5 ರಲ್ಲಿದ್ದಂತಿದ್ದರೆ
ಈ ಹೊಟ್ಟೆಯನ್ನು ಡೊಳ್ಳುಹೊಟ್ಟೆ ಎಂದು ಕರೆಯಲಾಗುತ್ತದೆ. ನಮ್ಮ ವಿನಾಯಕನಿಗಿರುವುದೂ ಇದೇ ಮಾದರಿಯ ಹೊಟ್ಟೆ! ಈ ಬಗೆಯ ಹೊಟ್ಟೆ ಇರುವ ವ್ಯಕ್ತಿಗಳು ದೃಢ ಮನೋಭಾವದ, ಸ್ಪಷ್ಟ ಮಾತುಗಳ ಹಾಗೂ ಸತ್ಯಸಂಧ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುವವರಾಗಿದ್ದು ತಮ್ಮ ಮಾತುಗಳನ್ನು ತಿರುಚುವುದಿಲ್ಲ ಹಾಗೂ ಇದ್ದ ಮಾತನ್ನು ಇದ್ದ ಹಾಗೇ ಹೇಳುವ ಮೂಲಕ ಎದುರಿನವರು ಎದ್ದು ಬಂದು ಎದೆಗೆ ಗುದ್ದುವುದನ್ನೂ ಎದುರಿಸುತ್ತಾರೆ. ಇನ್ನೊಂದು ಕಡೆಯಿಂದ, ಈ ವ್ಯಕ್ತಿಗಳು ತಮ್ಮ ನಿಲುವಿಗೆ ಕಟಿಬದ್ದರಾಗಿದ್ದು ಈ ನಿಲುವಿನ ಹೊರತಾಗಿ ಇತರರ ಇನ್ನೊಂದು ದೃಷ್ಟಿಕೋನವೂ ಇರಬಹುದು ಎಂಬುದನ್ನು ಪರಿಗಣಿಸುವುದೇ ಇಲ್ಲ! ಹಾಗಾಗಿ ಇವರ ನೈಜ ಗುಣಗಳು ಇವರ ಆಪ್ತರಿಗೆ ಮಾತ್ರವೇ ಸ್ಪಷ್ಟವಾಗಿ ಕಾಣುತ್ತವೆ. ಇದರ ಹೊರತಾಗಿ, ಇವರು ನೇರಸ್ವಭಾವದವರೂ ಆಗಿದ್ದು ಇದೇ ಕಾರಣಕ್ಕೆ ಸಮಾಜದಿಂದ ಹೆಚ್ಚಿನ ಗೌರವವನ್ನು ಪಡೆಯುತ್ತಾರೆ.

ಒಂದು ವೇಳೆ ವ್ಯಕ್ತಿಯ ಹೊಟ್ಟೆಯ ಆಕಾರ #6 ರಲ್ಲಿದ್ದಂತಿದ್ದರೆ
ಈ ಆಕಾರ ಮೊಟ್ಟೆಯಾಕಾರವಾಗಿದ್ದು ಈ ಹೊಟ್ಟೆಯ ಒಡೆಯರು ಹೆಚ್ಚೂ ಕಡಿಮೆ ಇತರರ ಅನಿಸಿಕೆಗಳಿಗೆ ಯಾವುದೇ ಬೆಲೆ ನೀಡದ ಸ್ವಾರ್ಥಿಗಳಾಗಿರುತ್ತಾರೆ. ಇವರಿಗೆ ತಮ್ಮ ನಿಲುವನ್ನು ಇತರರು ಸರಿ ಎನ್ನುವುದೇ ಬೇಕಾಗಿರುತ್ತದೆ ಹಾಗೂ ಇವರು ಇತರ ವಿಷಯಗಳನ್ನು ನಿರ್ಲಕ್ಷಿಸಿಬಿಡುತ್ತಾರೆ. ಓರ್ವ ವ್ಯಕ್ತಿಯಾಗಿ ಇವರು ತಮಗೆ ಎದುರಾದ ಕಷ್ಟಗಳನ್ನು ಏಕಾಂಗಿಯಾಗಿ ಎದುರಿಸುವವರಾಗಿದ್ದು ಇದಕ್ಕಾಗಿ ಯಾರ ಸಹಾಯವನ್ನೂ ಅಪೇಕ್ಷಿಸುವುದಿಲ್ಲ. ಇವರು ತಮ್ಮ ಸ್ವಸಾಮರ್ಥ್ಯವನ್ನೇ ಅವಲಂಬಿಸಿದ್ದು ಜೀವನದಲ್ಲಿ ಮುಂದುವರೆಯಲು ಯಾರ ಬೆಂಬಲ ಅಥವಾ ಪ್ರೋತ್ಸಾಹವನ್ನು ಪಡೆಯಲು ಕಾಯುವವರಲ್ಲ.



Click it and Unblock the Notifications











