Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ಈ ನಾಲ್ಕು ರಾಶಿಗಳ ಜನರಲ್ಲಿ ತುಂಬಾನೇ ಬಲಿಷ್ಠವಾದ ವ್ಯಕ್ತಿತ್ವವಿದೆಯಂತೆ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ರಾಶಿಗೆ ಅನುಗುಣವಾಗಿಯೇ ನಮ್ಮ ವ್ಯಕ್ತಿತ್ವವು ಇರುವುದು. ಇದರಿಂದಾಗಿಯೇ ಒಬ್ಬರ ಗುಣನಡತೆಗಳು ಮತ್ತೊಬ್ಬರಿಗಿಂತ ತುಂಬಾ ಭಿನ್ನವಾಗಿರುವುದು. ಕೆಲವು ವ್ಯಕ್ತಿಗಳು ತಮ್ಮ ರಾಶಿಗೆ ಅನುಗುಣವಾಗಿ ತುಂಬಾ ಶಾಂತರಾಗಿ ಇರುವರು.
ಇನ್ನು ಕೆಲವರು ತುಂಬಾ ಕೋಪಿಷ್ಠರಾಗಿರುವರು. ಇಂತಹ ಹಲವಾರು ಗುಣಗಳು ನಮಗೆ ಕಂಡುಬರುವುದು. ಇದಕ್ಕೆಲ್ಲಾ ಕಾರಣ ಅವರ ರಾಶಿಚಕ್ರಗಳು. ಆದರೆ ರಾಶಿಗಳಲ್ಲಿ ಕೆಲವು ರಾಶಿಗಳು ತುಂಬಾ ಬಲಿಷ್ಠವಾಗಿರುವುದು ಮತ್ತು ಇವುಗಳಲ್ಲಿ ಕೆಲವು ಶಕ್ತಿಗಳು ಅಡಗಿರುವುದು. ಇಂತಹ ನಾಲ್ಕು ರಾಶಿಗಳ ಬಗ್ಗೆ ನೀವು ತಿಳಿಯಲು ತಯಾರಾಗಿ...

1.ಮೇಷ (ಮಾ.21-ಎ.20)
ರಾಶಿಗಳ ಗುಂಪಿಯನಲ್ಲಿ ಮೇಷ ರಾಶಿಯು ತುಂಬಾ ಬಲಿಷ್ಠವಾಗಿರುಂತದ್ದಾಗಿದೆ. ಈ ರಾಶಿಯಲ್ಲಿ ಹುಟ್ಟಿದ ಜನರಲ್ಲಿ ಹೆಚ್ಚಿನ ಶಕ್ತಿ, ತೀವ್ರ ಹಾಗು ಸಾಹಸಮಯ ಪ್ರವೃತ್ತಿಯೊಂದಿಗೆ ಹುರುಪು ಇರುವುದು. ಇವರು ಯಾವುದಕ್ಕೂ ಹೆದರಲ್ಲ ಮತ್ತು ಹೊಸ ಸವಾಲುಗಳನ್ನು ಎದುರಿಸಲು ಎದುರುನೋಡುತ್ತಲಿರುವರು. ಇವರಲ್ಲಿ ಇರುವಂತಹ ನಾಯಕತ್ವದ ಗುಣಗಳು ಇವರಿಗೆ ಶ್ರೇಷ್ಠ ಮಟ್ಟದ ಸ್ವರಕ್ಷಣೆ ನೀಡುವುದು

ಮೇಷ (ಮಾ.21-ಎ.20)
ಇವರು ಬಂಡಾಯ ಹಾಗೂ ಪ್ರಚೋದಕರಾಗಿರುವ ಕಾರಣದಿಂದಾಗಿ ಕೆಲವೊಮದು ಸಲ ಒಬ್ಬರಿಗಿಂತ ಹೆಚ್ಚು ಶತ್ರುಗಳನ್ನು ಮಾಡಿಕೊಳ್ಳುವರು. ಇವರು ತುಂಬಾ ಹಠವಾದಿಗಳು ಮತ್ತು ಇವರಿಗೆ ಮನವರಿಕೆ ಮಾಡುವುದು ಕಷ್ಟವಾಗಿರುವ ಕಾರಣದಿಂದಾಗಿ ಯಾವುದೇ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಹಿಂಜರಿಯಲ್ಲ. ಇವರಲ್ಲಿರುವ ನಾಯಕತ್ವದ ಗುಣಗಳು, ಶಕ್ತಿ ಮತ್ತು ಧೈರ್ಯವು ಇವರನ್ನು ಬಲಿಷ್ಠವಾಗಿಸುವುದು.

2.ವೃಶ್ಚಿಕ(ಅ.24-ನ.22)
ವೃಶ್ಚಿಕ ರಾಶಿಯವರಲ್ಲಿ ಬಲಿಷ್ಠವಾದ ವ್ಯಕ್ತಿತ್ವವಿದೆ. ಆದರೆ ಇವರು ತಮ್ಮ ತೀವ್ರತೆಯಿಂದಾಗಿ ಬೇರೆ ರಾಶಿಗಳಿಂತ ತುಂಬಾ ಭಿನ್ನ. ಇದು ಭಾವನಾತ್ಮಕ ಮಟ್ಟದಲ್ಲಿ ಎದ್ದು ಕಾಣುವುದು. ಇವರು ಯಾವತ್ತೂ ನಿಲ್ಲುವವರಲ್ಲ ಮತ್ತು ಈ ಗುಣದಿಂದಾಗಿ ಇವರು ಬಯಸಿದ ಗುರಿಯನ್ನು ಮುಟ್ಟುವರು. ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರು ತುಂಬಾ ಟೀಕೆ ಮಾಡುವವರು, ಸ್ವಲ್ಪ ಕೋಪಿಷ್ಠರು ಮತ್ತು ದೈನಂದಿನ ಜಂಜಾಟಗಳಿಗೆ ಹೊಂದಿಕೊಳ್ಳಲು ಕಷ್ಟಪಡುವವರು. ಪ್ರೀತಿಯಲ್ಲಿ ಇವರದ್ದು ತುಂಬಾ ಬಲಿಷ್ಠ ನಡೆ. ಇವರು ತಮ್ಮ ಸಂಗಾತಿಯೊಂದಿಗೆ ಯಾವಾಗಲೂ ಹೊಂದಿಕೊಂಡಿರುವರು.

3.ಕರ್ಕಾಟಕ(ಜೂ.22-ಜುಲೈ23)
ಕರ್ಕಾಟಕ ರಾಶಿಯವರು ಯಾವಾಗಲೂ ಹಠಾತ್ ಮತ್ತು ಬೇಗನೆ ಬದಲಾಗುವವರು ಎಂದು ನಮಗೆ ತಿಳಿದಿದೆ. ಆದರೆ ಈ ರಾಶಿಯವರು ತುಂಬಾ ಬಲಿಷ್ಠ ಹಾಗೂ ಹಠ ಸ್ವಭಾವದವರು. ಇವರು ತುಂಬಾ ಸುರಕ್ಷಿತ ಜನರು ಮತ್ತು ತಮ್ಮ ಮೇಲೆ ನಂಬಿಕೆಯಿರುವವರು. ಇದರಿಂದಾಗಿ ಅವರು ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿತ್ವ ರೂಪಿಸಿಕೊಂಡು ವೃತ್ತಿ ಹಾಗೂ ಭಾವನಾತ್ಮಕ ಜೀವನವನ್ನು ಬೆಳೆಸಿಕೊಳ್ಳುವರು.

ಕರ್ಕಾಟಕ(ಜೂ.22-ಜುಲೈ23)
ಸ್ನೇಹಿತರು ಮತ್ತು ಜತೆಗಾರರಲ್ಲಿ ಇವರು ತುಂಬೇ ಬೇಡಿಕೆಯವರು. ಇವರು ಬೇರೆಯವರ ಭಾವನೆಗಳಿಗೆ ನೋವುಂಟು ಮಾಡಿದರೂ ತುಂಬಾ ಪ್ರಾಮಾಣಿಕವಾಗಿರುವರು. ಇವರ ಆತ್ಮವಿಶ್ವಾಸವು ಇವರು ಬಯಸಿದ್ದನ್ನು ಸಾಧಿಸಲು ನೆರವಾಗುವುದು ಮತ್ತು ಇವರಲ್ಲಿರುವ ಪರಿಪೂರ್ಣತೆಯು ಅದ್ಭುತವಾಗಿರುವಂತಹ ವಿಚಾರಗಳನ್ನು ಸಾಧಿಸಲು ನೆರವಾಗುವುದು.

ಸಿಂಹ(ಜು.24-ಆ.23)
ರಾಶಿಚಕ್ರಗಳಲ್ಲಿ ತುಂಬಾ ಬಲಿಷ್ಠವಾಗಿರುವಂತಹ ಸಿಂಹ ರಾಶಿಯೊಂದಿಗೆ ನಾವು ಈ ಲೇಖನವನ್ನು ಮುಗಿಸಲಿದ್ದೇವೆ. ಇವರ ವಿಶಿಷ್ಠ ಲಕ್ಷಣಗಳಲ್ಲಿ ತುಂಬಾ ಬಲಿಷ್ಠವಾಗಿರುವುದು ಎಂದರೆ ಇವರ ಅಧಿಕಾರತ್ವದ ಗುಣ. ಇವರು ಯಾವಾಗಲೂ ನಿರ್ದೇಶನ ನೀಡಲು ತಯಾರಾಗಿರುವರು ಮತ್ತು ಇವರು ಹುಟ್ಟು ನಾಯಕರು.

4. ಸಿಂಹ(ಜು.24-ಆ.23)
ಇವರು ಸಮಸ್ಯೆಗಳಿಗೆ ಯಾವತ್ತೂ ಹೆದರಿ ಕೂರಲ್ಲ. ಇವರು ತಮ್ಮ ಗುರಿ ಸಾಧಿಸಲು ಯೋಜನೆ ಹಾಗೂ ತಂತ್ರಗಳನ್ನು ರೂಪಿಸಲು ಶ್ರೇಷ್ಠ ಗುಣ ಹೊಂದಿರುವರು. ಬಲವು ಇವರನ್ನು ಕೆಲವೊಂದು ಸಲ ತುಂಬಾ ಹೆಮ್ಮೆ, ಕ್ರೋಧಿತ ಮತ್ತು ಹಠಮಾರಿಯನ್ನಾಗಿಸುವುದು. ಸಿಂಹ ರಾಶಿಯವರನ್ನು ಬಲಿಷ್ಠ ರಾಶಿಯನ್ನಾಗಿಸುವಂತಹ ಲಕ್ಷಣವೆಂದರೆ ಇರಲ್ಲಿರುವಂತಹ ಚರಿಷ್ಮಾ. ಇದರಿಂದಾಗಿ ಇವರು ಜನಸಮೂಹದ ಮುಂದೆ ಸಾಗುವ ಹಾಗೂ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದು.



Click it and Unblock the Notifications











