For Quick Alerts
ALLOW NOTIFICATIONS  
For Daily Alerts

ತನ್ನ ಮೂತ್ರದಿಂದ ದಿನಕ್ಕೆ ರೂ. 13,000 ಸಂಪಾದನೆ... ಈಕೆ ಮೂತ್ರಕ್ಕೆ ಅಷ್ಟೊಂದು ಡಿಮ್ಯಾಂಡ್ ಯಾಕೆ?

|

3 ತಿಂಗಳ ಗರ್ಭಿಣಿಯಾಗಿದ್ದ ಅನಾಮಧೇಯ ಹುಡುಗಿಯೊಬ್ಬಳು ತನ್ನ ಮೂತ್ರವನ್ನು ಮತ್ತು ಗರ್ಭಧಾರಣೆ ಪರೀಕ್ಷೆಗಳ ಪ್ರತಿಯನ್ನು ಪ್ರತಿದಿನ 13,000 ರೂ ಗಳಿಗೆ ನೀಡುತ್ತಿದ್ದಳು . ಈ ಕಾಲೇಜು ಹುಡುಗಿ ತನ್ನ ಮೂತ್ರವನ್ನು ಮತ್ತು ಪಾಸಿಟಿವ್ ಗರ್ಭಧಾರಣೆಯ ರಿರ್ಪೋಟ್ ಅನ್ನು, ಗರ್ಭ ದರಿಸಿದ್ದೇವೆ ಎಂದು ನಟಿಸಲು ಬಯಸುವ ಜನರಿಗೆ ಮಾರಲು, ಜಾಹೀರಾತನ್ನು ಬಿತ್ತರಿಸಿದ್ದಾಳೆ ಎಂದು ಹೇಳಲಾಗುತ್ತದೆ. ಜನರು ಇದರ ಕುರಿತು ವರದಿ ಮಾಡಿದ ನಂತರ ಜಾಹೀರಾತನ್ನು ತೆಗೆದುಹಾಕಲಾಗಿದೆ.

ನೀವು ಇದುವರೆಗೆ ಓದಿದದ ಕತೆಗಳಲ್ಲಿ ಅತ್ಯಂತ ವಿಲಕ್ಷಣ ಕಥೆಗಳಲ್ಲಿ ಇದು ಒಂದಾಗಿದೆ. ಈ ಕಥೆ, ಮಾಡಬೇಕಾದದ್ದು ಇಷ್ಟೇ ,ಎನೂ ಇಲ್ಲದೇ ಹಣ ಗಳಿಸಬಹುದು ಮತ್ತು ಸುತ್ತೀಬಳಸಿ ಆಲೋಚಿಸಬೇಕು ಎಂಬುದನ್ನು ತಿಳಿಸುತ್ತದೆ.

bizarre stories

ಪ್ರತಿ ದಿನ ಮೂತ್ರದ ಕೆಲವು ಹನಿಗಳನ್ನು ಮಾರಾಟ ಮಾಡುವುದರ ಮೂಲಕ ಸುಮಾರು ರೂ.13,000 ಗಳಿಸಿದ ಕಾಲೇಜು ಹುಡುಗಿಯ ಕಥೆ ಇದು!

ಇದು ವಿಚಿತ್ರವಾದ ಘಟನೆ, ಆದರೆ ಇದು 100 ಪ್ರತಿಶತ ನಿಜ! ಇದು ಎರಡು ವರ್ಷ ಹಿಂದಿನ ಕಥೆಯಾಗಿದ್ದರೂ ಸಹ, ಒಂದು ಸಾಮಾನ್ಯ ಮೂಲಭೂತ ವಸ್ತುವಿನಿಂದ ಹೇಗೆ ಶ್ರೀಮಂತರಾಗಬಹುದು ಎಂಬುದರ ಕುರಿತು ಮತ್ತಷ್ಟು ಯೋಚಿಸುವಂತೆ ಮಾಡುತ್ತದೆ!

ಆಕೆಯ ಮೂತ್ರವು ಯಾಕೆ ಅಷ್ಟು ಅಮೂಲ್ಯವಾಗಿತ್ತು ಎಂದು ಆಶ್ಚರ್ಯಪಡುತ್ತಿದ್ದೀರಾ?

ಆಕೆ 3 ತಿಂಗಳ ಗರ್ಭಿಣಿಯಾದ ಕಾಲೇಜು ಹುಡುಗಿ , ಆಕೆಯು ತನ್ನ ಮೂತ್ರವನ್ನು ಮಾರಾಟ ಮಾಡುವ ಮೂಲಕ ಆಕೆಯ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದ್ದಳು.

ಆದರೆ ಜನರು ಮೂತ್ರವನ್ನು ಏಕೆ ಖರೀದಿಸುತ್ತಾರೆ ನಿಮ್ಮ ಮುಂದಿನ ಪ್ರಶ್ನೆ ಎಂದು ನಮಗೆ ಗೊತ್ತು, ಮುಂದೆ ಓದಿ.

ತಮ್ಮ ಗರ್ಭಧಾರಣೆಯ ಬಗ್ಗೆ ಸಮಾಜದಲ್ಲಿ ನಟಿಸಲು ಬಯಸುವ ಮಹಿಳೆಯರು ಅಥವಾ ಪುರುಷರಿಗೆ ತನ್ನ ಮೂತ್ರವನ್ನು ಮಾರುವುದು ಅವಳ ಗುರಿಯಾಗಿತ್ತು, ಹೆಚ್ಚಿನವರು ಈ ಉಪಾಯವನ್ನು ಸದುಪಯೋಗಿಸಿಕೊಂಡರು. ನೋಡು ನೋಡುತ್ತಿದ್ದಂತೆಯೇ ಆ ಹುಡುಗಿ ಶ್ರೀಮಂತಳಾದಳು.

ಪಾಸಿಟಿವ್-ಗರ್ಭಧಾರಣೆಯ ರಿಪೋರ್ಟ್ ನ ಅಗತ್ಯವಿದ್ದರೆ, ಅವರು $ 25 ನೀಡಬೇಕು ಎಂದು ಅವಳು ಜಾಹೀರಾತುಗಳಲ್ಲಿ ಬರೆದಿದ್ದಳು. ಆಕೆಯ ಮೂತ್ರದ ಒಂದು ಅಥವಾ ಎರಡು ಹನಿಗಳನ್ನು $ 25 ಕ್ಕೆ ಮಾರಲಾಯಿತು.

ತನ್ನ ಜಾಹೀರಾತಿನಲ್ಲಿ, "ನಾನು 3 ತಿಂಗಳು [ಗರ್ಭಿಣಿ] ಆಗಿದ್ದೇನೆ ಮತ್ತು ತಮ್ಮ ಸ್ವಂತ ಬಳಕೆಗಾಗಿ ಪಾಸಿಟಿವ್ ಗರ್ಭದಾರಣೆಯ ರಿಪೋರ್ಟ್ ಅಥವಾ ಮೂತ್ರವನ್ನು ಖರೀದಿಸಬಹುದು" ಎಂದು ಹೇಳಿದ್ದಳು.

ಖರೀದಿದಾರರು ಹೇಗೆ ಮತ್ತು ಎಲ್ಲಿ ಪರೀಕ್ಷೆಯನ್ನು ಬಳಸುತ್ತಾರೆಂಬುದರ ಬಗ್ಗೆ ಅವಳು ಆಸಕ್ತಿ ಹೊಂದಿಲ್ಲ ಎಂದು ಕೂಡಾ ತಿಳಿಸಿದ್ದಳು.

"ನೀವು ಅದನ್ನು ತಮಾಷೆಗಾಗಿ ಬಳಸುತ್ತೀರಾ ಅಥವಾ ನೀವು ಕೆಲಸಮಾಡುವ ಕಂಪೆನಿಯ ಸಿ.ಇ.ಒ ಜೊತೆಗೆ ಏನಾದರೂ ಸಂಬಂಧ ಇಟ್ಟಿದ್ದರೆ,ಅವರನ್ನು ಬ್ಲ್ಯಾಕ್ಮೇಲ್ ಮಾಡಲು ಬಳಸುತ್ತೀರಾ!, ಅದರ ಬಗ್ಗೆ ನನಗೆ ಕಾಳಜಿ ಇಲ್ಲ". ಎಂದು ಆ ಜಾಹೀರಾತಿನಲ್ಲಿ ಬರೆಯಲಾಗಿತ್ತು. ಆ ಜಾಹೀರಾತಿನ ಸತ್ಯ ಅಸತ್ಯತೆಯನ್ನು ದೃಢೀಕರಿಸಲು, 'ಆಕ್ಶನ್ ನ್ಯೂ ಜಾಕ್ಸ್' ತಂಡ ಮಹಿಳೆಯನ್ನು ಭೇಟಿ ಮಾಡಲು ಮತ್ತು ಗರ್ಭಧಾರಣೆಯ ಪರೀಕ್ಷೆಯನ್ನು ಖರೀದಿಸಲು ನಿರ್ಧರಿಸಿತು.

ಆಕೆಯ ಮೂತ್ರವನ್ನು ಹೆಚ್ಚಾಗಿ ಮಹಿಳೆಯರು ತಮ್ಮ ಗೆಳೆಯರು (boy friends) ಮತ್ತು ಗಂಡಂದಿರನ್ನು ರಿಲೇಶನ್ಶಿಪ್ ನಲ್ಲಿ ಕಮಿಟ್ ಆಗಲು ಬೆದರಿಕೆ ಹಾಕಲು ಬಳಸುತಿದ್ದು, ಈ ಟ್ರಿಕ್ ನಿಜಕ್ಕೂ ಕೆಲಸ ಮಾಡುತ್ತಿತ್ತು. ಅದನ್ನು ಖರೀದಿಸಿದವರಲ್ಲಿ ಅನೇಕರು ಮಹಿಳೆಯರೇ ಆಗಿದ್ದರು.

ಆದರೆ ಒಬ್ಬ ವರದಿಗಾರನು ಅವಳ ಬಳಿ ಮೂತ್ರದ ಸ್ಯಾಂಪಲ್ ಅನ್ನು ತೆಗೆದುಕೊಳ್ಳಲು ಸಂಪರ್ಕಿಸಿದ ನಂತರ ಅವಳಿಗೆ ಬರುವ ಆದಾಯವು ನಿಂತುಹೋಯಿತು.

ಆ ಜಾಹೀರಾತನ್ನು ಪ್ರಕಟವಾದ ಸ್ಥಳಗಳಿಂದ ತೆಗೆದುಹಾಕಲಾಯಿತು, ಆದರೆ ಹುಡುಗಿಗೆ ಅವಳ ಗ್ರಾಹಕರ ಪಟ್ಟಿಯನ್ನು ಇರಿಸಿಕೊಳ್ಳಲು ಅನುಮತಿ ಸಿಕ್ಕಿತು.

ನಿಮಗೆ ಈ ಆಲೋಚನೆ ಏಕೆ ಬಂತು ಎಂದು ಕಾರಣ ಕೇಳಿದಾಗ ಅವಳು ಹೇಳಿದ್ದು, "ನಾನು ಬ್ಯಾಚುಲರ್ ಡಿಗ್ರಿ ಗಾಗಿ ಕಲಿಯುತ್ತಿದ್ದೇನೆ. ಎಲ್ಲಾ ಹಣವನ್ನು ಪದವಿಯ ಫೀಸ್ ಪಾವತಿಸಲು ಬಳಸುತ್ತೇನೆ, ಈ ಕೆಲಸ ಅತ್ಯಂತ ಸುಲಭದ್ದಾಗಿತ್ತು !"

ಈ ಕಥೆಯನ್ನು ಓದಿದ ನಂತರ ನಿಮ್ಮ ಅಭಿಪ್ರಾಯವೇನು? ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.

Read more about: money
English summary

She Sold Her Urine As She Was Pregnant And Earned Rs. 13,000 Every Day

This is one of the most bizarre stories that you would have read off late. This story gives us an idea that we can make money out of just nothing and all that we need to do is to think in a twisted way!
Story first published: Saturday, May 5, 2018, 12:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more