Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಅಂಗೈ ಮೇಲಿರುವ ರೇಖೆಯಿಂದ ನಿಮ್ಮ ವೃತ್ತಿ ಯಾವುದೆಂದು ತಿಳಿಯಿರಿ
ಪ್ರತಿಯೊಬ್ಬ ಮನುಷ್ಯನು ಒಬ್ಬನಿಗಿಂತ ಮತ್ತೊಬ್ಬ ಭಿನ್ನವಾಗಿರುವನು. ಇದಕ್ಕೆ ಮುಖ್ಯ ಉದಾಹರಣೆಯೆಂದರೆ ನಮ್ಮ ಹೆಬ್ಬೆರಳು. ಹಿಂದಿನಿಂದಲೂ ಹೆಚ್ಚಿನವರು ಹೆಬ್ಬೆಟ್ಟು ಹಾಕುತ್ತಿದ್ದರು. ಇಂದು ಆಧುನಿಕ ಯುಗದಲ್ಲೂ ಹೆಬ್ಬೆರಳನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಇದರ ಹಿಂದಿನ ಸತ್ಯವೆಂದರೆ ಒಬ್ಬನ ಹೆಬ್ಬೆರಳಿನ ಗುರುತಿನಂತೆ ಮತ್ತೊಬ್ಬನದ್ದು ಇರಲು ಸಾಧ್ಯವೇ ಇಲ್ಲ. ಅದೇ ರೀತಿಯಲ್ಲಿ ಅಂಗೈ ಮೇಲೆ ಕೂಡು ಹಲವಾರು ರೀತಿಯ ಗೆರೆಗಳು ಮತ್ತು ಗುರುತುಗಳು ಇವೆ. ಕೆಲವೊಂದು ಗೆರೆಗಳಿಗೆ ತನ್ನದೇ ಆಗಿರುವಂತಹ ಮಹತ್ವವಿದೆ. ಇನ್ನು ಕೆಲವು ರೇಖೆ ಹಾಗೂ ಗುರುತುಗಳಿಗೆ ಗೂಢಾರ್ಥವಿದೆ.
ಅಂಗೈ ಮೇಲೆ ಇರುವ ಇನ್ನು ಕೆಲವು ರೇಖೆಗಳಿಗೆ ಯಾವುದೇ ಮಹತ್ವವು ಇರುವುದಿಲ್ಲ. ಅಂಗೈ ನೋಡಿಕೊಂಡು ಭವಿಷ್ಯ ಹೇಳುವುದು ಈ ರೇಖೆಗಳನ್ನು ನೋಡಿಕೊಂಡು. ಅಂಗೈ ಮೇಲಿರುವ ರೇಖೆಗಳು ಹಾಗೂ ಗುರುತುಗಳು ನೋಡಿಕೊಂಡು ನಿಮ್ಮ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ಹೇಳಲಾಗುವುದು. ಅದು ಕೂಡ ನಿಮ್ಮ ವೃತ್ತಿ ಬದುಕಿನ ಬಗ್ಗೆ. ನಿಮಗೆ ಇಷ್ಟದ ವೃತ್ತಿ ಯಾವುದು ಮತ್ತು ನೀವು ಯಾವ ವೃತ್ತಿ ಆಯ್ಕೆ ಮಾಡಿಕೊಂಡರೆ ಆಗ ಜೀವನದಲ್ಲಿ ಯಶಸ್ಸು ಸಿಗುವುದು ಎಂದು ಇಲ್ಲಿ ಹೇಳಲಾಗಿದೆ. ನಿಮ್ಮ ವೃತ್ತಿ ಬಗ್ಗೆ ಇರುವಂತಹ ರೇಖೆಗಳ ಬಗ್ಗೆ ಹೇಳಿರುವ ಹತ್ತು ಗುರುತುಗಳನ್ನು ನೀವು ತಿಳಿಯಿರಿ.

ಗುರುವಿನ ಪರ್ವತ
ಗುರು ಗ್ರಹದ ಪರ್ವತಕ್ಕೆ ಹೊಂದಿಕೊಂಡಿರುವಂತಹ ಮೂಲ ಹೊಂದಿದ್ದರೆ ಆಗ ನೀವು ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಯಶಸ್ಸು ಪಡೆಯುತ್ತೀರಿ ಎಂದು ಇದು ಹೇಳುತ್ತದೆ. ಇಂತಹವರಿಗೆ ಸರಿಯಾದ ವೃತ್ತಿ ಆಯ್ಕೆ ಎಂದರೆ ಅದು ಆಡಳಿತ, ಇಂಜಿನಿಯರಿಂಗ್, ವೈದ್ಯಕೀಯ, ರಾಜಕೀಯ, ಸರ್ಕಾರಿ ಕೆಲಸ ಮತ್ತು ಶಿಕ್ಷಕರಾಗುವುದು. ನೀವು ಇವುಗಳಲ್ಲಿ ಯಾವುದೇ ಒಂದು ಆಯ್ಕೆ ಮಾಡಿಕೊಂಡರೂ ಅದರಲ್ಲಿ ನಿಮಗೆ ಹೆಚ್ಚಿನ ಯಶಸ್ಸು ಸಿಗುವುದು. ಇದರಿಂದ ನೀವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರೊಂದಿಗೆ ನಿಮ್ಮ ಭವಿಷ್ಯವನ್ನು ಯಶಸ್ವಿಯಾಗಿಸಿಕೊಳ್ಳಿ.

ಶನಿಯ ಪರ್ವತ
ಶನಿ ಗ್ರಹದ ಬೆಟ್ಟದ ಮೂಲವು ಪ್ರಮುಖವಾಗಿದ್ದರೆ, ಆಗ ಇಂತಹ ವ್ಯಕ್ತಿಗಳು ಜೀವನದ ಉದ್ದಕ್ಕೂ ಯಶಸ್ಸನ್ನು ಪಡೆಯುತ್ತಲೇ ಇರುತ್ತೀರಿ. ಆದರೆ ಇದಕ್ಕಾಗಿ ನೀವು ಕಠಿಣ ಪರಿಶ್ರಮ ಪಡುವುದು ಅತೀ ಅಗತ್ಯವಾಗಿರುವುದು. ಇಂತಹ ವ್ಯಕ್ತಿಗಳು ಇಂಜಿನಿಯರಿಂಗ್, ಸಂಶೋಧನೆ, ವಿಜ್ಞಾನ ಮತ್ತು ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಬಹುದು. ನೀವು ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಹೆಚ್ಚಿನ ಯಶಸ್ಸು ಪಡೆಯಲಿದ್ದೀರಿ.

ಸೂರ್ಯನ ಬೆಟ್ಟ
ಸೂರ್ಯನ ಬೆಟ್ಟವು ಇಲ್ಲಿ ತುಂಬಾ ಪ್ರಾಮುಖ್ಯವಾಗಿದ್ದರೆ ಆಗ ಇಂತಹ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸಲು ತುಂಬಾ ಒದ್ದಾಡುವರು ಎಂದು ಇದು ಹೇಳುತ್ತದೆ. ಇಂತಹ ವ್ಯಕ್ತಿಗಳು ಆಯ್ಕೆ ಮಾಡಿಕೊಳ್ಳಬೇಕಾದರೆ ವೃತ್ತಿಗಳೆಂದರೆ ಅದು ಇಲೆಕ್ಟ್ರಾನಿಕ್ಸ್, ಜಾಹೀರಾತು, ಪೈಟಿಂಗ್, ಅಲಂಕಾರ ಮತ್ತು ಸರ್ಕಾರಿ ಉದ್ಯೋಗ. ಇಂತಹ ಯಾವುದೇ ವೃತ್ತಿಯನ್ನು ನೀವು ಆಯ್ಕೆ ಮಾಡಿದರೆ ಆಗ ನಿಮಗೆ ಜೀವನದಲ್ಲಿ ಹೆಚ್ಚಿನ ಯಶಸ್ಸು ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಬುಧನ ಪರ್ವತ
ಬುಧ ಗ್ರಹದ ಪರ್ವತದ ಮೂಲವು ತುಂಬಾ ಪ್ರಾಮುಖ್ಯತೆಯನ್ನು ಹೊಂದಿದ್ದರೆ ಆಗ ಇಂತಹ ವ್ಯಕ್ತಿಗಳು ಹೆಚ್ಚಾಗಿ ವ್ಯವಹಾರದಲ್ಲಿ ಯಶಸ್ವಿಯಾಗುವರು ಎಂದು ಹೇಳಲಾಗುತ್ತದೆ. ಇಂತಹ ವ್ಯಕ್ತಿಗಳು ಆಯ್ಕೆ ಮಾಡಿಕೊಳ್ಳಬೇಕಾದ ವೃತ್ತಿ ಕ್ಷೇತ್ರಗಳೆಂದರೆ ಅದು ಬ್ಯಾಂಕ್, ವಾಣಿಜ್ಯ, ಬರವಣಿಗೆ, ಪತ್ರಕರ್ತ, ವಕೀಲ, ವಿಜ್ಞಾನ ಮತ್ತು ಔಷಧಿ ಕೇತ್ರ. ಇಂತಹ ಯಾವುದೇ ವೃತ್ತಿಯು ನಿಮಗೆ ಯಶಸ್ಸನ್ನು ತಂದು ಕೊಡುವುದು.

ಶುಕ್ರನ ಪರ್ವತ
ಅಂಗೈ ಮೇಲೆ ಶುಕ್ರ ಗ್ರಹದ ಪರ್ವತದ ಮೂಲವು ತುಂಬಾ ಪ್ರಾಮುಖ ಆಗಿದ್ದರೆ ಆಗ ಇಂತಹ ವ್ಯಕ್ತಿಗಳಲ್ಲಿ ಅದ್ಭುತವಾಗಿರುವ ತಾಳ್ಮೆ ಇರುವುದು ಎಂದು ಹೇಳಲಾಗುತ್ತದೆ. ಇಂತಹ ವ್ಯಕ್ತಿಗಳು ತಮ್ಮ ವೃತ್ತಿಯಲ್ಲಿ ಜಾಹೀರಾತು, ಸಂಗೀತ, ಕಲೆ, ಅಲಂಕಾರ ಅಥವಾ ಸೌಂದರ್ಯದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

ಚಂದ್ರನ ಪರ್ವತ
ಅಂಗೈ ಮೇಲೆ ಚಂದ್ರನ ಪರ್ವತವು ಸಂಪೂರ್ಣವಾಗಿ ಬೆಳೆದಿದ್ದರೆ ಆಗ ಇಂತಹ ವ್ಯಕ್ತಿಗಳು ತುಂಬಾ ಕಲ್ಪನಾಶೀಲರು, ಸೌಂದರ್ಯದ ಆರಾಧಕರು, ಅದೇ ರೀತಿಯಾಗಿ ತುಂಬಾ ಭಾವನಾತ್ಮಕವಾಗಿ ಇರುವಂತಹ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಇಂತಹ ವ್ಯಕ್ತಿಗಳು ಸಂಗೀತ, ಕಲೆ, ಬರಹ, ಪತ್ರಕರ್ತ, ಸಿನಿಮಾ, ಸಾಹಿತ್ಯ, ಟೂರ್ ಆ್ಯಂಡ್ ಟ್ರಾವೆಲ್ಸ್ ನ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು. ಇಂತಹ ವ್ಯಕ್ತಿಗಳಿಗೆ ಸರ್ಕಾರಿ ಉದ್ಯೋಗಗಳಿಂದಲೂ ಹೆಚ್ಚಿನ ಲಾಭವಾಗಲಿದೆ.

ಕೆಳಗಿನ ಮಂಗಳು ಮತ್ತು ಉನ್ನತ ಮಂಗಳ
ಮಂಗಳನ ಪರ್ವತದ ಮೇಲೆ ಯಾವುದೇ ರೀತಿಯ ಮಚ್ಚೆಯು ಇದ್ದರೆ ಆಗ ನೀವು ಕೈ ಹಾಕಿದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತೀರಿ ಎಂದು ಇದು ಹೇಳುತ್ತದೆ. ಈ ರೀತಿಯ ಗುರುತು ಇರುವಂತಹ ವ್ಯಕ್ತಿಗಳು ಸಂಗೀತ, ಕಲೆ, ಲೇಖಕ, ಪತ್ರಕರ್ತ, ಸಿನಿಮಾ, ಸಾಹಿತ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕು. ಇದರಿಂದಾಗಿ ಅವರಿಗೆ ಹೆಚ್ಚಿನ ಯಶಸ್ಸು ಸಿಗುವುದು. ಇಷ್ಟು ಮಾತ್ರವಲ್ಲದೆ ಈ ವ್ಯಕ್ತಿಗಳು ಸೇನೆ, ಪೊಲೀಸ್, ಭದ್ರತಾ ಏಜೆನ್ಸಿ, ಕ್ರೀಡೆ, ಜಮೀನಿಗೆ ಸಂಬಂಧಿಸಿದ ವ್ಯಾಪಾರ ಮತ್ತು ಗಣಿಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಯಶಸ್ಸು ಸಿಗುವುದು ಎಂದು ತಜ್ಞರು ಹೇಳುತ್ತಾರೆ.

ಶುಕ್ರನ ಪರ್ವತದಿಂದ ನೇರ ರೇಖೆ
ನಿಮ್ಮ ಅಂಗೈಯಲ್ಲಿ ಶುಕ್ರನ ಪರ್ವತದಿಂದ ನೇರವಾಗಿ ರೇಖೆಯು ಆರಂಭವಾಗಿ ಅಂಗೈಯನ್ನು ದಾಟುತ್ತಿದ್ದರೆ(ಚಿತ್ರದಲ್ಲಿ ತೋರಿಸಿರುವಂತೆ) ಆಗ ನೀವು ಉದ್ಯಮ ಜಗತ್ತಿನಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲಿದ್ದೀರಿ ಎಂದು ಹೇಳಲಾಗುತ್ತದೆ. ಇದರ ಹೊರತಾಗಿ ನೀವು ಬ್ಯಾಂಕಿಂಗ್ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಬಹುದು.

ಶನಿ ಗ್ರಹದ ಪರ್ವತದಿಂದ ನೇರ ರೇಖೆ
ಶನಿ ಗ್ರಹದ ಪರ್ವತದಿಂದ ನೇರ ರೇಖೆಯು ಬಂದು ಅಂಗೈಯ ಕೆಳತುದಿಗೆ ಜೋಡಣೆಯಾದರೆ(ಚಿತ್ರದಲ್ಲಿರುವಂತೆ) ಆಗ ಇಂತಹ ವ್ಯಕ್ತಿಗಳು ತಾವು ಮಾಡುವಂತಹ ಯಾವುದೇ ರೀತಿಯ ವೃತ್ತಿಯಲ್ಲೂ ಯಶಸ್ಸನ್ನು ಪಡೆಯಬಲ್ಲರು ಎಂದು ಹೇಳಲಾಗುತ್ತದೆ. ಇವರು ಜೀವನ ಪೂರ್ತಿ ಹೆಚ್ಚಿನ ಹಣ ಸಂಪಾದನೆ ಮಾಡುವರು ಎಂದು ತಜ್ಞರು ಹೇಳುವರು. ಹೀಗಾಗಿ ಇಂತಹ ವ್ಯಕ್ತಿಗಳು ಜೀವನದಲ್ಲಿ ತಮಗೆ ಇಷ್ಟವಾದ ಕೆಲಸವನ್ನು ಮಾಡಿಕೊಂಡರೆ ಅದರಲ್ಲಿ ಅವರಿಗೆ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿಯಾಗಿರುವುದು.



Click it and Unblock the Notifications











