Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಮನೆಯಲ್ಲಿ ಶಾಂತಿ, ನೆಮ್ಮದಿಗಾಗಿ ವಾಸ್ತು ಪ್ರಕಾರ ಅಡುಗೆ ಮನೆ ಹೀಗಿರಬೇಕು
ವಾಸ್ತು ಎನ್ನುವುದು ಧಾರ್ಮಿಕ ವಿಚಾರದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಪರಿಸರದಲ್ಲಿ ಹೊರ ಹೊಮ್ಮುವ ಶಕ್ತಿಗಳ ಸಮತೋಲನವನ್ನು ವಾಸ್ತು ಕಾಪಾಡುತ್ತದೆ ಎನ್ನಲಾಗುವುದು. ಹಾಗಾಗಿ ಮನೆ ಹಾಗೂ ಕಚೇರಿಯ ನಿರ್ಮಾಣದಲ್ಲಿ ಸೂಕ್ತ ರೀತಿಯ ವಾಸ್ತುವನ್ನು ಅನುಸರಿಸಬೇಕು. ಇಲ್ಲವಾದರೆ ಮನೆಯಲ್ಲಿ ಕಿರಿಕಿರಿ, ಜಗಳ, ನಷ್ಟ, ನೋವು, ಅಭಿವೃದ್ಧಿ ಆಗದೆ ಇರುವುದು ಹೀಗೆ ಅನೇಕ ತೊಂದರೆಗಳು ತಲೆದೂರುತ್ತವೆ ಎಂದು ಹೇಳಲಾಗುವುದು.
ಪರಿಸರದಲ್ಲಿ ಹೊರ ಸೂಸುವ ಶಕ್ತಿಯು ನಮ್ಮ ಮನಃಸ್ಥಿತಿಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ನಮ್ಮ ಮನಃಸ್ಥಿತಿಯ ಆಧಾರದ ಮೇಲೆಯೇ ನಮ್ಮ ವರ್ತನೆ ಹಾಗೂ ಕೆಲಸಗಳು ನಿರ್ಣಯವಾಗುವುದು. ಹಾಗಾಗಿ ನಾವು ಆದಷ್ಟು ಸಕಾರಾತ್ಮಕ ಶಕ್ತಿ ನಮ್ಮ ಸುತ್ತಲು ಇರುವಂತೆ ನೋಡಿಕೊಳ್ಳಬೇಕು. ಆಗಲೇ ನಾವು ಅಂದುಕೊಂಡಿರುವುದಕ್ಕಿಂತ ಉತ್ತಮ ಜೀವನ ಹಾಗೂ ಯಶಸ್ಸು ದೊರೆಯುವುದು.
ಮನೆ ಎನ್ನುವುದು ನಮ್ಮ ಪ್ರಪಂಚವಾಗಿರುತ್ತದೆ. ಆ ಪ್ರಪಂಚದಲ್ಲಿ ಅಡುಗೆ ಮನೆ, ಮಲಗುವ ಕೋಣೆ, ದೇವರ ಸ್ಥಾನ ಎಲ್ಲವೂ ಸೂಕ್ತ ರೀತಿಯಲ್ಲಿ ಇರಬೇಕು. ಇಲ್ಲವಾದರೆ ತೊಂದರೆಗಳು ಕಾಣಿಸಿಕೊಳ್ಳುವುದು ಸಹಜ. ಮನೆಯ ವಾಸ್ತು ಸೂಕ್ತ ರೀತಿಯಲ್ಲಿದ್ದರೆ ಕುಟುಂಬದ ಸದಸ್ಯರೆಲ್ಲರೂ ಉತ್ತಮ ಅಭಿವೃದ್ಧಿ ಹೊಂದುವರು. ಪರಸ್ಪರ ವ್ಯಕ್ತಿಗಳ ನಡುವೆ ಪ್ರೀತಿ ವಿಶ್ವಾಸ ಇರುವುದು. ನೀವು ಮನೆಯ ನಿರ್ಮಾಣದಲ್ಲಿ ಇದ್ದೀರಿ ಅಥವಾ ವಾಸ್ತು ಬಗ್ಗೆ ಒಂದಿಷ್ಟು ಮಾಹಿತಿಯನ್ನು ಅರಿಯಬೇಕು ಎನ್ನುವ ಹಂಬಲದಲ್ಲಿ ಇದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಅಡುಗೆ ಮನೆಯ ವಾಸ್ತು
ಸಕಾರಾತ್ಮಕ ಶಕ್ತಿಯ ಹರಿವನ್ನು ಪಡೆದುಕೊಳ್ಳಲು ಅಡುಗೆ ಮನೆಯು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಇದು ಈಶಾನ್ಯದಿಕ್ಕಿನಲ್ಲಿ ಇದ್ದರೆ ನಕಾರಾತ್ಮಕ ಶಕ್ತಿಯ ಹರಿವನ್ನು ಉಂಟುಮಾಡುತ್ತದೆ. ನೈಋತ್ಯ ದಿಕ್ಕಿನಲ್ಲಿ ಇದ್ದರೆ ಕುಟುಂಬದ ಸದಸ್ಯರ ನಡುವೆ ಜಗಳ ಮತ್ತು ಭಿನ್ನಾಭಿಪ್ರಾಯಗಳಿಗೆ ಕಾರಣವಾಗುವುದು. ವಾಯುವ್ಯ ದಿಕ್ಕಿನಲ್ಲಿ ಇದ್ದರೆ ಹಲವಾರು ವೆಚ್ಛಗಳಿಗೆ ಕಾರಣವಾಗಬಹುದು. ಉತ್ತರ ದಿಕ್ಕಿನಲ್ಲಿ ಇದ್ದರೆ ಅನಿರೀಕ್ಷಿತ ಮತ್ತು ಅನಿಯಂತ್ರಿತ ಖರ್ಚುಗಳು ಉಂಟಾಗುವುದು. ಹಾಗಾಗಿ ಅಡುಗೆ ಮನೆಗೆ ಸೂಕ್ತವಾದ ದಿಕ್ಕು ಎಂದರೆ ಆಗ್ನೇಯ ದಿಕ್ಕು ಎನ್ನಲಾಗುವುದು. ಇನ್ನು ನಿಮ್ಮ ಅಡುಗೆ ಮನೆ ನಿರ್ಮಾಣದ ಮೊದಲು ನೀವು ಪರಿಗಣಿಸಬೇಕಾದ ಮೊದಲ ಮತ್ತು ಅಗ್ರಗಣ್ಯ ವಿಷಯವಾಗಿರುವುದು ನೀವು ಆಯ್ಕೆಮಾಡಿರುವ ಸ್ಥಳವಾಗಿದೆ. ನಿಮ್ಮ ನಿವಾಸದ ಆಗ್ನೇಯ ಮೂಲೆಯಲ್ಲಿ ನಿಮ್ಮ ಅಡಿಗೆ ಇರಬೇಕು. ಏಕೆಂದರೆ ಬೆಂಕಿಯ ಅಂಶವು ಆಗ್ನೇಯ ದಿಕ್ಕನ್ನು ನಿಯಂತ್ರಿಸುತ್ತದೆ ಮತ್ತು ಹೀಗಾಗಿ, ಈ ದಿಕ್ಕು ನಿಮ್ಮ ಅಡುಗೆಮನೆಗೆ ಪರಿಪೂರ್ಣವಾಗಿದೆ.

ಶೌಚಾಲಯ ಮತ್ತು ಅಡುಗೆ ಮನೆ
ಅಡುಗೆ ಮನೆಯ ಮೇಲ್ಭಾಗದಲ್ಲಿ ಮತ್ತು ಅಡುಗೆ ಮನೆಯ ಒಳ ಭಾಗದಲ್ಲಿಯೇ ಶೌಚಾಲಯ ಇರಬಾರದು. ಇದು ಆಹಾರದಲ್ಲಿ ಋಣಾತ್ಮಕತೆ ಹಾಗೂ ಅಶುದ್ಧತೆಯನ್ನು ತರುತ್ತದೆ. ದೇವರ ಮನೆಯ ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿ ಇದ್ದರೂ ಅದು ಸಹ ದುಃಖಕರವಾದ ಸಂಗತಿ ಎಂದು ಪರಿಗಣಿಸಲಾಗುವುದು. ಅಡುಗೆ ಮನೆಯು ಮಲಗುವ ಕೋಣೆಯ ಮೇಲೆ ಅಥವಾ ಕೆಳಭಾಗದಲ್ಲಿ ಇರಬಾರದು.

ಗೋಡೆಯ ಬಣ್ಣ
ಅಡುಗೆ ಕೋಣೆಗೆ ಕಪ್ಪು ಬಣ್ಣವನ್ನು ಬಳಸಬಾರದು. ಹಳದಿ, ಕಿತ್ತಳೆ, ಗುಲಾಬಿ, ಚಾಕೊಲೇಟ್ ಅಥವಾ ಕೆಂಪು ಬಣ್ಣಗಳನ್ನು ಬಳಸಬಹುದು.

ಅಡುಗೆ ತಯಾರಿಸುವ ವಿಧಾನ
ಅಡುಗೆ ಮನೆಯಲ್ಲಿ ಅಡುಗೆಯನ್ನು ಬೇಯಿಸುವುದು ದಕ್ಷಿಣ ದಿಕ್ಕಿನಲ್ಲಿ ಇರಬಾರದು. ಇದು ವಿತ್ತೀಯ ನಷ್ಟಗಳಿಗೆ ಕಾರಣವಾಗುತ್ತದೆ. ಪಶ್ಚಿಮ ದಿಕ್ಕಿಗೆ ಅಡುಗೆ ಬೇಯಿಸುವುದು ಸಹ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು. ಇಲ್ಲವೆ ಕುಟುಂಬದ ಇತರ ಸದಸ್ಯರಿಗೆ ತೊಂದರೆ ಉಂಟಾಗಬಹುದು. ಹಾಗಾಗಿ ಪೂರ್ವ ದಿಕ್ಕಿನಲ್ಲಿ ಅಡುಗೆಯನ್ನು ಮಾಡುವಂತೆ ಇರಿಸಬೇಕು.

ಅಡುಗೆ ಮನೆಯ ಬಾಗಿಲು
ಅಡುಗೆ ಮನೆಯ ಬಾಗಿಲು ಈಶಾನ್ಯ ಅಥವಾ ಪಶ್ಚಿಮ ಗೋಡೆಯಲ್ಲಿ ಇರಬೇಕು. ಯಾವುದೇ ಒಂದು ಮೂಲೆಯಲ್ಲಿ ಇರಬಾರದು.

ಫ್ರಿಜ್ ಇರಿಸುವುದು
ರೆಫ್ರಿಜರೇಟರ್/ಫ್ರಿಜ್‍ಅನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟುಕೊಳ್ಳಬಾರದು. ಇದನ್ನು ಆಗ್ನೇಯ, ನೈಋತ್ಯ ಮತ್ತು ಉತ್ತರ ದಿಕ್ಕಿನಲ್ಲಿ ಇರಿಸಬಹುದು. ಹೌದು, ಹೆಚ್ಚಾಗಿ ಹೆಚ್ಚಾಗಿ ಇದನ್ನು ಅಡುಗೆ ಮನೆಯಲ್ಲಿ ಇರಿಸುತ್ತಾರೆ. ಅಡುಗೆ ಮನೆ ಚಿಕ್ಕದಾಗಿದ್ದರೆ ಮಾತ್ರ ಇತರ ಸ್ಥಳದಲ್ಲಿ ಫ್ರಿಡ್ಜ್ ಅನ್ನು ಇರಿಸುತ್ತಾರೆ. ಅಡುಗೆ ಮನೆಯಲ್ಲಿ ನೀವು ಫ್ರಿಡ್ಜ್ ಅನ್ನು ಇರಿಸುತ್ತೀರಿ ಎಂದಾದಲ್ಲಿ ಅದನ್ನು ನೈರುತ್ಯ ಭಾಗದಲ್ಲಿ ಇರಿಸಿಕೊಳ್ಳಿ. ಕನಿಷ್ಠ ಒಂದು ಅಡಿ ದೂರದ ಅಂತರವಿರಲಿ.

ಗ್ಯಾಸ್ ಬರ್ನರ್/ ಸ್ಟೋವ್
ಗ್ಯಾಸ್ ಬರ್ನರ್/ ಸ್ಟೋವ್ ಅನ್ನು ಪ್ರವೇಶದ್ವಾರದಲ್ಲಿ ಇರಿಸಬಾರದು. ಇದನ್ನು ಅಡುಗೆಮನೆಯ ದಕ್ಷಿಣ, ಪೂರ್ವ ದಿಕ್ಕಿನಲ್ಲಿ ಇರಿಸಬಹುದು. ಗೋಡೆಯಿಂದ ಕೆಲವು ಇಂಚುಗಳಷ್ಟು ದೂರದಲ್ಲಿ ಇರಬೇಕು. ಇನ್ನು ಗ್ಯಾಸ್ ಸ್ಟವ್ ಅನ್ನು ಅಗ್ನೇಯ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು. ನೀವು ಅಡುಗೆ ಮಾಡುವಾಗ ನೀವು ನಿಂತಿರುವ ಸ್ಥಳ ಪೂರ್ವಕ್ಕೆ ವಿರುದ್ಧವಾಗಿರಬೇಕು. ನಿಮ್ಮ ಬಾತ್‌ರೂಮ್ ಅಥವಾ ಶೌಚದ ಬಾಗಿಲುಗಳು ನಿಮ್ಮ ಅಡುಗೆ ಮನೆಯನ್ನು ಸ್ಪರ್ಶಿಸುವಂತಿರಬಾರದು. ಅಂತೆಯೇ ನಿಮ್ಮ ಸ್ನಾನಗೃಹಗಳು ನಿಮ್ಮ ಅಡುಗೆ ಮನೆಯ ಗೋಡೆಯನ್ನು ಸ್ಪರ್ಶಿಸುವಂತಿರಬಾರದು. ನಿಮ್ಮ ಬಾತ್‌ರೂಮ್ ಅಥವಾ ಶೌಚಾಲಯವನ್ನು ನಿಮ್ಮ ಅಡುಗೆ ಮನೆಯಿಂದ ದೂರವಾಗಿರಿಸಿಕೊಳ್ಳಿ.

ವಾಸ್ತುಶಾಸ್ತ್ರದ ಪ್ರಕಾರ ಅಡುಗೆಮನೆ ಹೀಗಿರಬೇಕು
*ಮನೆಯ ಆಗ್ನೇಯ ಭಾಗದಲ್ಲಿ ಅಡುಗೆ ಮನೆಯಿರಬೇಕು
*ಅಡುಗೆ ಮನೆಯು ದೇವರ ಮಂದಿರ, ಶೌಚಾಲಯ ಅಥವಾ ಮಲಗುವ ಕೋಣೆಯ ಕೆಳಗಡೆ ಅಥವಾ ಮೇಲೇ ಇರಲೇಬಾರದು.
*ಅಡುಗೆ ಮನೆಯ ಮುಖ್ಯ ಭಾಗವು ಮನೆಯ ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿ ಇರಬೇಕು.
*ಗ್ಯಾಸ್ ಅಥವಾ ಸ್ಟೌವ್ ನ್ನು ಮನೆಯ ಭಾಗದಲ್ಲಿ ಇಡಬೇಕು ಮತ್ತು ಗೋಡೆಗಿಂತ ಕೆಲವು ಇಂಚು ದೂರವಿಡಬೇಕು.
*ಸಿಂಕ್ ಅಥವಾ ವಾಶ್ ಬೇಸಿನ್ ಈಶಾನ್ಯ ಭಾಗದಲ್ಲಿ ಇರಬೇಕು. ಲೋಟಗಳು ಕೂಡ ಇದೇ ಭಾಗದಲ್ಲಿ ಇರಬೇಕು.
*ಸಾಂಬಾರ ಪದಾರ್ಥಗಳು, ಧಾನ್ಯಗಳು ಅಥವಾ ಇತರ ಸಂಗ್ರಹಿತ ಸಾಮಗ್ರಿಗಳು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿರಬೇಕು. *ಅಡುಗೆ ಮನೆಯ ಬಣ್ಣವು ಹಳದಿ, ಕಿತ್ತಳೆ, ಗುಲಾಬಿ, ಚಾಕಲೇಟ್ ಅಥವಾ ಕೆಂಪು ಬಣ್ಣವಿರಬೇಕು. ಕಪ್ಪು ಬಣ್ಣವನ್ನು ಆದಷ್ಟು ಕಡೆಗಣಿಸಬೇಕು. ಅದರಲ್ಲೂ ನೆಲಕ್ಕೆ ಇದನ್ನು ಬಳಿಯಬಾರದು.

ಇತರ ವಸ್ತುಗಳು
ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಧಾನ್ಯಗಳನ್ನು, ಮಸಾಲೆಗಳನ್ನು, ಲವಣಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಇಡಬಹುದು. ಹಗುರವಾದ ವಸ್ತುಗಳನ್ನು ಉತ್ತರ ಮತ್ತು ಪೂರ್ವದಿಕ್ಕಿನಲ್ಲಿ ಇರಿಸಬೇಕು. ಈಶಾನ್ಯದಲ್ಲಿ ಸಿಂಕ್ ಇರಿಸಬೇಕು.

ಊಟದ ಮೇಜು
ಊಟದ ಮೇಜನ್ನು ವಾಯುವ್ಯ ಅಥವಾ ಪಶ್ಚಿಮ ದಿಕ್ಕಿಗೆ ಇರಿಸಬೇಕು.

ಶುಚಿತ್ವ ಕಾಪಾಡಿಕೊಳ್ಳಿ
ಅಡುಗೆ ಮಾಡುವ ಸ್ಥಳವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಶುದ್ಧವಾದ ಪಾತ್ರೆ, ಲೋಟಗಳ ಬಳಕೆ ಮಾಡಬೇಕು. ಅಲ್ಲದೆ ತಯಾರಿಸಿದ ಅಡುಗೆಯು ಶುದ್ಧ ಹಾಗೂ ಆರೋಗ್ಯಕರವಾಗಿರಬೇಕು.



Click it and Unblock the Notifications











