Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
ಈ ಆರು ರಾಶಿಚಕ್ರದವರು ಪ್ರೀತಿಗೆ ಮೊದಲ ಆದ್ಯತೆ ನೀಡುತ್ತಾರೆ
ಪ್ರೀತಿಯಲ್ಲಿ ಮುಳುಗಿದವರಿಗೆ ಪ್ರಪಂಚದ ಅರಿವೇ ಇರುವುದಿಲ್ಲ ಎಂದು ಹೇಳುತ್ತಾರೆ. ಅಂದರೆ ಅವರ ಮನಸ್ಸು ಕೇವಲ ಪ್ರೀತಿಯನ್ನು ಬಯಸುವುದು ಹಾಗೂ ಪ್ರೀತಿಯನ್ನು ನೀಡುವ ಕೆಲಸಗಳನ್ನು ಮಾತ್ರ ಮಾಡುತ್ತಿರುತ್ತದೆ ಎಂದರ್ಥ. ವ್ಯಕ್ತಿ ಜೀವನದಲ್ಲಿ ಒಂದು ಸಾಧನೆ ಮಾಡಬೇಕು ಎಂದರೆ ಅವನಿಗೆ ಪ್ರೀತಿಯ ಒಂದು ಸೆಲೆ ಇರಬೇಕು. ಅವನ ಸಾಧನೆಗೆ ಕಾರಣವಾಗುವ ವಿಷಗಳನ್ನು ಹೆಚ್ಚು ಪ್ರೀತಿಸುತ್ತಿರಬೇಕು. ಆಗಲೇ ಅವನ ಕನಸುಗಳೆಲ್ಲವೂ ನನಸಾಗುವುದು. ಪ್ರೀತಿ ಎನ್ನುವದು ಅಸಂಖ್ಯಾತ ಭಾವನೆಗಳನ್ನು ಒಳಗೊಂಡಿರುತ್ತದೆ.
ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯದ ಸಂವೇದನೆಯ ಆಧಾರದ ಮೇಲೆಯೇ ಪ್ರೀತಿಯ ಆಳವಿರುತ್ತದೆ. ಪ್ರೀತಿ ಎನ್ನುವುದು ವಿಭಿನ್ನವಾದ ಭಾವನೆಯನ್ನು ಹಾಗೂ ಸಂತೋಷವನ್ನು ನೀಡುವುದು ಎನ್ನುವುದು ಎಲ್ಲರೂ ಬಲ್ಲರು. ಈ ಒಂದು ಸುಂದರ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವುದು ಒಂದು ಅದ್ಭುತವಾದ ಅನುಭವ ಆಗುವುದು. ಪ್ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಸಂಬಂಧವನ್ನು ಬೆಸೆಯುತ್ತ ಸಾರ್ಥಕ ಜೀವನ ಎನ್ನುವ ಭಾವನೆಯನ್ನು ನೀಡುತ್ತದೆ.
ವ್ಯಕ್ತಿಗೆ ಆಸ್ತಿ, ಅಧಿಕಾರ, ಐಶ್ವರ್ಯ ಎನ್ನುವಂತಹ ಶ್ರೇಷ್ಠ ಚಿಂತನೆಗಳಿಗಿಂತ ಎತ್ತರದ ಸ್ಥಾನದಲ್ಲಿ ಪ್ರೀತಿ ಎನ್ನುವುದು ನಿಲ್ಲುತ್ತದೆ. ಹಾಗಾಗಿಯೇ ವ್ಯಕ್ತಿ ಪ್ರೀತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಜೀವನದಲ್ಲಿ ಒಮ್ಮೆ ನಾವು ಬಯಸಿದ ಪ್ರೀತಿ ದೊರೆಯಿತು ಎಂದರೆ ಬದುಕು ಸುಗಮವಾಗುವದು. ಅಲ್ಲದೆ ಅಂದುಕೊಂಡ ಯೋಜನೆಗಳಿಗೆ ಮುಂದಾಗಬಹುದು ಎಂದು ಭಾವಿಸುವುದು ಸಹಜ. ಕೆಲವು ವ್ಯಕ್ತಿಗಳು ಪ್ರೀತಿಗಾಗಿ ಸಾಕಷ್ಟು ಕಷ್ಟಪಡುವುದನ್ನು ನೋಡಬಹು. ಅಂತೆಯೇ ಕೆಲವರು ಪ್ರೀತಿಯ ಹೆಸರಿನಲ್ಲಿ ಮೋಸ ಹಾಗೂ ನೋವನ್ನು ಸಹ ನೀಡುವರು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ತಮ್ಮ ಭಾವನೆಗಳ ಮೇಲೆ ಸಾಕಷ್ಟು ಭರವಸೆಯನ್ನು ಹೊಂದಿರುತ್ತಾರೆ. ಭಾವನೆಗೆ ಸ್ಪಂದಿಸುವ ಪ್ರೀತಿ ಹಾಗೂ ಪ್ರೀತಿಯನ್ನು ನೀಡುವ ಜೀವಕ್ಕೆ ವಿಶೇಷ ಸ್ಥಾನವನ್ನು ನೀಡುವರು. ಅಲ್ಲದೆ ತಮ್ಮ ಜೀವನದಲ್ಲಿ ಪ್ರೀತಿಯ ಹೊರತಾಗಿ ಬೇರೆ ಯಾವುದೇ ವಿಚಾರವು ಶ್ರೇಷ್ಠವಾದದ್ದು ಎಂದು ಚಿಂತಿಸುವುದೇ ಇಲ್ಲ. ಅವರ ದೃಷ್ಟಿಯಲ್ಲಿ ಪ್ರೀತಿಯ ಜೀವನವೇ ಮಹತ್ತರವಾದದ್ದಾಗಿರುತ್ತದೆ. ಇವರು ತಮ್ಮ ವೃತ್ತಿ, ಆಸ್ತಿ ಅಥವಾ ಇನ್ಯಾವುದೋ ಕೆಲಸ ಕಾರ್ಯಗಳಿಗಿಂತ ಪ್ರೀತಿ, ಸಂಗಾತಿ ಹಾಗೂ ಕುಟುಂಬದ ವಿಷಯಗಳಿಗೆ ಹೆಚ್ಚಿನ ಮಹತ್ವ ಹಾಗೂ ಆಸಕ್ತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು.
ಇಂತಹ ಗುಣಗಳನ್ನು ಹೊಂದಿರುವ ರಾಶಿಚಕ್ರಗಳು ಯಾವವು? ಅವುಗಳ ಉದ್ದೇಶ ಏನು? ಅವರ ದೃಷ್ಟಿಯಲ್ಲಿ ಪ್ರೀತಿ ಎನ್ನುವುದು ಯಾವ ಸ್ಥಾನದಲ್ಲಿ ನಿಂತಿರುತ್ತದೆ? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಅರಿಯಿರಿ....

ಕರ್ಕ
ಕರ್ಕ ರಾಶಿಯ ವ್ಯಕ್ತಿಗಳಿಗೆ ಪ್ರೀತಿ ಎನ್ನುವುದು ಬಹಳ ಮಹತ್ವವಾದದ್ದು. ಅವರ ದೃಷ್ಟಿಯಲ್ಲಿ ವ್ಯಕ್ತಿಯ ಎಲ್ಲಾ ಕೆಲಸ ಕಾರ್ಯಗಳಿಗೂ ಹುಮ್ಮಸ್ಸು ಹಾಗೂ ಸಹಕಾರ ನೀಡುವುದು ಪ್ರೀತಿ ಎಂದು ಭಾವಿಸುತ್ತಾರೆ. ಇವರು ಈ ನಿಟ್ಟಿನಲ್ಲಿಯೇ ತಮ್ಮ ಪ್ರೀತಿಪಾತ್ರರನ್ನು ಹಾಗೂ ಪಾಲುದಾರರನ್ನು ಬಹಳ ಪ್ರೀತಿ ಹಾಗೂ ಗೌರವದಿಂದ ಕಾಣುತ್ತಾರೆ. ಅಲ್ಲದೆ ತಮ್ಮ ಮುಗ್ಧವಾದ ಪ್ರೀತಿಯನ್ನು ತೋರುವುದರ ಮೂಲಕ ಕಾಳಜಿಯನ್ನು ವಹಿಸುತ್ತಾರೆ.

ಕರ್ಕ
ಇವರು ಯಾರನ್ನಾದರೂ ಪ್ರೀತಿಸುತ್ತಾರೆ ಎಂದಾದರೆ ಅವರಿಗಾಗಿ ಸರ್ವಸ್ವವನ್ನು ನೀಡಲು ಸಿದ್ಧರಾಗಿರುತ್ತಾರೆ. ಅವರಿಗಾಗಿ ತೋರುವ ಸಣ್ಣ ಪುಟ್ಟ ಕಾಳಜಿ ಹಾಗೂ ಪ್ರೀತಿಯಲ್ಲಿಯೂ ಹೆಚ್ಚಿನ ಸಂತೋಷವನ್ನು ಕಾಣುತ್ತಾರೆ. ಜೊತೆಗೆ ತಾವೂ ಸಹ ಆ ಪ್ರೀತಿಯನ್ನು ಮನಃಪೂರ್ವಕವಾಗಿ ಆನಂದಿಸುವರು. ಇವರು ಒಟ್ಟಿನಲ್ಲಿ ಪ್ರೀತಿಯ ಕನ್ನಡಿಯ ಮೂಲಕವೇ ಜಗತ್ತನ್ನು ನೋಡುತ್ತಾರೆ ಎಂದು ಸಹ ಹೇಳಬಹುದು. ನಿಮಗೇನಾದರೂ ಕರ್ಕ ರಾಶಿಯವರು "ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಹೇಳುತ್ತಾರೆ ಎಂದರೆ ನಿಮ್ಮನ್ನು ಅತ್ಯಂತ ಸಂತೋಷದಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ತಿಳಿಯಬಹುದು.

ಮೀನ
ಮೀನ ರಾಶೀಯ ವ್ಯಕ್ತಿಗಳು ಕೇವಲ ತಮ್ಮ ಪ್ರೀತಿಯನ್ನಷ್ಟೇ ಅಲ್ಲ, ತಾವು ಪ್ರೀತಿಸುವ ವ್ಯಕ್ತಿಗಳಿಗೂ ಸಹ ಹೆಚ್ಚಿನ ಗೌರವ ಆದರವನ್ನು ನೀಡುತ್ತಾರೆ. ತಮ್ಮ ಪ್ರೀತಿಪಾತ್ರರಿಗಾಗಿ ಹೆಚ್ಚಿನ ಸಮಯವನ್ನು ನೀಡಲು ಬಯಸುತ್ತಾರೆ. ಅವರ ಸಂತೋಷಕ್ಕಾಗಿಯೇ ಇವರ ಕೆಲಸ ಕಾರ್ಯಗಳು ನಡೆಯುವುದು ಎಂದು ಹೇಳಲಾಗುವುದು. ತಮ್ಮ ಪಾಲುದಾರರೊಂದಿಗೆ ತಮ್ಮ ಗುಣಮಟ್ಟದ ಸಮಯವನ್ನು ಕಳೆಯುವುದರ ಮೂಲಕ ಜೀವನದ ಸಂತೋಷವನ್ನು ಪಡೆದುಕೊಳ್ಳುವರು. ತಮ್ಮ ಭಾವನೆಗಳ ಆಧಾರದ ಮೇಲೇಯೇ ನಿತ್ಯದ ಜೀವನವನ್ನು ದೂಡುವರು.

ಮೀನ
ಬಹುತೇಕ ಸಂದರ್ಭದಲ್ಲಿ ಕಲ್ಪನೆಯ ಲೋಕದಲ್ಲಿಯೇ ಜೀವನವನ್ನು ನಡೆಸುವ ಇವರು ಅದರಲ್ಲಿಯೂ ಪ್ರೀತಿಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಇವರಿಗೆ ಎಲ್ಲಾ ವಿಷಯಗಳಿಗಿಂತ ಪ್ರೀತಿಯು ಅತ್ಯಮೂಲ್ಯವಾದ್ದು. ಅದರಿಂದಲೇ ಬದುಕು ಸಂತೋಷವನ್ನು ಕಂಡುಕೊಳ್ಳುವುದು ಎಂದು ಭಾವಿಸುವರು. ಹಾಗಾಗಿ ತಮ್ಮ ಅಗತ್ಯತೆಗಳನ್ನು ಸಹ ಪಕ್ಕಕ್ಕೆ ಇರಿಸಿ ನಿಸ್ವಾರ್ಥದ ಪ್ರೀತಿಯನ್ನು ಬೆಳಗುವರು. ಜೊತೆಗೆ ತಮ್ಮ ಸಂಗಾತಿಯನ್ನು ಸದಾ ಸಂತೋಷವಾಗಿರುವಂತೆ ನೋಡಿಕೊಳ್ಳುವರು ಎಂದು ಹೇಳಲಾಗುವುದು.

ತುಲಾ
ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಎಲ್ಲಾ ಸಂಗತಿಗಳಲ್ಲೂ ಸಮಾನತೆಯನ್ನು ಸಾಧಿಸಲು ಬಯಸುವರು. ಇವರು ತಮ್ಮ ಸಂಬಂಧಗಳನ್ನು ನಿರಂತರವಾಗಿ ಪೋಷಿಸುವುದರಿಂದಲೇ ಪ್ರೀತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವರು. ಜೀವನದಲ್ಲಿ ಎಲ್ಲಾ ವಸ್ತು ವಿಷಯಗಳಿಗಿಂತ ಹೆಚ್ಚಿನ ಸಂತೋಷ ಹಾಗೂ ಮಾನಸಿಕ ನೆಮ್ಮದಿಯನ್ನು ಪ್ರೀತಿ ನೀಡುವುದು ಎಂದು ಭಾವಿಸುವರು. ಹಾಗಾಗಿಯೇ ಇವರು ತಮ್ಮ ಸಂಗಾತಿ ಹಾಗೂ ಕುಟುಂಬಕ್ಕಾಗಿ ಸಾಕಷ್ಟು ತ್ಯಾಗ ಮತ್ತು ಪ್ರೀತಿಯನ್ನು ನೀಡುವರು.

ತುಲಾ
ತಮ್ಮ ಪಾಲುದಾರರಿಗೆ ನೀಡುವ ಪ್ರೀತಿಯ ಪರಿಯು ಪುಸ್ತಕ ಹಾಗೂ ಸಿನಿಮಾಗಳ ರೂಪದಲ್ಲಿ ನೀಡುವಂತೆಯೇ ಇರುತ್ತವೆ ಎಂದು ಹೇಳಲಾಗುವುದು. ಬಹಳ ಪ್ರಣಯ ಪ್ರಿಯರು ಆಗಿರುವುದರಿಂದ ವಿನೋದ ನೀಡುವುದರ ಮೂಲಕ ಜೀವನವನ್ನು ಸುಂದರಗೊಳಿಸುವರು. ಜೊತೆಗೆ ಪ್ರತಿಯೊಬ್ಬರಿಗೂ ಉತ್ತಮ ಪ್ರೀತಿಯನ್ನು ನೀಡುವರು. ಇವರು ಬಹುತೇಕ ಸಂದರ್ಭದಲ್ಲೂ ಕೊಂಚ ಪ್ರೀತಿಯನ್ನು ನೀಡುವುದರ ಮೂಲಕ ಮಹತ್ತರವಾದ ಕೆಲಸವನ್ನು ನಿರ್ವಹಿಸಬಹುದು ಎಂದು ಭಾವಿಸುವರು.

ವೃಶ್ಚಿಕ
ಈ ರಾಶಿಚಕ್ರದ ಜನರು ತಾವು ಪ್ರೀತಿಸುವ ವ್ಯಕ್ತಿಗಳಿಗೆ ಅತ್ಯುತ್ತಮ ರೀತಿಯ ಪ್ರೀತಿಯನ್ನು ನೀಡುವರು. ಜೊತೆಗೆ ಅವರಿಂದಲೂ ಅದೇ ರೀತಿಯ ಉತ್ತಮ ಪ್ರೀತಿಯನ್ನು ಬಯಸುತ್ತಾರೆ. ಅವರಿಗಾಗಿ ತಮ್ಮ ಎಲ್ಲಾ ಸಂಗತಿಗಳನ್ನು ನೀಡಲು ಹಾಗೂ ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ ಎಂದು ಹೇಳಲಾಗುವುದು. ಬಹುತೇಕ ಸಮಯದಲ್ಲಿಯೂ ತಮ್ಮ ಕೆಲಸ ಕಾರ್ಯಗಳ ಕುರಿತಾಗಿಯೇ ಹೆಚ್ಚಿನ ಚಿಂತನೆ ನಡೆಸುತ್ತಾರೆಯಾದರೂ ಅದರೊಟ್ಟಿಗೆ ಪ್ರತಿ ಕ್ಷಣವೂ ಮನಸ್ಸು ತಮ್ಮ ಪ್ರೀತಿಗಾಗಿ ಹಂಬಲಿಸುವುದು. ಹಾಗೂ ರಕ್ಷಣೆಯ ಕೆಲಸಕ್ಕಾಗಿ ಹಾತೊರೆಯುತ್ತಿರುತ್ತವೆ ಎಂದು ಹೇಳಲಾಗುವುದು.

ವೃಶ್ಚಿಕ
ತಮ್ಮ ಪ್ರೀತಪಾತ್ರರಿಗೆ ಅಥವಾ ಸಂಗಾತಿಗಾಗಿಯೇ ಜೀವನವನ್ನು ಮೀಸಲಾಗಿಡುವರು. ಜೊತೆಗೆ ಅವರನ್ನು ಪ್ರಪಂಚದಲ್ಲಿಯೇ ತಮ್ಮಷ್ಟು ಇಷ್ಟಪಡುವವರು ಯಾರೂ ಇಲ್ಲ ಎನ್ನುವ ರೀತಿಯಲ್ಲಿ ಇರಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಪ್ರೀತಿಯ ಬಗ್ಗೆ ಶ್ರೇಷ್ಠ ಸ್ಥಾನವನ್ನು ನೀಡುವರು. ಅವರ ಪ್ರೀತಿಗೆ ಒಲಿದವರು ಹೆಚ್ಚಿನ ಸಂತೋಷ ಮತ್ತು ಪ್ರೀತಿಯನ್ನು ಪಡೆದುಕೊಳ್ಳುವರು ಎಂದು ಹೇಳಲಾಗುವುದು.

ಮೇಷ
ಈ ರಾಶಿಚಕ್ರದ ವ್ಯಕ್ತಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಸಾಕಷ್ಟು ಜನರನ್ನು ಇಷ್ಟಪಡಬಹುದು. ಆದರೆ ಪ್ರೀತಿಸುವ ಒಬ್ಬ ವ್ಯಕ್ತಿಯ ಮೇಲೆ ಭಾವೋದ್ರಿಕ್ತತೆಯು ಶಾಶ್ವತವಾಗಿರುತ್ತದೆ. ಜೊತೆಗೆ ಅವರಿಗಾಗಿ ತೋರುವ ಪ್ರೀತಿಯು ಅತ್ಯುತ್ತವಾಗಿರುತ್ತದೆ. ಆ ಪ್ರೀತಿಗೆ ಪಾರವೇ ಇರುವುದಿಲ್ಲ ಎಂದು ಸಹ ಹೇಳಗಾಗುವುದು. ಇವರು ತಾವು ಪ್ರೀತಿಸುವ ವ್ಯಕ್ತಿಗೆ ಹಾಗೂ ಪ್ರೀತಿಗೆ ಮಹತ್ತರವಾದ ಸ್ಥಾನ ನೀಡುವುದಲ್ಲದೆ ತಮ್ಮ ಎಲ್ಲಾ ಕೆಲಸ ಕಾರ್ಯಗಳು ಹಾಗೂ ಬಯಕೆಗಳಿಗಿಂತ ಹೆಚ್ಚಿನ ಮಹತ್ವ ನೀಡುವರು.

ಮೇಷ
ಇವರು ತಮ್ಮ ಪಾಲುದಾರರ ನೈತಿಕತೆ, ಅಭಿಪ್ರಾಯಗಳು ಹಾಗೂ ತತ್ವಗಳಿಗೆ ಹೆಚ್ಚಿನ ಗೌರವ ಮತ್ತು ಸಮಯವನ್ನು ನೀಡುವರು. ಇವರು ತಮ್ಮ ಸಂಗಾತಿಯೊಂದಿಗೆ ಅಥವಾ ಪಾಲುದಾರರೊಂದಿಗೆ ಜೀವನದ ಎಲ್ಲಾ ಸಂಗತಿಗಳನ್ನು ಹೇಳಿಕೊಳ್ಳಲು ಬಯಸುತ್ತಾರೆ. ಆದರೆ ಪಾಲುದಾರರು ಸಹ ಅವರಂತೆಯೇ ಮಾಡಬೇಕು ಎಂದು ಬಯಸುವುದಿಲ್ಲ. ಅವರನ್ನು ಅವರ ಇಷ್ಟದಂತೆ ಇರಲು ಸ್ವಾತಂತ್ರ್ಯ ಹಾಗೂ ಕಾಳಜಿಯನ್ನು ತೋರುವರು.

ಸಿಂಹ
ಸಿಂಹ ರಾಶಿಯ ವ್ಯಕ್ತಿಗಳು ಪ್ರೀತಿಯ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವರು. ಸಾಮಾಜಿಕ ಚಟುವಟಿಕೆಯಲ್ಲಿ ಹಾಗೂ ಒಂದು ಜನರ ಸಮೂಹದಲ್ಲಿ ಕೇಂದ್ರ ಬಿಂದುವಿನಂತೆ ಇರಬೇಕು ಎಂದು ಬಯಸುತ್ತಾರೆ ಆದರೂ ತಮ್ಮ ಪ್ರೀತಿಯ ವಿಚಾರಕ್ಕೆ ಬಂದಾಗ ಸಾಕಷ್ಟು ತ್ಯಾಗ ಹಾಗೂ ಕೆಲಸಗಳಿಗೂ ಸಿದ್ಧರಾಗಿರುತ್ತಾರೆ ಎನ್ನಲಾಗುವುದು. ಕುಟುಂಬಕ್ಕೆ ಹಾಗೂ ಸಂಗಾತಿಗೆ ಹೆಚ್ಚಿನ ಮಹತ್ವ ಹಾಗೂ ರಕ್ಷಣೆಯನ್ನು ನೀಡುವ ವ್ಯಕ್ತಿಗಳು ಇವರು. ತಮ್ಮವರನ್ನು ಅಥವಾ ತನ್ನ ಪ್ರೀತಿಯ ವ್ಯಕ್ತಿಯನ್ನು ಹೆಚ್ಚು ಸಂತೋಷದಲ್ಲಿ ಇಡಲು ಬಯಸುತ್ತಾರೆ. ಅಲ್ಲದೆ ಸಂಗಾತಿಗಾಗಿ ಸಾಕಷ್ಟು ಸ್ವಾತಂತ್ರ್ಯ ಹಾಗೂ ಪ್ರಶಂಸೆಯನ್ನು ನೀಡುವರು.

ಸಿಂಹ
ಪ್ರೀತಿಯೇ ವ್ಯಕ್ತಿಯನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುವುದು ಎಂದು ಭಾವಿಸುವರು ಇವರು. ತಮ್ಮ ಸಂಗಾತಿಯೊಂದಿಗೆ ಸದಾ ಪರಿಪೂರ್ನ ವ್ಯಕ್ತಿಯಂತೆ ಇರಬೇಕು ಎಂದು ಬಯಸುವರು. ತಮ್ಮ ಭಾವನೆಗಳಿಗೆ ಎಷ್ಟು ಭಾವನೆ ನೀಡುವರೋ ಅಷ್ಟೇ ಮಹತ್ವ ಹಾಗೂ ಸ್ವಾತಂತ್ರ್ಯವನ್ನು ಸಂಗಾತಿಗೆ ನೀಡುವರು. ಜೀವನದಲ್ಲಿ ನಾವು ಉತ್ತಮ ಪ್ರೀತಿಯನ್ನು ನೀಡದಿದ್ದರೆ ಅಥವಾ ತಮ್ಮ ಸಂಗಾತಿಯನ್ನು ಪ್ರೀತಿಸದೆ ಇದ್ದರೆ ಜೀವನದಲ್ಲಿ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ನಂಬಿರುತ್ತಾರೆ. ಸಾಹಸಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಹಾಗೂ ಉತ್ಸಾಹ ತೋರುವಂತೆಯೇ ತಮ್ಮ ಪ್ರೀತಿಯನ್ನು ತೋರುವಲ್ಲಿ ಹಾಗೂ ಪ್ರೀತಿಯಿಂದಲೇ ಕುಟುಂಬವನ್ನು ಸಂವರಕ್ಷಿಸುವಲ್ಲಿ ಸದಾ ಮುಂದಾಗಿರುತ್ತಾರೆ ಎಂದು ಹೇಳಲಾಗುವುದು.



Click it and Unblock the Notifications











