For Quick Alerts
ALLOW NOTIFICATIONS  
For Daily Alerts

  ರಾಶಿಭವಿಷ್ಯ: ಈ ಎರಡು ರಾಶಿಯವರು ತುಂಬಾನೇ ಬುದ್ಧಿವಂತರು!

  By Deepu
  |

  ಎಲ್ಲಾ ರಾಶಿಗಳಿಗಿಂತಲೂ ಎರಡು ರಾಶಿಗಳಲ್ಲಿ ಜನಿಸಿದ ವ್ಯಕ್ತಿಗಳು ಇತರರಿಗಿಂತ ಹೆಚ್ಚು ಜ್ಞಾನಿಗಳಾಗಿರುತ್ತಾರೆ ಎಂದು ನಂಬಲಾಗಿದೆ. ಈ ರಾಶಿಯ ವ್ಯಕ್ತಿಗಳು ಅತ್ಯಂತ ಪ್ರಾಮಾಣಿಕರೂ ತಮ್ಮ ವಿಶಿಷ್ಟ ವ್ಯಕ್ತಿತ್ವಕ್ಕಾಗಿಯೂ ಪ್ರಸಿದ್ದರಾಗಿರುತ್ತಾರೆ. ಈ ಕಾರಣಗಳಿಂದಲೇ ಈ ರಾಶಿಗಳನ್ನು ಜ್ಞಾನಿಗಳ ರಾಶಿಗಳೆಂದೂ ಕರೆಯಬಹುದು.

  ಪ್ರತಿ ರಾಶಿಯೂ ತನ್ನದೇ ಆದ ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ಹೊಂದಿದೆ. ಈ ರಾಶಿಯ ವ್ಯಕ್ತಿಗಳು ತಮ್ಮ ಪ್ರತ್ಯೇಕ ವ್ಯಕ್ತಿತ್ವ, ಹಂಬಲ, ಮಹತ್ವಾಕಾಂಕ್ಷೆ, ಮನೋಭಾವ ಹಾಗೂ ವರ್ತನೆಯನ್ನು ಹೊಂದಿರುತ್ತಾರೆ. ಈ ಗುಣಗಳೇ ಇವರ ವ್ಯಕ್ತಿತ್ವವನ್ನು ವಿವರಿಸುತ್ತವೆ.

  ಜ್ಯೋತಿಷಿಗಳ ಪ್ರಕಾರ, ಈ ಎರಡು ರಾಶಿಗಳ ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಸಾಧಿಸಿದ ವ್ಯಕ್ತಿಗಳಾಗಿರುತ್ತಾರೆ ಹಾಗೂ ಅತ್ಯುತ್ತಮ ಜ್ಞಾನವನ್ನು ಹೊಂದಿರುತ್ತಾರೆ. ಈ ಎರಡು ರಾಶಿಗಳೆಂದರೆ ಕುಂಭ ಮತ್ತು ತುಲಾ, ಬನ್ನಿ, ಈ ರಾಶಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ....

  ಕುಂಭ : ಜನವರಿ 21-ಫೆಬ್ರವರಿ 18

  ಕುಂಭ : ಜನವರಿ 21-ಫೆಬ್ರವರಿ 18

  ಈ ವ್ಯಕ್ತಿಗಳು ತಾರ್ಕಿಕವಾಗಿ ಯೋಚಿಸುವ, ಚತುರ ಹಾಗೂ ಸ್ವತಂತ್ರ ವ್ಯಕ್ತಿತ್ವ ಹೊಂದಿರುವವರಾಗಿರುತ್ತಾರೆ. ಇನೊಂದು ಕಡೆಯಿಂದ ಇವರು ಹೆಚ್ಚು ಭಾವನಾತ್ಮಕರಾಗಿರುವುದಿಲ್ಲ ಹಾಗೂ ತಮ್ಮ ಭಾವನೆಯನ್ನು ಸ್ಪಷ್ಟವಾಗಿ ಪ್ರಕಟಿಸಲು ಉತ್ಸುಕತೆ ತೋರುವುದಿಲ್ಲ. ಇವರು ತಮ್ಮ ನಿರ್ಧಾರವನ್ನು ತಾವೇ ಕೈಗೊಳ್ಳುವ ಹಾಗೂ ಯಾರ ಅಧೀನದಲ್ಲಿಲ್ಲದೇ ಸ್ವತಂತ್ರವಾಗಿ ಕೆಲಸ ಮಾಡಲಿಚ್ಛಿಸುವ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳ ಮೇಲೆ ಭರವಸೆ ಇರಿಸಬಹುದು ಹಾಗೂ ಇವರು ತಮ್ಮನ್ನು ನಂಬಿದವರ ಕೈ ಬಿಡುವುದಿಲ್ಲ.

  ಕುಂಭ : ಜನವರಿ 21-ಫೆಬ್ರವರಿ 18

  ಕುಂಭ : ಜನವರಿ 21-ಫೆಬ್ರವರಿ 18

  ಈ ವ್ಯಕ್ತಿಗಳು ಸಾಮಾನ್ಯವಾಗಿ ಸಂಕೋಚ ಸ್ವಭಾವದವರು ಹಾಗೂ ಇದೇ ಕ್ಷಣದಲ್ಲಿ ಅತಿ ಹೆಚ್ಚು ಚಟುವಟಿಕೆಯುಳ್ಳವರೂ ಆಗಿರುತ್ತಾರೆ. ಇವರು ತುಂಬಾ ದೂರಕ್ಕೆ ಯೋಚಿಸುವ ವ್ಯಕ್ತಿಗಳಾಗಿದ್ದು ಇವರ ದೂರದೃಷ್ಟಿಯಿಂದ ಭವಿಷ್ಯವನ್ನು ಮುಂಗಂಡು ಆ ಪ್ರಕಾರ ನಿರ್ಧಾರಗಳನ್ನು ಕೈಗೊಳ್ಳುವವರಾಗಿರುತ್ತಾರೆ.

  ತುಲಾ: ಸೆಪ್ಟೆಂಬರ್ 24- ಅಕ್ಟೋಬರ್ 23

  ತುಲಾ: ಸೆಪ್ಟೆಂಬರ್ 24- ಅಕ್ಟೋಬರ್ 23

  ಈ ವ್ಯಕ್ತಿಗಳು ತಕ್ಷಣವೇ ಯಾವುದೊಂದು ನಿರ್ಧಾರಕ್ಕೆ ಬರಲಾರದ ದ್ವಂದ್ವವನ್ನು ಪ್ರಕಟಿಸುವ ವ್ಯಕ್ತಿಗಳಾಗಿದ್ದರೂ, ಜ್ಯೋತಿಷಿಗಳ ಪ್ರಕಾರ ಕುಂಬ ರಾಶಿಯ ಬಳಿಕ ಈ ರಾಶಿಯ ವ್ಯಕ್ತಿಗಳೇ ಹೆಚ್ಚು ಜ್ಞಾನಿಗಳಾಗಿರುತ್ತಾರೆ. ಇವರು ಸಹಾ ತಾರ್ಕಿಕವಾಗಿ ಯೋಚಿಸುವ, ಎಲ್ಲರೊಂದಿಗೆ ನಯವಂತಿಕೆಯಿಂದ ನಡೆದುಕೊಳ್ಳುವ, ಹಾಗೂ ಸಮಾಜದಲ್ಲಿ ಎಲ್ಲರೊಂದಿಗೆ ಹೊಂದಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಸ್ವತಂತ್ರವಾಗಿ ಕೆಲಸ ಮಾಡುವ ಹಾಗೂ ಸಮಾಜದ ಎಲ್ಲ ವರ್ಗದ ಜನರೊಂದಿಗೆ ಉತ್ತಮವಾಗಿ ವ್ಯವಹರಿಸುವ ಮೂಲಕ ಜನಪ್ರಿಯರೂ ಆಗಿರುತ್ತಾರೆ. ಇನ್ನೊಂದು ಕಡೆಯಿಂದ ತಮ್ಮ ಕೆಲಸದಲ್ಲಿ ಇವರು ಪರಿಪೂರ್ಣತೆಯನ್ನು ಬಯಸುವವರಾಗಿದ್ದು ಅಡ್ಡಿಗಳನ್ನು ಸಹಿಸುವುದಿಲ್ಲ.

  ತುಲಾ: ಸೆಪ್ಟೆಂಬರ್ 24- ಅಕ್ಟೋಬರ್ 23

  ತುಲಾ: ಸೆಪ್ಟೆಂಬರ್ 24- ಅಕ್ಟೋಬರ್ 23

  ಈ ವ್ಯಕ್ತಿಗಳು ತಾವು ವಹಿಸಿಕೊಂಡಿರುವ ಕೆಲಸಗಳು ಸುಸೂತ್ರವಾಗಿ ಮುಂದುವರೆಯಲು ಅತಿ ಹೆಚ್ಚಿನ ಕಾಳಜಿ ವಹಿಸುತ್ತಾರೆ ಮತ್ತು ತಮ್ಮ ಸಮಯವನ್ನು ವ್ಯಯಿಸುತ್ತಾರೆ. ಹಾಗೂ ಯಾವುದೇ ವಿಷಯದ ಬಗ್ಗೆ ತಮ್ಮ ನೇರವಾದ ಹಾಗೂ ಪ್ರಾಮಾಣಿಕ ಅಭಿಪ್ರಾಯವನ್ನು ಮಂಡಿಸುತ್ತಾರೆ. ಇವರನ್ನು ಅರಿತ ಹೆಚ್ಚಿನವರ ದೃಷ್ಟಿಯಲ್ಲಿ ಇವರು ವಯಸ್ಸಿನ ಅಂತರವಿಲ್ಲದೇ ಅತಿ ಹೆಚ್ಚಿನ ಜ್ಞಾನಿಗಳೆಂದು ಪರಿಗಣಿಸಲ್ಪಡುತ್ತಾರೆ. ಇವರ ಪ್ರಾಮಾಣಿಕತೆಯ ಕಾರಣದಿಂದಲೇ ಇವರಿಗೆ ಅತಿ ಹೆಚ್ಚಿನ ಸ್ನೇಹಿತರಿರುತ್ತಾರೆ.

  ಇವೆರಡೂ ರಾಶಿಗಳಲ್ಲಿ ಸಮಾನ ಅಂಶ ಯಾವುದು?

  ಇವೆರಡೂ ರಾಶಿಗಳಲ್ಲಿ ಸಮಾನ ಅಂಶ ಯಾವುದು?

  ಇವೆರಡೂ ರಾಶಿಗಳಲ್ಲಿ ಸಮಾನವಾದ ಅಂಶಗಳೆಂದರೆ ಈ ವ್ಯಕ್ತಿಗಳು ತಾರ್ಕಿಕವಾಗಿ ಯೋಚಿಸುವ, ಅತಿ ಹೆಚ್ಚಿನ ಬುದ್ಧಿಮತ್ತೆ , ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಕ್ರಿಯಾತ್ಮಕರಾಗಿರುವುದೇ ಆಗಿವೆ. ಆದರೆ ಅತ್ಯಂತ ಸಮಾನವಾದ ಅಂಶವೆಂದರೆ ಜ್ಞಾನ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ನಿಮ್ಮ ಅನಿಸಿಕೆಗಳು ನಮಗೆ ಅಮೂಲ್ಯವಾಗಿದ್ದು ನಮ್ಮೊಂದಿಗೆ ದಯವಿಟ್ಟು ಹಂಚಿಕೊಳ್ಳಿ.

  English summary

  The Most Wisest Zodiac Signs Of All Times!

  These zodiac signs are well known for their characteristics and their honest nature, which defines them as being the most wisest zodiac signs. As each zodiac sign has its own strengths and weaknesses, the individuals of this sign are also said to have their individual qualities, desires, moods, and attitudes, which define their personality. According to astrologers, there are two zodiac signs which are known to be the best when it comes to being wise. They are Aquarius and Libra. Know more about these wise signs below...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more