For Quick Alerts
ALLOW NOTIFICATIONS  
For Daily Alerts

ಈ ಎಂಟು ರಾಶಿಯವರು ಸೆಕ್ಸ್ ವಿಷಯದಲ್ಲಿ ತುಂಬಾನೇ ಬಲಾಢ್ಯರು!

By Hemanth
|

ಹೆಚ್ಚಿನವರು ತಮ್ಮ ರಾಶಿ ಫಲಗಳ ಬಗ್ಗೆ ಆಗಾಗ ಓದುತ್ತಲೇ ಇರುವರು. ಹೆಚ್ಚಿನವರು ಪ್ರತಿನಿತ್ಯ ಓದಿಕೊಳ್ಳುವರು. ಇದರಿಂದ ಅವರ ದಿನದ ಆತಂಕ, ಒತ್ತಡ ಮತ್ತು ಬರುವ ಸಮಸ್ಯೆ ದೂರ ಮಾಡಿಕೊಳ್ಳಬಹುದು. ಆದರೆ ಇದುವರೆಗೆ ನೀವು ರಾಶಿಚಕ್ರದಿಂದ ನಿಮ್ಮ ಲೈಂಗಿಕ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡಿದ್ದೀರಾ? ನಿಮ್ಮ ರಾಶಿಯ ಪ್ರಕಾರ ಹಾಸಿಗೆಯಲ್ಲಿ ನೀವು ಎಷ್ಟು ಬಲಾಢ್ಯರು ಎಂದು ತಿಳಿಯಬೇಕಾದರೆ ಈ ಲೇಖನವನ್ನು ಓದಲೇಬೇಕು. ಇದರಲ್ಲಿ ಪ್ರತಿಯೊಂದು ರಾಶಿಚಕ್ರದವರು ಲೈಂಗಿಕವಾಗಿ ಎಷ್ಟು ಸಮರ್ಥರು ಎಂದು ತಿಳಿಸಿಕೊಡಲಿದೆ. ಓದುತ್ತಾ ಸಾಗಿ.

ಮೇಷ

ಮೇಷ

ಮೇಷ ರಾಶಿಯವರು ತುಂಬಾ ಒರಟು ಮತ್ತು ಲೈಂಗಿಕತೆಯಲ್ಲಿ ಅಧಿಪತ್ಯ ಸಾಧಿಸುವರು. ಇವರು ಭಾವಪೂರ್ಣವಾಗಿ ಕೆಲವೇ ಸೆಕೆಂಡುಗಳಲ್ಲಿ ಪ್ರತಿಯೊಂದರ ಬಿಸಿ ಏರಿಸಲಿರುವರು. ಪ್ರತಿಯೊಂದು ತುಂಬಾ ವೇಗವಾಗಿ ಸಾಗುವ ಕಾರಣ ಇವರು ತಮ್ಮ ಸಂಗಾತಿಯೊಂದಿಗೆ ಬೆಸೆದುಕೊಳ್ಳುವರು ಮತ್ತು ಇದರಿಂದ ಮರಳಿ ಬರಲ್ಲ. ಇದರಿಂದ ತುಂಬಾ ಬಿಸಿಬಿಸಿಯ ವಾತಾವರಣ ನಿರ್ಮಾಣವಾಗುವುದು.

ವೃಷಭ

ವೃಷಭ

ವೃಷಭ ರಾಶಿಯವರು ಸಾಮಾನ್ಯವಾಗಿ ಕ್ರಮಬದ್ಧವಾಗಿರುವವರು ಮತ್ತು ಲೈಂಗಿಕತೆ ವಿಚಾರದಲ್ಲೂ ಅವರು ಹೀಗೆ ಇರುವರು. ವೃಷಭ ರಾಶಿಯವರು ಮೊದಲು ಸುಲಭವಾಗಿ ತೆಗೆದುಕೊಳ್ಳುವರು, ಎಲ್ಲವೂ ಕ್ರಮಬದ್ಧವಾಗಿದೆಯಾ ಎಂದು ನೋಡುವರು. ಸಮಯವು ಸರಿಯಾಗಿದೆ ಎಂದು ತಿಳಿದ ಬಳಿಕ ಲೈಂಗಿಕತೆಯು ಇವರಿಗೆ ತುಂಬಾ ತೀವ್ರ ಹಾಗೂ ಅದ್ಭುತವಾಗಿರುವುದು. ಇವರು ತಮಗೆ ಬೇಕಿರುವುದನ್ನು ಪಡೆಯಲು ಯಶಸ್ವಿಯಾಗುವರು. ಇವರ ತಾಳ್ಮೆ ಮತ್ತು ಮುಕ್ತ ಮನಸ್ಸಿನಿಂದ ಸಲಹೆಗಳನ್ನು ನೀಡುವ ಮೂಲಕ ಇವರ ಲೈಂಗಿಕತೆಯು ಅಮೋಘವಾಗಿರುವುದು. ಅಲ್ಲದೆ ವೃಷಭ ರಾಶಿಯವರು ಅತ್ಯುತ್ತಮ ಲೈಂಗಿಕ ಕ್ರಿಯೆಯನ್ನು ನಡೆಸುವರು ಎಂದು ಹೇಳಲಾಗುವುದು. ಇವರು ಸಂಗಾತಿಯ ಸಂವೇದನೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವರು. ಹೆಚ್ಚು ಸಮಯಗಳ ಕಾಲ ತಮ್ಮ ಸಂಗಾತಿಗೆ ಸಂತೋಷ ಹಾಗೂ ಭಾವೋದ್ರಿಕ್ತ ಚುಂಬನಗಳನ್ನು ನೀಡಬಲ್ಲರು. ತಾಳ್ಮೆಯ ಪ್ರವೃತ್ತಿಯನ್ನು ಹೊಂದಿರುವ ಇವರು ವಿಭಿನ್ನ ಬಗೆಯ ಸಂತೋಷವನ್ನು ನೀಡುವುದರ ಮೂಲಕ ಲೈಂಗಿಕ ಸುಖವನ್ನು ನೀಡುವರು.

ಮಿಥುನ

ಮಿಥುನ

ಮಿಥುನ ರಾಶಿಯವರು ಬೇಸರ ಮೂಡಿಸಲ್ಲ ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಅವರು ತುಂಬಾ ಸಹಜವಾಗಿರುವರು. ಹೆಚ್ಚು ಮನರಂಜನೆಯೂ ಸಾಕಾಗದು ಮತ್ತು ಮಿಥುನ ರಾಶಿ ಯವರು ಇದಕ್ಕೆ ಅಂಟಿಕೊಂಡಿರುವರು. ಇವರು ತುಂಬಾ ಮನರಂಜನೀಯ ಮತ್ತು ತಮ್ಮ ಲೈಂಗಿಕತೆಗೆ ಹೆಚ್ಚು ಗೌರವ ನೀಡುವರು. ಆಳವಾದ ಅನ್ಯೋನ್ಯತೆ ಮತ್ತು ಸಂಪರ್ಕಕ್ಕೆ ಇವರು ಮಹತ್ವ ನೀಡುವರು. ಇವರು ಹಾಸಿಗೆಯಲ್ಲಿ ಅತ್ಯುತ್ಸಾಹ ತೋರುವರು.

ಕರ್ಕಾಟಕ

ಕರ್ಕಾಟಕ

ಕರ್ಕಾಟಕ ರಾಶಿಯವರು ನಿಜವಾಗಿಯೂ ತುಂಬಾ ರೋಮ್ಯಾಂಟಿಕ್ ವ್ಯಕ್ತಿಗಳು ಮತ್ತು ತಮ್ಮ ಭಾವನೆಗಳೊಂದಿಗೆ ಆಟವಾಡುವವರನ್ನು ಇವರು ಸಹಿಸಲ್ಲ. ಇದರಿಂದ ಎಚ್ಚರವಾಗಿರಿ. ಇವರು ತುಂಬಾ ಕಾಳಜಿ, ಪ್ರೀತಿಯ ಸಂಗಾತಿ. ಆದರೆ ಇನ್ನೊಂದು ಕಡೆಯಲ್ಲಿ ಇವರು ನಿರಂತರ ಹಾಗೂ ಅನ್ಯೋನ್ಯತೆಯಿಂದ ತೃಪ್ತಿ ನೀಡುವರು. ಇವರು ಸಂಪೂರ್ಣ ಹೃದಯದಿಂದ ಪ್ರೀತಿಸುವರು.

ಸಿಂಹ

ಸಿಂಹ

ಸಿಂಹ ರಾಶಿಯವರು ತುಂಬಾ ಹೆಮ್ಮೆ ಪಟ್ಟುಕೊಳ್ಳುವವರು. ಇವರ ಅಹಂಗೆ ಹಾನಿಯಾಗದೆ ಇರುವಂತೆ ಇವರು ಹಾಸಿಗೆಯಲ್ಲಿ ಎಲ್ಲವನ್ನು ನೀಡುವರು. ಇವರು ರಾಶಿಯಲ್ಲಿ ಸಿಂಹ ಮತ್ತು ಇದನ್ನು ದಾರಿತಪ್ಪದಂತೆ ತಡೆಯಲು ಸರಿಯಾಗಿ ಪಳಗಿಸಬೇಕು. ಆದರೆ ಇವರು ತುಂಬಾ ಆಕರ್ಷಕವಾಗಿರುವರು ಮತ್ತು ತಾವು ಬಯಸಿದವರ ಮೇಲೆ ಗುರುತು ಬಿಟ್ಟು ಹೋಗುವರು ಎಂದು ನೆನಪಿರಲಿ. ಇನ್ನು ಬಹಳ ಶಕ್ತಿಯುತರು ಹಾಗೂ ಉತ್ಸಾಹಿಗಳೂ ಆದ ಈ ರಾಶಿಯವರು ಉನ್ನತ ಮಟ್ಟದ ಲೈಂಗಿಕ ಸುಖವನ್ನು ನೀಡುವರು. ಸೃಜನ ಶೀಲರು ಹಾಗೂ ಉತ್ಸಾಹ ಭರಿತರಾದ ಇವರು ಹೊಸ ಕ್ರಮಗಳನ್ನು ಅನುಸರಿಸುವುದರ ಮೂಲಕ ಹಾಸಿಗೆಯಲ್ಲಿ ಹೊಸ ನೋಟವನ್ನು ನೀಡುವರು. ಸಿಂಹ ರಾಶಿಯವರು ಕೆಲವೊಮ್ಮೆ ಉದಾಸೀನತೆ ಹೊಂದಿರಬಹುದು. ಆದರೆ ಸಂಗಾತಿಗೆ ನಂಬಲಾರದಷ್ಟು ಪ್ರೀತಿ ನೀಡುವುದರ ಜೊತೆಗೆ ನಿಷ್ಠಾವಂತರಾಗಿರುತ್ತಾರೆ. ಇನ್ನು ಈ ರಾಶಿಯವರು ಈ ರಾಶಿಯವರು ಸಂಬಂಧಗಳಲ್ಲಿ ಅತ್ಯುತ್ತಮ ಗುಣವನ್ನು ಹೊಂದಿರುತ್ತಾರೆ. ಇವರು ಸ್ವಭಾವತಹ ಅತ್ಯಂತ ಪ್ರಣಯ ಪೂರಕ ಪ್ರವೃತ್ತಿಯವರಾಗಿರುತ್ತಾರೆ. ಇವರು ಸ್ತ್ರೀ ಯರೊಂದಿಗೆ ಬಹುಬೇಗ ಸ್ನೇಹಿತರಾಗಲು ಹಾಗೂ ಅವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಯಾವುದೇ ಮುಜುಗರವನ್ನು ವ್ಯಕ್ತಪಡಿಸುವುದಿಲ್ಲ. ಈ ರಾಶಿಯವರು ಬಹಳ ಪ್ರಭಾವಶಾಲಿಗಳಾಗಿರುತ್ತಾರೆ. ಇವರು ಸ್ನೇಹಿತರಾಗಿ ವರ್ತಿಸುವಂತಹ ಅತ್ಯುತ್ತಮ ಗುಣವನ್ನು ಹೊಂದಿರುತ್ತಾರೆ. ಇವರ ಈ ಗುಣವನ್ನು ಸ್ತ್ರೀಯರು ಪ್ರಶಂಸಿಸುತ್ತಾರೆ. ಈ ರಾಶಿಯವರು ತಮ್ಮ ನೋಟದಿಂದಲೇ ಸ್ತ್ರೀಯರನ್ನು ಆಕರ್ಷಿಸುತ್ತಾರೆ. ಇವರಲ್ಲಿ ಉದಾರವಾದ ಭಾವನೆ ಹಾಗೂ ಮನಸ್ಸು ಸ್ತ್ರೀಯರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ತುಂಬಾ ಸ್ವತಂತ್ರ ಹಾಗೂ ಬಲವಾಗಿ ಆಲೋಚಿಸುವವರು. ಇವರ ದೇಹ ಮತ್ತು ಮನಸ್ಸಿನಲ್ಲಿ ಲೈಂಗಿಕತೆಯಿರುವುದು. ಹಾಸಿಗೆಯಲ್ಲಿ ಏನು ನಡೆಯಿತು ಎನ್ನುವುದನ್ನು ಇವರು ವಿಶ್ಲೇಷಿಸುವರು ಮತ್ತು ಲೈಂಗಿಕ ತಂತ್ರ ಹಾಗೂ ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ಇವರು ಚಿಂತಿಸುವರು. ಇವರು ಮಾಡುವಂತಹ ಕೆಲಸದ ಬಗ್ಗೆ ಪ್ರಶಂಸೆ ಮಾಡಬೇಕು. ಇಲ್ಲವಾದಲ್ಲಿ ಇವರಿಗೆ ಅತೃಪ್ತ ಭಾವನೆ ಬರುವುದು. ಕನ್ಯಾ ರಾಶಿಯವರನ್ನು ಹಾಸಿಗೆಯಲ್ಲಿ ಪ್ರಶಂಸಿಸದೆ ಇರುವವರು ತುಂಬಾ ಕಡಿಮೆ.

ತುಲಾ

ತುಲಾ

ತುಲಾ ರಾಶಿಯವರು ತುಂಬಾ ಸಮತೋಲನದವರು. ಇವರು ತಮಗೇನಾದರೂ ಸಿಗುವುದಿದ್ದರೆ ಅದನ್ನು ಅಷ್ಟೇ ನ್ಯಾಯಬದ್ಧವಾಗಿ ಹಿಂತಿರುಗಿಸುವಂತಹ ಗುಣ ಹೊಂದಿರುವರು. ಲೈಂಗಿಕತೆಯಲ್ಲಿ ಇವರು ತುಂಬಾ ಕೌಶಲ್ಯ ಹೊಂದಿದವರು. ಇವರಿಗೆ ಸಂವಹನದ ಬಯಕೆಯು ಇರುವುದು. ಇವರು ಮುಕ್ತ ಮನಸ್ಸಿನವರಾದರೂ ತಪ್ಪನ್ನು ಸಹಿಸಲ್ಲ. ಇವರು ಒಂದು ರಾತ್ರಿಯ ಸಂಬಂಧಕ್ಕೆ ಹೇಳಿದ ವ್ಯಕ್ತಿಯಲ್ಲ. ಆದರೆ ಸಂಬಂಧದ ವಿಚಾರಕ್ಕೆ ಬಂದರೆ ಇವರನ್ನು ಬೇಗನೆ ಓಲೈಸಬಹುದು.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ತುಂಬಾ ಭಾವೋದ್ರೀಕರು ಮತ್ತು ಇವರಿಗೆ ತಮ್ಮ ಮಿತಿಯ ಗೀಳು ಇರುವುದು. ತುಲಾ ರಾಶಿಯವರಂತೆ ಇವರನ್ನು ಸಮಾನವಾಗಿ ಕಾಣಬೇಕೆಂದು ಅವರು ಬಯಸುವರು. ಆದರೆ ಯಾರೊಂದಿಗಾದರೂ ಇವರು ಹೊಂದಿಕೊಳ್ಳಬೇಕೆಂದು ಇದ್ದರೆ ಇವರಿಗೆ ಗಡಿಯ ಬಗ್ಗೆ ಚಿಂತೆ ಇರಲ್ಲ. ಇವರ ಲೈಂಗಿಕತೆಯು ತುಂಬಾ ಹಿತವಾಗಿರುವುದು ಮತ್ತು ಯಾವಾಗಲೂ ತಮ್ಮ ಸಂಗಾತಿ ಬೇಡಿಕೆಗೆ ಒತ್ತು ಕೊಡುವರು. ಯಾವಾಗಲೂ ರೋಮ್ಯಾಂಟಿಕ್ ಆಗಿರುವರು. ಇನ್ನು ಈ ರಾಶಿಚಕ್ರದವರು ಲೈಂಗಿಕ ವಿಚಾರದಲ್ಲಿ ಅತ್ಯುತ್ತಮ ಅನುಭವವನ್ನು ನೀಡುವರು. ಅತ್ಯಂತ ಭಾವೋದ್ರಿಕ್ತರಾದ ಇವರು ಆಕರ್ಷಕ ದೈಹಿಕ ಆಕರ್ಷಣೆಯಿಂದ ಸಂಪರ್ಕವನ್ನು ಬೆಳೆಸಿಕೊಳ್ಳುವರು. ತಮ್ಮ ಪಾಲುದಾರರಿಗೂ ಉತ್ತಮ ಸಮಯ ನೀಡುವುದರ ಜೊತೆಗೆ ಲೈಂಗಿಕ ಸುಖವನ್ನು ನೀಡುತ್ತಾರೆ. ನಂಬಲಾಗದಂತಹ ಕಾಂತಿಯತೆ ಹಾಗೂ ಸಂಭೋಗ ಸುಖವನ್ನು ನೀಡುವರು. ವಿಶ್ವಾಸ ಪೂರ್ಣ ವ್ಯಕ್ತಿಗಳಾಗಿ ಸಂಗಾತಿಯ ಜವಾಬ್ದಾರಿಯನ್ನು ನಿರ್ವಹಿಸುವ ಇವರು ಪ್ರಣಯ ಜೀವನದಲ್ಲಿ ಸಾಕಷ್ಟು ಆನಂದವನ್ನು ನೀಡುವರು.

English summary

Sexual Personality According To Your Zodiac

We bet you check your horoscope religiously. We know you know your personality traits according to your zodiac sign. But have the stars been brave enough to tell you about your sexual personality? Check out your sign, and see what you’re like in bed.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more