ಯಾವ್ಯಾವ ರಾಶಿಯವರ ಗುಣ ನಡತೆಗಳೆಲ್ಲಾ ಹೇಗಿರುತ್ತದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Posted By: Deepu
Subscribe to Boldsky

ನಮ್ಮ ಸ್ವಭಾವದಲ್ಲಿ ಅಥವಾ ವ್ಯಕ್ತಿತ್ವದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಲಕ್ಷಣಗಳು ಸಾಮಾನ್ಯವಾಗಿರುತ್ತದೆ. ಈ ಲಕ್ಷಣಗಳು ನಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ. ಇವು ನಮ್ಮ ರಾಶಿಚಕ್ರದ ಚಿಹ್ನೆಗಳಿಗೆ ಹೆಚ್ಚು ಸಂಬಂಧಿಸಿರುತ್ತದೆ ಎನ್ನಬಹುದು. ಪ್ರತಿ ರಾಶಿ ಚಕ್ರದವರು ತಮ್ಮದೇ ಆದ ವಿಶೇಷ ಲಕ್ಷಣವನ್ನು ಹೊಂದಿರುತ್ತಾರೆ.

ನಮ್ಮ ಜೀವನದಲ್ಲಿ ನಾವು ಸಾಧಿಸುವ ಸಾಧನೆ, ತೋರುವ ವರ್ತನೆ, ಪಡೆದುಕೊಳ್ಳುವ ಪ್ರೀತಿ ಹಾಗೂ ಕಳೆದುಕೊಳ್ಳುವ ನೋವು ಎಲ್ಲವೂ ಗ್ರಹಗತಿಗಳ ಪ್ರಭಾವ ಹಾಗೂ ರಾಶಿಚಕ್ರದ ಅನ್ವಯದಂತೆ ನಡೆಯುತ್ತದೆ. ನಿಮಗೂ ನಿಮ್ಮ ರಾಶಿ ಚಕ್ರದ ಅನ್ವಯದಲ್ಲಿ ಏನನ್ನು ಪಡೆದುಕೊಳ್ಳುವಿರಿ? ಹಾಗೂ ಏನನ್ನು ಕಳೆದುಕೊಳ್ಳುವಿರಿ? ನಿಮ್ಮ ಅದೃಷ್ಟ ಮತ್ತು ವ್ಯಕ್ತಿತ್ವ ಇತರರಿಗಿಂತ ಹೇಗೆ ಭಿನ್ನವಾಗಿದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ.

ಮೇಷ

ಮೇಷ

ಮೇಷ ರಾಶಿಯವರು ಅತ್ಯಂತ ಪ್ರೇರಣಾ ಪೂರ್ವಕವಾದಂತಹ ಸಹನೆಯನ್ನು ಹೊಂದಿರುತ್ತಾರೆ. ಇವರು ವೈಯಕ್ತಿಕವಾಗಿ ಅಪಕ್ವತೆಯನ್ನು ಹೊಂದಿರುವ ವ್ಯಕ್ತಿಗಳು ಎಂದು ಕರೆಯುತ್ತಾರೆ. ಅವರು ಯಾವುದೇ ರೀತಿಯ ಆಧಾರ ಅಥವಾ ಪೂರ್ವ ಅನುಭವವಿಲ್ಲದ ಆಲೋಚನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಇವರು ಸಣ್ಣ ಮಕ್ಕಳು ಮಾಡುವಂತಹ ಟೀಕೆಗಳನ್ನು ಮಾಡುತ್ತಿರುತ್ತಾರೆ.

ವೃಷಭ

ವೃಷಭ

ಇವರು ಸೌಮ್ಯವಾದ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ. ಅವರಲ್ಲಿ ಕೆಲವೊಮ್ಮೆ ಮೊಂಡುತನ ಇರುವುದನ್ನು ಸಹ ನೋಡಬಹುದು. ಕೆಲವೊಮ್ಮೆ ಆಲಸ್ಯ ಪ್ರವೃತ್ತಿಯನ್ನು ತೋರುತ್ತಾರೆ. ಇವರು ಕೆಲವು ಸುವರ್ಣಾವಕಾಶಗಳನ್ನು ಬಳಸಿಕೊಳ್ಳುವಂತಹ ವಿನಮ್ರತೆಯನ್ನು ಬೆಳೆಸಿಕೊಳ್ಳಬೇಕು.

ಮಿಥುನ

ಮಿಥುನ

ಇವರು ಒಂದು ಬಗೆಯ ವಿಭಿನ್ನ ಬಗೆಯ ವ್ಯಕ್ತಿತ್ವ ಹೊಂದಿದವರಾಗಿರುತ್ತಾರೆ. ಇವರು ವಿವಿಧ ಬಗೆಯ ಹಿತಾಸಕ್ತಿಯನ್ನು ಆನಂದಿಸುತ್ತಾರೆ. ಕೊಂಚ ಸೊಕ್ಕಿನ ಪ್ರವೃತ್ತಿಯನ್ನು ಹೊಂದಿದವರಾದ ಇವರಲ್ಲಿ ತಾವೇ ಬುದ್ಧಿವಂತರು ಎನ್ನುವ ಭಾವ ಹೆಚ್ಚಿರುತ್ತದೆ. ಇವರು ಕೆಲವು ವಿಚಾರದಲ್ಲಿ ತಮಗೆ ನಾಚಿಕೆ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಇನ್ನೊಂದೆಡೆ ಇವರನ್ನು ವಿಶ್ವಾಸಕ್ಕೆ ಅರ್ಹರಲ್ಲ ಎನ್ನುತ್ತಾರೆ.

ಕರ್ಕ

ಕರ್ಕ

ಇವರು ಅಕ್ಕರೆ ಮತ್ತು ಪೋಷಣೆಯ ಪ್ರವೃತ್ತಿಯನ್ನು ಹೊಂದಿದವರಾಗಿರುತ್ತಾರೆ. ಇವರು ಅತ್ಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಅಂಜುಬುರುಕು ಗುಣವನ್ನು ಹೊಂದಿರುವ ಇವರು ಸುಲಭವಾಗಿ ಮನನೊಂದುಕೊಳ್ಳುತ್ತಾರೆ.

ಸಿಂಹ

ಸಿಂಹ

ಇವರು ಆಕರ್ಷಕ ಮತ್ತು ಪ್ರೀತಿ ಪಾತ್ರರಾಗಿರುತ್ತಾರೆ. ಇವರು ತಮ್ಮನ್ನು ತಾವು ಹೆಚ್ಚು ಪ್ರೀತಿಸುತ್ತಾರೆ. ಇವರು ಎಲ್ಲಾ ಸಂದರ್ಭದಲ್ಲೂ ಹೆಚ್ಚು ಆಕರ್ಷಣೆಯಿಂದ ಕೂಡಿರಬೇಕು ಎಂದು ಭಾವಿಸುತ್ತಾರೆ. ಕೆಲವೊಮ್ಮೆ ತಮ್ಮ ಭಾವನೆಯನ್ನು ಮರೆಮಾಚುವ ಪ್ರಯತ್ನವನ್ನೂ ಮಾಡುತ್ತಾರೆ.

ಕನ್ಯಾ

ಕನ್ಯಾ

ಇವರು ವಾದ ಮಾಡುವುದರಲ್ಲಿ ಪ್ರವೀಣರಾಗಿರುತ್ತಾರೆ. ವಿವೇಕವನ್ನು ಹೊಂದಿರುವ ವ್ಯಕ್ತಿಗಳು ಎನಿಸಿಕೊಳ್ಳುವರು. ಜೀವನದಲ್ಲಿ ಅಸಾಧ್ಯ ಎನ್ನುವುದನ್ನು ಸಾಧಿಸಬೇಕು ಅಥವಾ ಪಡೆಯಬೇಕು ಎನ್ನುವ ಹಂಬಲವನ್ನು ಹೊಂದಿರುತ್ತಾರೆ.

ತುಲಾ

ತುಲಾ

ಇವರು ತಮ್ಮದೇ ಆದ ವಿಶೇಷ ಮೌಲ್ಯವನ್ನು ಹೊಂದಿರುತ್ತಾರೆ. ತಮ್ಮ ಆಕರ್ಷಕ ಸೌಂದರ್ಯದಿಂದ ಇತರರನ್ನು ಆಕರ್ಷಿಸುತ್ತಾರೆ. ಇವರು ಇತರರ ಬದ್ಧತೆಗೆ ಹಾಗೂ ಭರವಸೆ ಉಳಿಸಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ.

 ವೃಶ್ಚಿಕ

ವೃಶ್ಚಿಕ

ಇವರು ಭಾವೋದ್ರಿಕ್ತರಾಗಿರುತ್ತಾರೆ. ಮಾನಸಿಕವಾಗಿ ಉದ್ವಿಘ್ನತೆಗೆ ಒಳಗಾಗಿರುವಾಗ ಕೆಟ್ಟ ವ್ಯಕ್ತಿಗಳಾಗಿ ವರ್ತಿಸಬಹುದು. ಇಷ್ಟ ಪಡದ ವಸ್ತುಗಳಿಗೆ ಅಥವಾ ಸಂಗತಿಗಳಿಗೆ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ.

 ಧನು

ಧನು

ಇವರು ಮೊಂಡು ತನದ ವ್ಯಕ್ತಿಗಳು ಎನ್ನುವುದಕ್ಕೆ ಹೆಸರುವಾಸಿಯಾಗಿರುತ್ತಾರೆ. ಇವರಲ್ಲಿ ಅನೇಕ ಉತ್ತಮ ಗುಣಗಳಿವೆ. ಸ್ವಯಂ ನೀತಿವಂತರಾದ ಇವರು ಕೆಲವು ವಿಚಾರ ಮತ್ತು ವ್ಯಕ್ತಿಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇತರ ವ್ಯಕ್ತಿ ಅಥವಾ ಮೂರನೇ ವ್ಯಕ್ತಿಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.

ಮಕರ

ಮಕರ

ಇವರು ಉತ್ತಮ ನಿಯಂತ್ರಕ ಗುಣವನ್ನು ಹೊಂದಿದ್ದಾರೆ. ಯಾವುದೇ ತೂರಿಕೆಯೊಂದಿಗೆ ಹೋಗುವುದಿಲ್ಲ. ಇವರು ಜನರ ಉಪಯೋಗಗಳಿಗೆ ಸ್ಪಂದಿಸುತ್ತಾರೆ. ಕೆಲವೊಮ್ಮೆ ಗಾಸಿಪ್‍ಗಳಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಇವರು ಇತರರ ಬಗ್ಗೆ ಅತಿಯಾದ ನಕಾರಾತ್ಮಕ ಚಿಂತನೆ ನಡೆಸುವುದಿಲ್ಲ. ಸ್ವಂತ ಲಾಭಕ್ಕೆ ಇತರರನ್ನು ಬಳಸಿಕೊಳ್ಳುವುದಿಲ್ಲ.

ಕುಂಭ

ಕುಂಭ

ಈ ರಾಶಿಯವರು ತಾರ್ಕಿಕವಾದ ಗುಣವನ್ನು ಹೊಂದಿರುತ್ತಾರೆ. ಇವರು ಇತರರನ್ನು ಸೂಕ್ತ ರೀತಿಯಲ್ಲಿ ನಿರ್ಣಯಿಸುತ್ತಾರೆ. ಉತ್ತಮ ಸಲಹೆಗಾರರೂ ಹೌದು ಎನ್ನಬಹುದು. ಹೆಚ್ಚು ಮಾತನಾಡದ ಇವರು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಸಾಧನೆಯನ್ನು ಮಾಡುತ್ತಾರೆ. ಇತರರಿಗೂ ಸಹಾಯಕರಾಗಿ ನಿಲ್ಲುತ್ತಾರೆ.

ಮೀನ

ಮೀನ

ಇವರು ಕೆಲವು ನಿರ್ದೇಶನಗಳನ್ನು ಹೊಂದಿರುತ್ತಾರೆ. ಆಕಸ್ಮಿಕವಾಗಿ ಬರುವ ಸನ್ನಿವೇಶಗಳನ್ನು ಸುಂದರವಾಗಿ ನಿಭಾಯಿಸಬಲ್ಲರು. ಇವರು ಬಂದ ಅವಕಾಶಗಳೊಂದಿಗೆ ತೂರಿಕೊಳ್ಳುವುದರಲ್ಲಿ ಹೆಚ್ಚು ಸಂತೋಷ ಪಡುತ್ತಾರೆ.

English summary

The dark side each zodiac-sign

We all have both positive and negative traits in our personality. These traits define our personality and they are way much related to our zodiac signs. Here, in this article, we are sharing the dark side of each zodiac sign. These are the traits that help us understand our own flaws and weaknesses and help us become a better person. We cannot ignore the dark side of ourselves because it is a part of what makes us what we actually are! Instead we need to accept, understand and use it to help us in achieving our goals! Check out the dark side of your zodiac sign...
Story first published: Wednesday, January 17, 2018, 23:37 [IST]