Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಯಾವ ರಾಶಿಚಕ್ರದವರು ಅಸಲಿ ಮತ್ತು ಯಾವುದು ನಕಲಿ?
ಜ್ಯೋತಿಷ್ಯಶಾಸ್ತ್ರ ಪ್ರಕಾರ ಪ್ರತಿಯೊಂದು ರಾಶಿಯ ಭವಿಷ್ಯ ಹಾಗೂ ಗುಣನಡತೆ ತಿಳಿದುಕೊಳ್ಳಬಹುದು. ಇಷ್ಟು ಮಾತ್ರವಲ್ಲದೆ ಯಾವ ರಾಶಿಯವರಿಗೆ ಏನೇನು ಸಮಸ್ಯೆಗಳು ಎದುರಾಗಬಹುದು ಎನ್ನುವುದನ್ನು ಕೂಡ ಇದು ಹೇಳುತ್ತದೆ. ಇಂತಹ ಸಂದರ್ಭದಲ್ಲಿ ನೀವು ನಕಲಿಯೋ ಅಥವಾ ಅಸಲಿಯೋ ಎನ್ನುವುದನ್ನು ಕೂಡ ನಿಮ್ಮ ರಾಶಿ ಚಕ್ರವು ಹೇಳಲಿದೆ.
ಹೌದು, ನಿಮ್ಮ ರಾಶಿ ಚಕ್ರದ ಪ್ರಕಾರವಾಗಿ ನೀವು ಅಸಲಿಯೋ?, ನಕಲಿಯೋ ಅಥವಾ ರಾಜತಾಂತ್ರಿಕರೋ ಎನ್ನುವುದನ್ನು ಹೇಳಲಿದೆ. ಇದು ಹೇಗೆ ಎಂದು ನೀವು ಈ ಲೇಖನ ಪೂರ್ತಿ ಓದಿದರೆ ಸರಿಯಾಗಿ ತಿಳಿದುಬರುವುದು. ಇನ್ನು ತಡೆ ಯಾಕೆ? ತಕ್ಷಣ ಓದಲು ತಯಾರಾಗಿ...

ಮೇಷ: ಅಸಲಿ
ಈ ರಾಶಿಯವರು ತುಂಬಾ ವಿನಮ್ರವೆಂದು ಪರಿಗಣಿಸಲಾಗುತ್ತದೆ. ಇವರು ಸುಳ್ಳು ಹೇಳುವುದಿಲ್ಲ ಮತ್ತು ಕಠಿಣ ಪರಿಸ್ಥಿತಿಯಲ್ಲೂ ಇವರು ತುಂಬಾ ರಾಜತಾಂತ್ರಿಕವಾಗಿ ಇರಲು ಇವರಿಗೆ ಆಗಲ್ಲ. ಜನರಿಗೆ ನೋವಾದರೂ ಇವರು ಸತ್ಯವನ್ನೇ ಹೇಳುವರು. ಇವರು ಇರುವುದೇ ಹಾಗೆ.

ವೃಷಭ: ಅಸಲಿ
ಇವರು ಹಠಮಾರಿ ನಕಲಿಗಳು. ಇವರು ಬೇರೆಯವರ ಮಾತು ಕೇಳಲ್ಲ ಮತ್ತು ತಮ್ಮದೇ ಆದ ದಾರಿಯಲ್ಲಿ ಸಾಗುವರು. ಇವರಿಗೆ ಸುಳ್ಳು ಸ್ವಾಭಾವಿಕವಾಗಿ ಬಂದಿಲ್ಲ. ಆದರೆ ಕಚೇರಿಯಲ್ಲಿ ಕೆಲವೊಂದು ಕಠಿಣ ಪರಿಸ್ಥಿತಿಯನ್ನು ರಾಜತಾಂತ್ರಿಕವಾಗಿ ನಿವಾರಣೆ ಮಾಡಲು ಸುಳ್ಳು ಹೇಳುವರು. ಇನ್ನೊಂದು ಕಡೆಯಲ್ಲಿ ಇವರು ತಮ್ಮ ಪ್ರೀತಿಪಾತ್ರರ ಮುಂದೆ ಸುಳ್ಳು ಹೇಳಲ್ಲ.

ಮಿಥುನ: ನಕಲಿ
ಈ ರಾಶಿಯವರನ್ನು ಹೆಚ್ಚಿನವರು ಎರಡು ಮುಖಗಳಿರುವವರು ಎಂದು ಕರೆಯುತ್ತಾರೆ. ಇವರು ತುಂಬಾ ಸುಳ್ಳು ಹೇಳುವಂತಹ ರಾಶಿಯವರು. ಇವರ ವ್ಯಕ್ತಿತ್ವ ಕೂಡ ಇಬ್ಬಗೆಯದ್ದಾಗಿದೆ. ಹೊರಗಿನ ಜಗತ್ತಿಗೆ ಒಂದು ಮುಖ ಮತ್ತು ಪ್ರೀತಿಪಾತ್ರರಿಗೆ ಇವರ ಮತ್ತೊಂದು ಮುಖ ಕಾಣಿಸುವುದು.

ಕರ್ಕಾಟಕ: ಅಸಲಿ
ಇವರು ನಿಜವಾದ ಆತ್ಮದವರು ಮತ್ತು ಎಲ್ಲವನ್ನೂ ಹೃದಯದಿಂದ ಪರಿಗಣಿಸುವ ಕಾರಣ ಹೆಚ್ಚಿನ ಜನರು ಇವರು ಸುಳ್ಳುಗಾರರೆಂದು ಭಾವಿಸುವರು. ಆದರೆ ನಿಜವೆಂದರೆ ಇವರು ಭಾವಾನಾತ್ಮಕ ವ್ಯಕ್ತಿಗಳು ಮತ್ತು ತಮ್ಮನ್ನು ಪ್ರೀತಿಸುವವರಿಗೆ ತುಂಬಾ ಸತ್ಯವಂತರಾಗಿರುವರು. ಇವರ ಹೃದಯದಲ್ಲಿ ನಿಜವಾದ ಆತ್ಮವಿರುವಂತೆ ಇವರ ನಡವಳಿಕೆಯಿರುವುದು.

ಸಿಂಹ: ಅಸಲಿ
ಇವರು ಅಪೂರ್ಣವಾದರೂ ಸುಂದರ ಮತ್ತು ತಮ್ಮ ಒಳ್ಳೆಯ ಹವ್ಯಾಸಗಳಂತೆ ತಮ್ಮ ತಪ್ಪುಗಳನ್ನು ಕೂಡ ಒಪ್ಪಿಕೊಳ್ಳುವರು. ಇವರು ಮಾಡುವಂತಹ ಪ್ರತಿಯೊಂದರಲ್ಲೂ ಅರ್ಥ ಹುಡುಕುವುದನ್ನು ಇಷ್ಟಪಡುವರು. ಇವರದ್ದು ಧನಾತ್ಮಕ ಆತ್ಮ ಮತ್ತು ಜನರು ಯಾವಾಗಲೂ ಸತ್ಯ ಹೇಳಬೇಕೆಂದು ಬಯಸುವರು.

ಕನ್ಯಾ: ಅಸಲಿ
ಕೆಟ್ಟ ನಡವಳಿಕೆಗೆ ಇವರಲ್ಲಿ ಕ್ಷಮೆಯಿಲ್ಲ ಮತ್ತು ಇವರು ಟೀಕೆಯನ್ನು ಹಗುರವಾಗಿ ಸ್ವೀಕರಿಸಲ್ಲ. ಬೇರೆಯವರಿಗೆ ನೋವಾಗುತ್ತದೆಯೆಂದು ತಿಳಿದಿದ್ದರೂ ಇವರು ತಮ್ಮ ವಯ್ಯಾರದ ಪದಗಳನ್ನು ಬಳಸಲು ಇಷ್ಟಪಡಲ್ಲ. ಇವರು ಯಾವಾಗಲೂ ಸತ್ಯವನ್ನೇ ಮಾತನಾಡುವರು. ಇವರು ತಮಗೆ ನಕಲಿಯ ಕೋಟೆ ಕಟ್ಟಿಕೊಳ್ಳಲ್ಲ.

ತುಲಾ: ನಕಲಿ
ಪ್ರತಿಯೊಬ್ಬರನ್ನು ಮೆಚ್ಚಿಸಬೇಕೆಂಬ ಇವರ ಅಭಿಲಾಷೆಯು ಇವರನ್ನು ಸುಳ್ಳರನ್ನಾಗಿಸುತ್ತದೆ. ಇದು ಅವರ ಸ್ವಅರಿವಿಗೆ ಬರದಂತೆ ನಡೆಯುತ್ತದೆ. ಇವರು ಬೇರೆಯವರನ್ನು ಸಂತೋಷವಾಗಿಡಲು ಏನೂ ಬೇಕಾದರೂ ಮತ್ತು ಪ್ರತಿಯೊಂದನ್ನೂ ಮಾಡಬಲ್ಲರು. ಒಳ್ಳೆಯ ಉದ್ದೇಶದಿಂದ ಇದನ್ನು ಮಾಡಿದ್ದರೂ ಅವರಿಗೆ ನಕಲಿ ಎನ್ನುವ ಪಟ್ಟ ಕಟ್ಟಲಾಗುತ್ತದೆ. ಈ ಹಣೆಪಟ್ಟಿ ತೆಗೆಯಲು ಇವರು ನಿಧಾನವಾಗಿ ಯೋಚನೆ ಮಾಡಿಕೊಂಡು, ಜನರನ್ನು ಮೆಚ್ಚಿಸಲು ಅತಿಯಾಗಿ ಪ್ರಯತ್ನ ಪಡುವುದು ಬೇಡ.

ವೃಶ್ಚಿಕ: ಅಸಲಿ
ಇವರು ಯಾವಾಗಲೂ ಸತ್ಯ ಹೇಳುವಂತಹ ಅಸಲಿ ವ್ಯಕ್ತಿಗಳು. ಕೆಲವೊಂದು ಸಲ ಇವರು ಅತಿಯಾಗಿ ಮಾತನಾಡುವ ಕಾರಣ ದೊಡ್ಡಸ್ತಿಕೆ ತೋರಿಸುವಂತೆ ಕಾಣುವರು. ಇವರು ತಮ್ಮನ್ನು ಬದಲಾಯಿಸಲು ಪ್ರಯತ್ನ ಪಡಬೇಕು. ತಮಗೆ ಹೆಚ್ಚಿನ ಮೌಲ್ಯ ನೀಡುವವರಿಗೆ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಕಡಿಮೆ ಮಾಡಬೇಕು.

ಧನು: ರಾಜತಾಂತ್ರಿಕ
ಈ ರಾಶಿಯವರು ಅಸಲಿ ಮತ್ತು ನಕಲಿಯ ಸರಿಯಾದ ಮಿಶ್ರಣ. ಇವರನ್ನು ರಾಜತಾಂತ್ರಿಕರು ಎನ್ನಬಹುದು. ಇವರು ಪರಿಸ್ಥಿತಿಗೆ ತಕ್ಕಂತೆ ತಮ್ಮ ನಡವಳಿಕೆ ಬದಲಾಯಿಸಬಹುದು. ಪರಿಸ್ಥಿತಿಗೆ ಅಗತ್ಯವಿದ್ದರೆ ಇವರು ರಾಜತಾಂತ್ರಿಕವಾಗಿರಲು ಹಿಂಜರಿಯಲ್ಲ.

ಮಕರ: ರಾಜತಾಂತ್ರಿಕ
ಇವರು ತುಂಬಾ ಲೆಕ್ಕಾಚಾರದ ವ್ಯಕ್ತಿ ಮತ್ತು ಇವರು ತಮ್ಮ ಕೆಲಸದಲ್ಲಿ ಅದ್ಭುತವಾಗಿರುವರು. ಇವರು ಯಾವಾಗಲೂ ರಾಜತಾಂತ್ರಿಕವಾಗಿರುವರು ಮತ್ತು ಇದರಿಂದಾಗಿ ಇವರನ್ನು ಕೆಲವರು ನಕಲಿ ಎಂದು ಕರೆಯುವರು. ಇವರು ಶ್ರೇಷ್ಠ ಮ್ಯಾನೇಜರ್ ಆಗುವರು ಮತ್ತು ಜನರು ಇವರ ಬೆನ್ನಹಿಂದೆ ಮಾತನಾಡಿಕೊಳ್ಳುವರು.

ಕುಂಭ: ರಾಜತಾಂತ್ರಿಕ
ಈ ರಾಶಿಯವರು ನಕಲಿಗೆ ತುಂಬಾ ಭಿನ್ನವಾಗಿರುವರು. ಇವರು ನಕಲಿಯೂ ಅಲ್ಲ, ಅಸಲಿಯೂ ಅಲ್ಲ. ಒಂದು ರೀತಿಯಲ್ಲಿ ರಾಜತಾಂತ್ರಿಕ. ಇವರಿಗೆ ಹೃದಯ ಬಯಸುವುದು ಬೇಕಿರುವುದು ಮತ್ತು ಇದೇ ವೇಳೆ ಇವರು ಪ್ರೀತಿ ಮಾಡುವರು. ಆದರೆ ಇವರು ತುಂಬಾ ಶಾಂತ ಮತ್ತು ಬೇರ್ಪಟ್ಟವರಾಗಿರುವರು. ಇವರ ಸ್ನೇಹಿತರು ಮತ್ತು ಕುಟುಂಬದವರು ಕೂಡ ಇವರ ನಿಜವಾದ ಮುಖ ನೋಡಿರಲ್ಲ.

ಮೀನ: ನಕಲಿ
ತುಲಾ ರಾಶಿಯವರಂತೆ ಇವರು ಕೂಡ ಪ್ರತಿಯೊಬ್ಬರನ್ನು ಮೆಚ್ಚಿಸಲು ಪ್ರಯತ್ನಿಸುವರು. ಇವರು ನಕಲಿಯಾಗಿದ್ದಾರೆ ಎಂದು ಅವರಿಗೆ ತಿಳಿದಿದೆ. ಆದರೂ ಬೇರೆಯವರನ್ನು ಸಂತೋಷವಾಗಿಡಲು ಇವರು ಹೀಗೆ ಮಾಡುವರು.



Click it and Unblock the Notifications











